Food
ಬ್ರೆಡ್‌ಗಳನ್ನು ಬಿಸಿ ಮಾಡಿಕೊಳ್ಳಿ. ನಿಮಗಿಷ್ಟವಾದ ತರಕಾರಿಗಳನ್ನು ಕಟ್ ಮಾಡಿ, ಸ್ಪಲ್ಪ ಬೇಯಿಸಿ, ಖಾರದ ಪುಡಿ ಸೇರಿಸಿ ಮಧ್ಯದಲ್ಲಿಟ್ಟು ರ್ಯಾಪ್ ಮಾಡಿ. ಇದು ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಪರಿಪೂರ್ಣವಾದ ಆಯ್ಕೆ.
ಅವಕಾಡೊವನ್ನು ಕತ್ತರಿಸಿಕೊಂಡು ಸ್ಪಲ್ಪ ಬೇಯಿಸಿಕೊಳ್ಳಿ. ಇದಕ್ಕೆ ಜ್ಯೂಸಿ ಟೊಮೆಟೋ ಸೇರಿಸಿ ಉಪ್ಪು ಹಾಗೂ ಕರಿಮೆಣಸಿನ ಪುಡಿಯನ್ನು ಚಿಮುಕಿಸಿಕೊಳ್ಳಿ. ಈ ಮಿಶ್ರಣವನ್ನು ಬ್ರೆಡ್ ಮಧ್ಯೆ ಇಟ್ಟುಕೊಂಡು ತಿನ್ನಿ
ಮಶ್ರೂಮ್ ಮತ್ತು ಪಾಲಕ್‌ನ್ನು ಬೇಯಿಸಿಕೊಳ್ಳಿ. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಹಾಗೂ ಚೀಸ್ ಆಡ್ ಮಾಡಿ. ಬ್ರೆಡ್‌ನ್ನು ಬಿಸಿ ಮಾಡಿ ಈ ಮಿಕ್ಸ್‌ನ್ನು ಮಧ್ಯದಲ್ಲಿಟ್ಟು ತಿನ್ನಿ. ಇದು ಪೋಷಕಾಂಶಭರಿತವಾದ ಆಹಾರವಾಗಿದೆ.
ಬ್ರೆಡ್‌ನ ಮೇಲೆ ಪೀನಟ್ ಬಟರ್‌ನ್ನು ಹಚ್ಚಿಕೊಂಡು ಇದರ ಮೇಲೆ ಕತ್ತರಿಸಿದ ಬಾಳೆಹಣ್ಣನ್ನು ಇಡಿ. ಆ ನಂತರ ಮೇಲಿನಿಂದ ಸ್ಪಲ್ಪ ಉಪ್ಪು ಹಾಗೂ ಜೇನನ್ನು ಚಿಮುಕಿಸಿ ಸವಿಯಿರಿ
ಬ್ರೆಡ್ ಬಿಸಿ ಮಾಡಿಕೊಂಡು ಕ್ರೀಮ್ ಚೀಸ್ ಸೇರಿಸಿ ಸವಿಯಿರಿ. ಇದು ಟೇಸ್ಟೀಯಾಗಿರುತ್ತದೆ ಮತ್ತು ಬಹಳ ಬೇಗನೇ ಹೊಟ್ಟೆ ತುಂಬುವಂತೆ ಮಾಡುತ್ತದೆ
ಪ್ಯಾನ್ ಬಿಸಿ ಮಾಡಿಕೊಂಡು, ಮೊಟ್ಟೆಯನ್ನು ಒಡೆದು ಹಾಕಿ ಚೂರು ಚೂರು ಮಾಡಿಕೊಳ್ಳಿ. ನಂತರ ಈ ಮಿಕ್ಸ್‌ನ್ನು ಸ್ಯಾಂಡ್‌ವಿಚ್ ಮಧ್ಯೆ ಇಟ್ಟು ಚೀಸ್ ಹಾಕಿಕೊಳ್ಳಿ. ರುಚಿಯಾದ ಸ್ಯಾಂಡ್‌ವಿಚ್ ರೆಡಿ.