Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ
ಸಣ್ಣಗಾಗ್ಬೇಕು ಅಂತ ಏನೆಲ್ಲಾ ಸರ್ಕಸ್ ಮಾಡ್ತಿದ್ದೀರಾ ? ಅನ್ನ ಬಿಟ್ಟು ಚಪಾತಿ (Chapathi)ಯನ್ನೇ ತಿನ್ತಿದ್ದೀರಾ ? ಹಾಗಿದ್ರೆ ತಿಳ್ಕೊಳ್ಳಿ ಸಾಮಾನ್ಯ ಗೋಧಿ ಹಿಟ್ಟಿನ ಚಪಾತಿ ತಿನ್ನೋದ್ರಿಂದ ತೂಕ (Weight) ಹೆಚ್ಚಾಗುತ್ತದೆ. ಅದರ ಬದಲು ಬೇರ್ಯಾವ ಹಿಟ್ಟಿನ ಚಪಾತಿ ತಿನ್ಬೋದು ತಿಳ್ಕೊಳ್ಳಿ.
ಅಧಿಕ ತೂಕ (Weight) ಎನ್ನುವುದು ಈಗ ಸಾಮಾನ್ಯವಾಗಿ ಎಲ್ಲರಲ್ಲಿ ಕಂಡು ಬರುವ ಸಮಸ್ಯೆ. ತೂಕವನ್ನು ಇಳಿಸಿಕೊಳ್ಳೋಕೆ ವರ್ಕೌಟ್, ಯೋಗ, ಡಯೆಟ್ ಎಂದು ಹಲವು ರೀತಿಯನ್ನು ಅನುಸರಿಸುತ್ತಾರೆ. ಅದರಲ್ಲೂ ಕಟ್ಟುನಿಟ್ಟಿನ ಆಹಾರ (Food) ಕ್ರಮ ತೂಕ ಇಳಿಸಿಕೊಳ್ಳೋಕೆ ಪರಿಣಾಮಕಾರಿ ದಾರಿ ಎಂದೇ ಹೇಳಲಾಗುತ್ತದೆ. ಹೀಗಾಗಿ ಹೆಚ್ಚಿನವರು ಅನ್ನವನ್ನು ಬಿಟ್ಟು ಚಪಾತಿಯನ್ನೇ ತಿನ್ನುತ್ತಾರೆ. ಆದ್ರೆ ಸಾಮಾನ್ಯ ಹಿಟ್ಟಿನ ಚಪಾತಿಯನ್ನು ತಿನ್ನುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ ಅನ್ನೋದು ನಿಮ್ಗೆ ಗೊತ್ತಾ?
ಹೌದು, ಚಪಾತಿಯಲ್ಲಿರುವ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಆದರೆ ಅವು ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಚಪಾತಿಯು ಒಂದೇ ಸರ್ವಿಂಗ್‌ನಲ್ಲಿ 104 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹೀಗಾಗಿ ನಿಯಮಿತವಾಗಿ ಚಪಾತಿ ತಿನ್ನೋದ್ರಿಂದ ಕ್ಯಾಲೊರಿ ಹೆಚ್ಚಾಗುತ್ತದೆ. ಹೀಗಾಗಿ ಗೋಧಿ ಹಿಟ್ಟಿನ ಬದಲು ನೀವು ಇತರ ಆರೋಗ್ಯಕರ ಹಿಟ್ಟಿನ ಚಪಾತಿಯನ್ನು ಸೇವಿಸಬಹುದು. ತೂಕ ನಷ್ಟಕ್ಕೆ ಸಹಾಯ ಮಾಡುವ 5 ಆರೋಗ್ಯಕರ ಹಿಟ್ಟಿನ ಆಯ್ಕೆಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಇದು ಬಾಯಿಗೂ ರುಚಿ, ಆರೋಗ್ಯಕ್ಕೂ ಉಪಕಾರಿ.
Food Tips: ತೂಕ ಇಳಿಸ್ಕೋಬೇಕು, ಎಲ್ಲಾ ವೆರೈಟಿ ಫುಡ್ ತಿನ್ಬೇಕು ಅನ್ನೋರು ಇದನ್ನೋದಿ
ರಾಗಿ ಹಿಟ್ಟು
ರಾಗಿ (Milet)ಯು ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ರಾಗಿಯನ್ನು ಕಬ್ಬಿಣ, ಕ್ಯಾಲ್ಸಿಯಂ ಮತ್ತು ನಾರಿನ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಆಹಾರದಲ್ಲಿ ಯಾವುದೇ ರೀತಿಯಲ್ಲಿ ರಾಗಿಯನ್ನು ಸೇರಿಸಬಹುದು. ರಾಗಿ ಗಂಜಿ, ರಾಗಿ ಮಾಲ್ಡ್, ರಾಗಿ ಚಪಾತಿ ಮಾಡಿ ತಿನ್ನಬಹುದು. ಇದು ಆರೋಗ್ಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ತೂಕ ಹೆಚ್ಚಳದ ವಿರುದ್ಧ ರಾಗಿಯ ಬಳಕೆ ಹಲವರ ಆಯ್ಕೆಯಾಗಿದೆ. ಯಾಕೆಂದರೆ ಇದು ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಹೀಗಾಗಿ, ಯಾವುದೇ ಊಟದಲ್ಲಿ ರಾಗಿಯನ್ನು ಹೊಂದಿರುವುದು ಪೌಷ್ಟಿಕಾಂಶದ ಉತ್ತಮ ಆಯ್ಕೆಯಾಗಿದೆ. ರಾಗಿ ರೊಟ್ಟಿ, ರಾಗಿ ಚಪಾತಿ ಸುಲಭವಾಗಿ ಜೀರ್ಣವಾಗುವ ಕಾರಣ ತೂಕ ಹೆಚ್ಚಾಗುವ ಭಯವಿಲ್ಲ.
