ಸೆಲೆಬ್ರಿಟಿ (Celebrity)ಗಳ ಬಗ್ಗೆ ಜನಸಾಮಾನ್ಯರಿಗೆ ಯಾವಾಗ್ಲೂ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ಅವ್ರ ಲೈಫ್‌ಸ್ಟೈಲ್ (Lifestyle), ಹ್ಯಾಬಿಟ್ಸ್ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಅಂಥಹದ್ದೇ ಒಂದು ಟಾಪ್ ಸೀಕ್ರೇಟ್ ನಾವ್ ಹೇಳ್ತೀವಿ. ನಿಮ್ಮ ಫೇವರಿಟ್ ಬಾಲಿವುಡ್ ನಟಿಯರು ಬೆಳಗ್ಗಿನ ಬ್ರೇಕ್ ಫಾಸ್ಟ್‌ (Breakfast)ಗೆ ಏನು ತಿನ್ತಾರೆ ತಿಳ್ಕೊಳ್ಳಿ.

ಬಾಲಿವುಡ್ ನಟಿಯರ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಡಿಸೈನರ್ ಡ್ರೆಸ್, ಸೆಲೆಬ್ರಿಟಿ ಆರ್ಟಿಸ್ಟ್ ಮೇಕಪ್, ನ್ಯೂಟ್ರಿಷಿಯನ್ ಸಜೆಸ್ಟೆಡ್ ಫುಡ್ ಎಲ್ಲಾನೂ ಲಕ್ಸುರಿಯಸ್. ವಯಸ್ಸಾದರೂ ಯಂಗ್ ಆಗಿ ಕಾಣುವ ಸೆಲೆಬ್ರಿಟಿಗಳು ಅದಕ್ಕಾಗಿ ಯೋಗ, ಜಿಮ್ ಎಂದು ಹಲವರು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮುಖ್ಯವಾಗಿ ಉತ್ತಮ ಆಹಾರಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಹಾಗಿದ್ರೆ ಬಾಲಿವುಡ್‌ನ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ (Breakfast) ಏನು ತಿನ್ತಾರೆ ಗೊತ್ತಾ ?

ಪ್ರಿಯಾಂಕಾ ಚೋಪ್ರಾ
ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿರುವ ಬಾಲಿವುಡ್‌ನ ಹೊಸ ಮಮ್ಮಿ ಪ್ರಿಯಾಂಕಾ ಚೋಪ್ರಾ, ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೆ ಆಮ್ಲೆಟ್ (Omelette) ಟೋಸ್ಟ್ ಅಥವಾ ಆವಕಾಡೊ ಟೋಸ್ಟ್ ಅನ್ನು ಇಷ್ಟಪಡುತ್ತಾರೆ. ವಿದೇಶದಲ್ಲಿ ವಾಸಿಸುತ್ತಿರುವಾಗ ನಟಿ ಹೆಚ್ಚಾಗಿ ಪಂಜಾಬಿ ಆಹಾರವನ್ನು ಇಷ್ಟಪಡುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ ಆಲೂ ಪರಾಠ, ದೋಸೆ, ಇಡ್ಲಿ ಮತ್ತು ಪೋಹಾವನ್ನು ತಿನ್ನುತ್ತಾರೆ.

ಅನುಷ್ಕಾ ಶರ್ಮಾ
ಸದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಗಳು ವಮಿಕಾ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ನಟಿ ಇದರಿಂದಾಗಿ ಸುದ್ದಿಯಲ್ಲಿದ್ದಾರೆ. ರಬ್ ನೇ ಬನಾದಿ ಜೋಡಿ ಚಿತ್ರದ ನಟಿ ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೆ ಎಲ್ಲಾ ಸೆಲೆಬ್ರಿಟಿಗಳಂತ ಪೂರಿ ಅಥವಾ ಪರಾಠವನ್ನು ಇಷ್ಟಪಡುವುದಿಲ್ಲ. ಬದಲಿಗೆ ಓಟ್ಸ್ (Oats) ಮತ್ತು ಚಿಯಾ ಬೀಜಗಳ ಉಪಾಹಾರವಾಗಿ ತೆಗೆದುಕೊಳ್ಳುತ್ತಾರೆ. 2021ರಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದರು.

