Asianet Suvarna News Asianet Suvarna News

Weight Loss Diet: ಸಣ್ಣಗಾಗ್ಬೇಕಾ ? ತಟ್ಟೆಯಲ್ಲಿ ನೆಗೆಟಿವ್ ಕ್ಯಾಲೊರಿ ಫುಡ್ ಇರ್ಲಿ

ವೈಟ್ ಲಾಸ್ (Weight Loss) ಬಗ್ಗೆ ಮಾತನಾಡುವಾಗ ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರ್ತಾ ಇರೋದು ನೆಗೆಟಿವ್ ಕ್ಯಾಲೊರಿ (Negative Calorie) ಫುಡ್ ವಿಚಾರ. ಹಾಗಂದ್ರೇನು ? ಇದ್ರಿಂದ ನಿಜವಾಗ್ಲೂ ತೂಕ ಕಡಿಮೆಯಾಗುತ್ತಾ ?

Add Negative Calorie Food To Your Diet For Weight Loss
Author
Bengaluru, First Published Feb 26, 2022, 11:45 AM IST

ತೂಕ (Weight) ಇಳಿಸ್ಕೊಂಡು ಸಣ್ಣಗಾಗ್ಬೇಕು ಅನ್ನೋದು ಹಲವರ ಡ್ರೀಮ್. ಇಂದಿನ ದಿನದಲ್ಲಿ ತೂಕವನ್ನು ಕಳೆದುಕೊಳ್ಳುವುದು ಬಹುತೇಕ ಗೀಳಿನಂತಿದೆ. ಅದಕ್ಕಾಗಿ ಜಿಮ್ (Gym), ಯೋಗ, ಧ್ಯಾನ, ಡಯೆಟ್ ಅಂತ ಹಲವು ರೀತಿಯಲ್ಲಿ ಪ್ರಯತ್ನ ಮಾಡ್ತಾರೆ. ಅದರಲ್ಲೂ ಮುಖ್ಯವಾಗಿ ಡಯೆಟ್ ಹಲವರ ಫೇವರಿಟ್. ನ್ಯೂಟ್ರಿಷಿಯನ್ ಸಲಹೆಯಂತೆ ಸೆಲೆಕ್ಟೆಡ್ ಫುಡ್ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಡಯೆಟ್ ಲಿಸ್ಟ್‌ಗೆ ಹೊಸ ಸೇರ್ಪಡೆ, ನೆಗೆಟಿವ್ ಕ್ಯಾಲೊರಿ ಫುಡ್. ಇದು ಸದ್ಯ ಹೆಚ್ಚು ಟ್ರೆಂಡ್‌ನಲ್ಲಿದೆ. 

ನೆಗೆಟಿವ್ ಕ್ಯಾಲೊರಿ ಫುಡ್ ಎಂದರೇನು ?
ನೆಗೆಟಿವ್ ಕ್ಯಾಲೊರಿ ((Negative Calorie) ಫುಡ್ ಎಂದರೆ ಕಡಿಮೆ ಕ್ಯಾಲೊರಿಯನ್ನು ಹೊಂದಿರುವ ಆಹಾರಗಳಾಗಿವೆ. ಇವು ಪೋಷಕಾಂಶದಲ್ಲಿ ಸಮೃದ್ಧವಾಗಿದೆ. ಆದರೆ ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ. ಹೀಗಾಗಿ ಈ ಆಹಾರ (Food)ವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಯಾವುದೇ ರೀತಿಯಲ್ಲಿ ತೊಂದರೆಯಿಲ್ಲ. ಬೆಂಗಳೂರಿನ ಖ್ಯಾತ ಪೌಷ್ಟಿಕತಜ್ಞ, ಡಾ.ಅಂಜು ಸೂದ್, ‘ಹೆಚ್ಚಿನ ಫೈಬರ್ ಆಹಾರಗಳು ಅಥವಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳನ್ನು ಋಣಾತ್ಮಕ ಕ್ಯಾಲೋರಿ ಆಹಾರಗಳು ಎಂದು ಕರೆಯಬಹುದು’ ಎನ್ನುತ್ತಾರೆ.

