ಬೆಂಗಳೂರಿನಲ್ಲಿ ಸಿಗ್ತಿದೆ ಬಾಳೆದಿಂಡಿನ ಚಾಟ್ ಮಸಾಲ, ಸಿಕ್ಕಾಪಟ್ಟೆ ಹೆಲ್ದೀ ಕಣ್ರೀ..
ಚಾಟ್ಸ್ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತೆ. ಆದ್ರೆ ಚಾಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಸಹ ಎಲ್ಲರಿಗೂ ಗೊತ್ತಿದೆ. ಚಾಟ್ಸ್ ತಿನ್ಬೇಕು, ಹೆಲ್ದೀಯಾಗಿಗೂ ಇರ್ಬೇಕು ಅನ್ನೋರು ನೀವಾದ್ರೆ ಬೆಂಗಳೂರಿನಲ್ಲಿ ಸಿಗ್ತಿರೋ ಬಾಳೆದಿಂಡಿನ ಈ ಡಿಫರೆಂಟ್ ಚಾಟ್ಸ್ ಟ್ರೈ ಮಾಡ್ಬೋದು.
ಬಾಳೆ ಬೆಳೆದರೆ ಬಾಳು ಬೆಳಗು ಅಂತಾರೆ. ಬಾಳೆ ಗಿಡದಿಂದ ಅಷ್ಟೆಲ್ಲಾ ಪ್ರಯೋಜನವಿದೆ. ಬಾಳೆ ಎಲೆಯನ್ನು ಊಟಕ್ಕೆ, ಇತರ ಅಗತ್ಯಗಳಿಗೆ ಉಪಯೋಗಿಸಬಹುದು. ಬಾಳೆಕಾಯಿಯನ್ನು ಪಲ್ಯ, ಬಾಳಕ, ಹಪ್ಪಳ ಮಾಡಲು ಉಪಯೋಗಿಸಬಹುದು. ಬಾಳೆಕಾಯಿ ಹಣ್ಣಾದರಂತೂ ನಾನಾ ತರದ ಉಪಯೋಗ. ರಸಾಯನ, ಪಾಯಸ, ಬಾಳೆಹಣ್ಣಿನ ಹಲ್ವಾ, ಬಾಳೆಹಣ್ಣಿನ ಅಪ್ಪಂ, ಬಾಳೆಹಣ್ಣಿನ ದೋಸೆ ಮಾಡಿ ಸವಿಯುತ್ತಾರೆ. ಇವುಗಳ ಬಗ್ಗೆಯೆಲ್ಲಾ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಬಾಳೆಹಣ್ಣಿನ ದಿಂಡು ಸಹ ಆರೋಗ್ಯಕ್ಕೆ ಅತ್ಯುತ್ತಮ. ಕೆಲವರಿಗಂತೂ ಬಾಳೆ ದಿಂಡು ಎಂದರೆ ಏನು ಎಂಬುದೇ ಗೊತ್ತಿಲ್ಲ. ಬಾಳೆಗಿಡದ ಕಾಂಡವನ್ನು ಬಾಳೆದಿಂಡು ಎಂದು ಕರೆಯುತ್ತಾರೆ.
ರೈತರು ಬಾಳೆಗೊನೆ ಕೊಯ್ದ ನಂತರ ಬಾಳೆದಿಂಡು (Banana Stem) ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆದಿಂಡಿನಲ್ಲೇ ಆರೋಗ್ಯದ (Health) ಗುಟ್ಟಿದೆ. ಬಾಳೆದಿಂಡನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಸಿಟಿಯಲ್ಲಿದ್ದವರಿಗೆ ಇಂಥಾ ಬಾಳೆದಿಂಡೆಲ್ಲಾ ಎಲ್ಲಿ ಸಿಗುತ್ತಪ್ಪಾ ಅಂತ ತಲೆಕೆಡಿಸ್ಕೋಬೇಡಿ. ಬೆಂಗಳೂರಲ್ಲಿ ಸದ್ಯ ಬಾಳೆದಿಂಡಿನ ಟೇಸ್ಟೀ ಚಾಟ್ಸ್ ಸಿಗುತ್ತೆ ನೋಡಿ.
Healthy Food : ಬಾಳಿಹಣ್ಣಿನ ಹೂವಿಗೆ ಮೂಡ್ ಬೂಸ್ತರ್ ಅಂತಾರೆ! ಹೇಗೆ ಬಳಸೋದು ಇದನ್ನು!
