Asianet Suvarna News Asianet Suvarna News

Healthy Food : ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಹೃದಯ ಕಾಪಾಡಿಕೊಳ್ಳಿ

ಬಾಳೆ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟ. ಕೆಲವರು ಬಾಳೆಕಾಯಿ ಬಳಕೆ ಮಾಡ್ತಾರೆ. ಈ ಬಾಳೆಕಾಯಿ ಆರೋಗ್ಯಕ್ಕೆ ಒಳ್ಳೆಯದು. ಸರಿಯಾದ ವಿಧಾನದಲ್ಲಿ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತೆ.
 

Green Banana For High Cholesterol How To Eat
Author
First Published Apr 8, 2023, 11:57 AM IST

ಬಾಳೆಹಣ್ಣು, ಬಾಳೆ ದಿಂಡು, ಬಾಳೆ ಹೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಅಷ್ಟೇ ಏಕೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಕೂಡ ಅನೇಕ ಪ್ರಯೋಜನಗಳಿವೆ. ಬಾಳೆಹಣ್ಣು ಎಲ್ಲರಿಗೂ ಪ್ರಿಯವಾದ ಹಣ್ಣು. ಹಬ್ಬಗಳಲ್ಲಿ ದೇವರ ನೈವೇದ್ಯದಿಂದ ಹಿಡಿದು ಪುಟ್ಟ ಮಕ್ಕಳಿಗೂ ಸಹ ಇದನ್ನು ನೀಡಲಾಗುತ್ತದೆ. ಬಾಳೆಹಣ್ಣಿನಂತೆ ಬಾಳೆಕಾಯಿಯನ್ನು ಕೂಡ ಹಲವರು ಬಳಸುತ್ತಾರೆ. ನಗರಗಳಲ್ಲಿ ಇದು ಅಷ್ಟಾಗಿ ಸಿಗದೇ ಇದ್ದರೂ ಹಳ್ಳಿಗಳಲ್ಲಿ ಬಾಳೆಕಾಯಿಯ ಅನೇಕ ಖಾದ್ಯಗಳನ್ನು ಮಾಡುತ್ತಾರೆ. ಬಾಳೆಕಾಯಿಯ ಚಿಪ್ಸ್, ಬೋಂಡಾ, ಪಲ್ಯ,  ಬಾಳೆಕಾಯಿ ಕರ್ರಿ, ಹಪ್ಪಳ ಮುಂತಾದವುಗಳನ್ನು ತಯಾರಿಸುತ್ತಾರೆ. ಇಂತಹ ಬಾಳೆಕಾಯಿ ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಕಾರಿ ಎಂಬುದು ತಿಳಿದುಬಂದಿದೆ. ಬಾಳೆಕಾಯಿ ಹೇಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತೆ ಎನ್ನುವುದನ್ನು ತಿಳಿಯೋಣ.

ಬಾಳೆಕಾಯಿ (Banana) ಯಿಂದ ಕೊಲೆಸ್ಟ್ರಾಲ್ (Cholesterol) ಕಡಿಮೆಯಾಗುತ್ತೆ : 
ಬಾಳೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಮ್ ಮತ್ತು ಐರನ್ (Iron) ಅಂಶಗಳು ಹೇರಳವಾಗಿದೆ. ಇದರ ಜೊತೆಗೆ 1 ಗ್ರಾಂ ಹಸಿಬಾಳೆಕಾಯಿಯಲ್ಲಿ 422 ಮಿಲಿಗ್ರಾಂ ಪೊಟ್ಯಾಶಿಯಮ್ ಇರುತ್ತದೆ. ಬಾಳೆಕಾಯಿಯ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬಾಳೆಕಾಯಿ ತಿನ್ನುವುದರಿಂದ ಫೈಬರ್ ಮತ್ತು ದೇಹಕ್ಕೆ ಸಿಗುತ್ತವೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆಮಾಡುತ್ತದೆ ಮತ್ತು ಇದರಿಂದ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಕಣಗಳನ್ನು ಕರಗಿಸಲು ಅಥವಾ ಹೊರಹಾಕಲು ಸಹಾಯಮಾಡುತ್ತದೆ.

ಹೃದಯಾಘಾತದ ನಂತರ ರೋಗಿಗಳು ಯಾವ ಆಹಾರ ಸೇವಿಸಿದ್ರೆ ಒಳ್ಳೇಯದು?

ಬಾಳೆಕಾಯಿಯನ್ನು ಈ ವಿಧಾನದಲ್ಲಿ ಸೇವಿಸಿ : ಕೊಲೆಸ್ಟ್ರಾಲ್ ಇರುವವರು ಮೊದಲು ಬಾಳೆಕಾಯಿಯನ್ನು ನೀರಿನಲ್ಲಿ ಬೇಯಿಸಬೇಕು. ನಂತರ ಬಾಳೆಕಾಯಿಯ ಸಿಪ್ಪೆಯನ್ನು ಬೇರ್ಪಡಿಸಿ ಅದಕ್ಕೆ ಉಪ್ಪು, ಮೆಣಸು, ಕುತ್ತೊಂಬರಿ ಸೊಪ್ಪು ಮತ್ತು ಈರುಳ್ಳಿಯನ್ನು ಸೇರಿಸಿ ತಿನ್ನಬೇಕು. ಇದು ನಿಮ್ಮ ಶರೀರದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಲು ಸಹಾಯಮಾಡುತ್ತೆ. ಬಾಳೆಕಾಯಿಯಲ್ಲಿ ಬೆಂಕಿಯಲ್ಲಿ ಅಥವಾ ಕೆಂಡದಲ್ಲಿ ಬೇಯಿಸಿ ಕೂಡ ಸೇವಿಸಬಹುದು.