Weight Loss Tips: ಸಣ್ಣಗಾಗ್ಬೇಕಾ ? ಗೋಧಿ ಹಿಟ್ಟಿನ ಚಪಾತಿ ಬಿಟ್ಬಿಡಿ, ಇದನ್ನು ಟ್ರೈ ಮಾಡಿ

ಬಾಲಾಜಿ ಆಕ್ಷನ್ ಮೆಡಿಕಲ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ಪೌಷ್ಟಿಕತಜ್ಞ ಪ್ರಿಯಾ ಭರ್ಮಾ ಪ್ರಕಾರ, ‘ನೆಗೆಟಿವ್ ಕ್ಯಾಲೊರಿಯ ಆಹಾರಗಳು ಹೊಟ್ಟೆ ತುಂಬಲು ಕಾರಣವಾಗುವುದರ ಜತೆಗೆ ಶೀಘ್ರವಾಗಿ ಜೀರ್ಣವೂ ಆಗುತ್ತದೆ. ಇಂಥಹಾ ಆಹಾರಗಳಲ್ಲಿ ದಿನನಿತ್ಯದ ಜೀವನದಲ್ಲಿ ದೇಹವು ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಿರುವ ಕ್ಯಾಲೋರಿಗಳು ಇರುತ್ತವೆ. ಹೀಗಾಗಿ ಈ ಆಹಾರ ಪದಾರ್ಥಗಳಲ್ಲಿ ಒಳಗೊಂಡಿರುವ ಕ್ಯಾಲೊರಿಗಳ ಸಂಖ್ಯೆಯ ಬಗ್ಗೆ ಚಿಂತಿಸದೆ ನೀವು ಅವುಗಳನ್ನು ತಿನ್ನಬಹುದು. ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಕೆಲವೊಂದು ನೆಗೆಟಿವ್ ಕ್ಯಾಲೊರಿ ಆಹಾರಗಳ ಲಿಸ್ಟ್ ಇಲ್ಲಿದೆ.

ಕ್ಯಾರೆಟ್ 
ಕ್ಯಾರೆಟ್ (Carrot) 100 ಗ್ರಾಂಗೆ ಸುಮಾರು 41 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅವುಗಳು ಕಡಿಮೆ ಕೊಲೆಸ್ಟ್ರಾಲ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ. ಹೀಗಾಗಿ ತೂಕ ಹೆಚ್ಚಳವಾಗುವ ಭಯವಿಲ್ಲ. ಅಲ್ಲದೆ, ಇದು ಅಧಿಕ ರಕ್ತದೊತ್ತಡ ಸಮಸ್ಯೆಯಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕ್ಯಾರೆಟ್, ಡಯೆಟರಿ ಫೈಬರ್‌ನ ಉತ್ತಮ ಮೂಲವಾಗಿರುವುದರ ಜೊತೆಗೆ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್ ಅಂಶಗಳಲ್ಲೂ ಸಮೃದ್ಧವಾಗಿದೆ.

Food Tips: ಊಟ ಬಿಟ್ರೆ ಸಣ್ಣಗಾಗ್ತೀವಿ ಅನ್ನೋದು ಸುಳ್ಳು. ಹಾಗೆ ಮಾಡ್ಬೇಡಿ

ಟೊಮೇಟೋ 
ಟೊಮೇಟೋ (Tomato) 100 ಗ್ರಾಂಗೆ ಕನಿಷ್ಠ 19 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆಹಾರದ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಯ ರಸಭರಿತವಾದ ಮತ್ತು ರುಚಿಕರವಾದ ಮೂಲವಾಗಿರುವುದರ ಹೊರತಾಗಿ, ಅವುಗಳು ಲೈಕೋಪೀನ್ ಅಂಶವನ್ನು ಹೊಂದಿರುತ್ತವೆ. ಲೈಕೋಪೀನ್ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ತಿಳಿದಿರುವ ಉತ್ಕರ್ಷಣ ನಿರೋಧಕವಾಗಿದೆ. ಟೊಮೇಟೋ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ.

ಸೌತೆಕಾಯಿಗಳು 
ಸೌತೆಕಾಯಿಗಳು (Cucumber) ಖನಿಜಗಳು ಮತ್ತು ವಿಟಮಿನ್‌ಗಳಿಂದ ತುಂಬಿರುತ್ತವೆ. ಸೌತೆಕಾಯಿಗಳು 100 ಗ್ರಾಂಗೆ 16 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸೌತೆಕಾಯಿ ಸೇವನೆ ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದನ್ನು ಕ್ಲಾಸಿಕ್ ಕೂಲಿಂಗ್ ಫುಡ್ ಎಂದೂ ಕರೆಯುತ್ತಾರೆ. ಇದು ಬೇಸಗೆಯ ದಿನಗಳಲ್ಲಿ ದೇಹದ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕಲ್ಲಂಗಡಿಗಳು
ಕಲ್ಲಂಗಡಿಗಳು 100 ಗ್ರಾಂಗೆ 30 ಕ್ಯಾಲೊರಿಗಳನ್ನು ಹೊಂದಿರುತ್ತವೆ. ಕಲ್ಲಂಗಡಿ (Watermelon)ಗಳಲ್ಲಿ ಲೈಕೋಪೀನ್ ಕೂಡ ಸಮೃದ್ಧವಾಗಿದೆ, ಇದು ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿ ತೊಗಟೆಯಲ್ಲಿರುವ ಸಿಟ್ರುಲಿನ್ ಅಂಶ ಸುಗಮ ರಕ್ತದ ಹರಿವಿಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಾರಣವಾಗುತ್ತದೆ.

Follow Us:
Download App:
  • android
  • ios