ಪ್ರಾಚೀನ ಭಾರತೀಯ ಯುದ್ಧಭೂಮಿಗಳಲ್ಲಿ ಯುದ್ಧಗಳನ್ನು ಹಗಲು ಹೊತ್ತಿನಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಯುದ್ಧದ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು, ಧರ್ಮ, ನ್ಯಾಯ ಮತ್ತು ಗೌರವವನ್ನು ಎತ್ತಿ ಹಿಡಿಯಲಾಗುತ್ತಿತ್ತು. ರಾತ್ರಿ ಯುದ್ಧವನ್ನು ಅನೈತಿಕ ಮತ್ತು ವಿಶ್ವಾಸಘಾತುಕ ಎಂದು ಪರಿಗಣಿಸಲಾಗುತ್ತಿತ್ತು.

ನಮ್ಮ ನಡುವೆಯೇ ಇದೀಗ ಭಾರತ- ಪಾಕಿಸ್ತಾನ ಯುದ್ಧ ನಡೆಯುತ್ತಿದೆ. ಹೆಚ್ಚಿನ ಎಲ್ಲ ದಾಳಿಗಳೂ ರಾತ್ರಿಯಲ್ಲಿಯೇ ನಡೆಯುತ್ತಿವೆ. ಉಗ್ರರ ಶಿಬಿರಗಳನ್ನು ಭಾರತ ಉಡೀಸ್‌ ಮಾಡಿದ್ದು ರಾತ್ರಿಯೇ. ಪಾಕ್‌ ಡ್ರೋನ್‌ಗಳು ಭಾರತದತ್ತ ನುಗ್ಗಿಬರುತ್ತಿರುವುದೂ ರಾತ್ರಿಯೇ. ಆದರೆ ಮಹಾಭಾರತ ಮತ್ತು ರಾಮಾಯಣದಂತಹ ಪ್ರಾಚೀನ ಭಾರತೀಯ ಪುರಾಣಗಳ ಕಾಲದಲ್ಲಿ ಹೀಗಿರಲಿಲ್ಲ. ಆ ಮಹಾಕಾವ್ಯಗಳಲ್ಲಿ ಯುದ್ಧಗಳನ್ನು ಹಗಲು ಹೊತ್ತಿನಲ್ಲಿ ಮಾತ್ರ ನಡೆಸಲಾಗುತ್ತಿತ್ತು ಎಂಬುದನ್ನು ನೀವು ನೋಡಿದ್ದೀರಿ. ಸೂರ್ಯಾಸ್ತದ ಸಮಯದಲ್ಲಿ ನಿಲ್ಲಿಸಲಾಗುತ್ತಿತ್ತು. ರಾತ್ರಿ ವೈರಿಯನ್ನು ಹೊಡೆಯುವುದು ಸುಲಭವಲ್ಲವೆ? ಆದರೂ ಯಾಕೆ ಸಮರ ಮಾಡುತ್ತಿರಲಿಲ್ಲ?

ಇದು ನಮ್ಮ ಪುರಾತನರು ಕಾಪಾಡಿಕೊಂಡು ಬಂದಿದ್ದ ಯುದ್ಧದ ಸಂಹಿತೆ. ಸಮರದಲ್ಲಿ ಕೂಡ ಧರ್ಮ, ನ್ಯಾಯ ಮತ್ತು ಗೌರವ ಇರಬೇಕು ಎಂಬುದು ಅವರ ಕಾಲದ ಮೌಲ್ಯ ಆಗಿತ್ತು. ಕುರುಕ್ಷೇತ್ರ ಯುದ್ಧ ಆರಂಭ ಆಗುವ ಮುನ್ನ ಆಚಾರ್ಯ ಭೀಷ್ಮರು ಎರಡೂ ಸೇನೆಗಳ ನಾಯಕರನ್ನು ಕರೆದು ಹೇಳುತ್ತಾರೆ- ಯಾರೂ ರಾತ್ರಿ ವೈರಿಯನ್ನು ಘಾತಿಸುವಂತಿಲ್ಲ. ಆಯುಧವಿಲ್ಲದ ಶತ್ರುವನ್ನು ಕೊಲ್ಲುವಂತಿಲ್ಲ. ಶಿಬಿರಗಳನ್ನು ಸುಡುವಂತಿಲ್ಲ. ಬೆನ್ನು ತೋರಿಸಿದ ಶತ್ರುವಿನ ಮೇಲೆ ಬಾಣ ಬಿಡುವಂತಿಲ್ಲ ಇತ್ಯಾದಿ.

ಆ ಕಾಲದಲ್ಲಿ ಯುದ್ಧ ಅಂದರೆ ಬರಿಯ ಶಸ್ತ್ರಾಸ್ತ್ರಗಳ ಘರ್ಷಣೆ ಆಗಿರಲಿಲ್ಲ. ಅದಕ್ಕಿಂ ಹೆಚ್ಚಿನದಾಗಿತ್ತು. ಇದನ್ನು ಗೌರವ ಮತ್ತು ಕಟ್ಟುನಿಟ್ಟಾದ ನೈತಿಕ ಸಂಹಿತೆಗಳಿಂದ ನಿಯಂತ್ರಿಸಲಾಗಿತ್ತು.ಪ್ರಾಚೀನ ಕಾಲದ ಯೋಧರು 'ಧರ್ಮಯುದ್ಧ' ಅಥವಾ ನೀತಿಯುದ್ಧದಲ್ಲಿ ತೊಡಗಿದ್ದರು. ನ್ಯಾಯ ಮತ್ತು ಕರ್ತವ್ಯದ ತತ್ವಗಳಿಗೆ ಅನುಗುಣವಾಗಿ ಹೋರಾಡುತ್ತಿದ್ದರು. ಸೂರ್ಯಾಸ್ತದ ನಂತರ ಹೋರಾಟವನ್ನು ನಿಲ್ಲಿಸುವುದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಒಂದು ನಿಯಮವಾಗಿತ್ತು. ರಾತ್ರಿಯ ದಾಳಿಗಳನ್ನು ಅನೈತಿಕ ಮತ್ತು ವಿಶ್ವಾಸಘಾತುಕತನ ಎಂದು ಪರಿಗಣಿಸಲಾಗಿತ್ತು. ಎಲ್ಲಾ ಕಡೆಯ ಯೋಧರು ಈ ನಿಯಮವನ್ನು ಕರ್ತವ್ಯ ಎಂದು ಪರಿಗಣಿಸಿದ್ದರು. 

