ಲಕ್ಷ್ಮಿಯನ್ನು ಮಾತ್ರವಲ್ಲ, ಲಕ್ಷ್ಮಿ ಜೊತೆಗೆ ಈ ದೇವರನ್ನೂ ಪೂಜಿಸಬೇಕು ಗೊತ್ತೆ?

ಕೆಲವು ಯಂತ್ರಗಳ ಆರಾಧನೆಯಿಂದ ನಿಮಗೆ ಲಕ್ಷ್ಮಿ ಒಲಿಯುತ್ತಾಳೆ. ಅದರಲ್ಲಿ ಕುಬೇರ ಲಕ್ಷ್ಮಿ ಯಂತ್ರವೂ ಪ್ರಮುಖ. ಸಿರಿದೇವಿಯ ಒತೆಗೆ ಕುಬೇರನಿಗೂ ಪೂಜೆ ಸಲ್ಲಿಸಿ.

You should worship Kubera along with Lakshmi Devi

ಸಿರಿದೇವಿಯಾದ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಮಾಡುವ ಆರಾಧನೆಯಲ್ಲಿ ಹಲವು ಬಗೆಯ ಯಂತ್ರಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಇದಕ್ಕಾಗಿ ನೀವು ಶ್ರೀ ಯಂತ್ರ, ಮಹಾಲಕ್ಷ್ಮಿ ಯಂತ್ರ, ಧನ ವರ್ಷ ಯಂತ್ರ, ವ್ಯಾಪಾರ ಬೆಳವಣಿಗೆ ಯಂತ್ರ ಮತ್ತು ಲಕ್ಷ್ಮಿ ಕುಬೇರ ಯಂತ್ರವನ್ನು ಪೂಜಿಸುವ ಮೂಲಕ ವಿಶೇಷ ಫಲಗಳನ್ನು ಪಡೆಯಬಹುದು.

ಈ ಯಂತ್ರಗಳ ಪರಿಣಾಮದಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಸಂತೋಷವು ಸ್ಥಾಪಿತವಾಗುತ್ತದೆ ಎಂದು ವಿಷ್ಣು ಪುರಾಣದಲ್ಲಿ ತಿಳಿಸಲಾಗಿದೆ.

ದೇಗುಲದಲ್ಲಿ ಧ್ಯಾನ ಮಾಡುವಾಗ ಈ ನಿಯಮಗಳು ನೆನಪಿರಲಿ ...

ಲಕ್ಷ್ಮಿ ದೇವಿಯ ಅನುಗ್ರಹವಿಲ್ಲದೆ, ಹಣವನ್ನು ಸಾಧಿಸಲು ಸಾಧ್ಯವಿಲ್ಲ. ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸಿ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಶುಕ್ರವಾರದಂದು ಸಂಜೆ ಅಥವಾ ಮುಸ್ಸಂಜೆಯಲ್ಲಿ ಲಕ್ಷ್ಮಿ ದೇವಿಯ ಮುಂದೆ ಎಳ್ಳೆಣ್ಣೆ ಮತ್ತು ತುಪ್ಪದ ದೀಪವನ್ನು ಬೆಳಗಿಸಿ. ಅರಿಶಿನ, ಕುಂಕುಮವನ್ನಿಟ್ಟು ಪೂಜೆ ಮಾಡಿ ಮತ್ತು ತಾಯಿಗೆ ಗುಲಾಬಿ ಹೂವನ್ನು ಅರ್ಪಿಸಿ. ಹಾಲು ಮತ್ತು ಬೆಲ್ಲದೊಂದಿಗೆ ತಯಾರಿಸಿದ ಸಿಹಿತಿಂಡಿಗಳನ್ನು ನೀಡಿ. ಸಾಧ್ಯವಾದಷ್ಟು ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ಸಿಹಿ ತಿಂಡಿಗಳನ್ನು ಅರ್ಪಿಸಿ.

ತಾಮ್ರ, ಬೆಳ್ಳಿ ಅಥವಾ ಚಿನ್ನದಲ್ಲಿ ಶ್ರೀ ಯಂತ್ರವನ್ನು ಮಾಡುವ ಮೂಲಕ ನೀವು ಅವುಗಳನ್ನು ಮನೆಯ ಈಶಾನ್ಯ ಭಾಗದಲ್ಲಿ ಅಥವಾ ನಿಮ್ಮ ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಬಹುದು. ಶುಕ್ರವಾರ, ಲಕ್ಷ್ಮಿ ಪೂಜೆಯನ್ನು ಮಾಡುವುದರೊಂದಿಗೆ ಈ ಯಂತ್ರವನ್ನು ಕೂಡ ಪೂಜಿಸಬೇಕು. ಈ ದಿನ ಪೂಜೆಗೆ ಕೆಲವು ಸಿಹಿ ತಿಂಡಿಗಳನ್ನು ತಯಾರಿಸಿ, ಕುಟುಂಬದ ಸದಸ್ಯರೆಲ್ಲರೂ ಸೇವಿಸಿ.