ಹೃದಯ ರೋಗ ಇರುವವರಿಗೆ ಬಾಳೆಕಾಯಿ ದಿವ್ಯೌಷಧ : ಜೀರೋ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅನ್ನು ಹೊಂದಿರುವ ಬಾಳೆಕಾಯಿ ಹೃದಯ ರೋಗ ಇರುವವರಿಗೆ ಬಹಳ ಒಳ್ಳೆಯದು. ಬಾಳೆಕಾಯಿ ದೇಹದಲ್ಲಿನ ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೊಬ್ಬು ಚೆನ್ನಾಗಿ ಜೀರ್ಣವಾಗುತ್ತದೆ. ದೇಹದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗದೇ ಇರುವುದರಿಂದ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳದೇ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. 

Healthy Food: ಬಹುಪಯೋಗಿ ಸಾಸಿವೆ ಮಾರಣಾಂತಿಕವೂ ಹೌದು

ಬಾಳೆಕಾಯಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :  ಹೈ ಬಿಪಿ ಹೊಂದಿರುವವರು ಬಾಳೆಕಾಯಿಯನ್ನು ತಿನ್ನಬೇಕು. ಬಾಳೆಕಾಯಿಯಲ್ಲಿರುವ ಪೊಟ್ಯಾಶಿಯಮ್ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡುತ್ತದೆ ಮತ್ತು ರಕ್ತಪರಿಚಲನೆಯನ್ನು ಸರಾಗವಾಗಿಸುತ್ತದೆ. ಇದರಿಂದ ರಕ್ತದೊತ್ತಡದ ಸಮಸ್ಯೆ ಕಾಣಿಸುವುದಿಲ್ಲ.

ಈ ತೊಂದರೆಗಳನ್ನೂ ನಿವಾರಿಸುತ್ತೆ ಬಾಳೆಕಾಯಿ :
• ಬಾಳೆಹಣ್ಣಿಗಿಂತ ಬಾಳೆಕಾಯಿಯಲ್ಲಿ ಹೆಚ್ಚು ಪಿಷ್ಠವಿದೆ ಮತ್ತು ಸಕ್ಕರೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಇದು ಮಧುಮೇಹ ರೋಗಿಗಳಿವೆ ಉತ್ತಮ ಔಷಧವಾಗಿದೆ.
• ಅತಿಯಾದ ತೂಕವನ್ನು ಹೊಂದಿರುವವರು ವಾರದಲ್ಲಿ 2-3 ಬಾಳೆಕಾಯಿಯನ್ನು ತಿಂದರೆ ತೂಕವನ್ನು ಕಡಿಮೆಮಾಡಿಕೊಳ್ಳಬಹುದು. ಬಾಳೆಕಾಯಿಯಲ್ಲಿ ಕಡಿಮೆ ಕ್ಯಾಲೊರಿ ಮತ್ತು ಅಧಿಕ ನೀರಿನಂಶವಿದೆ. ಇದು ಶರೀರ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯಮಾಡುತ್ತದೆ. 
• ಬಾಳೆಕಾಯಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.
• ಹೆಚ್ಚಿನ ನಾರಿನಂಶ ಹೊಂದಿರುವ ಬಾಳೆಕಾಯಿ ಸೇವನೆಯಿಂದ ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆಗಳು ಶಮನವಾಗುತ್ತೆ.
• ಬಾಳೆಕಾಯಿಯಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
• ಅತಿಸಾರ ಮತ್ತು ವಾಂತಿ ಉಪಶಮನವಾಗಲು ಬಾಳೆಕಾಯಿ ಸೇವಿಸಬೇಕು ಎಂದು ಅನೇಕ ಸಂಶೋಧನೆಗಳು ಹೇಳಿವೆ.
• ಬಾಳೆಕಾಯಿ ವಿಟಮಿನ್ ಬಿ6, ತಾಮ್ರ, ಮೆಗ್ನೀಷಿಯಂ, ಮ್ಯಾಂಗನೀಸ್ ಸಮೃದ್ಧವಾಗಿದೆ. 
• ಬಾಳೆಕಾಯಿಯಲ್ಲಿರುವ ಪೆಕ್ಟಿನ್ ಅಂಶವು ಇನ್ಸುಲಿನ್ ಅನ್ನು ನಿರ್ವಹಿಸುತ್ತದೆ.
• ಧ್ವನಿಯಲ್ಲಿ ಏರುಪೇರಾಗಿ ಮಾತನಾಡಲು ಕಷ್ಟವಾದಾಗ ಹಸಿಬಾಳೆಕಾಯಿಯನ್ನು ತಿಂದರೆ ಧ್ವನಿ ಸರಿಯಾಗುತ್ತೆ.

Follow Us:
Download App:
  • android
  • ios