ಮಗುವಾದ್ಮೇಲೂ ಕುಗ್ಗಿಲ್ಲ ಆಲಿಯಾ ಬ್ಯೂಟಿ, ಫಿಗರ್ ಮೆಂಟೇನ್ ಮಾಡೋಕೆ ಏನ್ ತಿನ್ತಾರೆ?
ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ನಟಿ ಸಖತ್ ಕ್ಯೂಟ್. ವಯಸ್ಸು ಮೂವತ್ತಾಗಿದೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ರೂ ಏಜ್ ಸ್ವೀಟ್ ಸಿಕ್ಸ್‌ಟೀನ್‌ನಂತೆ ಕಾಣ್ತಾರೆ. ಮುದ್ದು ಮಗು 'ರಾಹಾ' ತಾಯಿ ಆಲಿಯಾ ಭಟ್ ಹೆಲ್ದೀಯಾಗಿರಲು, ಫಿಗರ್ ಮೆಂಟೇನ್ ಮಾಡೋಕೆ ಏನ್ ತಿನ್ತಾರೆ ಗೊತ್ತಾ?
ಬಾಲಿವುಡ್ ಸೆಲೆಬ್ರಿಟಿಗಳು ವಯಸ್ಸು ಹೆಚ್ಚಾಗ್ತಾ ಹೋದಂತೆ ಇನ್ನೂ ಯಂಗ್ ಆಗಿ ಕಾಣುತ್ತಾರೆ. ಎರಡು-ಮೂರು ಮಕ್ಕಳ ತಾಯಾದ್ರೂ ಸಖತ್ ಫಿಟ್ ಆಗಿರುತ್ತಾರೆ. ಬಾಲಿವುಡ್‌ನ ಖ್ಯಾತ ನಟಿ ಇದಕ್ಕೆ ಹೊರತಾಗಿಲ್ಲ. ವಯಸ್ಸು ಮೂವತ್ತಾಗಿದೆ. ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ರೂ ಏಜ್ ಸ್ವೀಟ್ ಸಿಕ್ಸ್‌ಟೀನ್ ಎಂದೇ ಹೇಳಬಹುದು. ಇಷ್ಟಕ್ಕೂ ತಮ್ಮ ಬಿಝಿ ಶೆಡ್ಯೂಲ್ ಮಧ್ಯೆ ಹೆಲ್ದೀಯಾಗಿರಲು, ಮುಖ ಕಾಂತಿಯುತವಾಗಿ ಕಂಗೊಳಿಸಲು ಸೆಲೆಬ್ರಿಟಿಗಳು ಮಾಡೋ ಕೆಲಸಗಳು ಒಂದೆರಡಲ್ಲ. ವರ್ಕ್‌ಔಟ್, ಯೋಗ, ಧ್ಯಾನ್, ಡಯೆಟ್ ಹೀಗೆ ಏನೇನೋ ಮಾಡ್ತಾರೆ. ಆದ್ರೆ ಮುದ್ದು ಮಗು 'ರಾಹಾ' ತಾಯಿ ಆಲಿಯಾ ಭಟ್ ಹೆಲ್ದೀಯಾಗಿರಲು ಏನ್ ತಿನ್ತಾರೆ ಗೊತ್ತಾ?
ಬೀಟ್‌ರೂಟ್ ರಾಯಿತ
ಸಲಾಡ್‌ಗಳು ಸೆಲೆಬ್ರಿಟಿಗಳ ನೆಚ್ಚಿನ ಆಹಾರವಾಗಿರುತ್ತದೆ. ಸೌತೆಕಾಯಿ, ಕ್ಯಾರೆಟ್, ಕಾಳುಗಳ ಸಲಾಡ್ ಮಾಡಿ ಸವಿಯುತ್ತಾರೆ. ಹಾಗೆಯೇ ಆಲಿಯಾ ಭಟ್ ನೆಚ್ಚಿನದು ಬೀಟ್‌ರೂಟ್ ರಾಯಿತ. ಬೀಟ್‌ರೂಟ್ ತಿನ್ನಲು ಅನೇಕ ಜನರು ಇಷ್ಟಪಡುವುದಿಲ್ಲ. ಆದರೆ ಇದರಲ್ಲಿ ಒಟ್ಟಾರೆ ಆರೋಗ್ಯವನ್ನು ಕಾಪಾಡುವ ಹಲವಾರು ಪೋಷಕಾಂಶಗಳಿವೆ. ಬೀಟ್‌ರೂಟ್ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕೊಬ್ಬು ಮತ್ತು ಆಹಾರದ ಫೈಬರ್‌ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇದರ ಹೊರತಾಗಿ ವಿಟಮಿನ್ ಬಿ-6, ವಿಟಮಿನ್ ಸಿ, ರಿಬೋಫ್ಲಾವಿನ್ ಮತ್ತು ಥಯಾಮಿನ್ ಮುಂತಾದ ಜೀವಸತ್ವಗಳು ಬೀಟ್‌ರೂಟ್‌ನಲ್ಲಿ ಇರುತ್ತವೆ. ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್, ರಂಜಕ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ಸಹ ಇರುತ್ತವೆ.
Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
ಬೀಟ್‌ರೂಟ್ ಸಲಾಡ್ ತಿನ್ನಲು ಇಷ್ಟವಿಲ್ಲದಿದ್ದರೆ, ಆಲಿಯಾ ಭಟ್ ಅವರ ನೆಚ್ಚಿನ ಬೀಟ್‌ರೂಟ್ ರಾಯಿತಾ ಪಾಕವಿಧಾನವನ್ನು ಟ್ರೈ ಮಾಡಬಹುದು. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೇವಲ 7 ನಿಮಿಷಗಳಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು. ಬೀಟ್‌ರೂಟ್ ರಾಯಿತ ತಯಾರಿಸುವ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ.
ಬೇಕಾದ ಪದಾರ್ಥಗಳು
ಬೀಟ್‌ರೂಟ್-2 (ಸಿಪ್ಪೆ ಸುಲಿದು, ತುರಿದು ಇಟ್ಟುಕೊಳ್ಳಬೇಕು)
ಮೊಸರು - 400 ಗ್ರಾಂ
ಉಪ್ಪು - ರುಚಿಗೆ ತಕ್ಕಷ್ಟು
ಹುರಿದ ಜೀರಿಗೆ ಪುಡಿ-ಅರ್ಧ ಟೀ ಸ್ಪೂನ್
ಕರಿಮೆಣಸಿನ ಪುಡಿ-ಅರ್ಧ ಟೀ ಸ್ಪೂನ್
ಎಣ್ಣೆ - ಒಂದು ಚಮಚ
ಸಾಸಿವೆ - ಅರ್ಧ ಟೀ ಸ್ಪೂನ್
ಕರಿಬೇವಿನ ಎಲೆ ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಬೀಟ್‌ರೂಟ್‌ನ್ನು ಸಣ್ಣಗೆ ತುರಿದು, ಸ್ಪಲ್ಪ ಹುರಿದುಕೊಳ್ಳಿ. ಆ ನಂತರ ಹಬೆಯಲ್ಲಿ ಬೇಯಿಸಿ. ಇದು ಬೀಟ್‌ರೂಟ್‌ನಲ್ಲಿರುವ ಸಿಹಿಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ನಂತರ ಮೊಸರನ್ನು ಚೆನ್ನಾಗಿ ಬೀಟ್ ಮಾಡಿ ಮತ್ತು ಅದಕ್ಕೆ ತುರಿದ ಬೀಟ್‌ರೂಟ್ ಸೇರಿಸಿ. ನಂತರ ಅದಕ್ಕೆ ಜೀರಿಗೆ ಪುಡಿ, ಕರಿಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆಯಿಟ್ಟು, ಅದು ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ಈ ಒಗ್ಗರಣೆಯನ್ನು ಬೀಟ್‌ರೂಟ್ ಮಿಶ್ರಣಕ್ಕೆ ಸೇರಿಸಿ. ಈಗ ರುಚಿಕರವಾದ ಬೀಟ್‌ರೂಟ್ ರಾಯಿತಾ ಸವಿಯಲು ಸಿದ್ಧವಾಗಿದೆ.
Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?
ಬೀಟ್‌ರೂಟ್ ಸೇವನೆಯ ಆರೋಗ್ಯ ಪ್ರಯೋಜನಗಳು
ಬೀಟ್‌ರೂಟ್ ರಾಯಿತಾವನ್ನು ಅನ್ನ, ರೋಟಿ, ಪರಾಠ ಜೊತೆ ತಿನ್ನಬಹುದು. ಈ ಸ್ಪೆಷಲ್ ಬೀಟ್‌ರೂಟ್ ರಾಯಿತಾ ತಿನ್ನುವುದರಿಂದ ಮಧುಮೇಹ, ಕ್ಯಾನ್ಸರ್, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆಯಾಗುತ್ತದೆ. ಚಯಾಪಚಯ, ಮೂಳೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹ ಇದು ಪ್ರಯೋಜನಕಾರಿ.
ಮೊಸರಿನ ಸೇವನೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಮಾತ್ರವಲ್ಲ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ಯಾಕೆ ತಡ, ಆಲಿಯಾ ಭಟ್ ನೆಚ್ಚಿನ ಬೀಟ್‌ರೂಟ್ ಸಲಾಡ್‌ನ್ನು ನೀವು ಸಹ ತಯಾರಿಸಿ ಸವಿಯಿರಿ.