ಬಾದಾಮಿ ಹಿಟ್ಟು|
ಬಾದಾಮಿಯು ಪೌಷ್ಟಿಕಾಂಶದ ಉತ್ತಮ ಮೂಲವಾಗಿದೆ. ಬಾದಾಮಿ (Almond) ಆಹಾರದಲ್ಲಿ ಪ್ರೋಟೀನ್ ಅನ್ನು ಪೂರೈಸುತ್ತದೆ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಬಾದಾಮಿಯು ಕಡಿಮೆ ಫೈಟಿಕ್ ಆಮ್ಲವನ್ನು ಹೊಂದಿರುತ್ತದೆ. ಅಂದರೆ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುವುದಿಲ್ಲ. ಹೀಗಾಗಿ ಬಾದಾಮಿ ಹಿಟ್ಟಿನಿಂದ ಮಾಡಿದ ಚಪಾತಿಯನ್ನು ಚಿಂತೆಯಿಲ್ಲದೆ ತಿನ್ನಬಹುದು.
Drink Hing Water: ತೆಳ್ಳಗಾಗ್ಬೇಕಾ ? ಇಂಗು ನೀರು ಕುಡಿದು ನೋಡಿ
ಜೋಳದ ಹಿಟ್ಟು
ಜೋಳದ ಹಿಟ್ಟು, ಸಾಮಾನ್ಯ ಗೋಧಿ (Wheat) ಚಪಾತಿಗಳಿಗಿಂತ ಜೀರ್ಣಿಸಿಕೊಳ್ಳಲು ಸುಲಭ. ನಿಮ್ಮ ಆಹಾರದಲ್ಲಿ ಜೋಳವನ್ನು ಸೇರಿಸುವುದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಮತ್ತು ಸ್ವತಂತ್ರ ರಾಡಿಲ್ಗಳೊಂದಿಗೆ ಸಕ್ರಿಯವಾಗಿ ಹೋರಾಡಲು ಅನುಕೂಲವಾಗುವ ಖನಿಜಗಳು ಮತ್ತು ಜೀವಸತ್ವಗಳ ಅಂಶವನ್ನು ಒಳಗೊಂಡಿದೆ. ಜೋಳ ವಿಟಮಿನ್ ಸಿಯ ಉತ್ತಮ ಮೂಲವಾಗಿದೆ.
ಓಟ್ಸ್ ಹಿಟ್ಟು
ತೂಕ ಇಳಿಸಿಕೊಳ್ಳಲು ಯತ್ನಿಸುವವರು ಸಾಮಾನ್ಯವಾಗಿ ಓಟ್ಸ್ (Oats)ನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದ್ರೆ ಓಟ್ಸ್‌ನಿಂದ ಹಲವು ರೆಸಿಪಿಗಳನ್ನು ತಯಾರಿಸಿ ತಿನ್ನಬಹುದು. ಓಟ್ಸ್ ರೊಟ್ಟಿ, ಓಟ್ಸ್ ಚಪಾತಿಯನ್ನು ಸಹ ಮಾಡಿ ತಿನ್ನಬಹುದು. ಓಟ್ಸ್ ಉತ್ತಮವಾದ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್ ಬಿ ಮತ್ತು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಸಾಮಾನ್ಯ ಗೋಧಿ ಹಿಟ್ಟಿಗೆ ಓಟ್ಸ್ ಅನ್ನು ಬೆರೆಸುವುದು ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚುತ್ತದೆ.
ಇನ್ಯಾಕೆ ತಡ, ಪ್ರತಿದಿನ ಗೋಧಿ ಚಪಾತಿ ತಿನ್ನೋದನ್ನು ಬಿಟ್ಟು ಈ ವೆರೈಟಿ ಚಪಾತಿಗಳನ್ನು ಟ್ರೈ ಮಾಡಿ. ಇದರಿಂದ ಬಾಯಿಗೂ ರುಚಿ ಮಾತ್ರವಲ್ಲ ಸುಲಭವಾಗಿ ತೂಕವನ್ನೂ ಕಳೆದುಕೊಳ್ಳಬಹುದು.