Deepika Padukone: ದೀಪಿಕಾ ಧರಿಸಿದ್ದು ರಣವೀರ್ ಡ್ರೆಸ್‌ ಅಲ್ಲ ತಾನೇ! ಕಾಲೆಳೆಯುತ್ತಿರೋ ನೆಟ್ಟಿಗರು

ದೀಪಿಕಾ ಪಡುಕೋಣೆ
ಮೂಲತಃ ದಕ್ಷಿಣ ಭಾರತದವರಾಗಿರುವ ನಟಿ ದೀಪಿಕಾ ಪಡುಕೋಣೆ ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೂ ಸೌತ್ ಇಂಡಿಯನ್ ಫುಡ್ ಪ್ರಿಫರ್ ಮಾಡುತ್ತಾರೆ. ಇಡ್ಲಿ, ತೆಂಗಿನಕಾಯಿ ಚಟ್ನಿ ಮತ್ತು ಫಿಲ್ಟರ್ ಕಾಫಿ ಅಥವಾ ಇಡ್ಲಿ (Idli), ವಡಾ ಸಾಂಬಾರ್‌ನೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ.

ಕರೀನಾ ಕಪೂರ್ ಖಾನ್
ಇಬ್ಬರು ಮಕ್ಕಳ ತಾಯಿ ಬೇಬೋ ಕಟ್ಟುನಿಟ್ಟಾದ ಆಹಾರಕ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಕರೀನಾ ಕಪೂರ್ ತಮ್ಮ ಬೆಳಗಿನ ಉಪಾಹಾರದಲ್ಲಿ ಬಿಳಿ ಮಕ್ಕನ್ ಮತ್ತು ಸ್ಟಫ್ಡ್ ಪರಾಠ ತಿನ್ನುತ್ತಾರೆ. ಜತೆಗೆ ದೋಸೆ, ಇಡ್ಲಿ ಮತ್ತು ಪೋಹಾ (Poha) ಸಹ ತುಂಬಾ ಇಷ್ಟ ಎಂದು ಹೇಳುತ್ತಾರೆ

ಮಲೈಕಾ ಅರೋರಾ
ನಲವತ್ತಾರದೂ 20ರ ಕುವರಿಯನ್ನು ನಾಚಿಸುವಂತಿರುವ ಮಲೈಕಾ ಅರೋರಾ ಎಂದಿಗೂ ತಮ್ಮ ಯೋಗ (Yoga) ಕ್ಲಾಸ್ ಮಿಸ್ ಮಾಡುವುದಿಲ್ಲ. ಹಾಗೆಯೇ ಬೆಳಗ್ಗಿನ ಉಪಾಹಾರದಲ್ಲೂ ಕಟ್ಟುನಿಟ್ಟಿನ ಚಾರ್ಟ್ ಅನ್ನು ಫಾಲೋ ಮಾಡುತ್ತಾರೆ. ಮಲೈಕಾ ನಿಂಬೆ ರಸ ಬೆರೆಸಿದ ಬೆಚ್ಚಗಿನ ನೀರು (Water) ಕುಡಿಯುವುದರ ಮೂಲಕ ದಿನವನ್ನು ಆರಂಭಿಸುತ್ತಾರೆ. ನಂತರ ತರಕಾರಿಗಳು, ಕಡಲೇಕಾಯಿ ಸೇರಿಸಿರುವ ಪೋಹಾವನ್ನು ತಿನ್ನುತ್ತಾರೆ.

Malaika Arora Trolled: ಬ್ರಾ ಧರಿಸದೆ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು

ಕೃತಿ ಸನೋನ್ 
ಬಾಲಿವುಡ್ ಬ್ಯೂಟಿ ಕೃತಿ ಸನೋನ್ ಬೆಳಗಿನ ಉಪಾಹಾರದಲ್ಲಿ ಬೇಯಿಸಿದ ಮೊಟ್ಟೆ ಮತ್ತು ಟೋಸ್ಟ್ ಅಥವಾ ಬೆಣ್ಣೆಯೊಂದಿಗೆ ಉಪ್ಪು-ಅಜ್ವೈನ್ ಪರಾಠವನ್ನು ಸೇವಿಸುತ್ತಾರೆ.

