ಕೆಲವು ವಸ್ತುಗಳು ಬೇರೆ ದೇಶದಲ್ಲಿ ಬ್ಯಾನ್ ಆದ್ರೂ ಇಂಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಫೇಮಸ್. ಕೆಚಪ್, ಕಿಂಡರ್ ಜಾಯ್ ಇಂದ ಹಿಡಿದು ಚ್ಯವನಪ್ರಾಶ್ ವರೆಗೂ ಎಲ್ಲದರ ಬಗ್ಗೆ ತಿಳ್ಕೊಂಡ್ರೆ ಶಾಕ್ ಆಗ್ತೀರಾ.

ಮ್ಮ ದಿನನಿತ್ಯದ ಬದುಕಿನಲ್ಲಿ ನಾವೆಲ್ಲಾ ಹಲವಾರು ವಸ್ತುಗಳನ್ನು ಬಳಕೆ ಮಾಡುತ್ತೇವೆ. ಟೂತ್‌ಪೇಸ್ಟ್, ಶಾಂಪೂ, ಸೋಪು, ಪಾನೀಯಗಳು ಹೀಗೆ ದಿನಾಲು ಏನೇನೋ ಯೂಸ್ ಮಾಡುತ್ತೇವೆ. ಆದರೆ, ಕೆಲವು ಪ್ರಾಡಕ್ಟ್ಸ್ ಬೇರೆ ದೇಶದಲ್ಲಿ ಬ್ಯಾನ್ ಆಗಿದ್ದರೂ ನಮ್ಮ ಇಂಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಫೇಮಸ್. ಈ ವಸ್ತುಗಳು ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಗೊತ್ತಿದ್ರೂ ನಾವೆಲ್ಲಾ ಖುಷಿ ಖುಷಿಯಾಗಿ ತಿಂತಾ ಇದೀವಿ. ಬೇರೆ ದೇಶದಲ್ಲಿ ಬ್ಯಾನ್ ಆಗಿರೋ ವಸ್ತುಗಳ ಲಿಸ್ಟ್ ಇಲ್ಲಿದೆ ನೋಡಿ.

ಕೆಚಪ್: ಫ್ರಾನ್ಸ್‌ನಲ್ಲಿ ಸ್ಕೂಲ್ ಹಾಗೂ ಕೆಫೆಟೇರಿಯಾಗಳಲ್ಲಿ ಕೆಚಪ್ ಬ್ಯಾನ್ ಮಾಡಿದ್ದಾರೆ. ಯಾಕಂದ್ರೆ ಇದರಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತೆ. ಇದು ಮಕ್ಕಳ ಆರೋಗ್ಯಕ್ಕೆ ಹಾನಿಕರ. ಆದರೆ, ಇಂಡಿಯಾದಲ್ಲಿ ಮಾತ್ರ ಪರೋಟದಿಂದ ದೋಸೆವರೆಗೂ ಎಲ್ಲದಕ್ಕೂ ಕೆಚಪ್ ಹಾಕಿಕೊಂಡು ತಿನ್ನುವ ಜನರಿದ್ದಾರೆ.

ಕಿಂಡರ್ ಜಾಯ್: ಅಮೆರಿಕದಲ್ಲಿ ಈ ಚಾಕೊಲೇಟ್ ಬ್ಯಾನ್ ಆಗಿದೆ. ಯಾಕಂದ್ರೆ ಗಂಟಲಲ್ಲಿ ಸಿಕ್ಕಾಕೊಂಡು ಮಕ್ಕಳು ಸತ್ತಿರೋ ಹಲವಾರು ಘಟನೆಗಳು ನಡೆದಿವೆ. ಆದರೆ, ನಮ್ಮಲ್ಲಿ ಇದು ಪ್ರತಿ ಅಂಗಡಿಲೂ ಸಿಗುತ್ತೆ. ಯಾವ ವಾರ್ನಿಂಗ್ ಕೂಡ ಇದಕ್ಕೆ ಇರೋದಿಲ್ಲ.