ಚಾಟ್ಸ್ ಅಂದ್ರೆ ಸಾಕು ಎಲ್ಲರ ಬಾಯಲ್ಲಿ ನೀರೂರುತ್ತೆ. ಆದ್ರೆ ಚಾಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಸಹ ಎಲ್ಲರಿಗೂ ಗೊತ್ತಿದೆ. ಚಾಟ್ಸ್ ತಿನ್ಬೇಕು, ಹೆಲ್ದೀಯಾಗಿಗೂ ಇರ್ಬೇಕು ಅನ್ನೋರು ನೀವಾದ್ರೆ ಬೆಂಗಳೂರಿನಲ್ಲಿ ಸಿಗ್ತಿರೋ ಬಾಳೆದಿಂಡಿನ ಈ ಡಿಫರೆಂಟ್ ಚಾಟ್ಸ್ ಟ್ರೈ ಮಾಡ್ಬೋದು. ಹೌದು ಚಾಟ್ಸ್ ಕೂಡಾ ತಿನ್ಬೇಕು ಆದ್ರೆ ಆರೋಗ್ಯನೂ ಹಾಳಾಗ್ಬಾರ್ದು ಅನ್ನೋದು ನೀವಾದ್ರೆ ಸಿಲಿಕಾನ್ ಸಿಟಿಯಲ್ಲಿ ಸಿಗ್ತಿರೋ ಈ ಕೂಲ್ ಆಂಡ್ ಟೇಸ್ಟಿಯಾಗಿರುವ ಬಾಳೆದಿಂಡಿನ ಚಾಟ್ಸ್ ಟ್ರೈ ಮಾಡಿ.
ಬಾಳೆದಿಂಡಿನ ಚಾಟ್ಸ್ ತಯಾರಿಸೋದು ಹೇಗೆ?
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿ ಹೇಗೆ ಬಾಳೆದಿಂಡಿನ ಚಾಟ್ಸ್ ತಯಾರಿಸುತ್ತಾನೆ ಎಂಬ ಮಾಹಿತಿಯಿದೆ. ಮೊದಲಿಗೆ ವ್ಯಕ್ತಿ ಬಾಳೆದಿಂಡಿನ ಹೊರಗಿನ ಕವರ್ ಎಲ್ಲಾ ತೆಗೆದು ಎಸೆಯುತ್ತಾನೆ. ನಂತರ ಒಳಗಿನ ಅತ್ಯಂತ ನವಿರಾದ ಬಾಳೆದಿಂಡನ್ನು ಸಣ್ಣಗೆ ಕತ್ತರಿಸುತ್ತಾನೆ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಗೂ ಸೌತೆಕಾಯಿಯನ್ನು (Cucumber) ಸೇರಿಸುತ್ತಾನೆ. ಇದನ್ನೆಲ್ಲಾ ಒಂದು ಪಾತ್ರೆಗೆ ಸೇರಿಸಿಕೊಂಡು, ಒಂದು ಕ್ಯಾರೆಟ್ ತುರಿದು ಹಾಕಿಕೊಳ್ಳುತ್ತಾನೆ. ಬಳಿಕ ಇದಕ್ಕೆ ಸ್ಪಲ್ಪ ಉಪ್ಪು (Salt), ಗ್ರೀನ್ ಚಟ್ನಿ, ಸಿಹಿ ಚಟ್ನಿ, ಸೇವ್, ಮಿಕ್ಸರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾನೆ. ಮೇಲಿನಿಂದ ಅರ್ಧ ನಿಂಬೆಯ ರಸವನ್ನು ಸೇರಿಸಿಕೊಳ್ಳುತ್ತಾನೆ. ಬಳಿಕ ಇದನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾನೆ. ರುಚಿಕರವಾದ ಬಾಳೆದಿಂಡಿನ ಚಾಟ್ಸ್ ಸವಿಯಲು ರೆಡಿ.
Healthy Food : ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಹೃದಯ ಕಾಪಾಡಿಕೊಳ್ಳಿ
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಬಾಳೆದಿಂಡಿನ ಚಾಟ್ಸ್ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಬಾಳೆದಿಂಡು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕಿಡ್ನಿ ಸ್ಟೋನ್ ಅನ್ನು ತೆಗೆದುಹಾಕುತ್ತದೆ. ಆದರೆ ಇದನ್ನು ಮಿಕ್ಸಿಂಗ್ ಮಾಡಿರುವ ರೀತಿ ಕೆಟ್ಟದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಬಾಳೆದಿಂಡನ್ನು ತಿನ್ನಲಾಗುತ್ತದೆ ಎಂದು ಗೊತ್ತಿರಲ್ಲಿಲ್ಲ' ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು 'ಆತ ಕೈಯಲ್ಲಿ ಮಿಕ್ಸ್ ಮಾಡುವ ತನಕ ಎಲ್ಲವೂ ಚೆನ್ನಾಗಿದೆ' ಎಂದು ಅಲ್ಲಿನ ಅಸ್ವಚ್ಛತೆಯನ್ನು ಟೀಕಿಸಿದ್ದಾರೆ. ಇನ್ನು ಕೆಲವರು 'ಈ ವ್ಯಾಪಾರಿಗಳಿಗೆ ಸ್ಪೂನ್ ಎಂಬ ಒಂದು ವಸ್ತು ಇದೆ ಎಂದು ಸಹ ತಿಳಿದಿಲ್ಲವೇ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಬಾಳೆದಿಂಡಿನ ಚಾಟ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋದಂತೂ ನಿಜ.