Asianet Suvarna News Asianet Suvarna News

ಈ ರಾಶಿಯವರು ಕಿಸ್ಸಿಂಗ್ ಎಕ್ಸ್‌ಪರ್ಟ್ಸ್‌! ನೀವೂ ಇದೀರಾ ನೋಡಿ!

ಕೆಲವು ರಾಶಿಯವರಿದ್ದಾರೆ, ಕಿಸ್ಸಿಂಗೂ ಸೇರಿದಂತೆ ರೊಮ್ಯಾನ್ಸ್ ವಿಚಾರಗಳಲ್ಲಿ ಭಯಂಕರ ಆಕ್ಟಿವ್. ನೀವೂ ಈ ರಾಶಿಯವರಾ, ನೋಡಿಕೊಳ್ಳಿ.

Kissing is main passion of these zodiac born
Author
Bengaluru, First Published Feb 27, 2021, 4:19 PM IST

ಕೆಲವರಿದ್ದಾರೆ, ಅವರ ಕಿಸ್ಸಿಂಗ್ ಸ್ಟೈಲ್ ನೋಡಿಯೇ ಇವರು ಯಾವ ಜನ್ಮರಾಶಿಯಲ್ಲಿ ಜನಿಸಿದವರು ಅಂತ ಥಟ್ ಅಂತ ಹೇಳಿಬಿಡಬಹುದು. ಇವರು ಕಿಸ್ಸಿಂಗ್ ಸ್ಟಾರ್‌ಗಳು ಅಂತಲೇ ಬಿರುದು ಪಡೆಯುವಷ್ಟು ಪಂಟರ್ ಆಗಿರುತ್ತಾರೆ ಈ ವಿಚಾರದಲ್ಲಿ. ಹಾಗಿದ್ರೆ ಅವರು ಯಾರು ಅಂತ ತಿಳಿದುಕೊಳ್ಳೋಣವಾ?

ಮಿಥುನ ರಾಶಿ

ಇವರ ಹೆಸರಿನಲ್ಲೇ ರೊಮ್ಯಾನ್ಸ್‌ನ ಛಾಯೆ ದಟ್ಟವಾಗಿ ಇದೆಯಲ್ಲಾ! ಇವರು ಪಕ್ಕದಲ್ಲಿ ಸಂಗಾತಿ ಸದಾ ಇರಲಿ ತಮ್ಮ ತುಟಿ ಅವಳ/ಅವನ ಗಲ್ಲದ ಮೇಲಿರಲಿ ಅಂತ ಯೋಚಿಸುತ್ತಾ ಇರುತ್ತಾರೆ. ಸಂಗಾತಿಯ ತುಟಿಯನ್ನೇ ಗಮನಿಸುತ್ತಾ ಇರುತ್ತಾರೆ. ಆಕೆ/ಆತ ಕಿಸ್ಸಿಂಗ್‌ಗೆ ಸಿದ್ಧ ಅಂತ ಗೊತ್ತಾದ ಮರುಕ್ಷಣದಲ್ಲೇ ಗಬಕ್ಕನೆ ಕ್ಯಾಚ್ ಹಾಕ್ಕೊಂಡು ಮುತ್ತಿಡುತ್ತಾರೆ.

ಸಾಡೇಸಾಥ್ ಇರುವವರು ಶನಿ ಮಹಾತ್ಮನ ಈ ಮಂತ್ರ ಜಪಿಸುವುದರಿಂದ ಭಯ ದೂರವಾಗುವುದು ...