ಈ ರಾಶಿಯವರು ಕಿಸ್ಸಿಂಗ್ ಎಕ್ಸ್‌ಪರ್ಟ್ಸ್‌! ನೀವೂ ಇದೀರಾ ನೋಡಿ! ...

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಮಾತ್ರವಲ್ಲ, ಕುಬೇರ ದೇವನನ್ನು ಕೂಡ ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಭೂಮಿಯ ಸಂಪೂರ್ಣ ಸಂಪತ್ತು ಮತ್ತು ಸಮೃದ್ಧಿಯನ್ನು ಕಾಪಾಡುವ ಕಾರ್ಯವನ್ನು ಕುಬೇರನು ಮಾಡುತ್ತಾನೆ. ಆತನನ್ನು ಸಂತೋಷಪಡಿಸುವ ಮೂಲಕ, ನಿಮಗೆ ಸಂಪತ್ತು ಪಡೆಯಲು ವಿಶೇಷ ಅವಕಾಶಗಳಿವೆ. ಇದಕ್ಕಾಗಿ ನೀವು ಕುಬೇರ ದೇವನ ವಿಗ್ರಹವನ್ನು ಅಥವಾ ಅವರ ಚಿತ್ರವನ್ನು ಮನೆಯ ದೇವಾಲಯದಲ್ಲಿ ಸ್ಥಾಪಿಸಬೇಕು. ಅವರನ್ನು ಆರಾಧಿಸುವುದರಿಂದ ಜೀವನದಲ್ಲಿ ಆರ್ಥಿಕ ಲಾಭಗಳು ದೊರೆಯುತ್ತವೆ. ಆದ್ದರಿಂದ, ಕುಬೇರ ದೇವನ ಸ್ಥಾಪನೆಯು ಸಹ ಸಂಪತ್ತನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.

ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವ ವಿಧಾನದಲ್ಲಿ ಶ್ರೀಸೂಕ್ತ ಪಠ್ಯವು ಸಹ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಶ್ರೀಸೂಕ್ತ ಪಠ್ಯದ ಮಂಗಳಕರಿ ಮಂತ್ರಗಳನ್ನು ಪಠಿಸುವುದು ಬಹಳ ಪರಿಣಾಮಕಾರಿ ಎಂದು ಋಗ್ವೇದದಲ್ಲಿ ಪರಿಗಣಿಸಲಾಗಿದೆ. ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸುವ ಸಮಯದಲ್ಲಿ ಶ್ರೀಸೂಕ್ತವನ್ನು ಪಠಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ, ತಾಯಿ ಲಕ್ಷ್ಮಿ ಸಂತೋಷಗೊಂಡು ಭಕ್ತರಿಗೆ ಅಪೇಕ್ಷಿತ ಫಲವನ್ನು ನೀಡುತ್ತಾಳೆ.

ಯಾವುದಾದರೂ ಕೆಲಸಕ್ಕೆ ಹೊರಟಾಗ ತೊಡಕುಂಟಾದರೆ ಈ ಮಂತ್ರವನ್ನು 3 ಬಾರಿ ಪಠಿಸಿದರೆ ಸಾಕು! ...

ನಮ್ಮಲ್ಲಿರುವ ಹಣದಲ್ಲಿ ಒಂದಿಷ್ಟು ಹಣವನ್ನು ಇತರರಿಗೆ ದಾನ ಮಾಡುವುದರಿಂದ ಲಕ್ಷ್ಮಿ ದೇವಿಯು ನಮ್ಮ ಮೇಲೆ ಸಂತೋಷಗೊಳುತ್ತಾಳೆ ಮತ್ತ ಆಕೆಯ ಆಶೀರ್ವಾದವನ್ನು ನೀಡುತ್ತಾಳೆ. ನೀವು ಗಳಿಸುವ ಭಾಗದಲ್ಲಿ ಸ್ವಲ್ಪ ಭಾಗವನ್ನು ದಾನ ಮಾಡಬೇಕು. ಕೆಲವು ಭಾಗವನ್ನು ಲೋಕೋಪಕಾರಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸಬೇಕು. ಒಬ್ಬರು ಇನ್ನೊಬ್ಬರ ಹಣಕ್ಕೆ ದುರಾಸೆಯನ್ನು ಪಡಬಾರದು. ಯಾವುದೇ ಓರ್ವ ವ್ಯಕ್ತಿ ಯಾರಿಂದಲಾದರೂ ಯಾವುದೇ ವಸ್ತುಗಳನ್ನು ಪಡೆದಿದ್ದರು ಅದನ್ನು ಅವನು ಇಟ್ಟುಕೊಳ್ಳಬಾರದು. ಅದನ್ನು ಹಿಂದಿರುಗಿಸಬೇಕು ಅಥವಾ ಆ ವಸ್ತುವಿಗೆ ಬದಲಾಗಿ ಬೇರೆ ವಸ್ತುವನ್ನು ನೀಡಬೇಕು.

Latest Videos
Follow Us:
Download App:
  • android
  • ios