ಭಕ್ತರೇ, ಎಂದೆಂದಿಗೂ ನೇರವಾಗಿ ದೇವರ ಕಣ್ಣಿಗೆ ಬೀಳಬೇಡಿ!
ದೇವಾಲಯಗಳಲ್ಲಿ ದೇವತಾ ಮೂರ್ತಿಯ ನೇರ ಎದುರಿಗೆ ಕನ್ನಡಿ ಇಡುವುದಕ್ಕೆ ಮತ್ತು ದೇವರ ದೃಷ್ಟಿ ಬೀಳುವಲ್ಲಿ ಯಾರೂ ನಿಲ್ಲದಂತೆ ವ್ಯವಸ್ಥೆ ಮಾಡಿರುವುದಕ್ಕೆ ಕಾರಣವಿದೆ. ಪ್ರಾಣ ಪ್ರತಿಷ್ಠಾಪನೆಯ ನಂತರ ದೇವರ ಮೊದಲ ನೋಟ ಕನ್ನಡಿಯತ್ತ ಇರುತ್ತದೆ.

ದೇವಾಲಯಗಳಲ್ಲಿ ದೇವತಾ ಮೂರ್ತಿಯ ನೇರ ಎದುರಿಗೆ ಕನ್ನಡಿ ಇಟ್ಟಿರುವುದನ್ನು ನೀವು ನೋಡಬಹುದು. ಹಾಗೆಯೇ ನೇರವಾಗಿ ದೇವರ ಮೂರ್ತಿಯ ಕಣ್ಣಿನ ದೃಷ್ಟಿ ಬೀಳುವಲ್ಲಿ ಯಾರೂ ನಿಲ್ಲದಂತೆ ವ್ಯವಸ್ಥೆ ಮಾಡಿರಲಾಗುತ್ತದೆ. ಅಂದರೆ ದೇವರ ಎದುರಿಗೆ ಬೇರೇನೋ ಇರುತ್ತದೆ. ವಿಷ್ಣು ದೇವಾಲಯದಲ್ಲಿ ಗರುಡ ಧ್ವಜ, ಶಿವ ದೇವಾಲಯದಲ್ಲಿ ನಂದಿ- ಹೀಗೆ. ಇದೇಕೆ? ದೇವರ ದರ್ಶನ ಮಾಡುವವರು ಕೂಡ ಮೂರ್ತಿಯ ನೇರ ಎದುರಿಗೆ ನಿಲ್ಲುವುದಿಲ್ಲ. ಹೀಗೇಕೆ?
ಇದಕ್ಕೆ ಕಾರಣವಿದೆ. ದೇವಾಲಯದಲ್ಲಿ ದೇವತಾ ಮೂರ್ತಿಗಳನ್ನು ಆಗಮ ಶಾಸ್ತ್ರದ ಅನುಸಾರ ಸ್ಥಾಪಿಸಲಾಗುತ್ತದೆ. ಮೂರ್ತಿ ಸ್ಥಾಪಿತವಾದ ನಂತರ ಪ್ರಾಣ ಪ್ರತಿಷ್ಠಾಪನೆ ಮಾಡಾಗುತ್ತದೆ. ಪ್ರಾಣ ಪ್ರತಿಷ್ಠಾಪನೆ ಎಂದರೆ ಮೂರ್ತಿಯಲ್ಲಿ ಪ್ರಾಣವನ್ನು ನಿಕ್ಷೇಪಿಸುವುದು. ಆಗಮೋಕ್ತ ವಿಧಿವಿಧಾನಗಳೊಂದಿಗೆ ದೇವರಲ್ಲಿ ಪ್ರಾಣವನ್ನು ಸ್ಥಾಪಿಸುವ ವಿಧಿ ನಡೆಸಲಾಗುತ್ತದೆ. ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ನಡೆಯುವ ಪ್ರಮುಖ ಕಲಾಪವೆಂದರೆ ʼನೇತ್ರೋನ್ಮೀಲನʼ ಅಥವಾ ʼನೇತ್ರಮಾಂಗಲ್ಯʼ.