ಕಟಕ ರಾಶಿ

ಇವರು ಕಟಕಗಳಲ್ಲ, ಮುತ್ತಿಡುವ ವಿಚಾರದಲ್ಲಿ ಕಟುಕರೇ ಸೈ. ಕಿಸ್ ಮಾಡುವ ಒಂದು ಸಣ್ಣ ಅವಕಾಶವನ್ನೂ ಬಿಡೋಲ್ಲ ಇವರು. ಹಿರಿಯರು ಬೆನ್ನು ತಿರುಗಿಸಿದಾಗ, ಮಕ್ಕಳು ಬಾತ್‌ರೂಮಿನಲ್ಲಿದ್ದಾಗ, ಮರದ ಮರೆಯಲ್ಲಾದರೂ ಸೈ ಒಂದು ಕೈ ನೋಡಿಯೇ ಸಿದ್ಧ. ಇಂಥವರನ್ನು ಸಂಗಾತಿಗಳನ್ನಾಗಿ ಪಡೆದವರು ಪುಣ್ಯಶಾಲಿಗಳು. ಇವರ ಕಿಸ್ಸಿಂಗ್ ಸ್ಟೈಲ್ ಸ್ವಲ್ಪ ಮಟ್ಟಿಗೆ ಫ್ರೆಂಚ್ ಕಿಸ್ಸಿಂಗ್ ಅಂತಾರಲ್ಲ ಹಾಗೆ. ಅಂದರೆ ತುಟಿಗೆ ತುಟಿ ತಾಗಿಸಿದರೆ ಬಾಯಿ ಪೂರಾ ಒದ್ದೆಯಾಗದೆ ಸುಮ್ಮನೆ ಬಿಡುವುದೇ ಇಲ್ಲ. ಗಾಢ ಚುಂಬನ ಇವರ ಆಸಕ್ತಿ. 

ಈ ಕನಸ ಕಂಡರೆ ದಿಢೀರ್ ಶ್ರೀಮಂತರಾಗುವಿರಿ ಎಂದರ್ಥ ...

ವೃಶ್ಚಿಕ ರಾಶಿ

ಇವರು ಸಂಗಾತಿಯಿಂದ ಕಿಸ್ ಕೊಡಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ತಾವು ಕೊಡುವುದಕ್ಕಿಂತಲೂ ವಸೂಲು ಮಾಡುವುದರಲ್ಲಿಯೇ ಇವರಿಗೆ ಹೆಚ್ಚು ಆಸಕ್ತಿ. ತುಂಬ ಸಣ್ಣ ಪ್ರಾಯದಲ್ಲಿಯೇ ಕಿಸ್ಸಿಂಗ್ ಬಗ್ಗೆ ಅನುಭವ ಹೊಂದಿದ್ದರೂ ಆಶ್ಚರ್ಯವಿಲ್ಲ. ಬಹುಶಃ ತಮಗಿಂತ ದೊಡ್ಡ ಪ್ರಾಯದ ಸಂಗಾತಿಯಿಂದ ಕಿಸ್ಸಿಂಗ್‌ನ ಗಾಢ ಅನುಭವವನ್ನು ಹೊಂದಿರುತ್ತಾರೆ. ಅದರಿಂದಲೇ ಆರಂಭಿಸಿ ರೊಮ್ಯಾನ್ಸ್‌ನ ಹಲವು ವಿಚಾರಗಳನ್ನು ಕಲಿತಿರುತ್ತಾರೆ. ಹಲವು ವಿಚಾರಗಳನ್ನು ಕಲ್ಪನೆಯಿಂದಲೇ ಇವರು ಸೃಷ್ಟಿಸಿಕೊಳ್ಳಬಲ್ಲರು. ಹಾಗಾಗಿ ಓವರ್ ಆಕ್ಟಿವ್ ಆಗಿದ್ದರೆ ಆಶ್ಚರ್ಯವಿಲ್ಲ.