ಸಿಂಗಾರ: ಸೋಮಾಲಿಯಾದಲ್ಲಿ 2011ರಿಂದ ಸಿಂಗಾರ ಬ್ಯಾನ್ ಆಗಿದೆ. ಆದರೆ, ಇಂಡಿಯಾದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇದು ಸಿಗುತ್ತೆ. ಇಂಡಿಯಾದಲ್ಲಿ ಇದು ಟ್ರೆಡಿಷನಲ್ ಫುಡ್ ಅಂತಾನೇ ಫೇಮಸ್.

ಚ್ಯವನಪ್ರಾಶ್: ಕೆನಡಾದಲ್ಲಿ ಚ್ಯವನಪ್ರಾಶ್ ಬ್ಯಾನ್ ಆಗಿದೆ. ಇದರಲ್ಲಿ ಸೀಸ ಹಾಗು ಪಾದರಸದ ಅಂಶ ಜಾಸ್ತಿ ಇದೆ. ಇಂಡಿಯಾದಲ್ಲಿ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡ್ಕೊಳ್ಳೋಕೆ ಅಂತ ಚ್ಯವನಪ್ರಾಶ್ ತಿನ್ನುತ್ತಾರೆ.

ಚೂಯಿಂಗ್ ಗಮ್: ಸಿಂಗಾಪುರದಲ್ಲಿ ಚೂಯಿಂಗ್ ಗಮ್ ಬ್ಯಾನ್ ಆಗಿದೆ. ಆದ್ರೆ ಇಂಡಿಯಾದಲ್ಲಿ ಇದು ಫುಲ್ ಫೇಮಸ್.

ಡಿಸ್ಪೆರಿನ್‌: ಅಮೆರಿಕ ಹಾಗು ಯುರೋಪ್‌ನಲ್ಲಿ ಡಿಸ್ಪೆರಿನ್‌ ಮೇಲೆ ಬ್ಯಾನ್‌ ಇದೆ. ಆದರೆ, ಇಂಡಿಯಾದಲ್ಲಿ ತಲೆನೋವಿಗೆ ಅಂತ ಈ ಮಾತ್ರೆ ಸಿಕ್ಕಾಪಟ್ಟೆ ಯೂಸ್ ಮಾಡ್ತಾರೆ.

ನಾನ್‌ ವೆಜ್‌ನಲ್ಲಿ ಸಿರಾಜ್ ಇಷ್ಟಪಡೋ ಆಹಾರ ಯಾವುದು?

ಲೈಫ್‌ಬಾಯ್ ಸೋಪ್: ಇವಾಗಂತೂ ಲೈಫ್‌ಬಾಯ್ ಸೋಪ್ ಎಲ್ಲರಿಗೂ ಫೇಮಸ್. ಈ ಸೋಪ್ ನಿಮ್ಮ ಸ್ಕಿನ್ ಅನ್ನು ಜೀವಾಣುಗಳಿಂದ ಕಾಪಾಡುತ್ತೆ ಅಂತಾರೆ. ಆದ್ರೆ ಇದು ಸ್ಕಿನ್‌ಗೆ ಒಳ್ಳೇದಲ್ಲ ಅಂತ ನಿಮಗೆ ಗೊತ್ತಾ? ಇದರಿಂದ ಸ್ಕಿನ್ ಅಲರ್ಜಿ ಆಗಬಹುದು. ಆದ್ರೂ ನಮ್ಮ ದೇಶದಲ್ಲಿ ಈ ಸೋಪ್ ಮಾರಾಟ ಆಗ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ, ಫೀನಾಲ್ ಅನ್ನು ಒಳಗೊಂಡಿರುವ ಮೂಲ ಕೆಂಪು ಲೈಫ್‌ಬಾಯ್ ಸೋಪ್ ಇನ್ನು ಮುಂದೆ ಯುಎಸ್ ಮತ್ತು ಯುಕೆಯಲ್ಲಿ ಉತ್ಪಾದನೆಯಾಗುವುದಿಲ್ಲ. ಯುರೋಪಿಯನ್ ಒಕ್ಕೂಟ ಇದರ ವಿರುದ್ಧ ತನಿಖೆ ಆರಂಭಿಸಿದೆ.

ಚಿಕನ್, ಮಟನ್‌ಗಿಂತ ಹೆಚ್ಚು ಪ್ರೋಟೀನ್ ಇರುವ ಬೇಳೆ ಬಗ್ಗೆ ಗೊತ್ತಾ?