ಇದು ದೇವರ ಮೂರ್ತಿಯ ಕಣ್ಣುಗಳಿಗೆ 'ದೃಷ್ಟಿ'ಯನ್ನು ನೀಡುವ ಕ್ರಿಯೆ. ಸೃಷ್ಟಿಗೇ ಕಣ್ಣಾಗಿರುವ ಭಗವಂತನಿಗೆ ನಾವು ದೃಷ್ಟಿಯನ್ನು ನೀಡುವುದು ಹೇಗೆ ಎಂದು ನೀವು ಕೇಳಬಹುದು. ಇದೆಲ್ಲ ಶ್ರದ್ಧೆಯ ಪ್ರಶ್ನೆ. ಆದರೆ ನೇತ್ರೋನ್ಮೀಲನ ಆಗುವ ಹಂತದಲ್ಲಿ ಮಾತ್ರ ಗರ್ಭಗುಡಿಯನ್ನು ತೆರೆಯಿಂದ ಮುಚ್ಚಲಾಗಿರುತ್ತದೆ. ನೇತ್ರೋನ್ಮೀಲನ ನಡೆಯಿತು ಎಂದರೆ, ಶಿಲ್ಪದಲ್ಲಿ ನೆಲೆ ನಿಂತ ದೇವರು ನಮ್ಮನ್ನು 'ನೋಡಲು' ಆರಂಭಿಸಿದ ಎಂದು ಅರ್ಥ. ದೇವರ ಆ ನೋಟವನ್ನು ತಾಳುವ ಶಕ್ತಿ ನಮ್ಮ ದೇಹಕ್ಕೆ ಇರದು. ಹೀಗಾಗಿಯೇ ನೇತ್ರೋನ್ಮೀಲನ ಆದಮೇಲೆ ಮೊದಲಿಗೆ ಆ ದೇವರಿಗೇ ತನ್ನ ಬಿಂಬದ ದರ್ಶನವನ್ನು ಮಾಡಿಸಲಾಗುತ್ತದೆ. ಅದು ದರ್ಪಣ ಅಥವಾ ಕನ್ನಡಿಯ ಮೂಲಕ. ಹೀಗಾಗಿ ದೇವರ ಮೊದಲ ನೋಟ ಕನ್ನಡಿಯತ್ತ. ಹೀಗಾಗಿಯೇ ದೇವರ ಮುಂದೆ ಕನ್ನಡಿ ಇರುವುದು.
ಏಕೆಂದರೆ ದೇವರಿಗಷ್ಟೆ ತನ್ನ ಶಕ್ತಿಯನ್ನು ಧಾರಣೆ ಮಾಡುವಂಥ ಶಕ್ತಿ ಇರಲು ಸಾಧ್ಯ. ಬಳಿಕ ದೇವರ ದೃಷ್ಟಿಯನ್ನು ಗೋವಿಗೆ ತೋರಿಸಲಾಗುತ್ತದೆ. ಏಕೆಂದರೆ ಗೋವಿನಲ್ಲಿ ಎಲ್ಲ ದೇವರೂ ನೆಲೆಗೊಂಡಿದ್ದಾರೆ ಎಂಬ ನಂಬಿಕೆ ಇರುವುದರಿಂದ. ಇದಾದ ಬಳಿಕವೇ ಇತರರು ದೇವರ ಮೂರ್ತಿಯನ್ನು ನೋಡಲು, ಆರಾಧಿಸಲು ಸಾಧ್ಯ. ಈಗಲೂ ದೇವರ ನೇರ ದೃಷ್ಟಿ ನಮ್ಮ ಮೇಲೆ ಬೀಳದಂಥ ವ್ಯವಸ್ಥೆಯೇ ದೇವಾಲಯಗಳಲ್ಲಿ ಇರುವುದನ್ನು ನೀವು ಕಾಣಬಹುದು. ಗರುಡಧ್ವಜ, ನಂದಿ ಮುಂತಾದವು ಇರುವ ಕಾರಣ ಇದೇ ಆಗಿದೆ.