ಶಿಲ್ಪಾ ಶೆಟ್ಟಿ ಕುಂದ್ರಾ
ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಪುಸ್ತಕ, ದಿ ಗ್ರೇಟ್ ಇಂಡಿಯನ್ ಡಯಟ್‌ನಲ್ಲಿ, ಅವರು ನಾಲ್ಕು ಧಾನ್ಯಗಳ ಮಿಶ್ರಣದ ಆಹಾರ ಅಥವಾ ಸಂಪೂರ್ಣ ಗೋಧಿ ಟೋಸ್ಟ್ ಅನ್ನು ಇಷ್ಟಪಡುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ಮಾತ್ರವಲ್ಲ ಗೋಧಿ ಉಪ್ಮಾ, ಪೋಹಾವನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಈ ಪುಸ್ತಕದಲ್ಲಿ ಶಿಲ್ಪಾ ಶೆಟ್ಟಿ ದಕ್ಷಿಣ ಭಾರತೀಯ ಆಹಾರದ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಬೆಳಗಿನ ಉಪಾಹಾರವಾಗಿ ಇಡ್ಲಿ ಮತ್ತು ಸಾಂಬಾರ್‌ನ್ನು ಸಹ ಇಷ್ಟಪಟ್ಟು ತಿನ್ನುತ್ತೇನೆಂದು ಹೇಳಿಕೊಂಡಿದ್ದಾರೆ.

ಕತ್ರಿನಾ ಕೈಫ್
ವಿಕ್ಕಿ ಕೌಶಲ್‌ನ್ನು ಮದುವೆಯಾಗಿರುವ ಕತ್ರೀನಾ ಕೈಫ್ ಬ್ರೇಕ್ ಫಾಸ್ಟ್‌ಗೆ ಮೊಟ್ಟೆ ಮತ್ತು ಸಿಹಿ ಗೆಣಸುಗಳನ್ನು ತುಂಬಾ ಇಷ್ಟಪಡುತ್ತಾರೆ. 

ತಾಪ್ಸೀ ಪನ್ನು
ನಟಿ ತಾಪ್ಸೀ ಪನ್ನು ದಿನವನ್ನು ಒಂದು ಲೀಟರ್ ಬೆಚ್ಚಗಿನ ನೀರು ಕುಡಿಯುವುದರ ಮೂಲಕ ಆರಂಭಿಸುತ್ತಾರೆ. ನಂತರ ಕೆಲವು ಬಾದಾಮಿ ಅಥವಾ ವಾಲ್‌ನಟ್‌ಗಳನ್ನು ತಿನ್ನುತ್ತಾರೆ. ಅದರ ನಂತರ, ತಾಪ್ಸಿ ತನ್ನ ದೇಹವನ್ನು ಕ್ಷಾರೀಯವಾಗಿಸಲು ಸ್ವಲ್ಪ ಸೌತೆಕಾಯಿ ರಸವನ್ನು ಕುಡಿಯುತ್ತಾರೆ. ಟ್ವಿಟರ್‌ನಲ್ಲಿ, ಚೋಲೆ ಭಟೂರ್ ಎಂದರೆ ಇಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.

ಆಲಿಯಾ ಭಟ್
ಆಲಿಯಾ ಭಟ್ ಬೆಳಗ್ಗಿನ ಉಪಾಹಾರದಲ್ಲಿ ಆಲೂ ಪರಾಠವನ್ನು ಇಷ್ಟಪಟ್ಟು ತಿನ್ನುವುದಾಗಿ ಹೇಳಿಕೊಂಡಿದ್ದಾರೆ. ಇದಲ್ಲದೆ ಚಾಕೋಲೇಟ್ ಎಂದರೆ ವಿಪರೀತ ಇಷ್ಟವೆಂದು ಇನ್‌ಸ್ಟಾಗ್ರಾಮ್‌ನಲ್ಲಿ 'ಆಸ್ಕ್-ಮಿ-ಏನಿಥಿಂಗ್' ಸೆಷನ್‌ನಲ್ಲಿ ಉತ್ತರಿಸಿದ್ದಾರೆ.