ಧನು ರಾಶಿ

ಇವರಉ ರೊಮ್ಯಾನ್ಸ್ ವಚಾರದಲ್ಲಿ ನಿಗೂಢ. ಆದರೆ ಯಾವ ಕ್ಷಣದಲ್ಲಿ ಏನು ಮಾಡುತ್ತಾರೆ ಅಂತ ಗೊತ್ತೇ ಆಗದು. ಬೆಡ್‌ರೂಮ್ ಸೇರಿದ ಬಳಿಕವೇ ಇವರ ಉಗ್ರ ಪ್ರತಾಪ ನಿಮಗೆ ಗೊತ್ತಾಗೋದು. ಸಾರ್ವಜನಿಕವಾಗಿ ಅಥವಾ ಎಲ್ಲರೂ ನೋಡುವ ಜಾಗದಲ್ಲಿ ಕಿಸ್ಸಿಂಗ್ ಮಾಡಲಾರರು. ಆದರೆ ಏಕಾಂತದಲ್ಲಿ ಕಿಸ್ಸಿಂಗ್ ಮಾಡುವಾಗ ಸಂಗಾತಿಗೆ ಸ್ವರ್ಗವನ್ನೇ ತೋರುತ್ತಾರೆ. ತಾವೂ ಸ್ವರ್ಗವನ್ನೇ ಪಡೆಯುತ್ತಾರೆ. ಇವರ ಜೊತೆಗಿರವವರು ಅದೃಷ್ಟವಂತರು.

ವೃಷಭ ರಾಶಿಗೆ ಮಂಗಳನ ಪ್ರವೇಶ: ನಿಮ್ಮ ರಾಶಿಗೆ ಶುಭವಾ? ...

ಮೀನ ರಾಶಿ

ಇವರು ಪ್ರಜ್ಞೆ ತಪ್ಪುವಷ್ಟು ಗಾಢವಾಗಿ ಕಿಸ್ ಮಾಡಬಲ್ಲರು. ಇವರಿಂದ ಕಿಸ್ ಕೊಡಿಸಿಕೊಳ್ಳುವಾಗ ಹುಷಾರಾಗಿರಬೇಕು. ರೊಮ್ಯಾನ್ಸ್‌ನ ತೀವ್ರತೆಯ ಸಂದರ್ಭದಲ್ಲಿ ಇವರು ಕಿಸ್ಸಿಂಗ್‌ ಎಂದು ಭಾವಿಸಿ ಕಚ್ಚಲೂ ಬಹುದು. ಕಚ್ಚಿದೆಯಲ್ಲಾ ಅಂತ ಕೇಳಿದರೆ ಅದು ಕಿಸ್ಸಿಂಗ್ ಎಂದೇ ವಾದಿಸಲೂಬಹುದು. ಆದರೆ ಇವರ ಜೊತೆಗಿನ ಕಿಸ್ಸಿಂಗ್ ಮಾತ್ರ ಜೀವಮಾನದ ಅನುಭವವೇ ಸರಿ. ನಿತ್ಯದಲ್ಲಿ ಅದು ಹಳತಾಗಬಹುದು, ಆದರೆ ಹೊಸ ಜಾಗಗಳಿಗೆ ಹೋದಾಗ, ವೈವಿಧ್ಯಮಯವಾದ ರೀತಿಯಲ್ಲಿ ಅದು ಹೊಸ ಹುಟ್ಟು ಪಡೆಯುತ್ತದೆ. 

ಕುಂಭ ರಾಶಿ

ಇವರು ನಾಚಿಕೆ ಸ್ವಭಾವದವರು. ಚುಂಬನದಲ್ಲೂ ಅಷ್ಟೆ. ಹಗಲಿನಲ್ಲಿ, ಬೆಳಕಿನಲ್ಲಿ ಇವರು ಕಿಸ್ ಮಾಡಲು ಹಿಂಜರಿಯಬಹುದು. ಹಿಂಜರಿಕೆ ಯಾಕೆಂದರೆ ಮುಖವನ್ನು ತುಂಬ ಹತ್ತಿರದಿಂಧ ನೋಡಿದರೆ ಚೆನ್ನಾಗಿರೋಲ್ಲ ಅಂತ. ಆದರೆ ಕತ್ತಲಿನಲ್ಲಿ ಇವರಷ್ಟು ಪ್ಯಾಶನೇಟ್ ಆಗಿ ಚುಂಬಿಸುವವರು ಇನ್ಯಾರೂ ಇರೋಲ್ಲ. ಆದ್ದರಿಂದ ಇವರ ಗುಪ್ತ ಪ್ರತಿಭೆಯನ್ನು ಹೊರಗೆ ತೆಗೆಯೋದೇ ನಿಮಗೆ ಸವಾಲು.

Follow Us:
Download App:
  • android
  • ios