ಅಘೋರಿಗಳು ಚಿರಂಜೀವಿಗಳಾ? ಕೃತಯುಗದಿಂದ ಇಂದಿಗೂ ಬದುಕಿರುವ ಎಂಟನೇ ಚಿರಂಜೀವಿ ಯಾರವನು?
ಹಾಗೇ ದೇವಾಲಯದಲ್ಲಿ ಪ್ರದಕ್ಷಿಣೆಯನ್ನು ಯಾವಾಗಲೂ ಪ್ರದಕ್ಷಿಣಾಕಾರವಾಗಿ ಮಾಡಬೇಕು. ಅಂದರೆ ದೇವರ ಬಲಗೈಯಿಂದ ಎಡಗೈಗೆ ಪ್ರದಕ್ಷಿಣೆ ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಪ್ರದಕ್ಷಿಣೆಯನ್ನು ಯಾವಾಗಲೂ 1, 3, 5, 7 ಅಥವಾ 9 ರಂತಹ ಬೆಸ ಸಂಖ್ಯೆಗಳಲ್ಲಿ ಹಾಕಬೇಕು. ಪ್ರದಕ್ಷಿಣೆಯನ್ನು ಮಾಡುವಾಗ ಮಾತನಾಡಬಾರದು. ಪ್ರದಕ್ಷಿಣೆ ಮಾಡುವಾಗ ದೇವರ ಧ್ಯಾನ ಮಾಡುವುದು ಉತ್ತಮ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ ಪ್ರದಕ್ಷಿಣೆ ಹಾಕುವುದು ದೇಹಕ್ಕೆ ಪ್ರಯೋಜನಕಾರಿ. ಪ್ರತಿನಿತ್ಯ ಪೂಜೆ ನಡೆಯುವ ಸ್ಥಳದಲ್ಲಿ ಧನಾತ್ಮಕ ಶಕ್ತಿಯ ಹರಡುವಿಕೆ ಹೆಚ್ಚಿರುತ್ತದೆ. ಈ ಶಕ್ತಿಯು ವ್ಯಕ್ತಿಯ ದೇಹವನ್ನು ಪ್ರವೇಶಿಸಿದಾಗ, ವ್ಯಕ್ತಿಯ ಆತ್ಮವಿಶ್ವಾಸವು ಬಲಗೊಳ್ಳುತ್ತದೆ ಮತ್ತು ಅವನು ಮಾನಸಿಕ ಶಾಂತಿಯನ್ನು ಪಡೆಯುತ್ತಾನೆ.
ನಂಬಿಕೆಗಳ ಪ್ರಕಾರ, ದೇವಾಲಯಕ್ಕೆ ಹೋಗುವಾಗ ನಾವು ಘಂಟೆ ಬಾರಿಸಿದರೆ, ಆ ಶಬ್ದದಿಂದ ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ತೆಗೆದುಹಾಕಲ್ಪಡುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ದೇಹದಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಿದಾಗ ನಾವು ಏಕಾಗ್ರತೆಯಿಂದ ದೇವರನ್ನು ಪೂಜಿಸುತ್ತೇವೆ. ಇದಲ್ಲದೆ, ಘಂಟೆಯ ಶಬ್ದವು ದೇವರಿಗೆ ತುಂಬಾ ಪ್ರಿಯ. ಘಂಟೆ ಬಾರಿಸುವ ಮೂಲಕ, ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಮತ್ತು ನಂತರ ಪೂಜಿಸಲು ದೇವರ ಅನುಗ್ರಹ ಪಡೆಯುತ್ತಾರೆ. ಘಂಟೆಯ ಶಬ್ದವು ದೇಹ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಸಕಾರಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುತ್ತದೆ.
Indian Mythology: ಸೀತಾದೇವಿ 14 ವರ್ಷ ಒಂದೇ ಸೀರೆಯುಟ್ಟ ಕತೆ ನಿಮಗೆ ಗೊತ್ತೆ?