ಈ ನಿಯಮದ ಹಿಂದೆ ಪ್ರಾಯೋಗಿಕ ಕಾರಣಗಳೂ ಇದ್ದಿರಬಹುದು. ರಾತ್ರಿ ಈಗಿನಷ್ಟು ಬೆಳಕಿನ ವ್ಯವಸ್ಥೆ ಅಂದು ಇರಲಿಲ್ಲವಲ್ಲ. ಕತ್ತಲೆಯಲ್ಲಿ ಮಿತ್ರ ಯಾರು ಶತ್ರು ಯಾರು ಎಂದು ತಿಳಿಯುವುದು ಹೇಗೆ? ಆ ಯುಗದ ಆಯುಧಗಳಾದ ಕತ್ತಿಗಳು, ಈಟಿಗಳು ಮತ್ತು ಬಿಲ್ಲು ಬಾಣಗಳ ಪ್ರಯೋಗದ ನಿಖರತೆಗೆ ಸಾಕಷ್ಟು ಬೆಳಕಿನ ಅಗತ್ಯವಿತ್ತು. ಕತ್ತಲಾದ ನಂತರ ಯುದ್ಧದಲ್ಲಿ ತೊಡಗಲು ಸಾಧ್ಯವಿರಲಿಲ್ಲ. ಈಗ ಹಾಗಲ್ಲ.

ಇದಲ್ಲದೆ, ಯುದ್ಧದ ದೈಹಿಕ ಶ್ರಮದಿಂದ ಸೈನಿಕರಿಗೆ ಚೇತರಿಕೆ, ವಿಶ್ರಾಂತಿಗೆ ಕೂಡ ಸೈನಿಕರಿಗೆ ರಾತ್ರಿ ಬಿಡುವುದು ಅಗತ್ಯವಿತ್ತು. ಯುದ್ಧಗಳು ಸಾಮಾನ್ಯವಾಗಿ ದಿನಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ನಡೆಯುತ್ತಿದ್ದವು. ಯೋಧರು ಚೇತರಿಸಿಕೊಳ್ಳಲು ಮತ್ತು ಅವರ ಮುಂದಿನ ನಡೆಗಳನ್ನು ಯೋಜಿಸಲು ರಾತ್ರಿ ನಿರ್ಣಾಯಕವಾಗುತ್ತಿತ್ತು. ಭಾರವಾದ ಆಯುಧಗಳನ್ನು ಹೊತ್ತುಕೊಳ್ಳುವುದು, ಕುದುರೆ ಸವಾರಿ ಮಾಡುವುದು ಮತ್ತು ಬಿಲ್ಲು- ಗದೆ ಇತ್ಯಾದಿ ಪ್ರಯೋಗಿಸುವುದಕ್ಕೆ ಅಪಾರ ಶಕ್ತಿ ಮತ್ತು ಸಹಿಷ್ಣುತೆಯ ಅಗತ್ಯವಿತ್ತು. ಸಾಕಷ್ಟು ವಿಶ್ರಾಂತಿ ಇಲ್ಲದ ದೀರ್ಘಕಾಲದ ಯುದ್ಧ ಮಾರಕವಾಗುತ್ತಿತ್ತು. 

ಭಾರತದ ಏರ್‌ಸ್ಟ್ರೈಕ್‌ ಬಳಿಕ ಸಿಂಧೂರ Vs ಕುಂಕುಮದ ಬಗ್ಗೆ ಜೋರು ಚರ್ಚೆ, ಏನಿದರ ನಡುವಿನ ವ್ಯತ್ಯಾಸ?

ಪುರಾಣ ಗ್ರಂಥಗಳು ಈ ಪದ್ಧತಿಯನ್ನು ಬಲಪಡಿಸಿವೆ. ಮಹಾಭಾರತದಲ್ಲಿ, ಭೀಷ್ಮ ಪಿತಾಮಹ, ಕರ್ಣ ಮತ್ತು ಅರ್ಜುನರಂತಹ ಪ್ರಸಿದ್ಧ ಯೋಧರು ಸೂರ್ಯಾಸ್ತದ ನಂತರ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಿದ್ದರು. ರಾಮಾಯಣದಲ್ಲಿಯೂ ರಾಮ ಮತ್ತು ರಾವಣನ ನಡುವಿನ ಯುದ್ಧವು ಹಗಲು ಹೊತ್ತಿನಲ್ಲಿ ಮಾತ್ರ ನಡೆಯಿತು. ಎರಡೂ ಕಡೆಯವರು ರಾತ್ರಿಯಲ್ಲಿ ತಮ್ಮ ಶಿಬಿರಗಳಿಗೆ ಮರಳುತ್ತಿದ್ದರು. ಸೂರ್ಯಾಸ್ತದ ಸಮಯದಲ್ಲಿ ಯುದ್ಧವನ್ನು ನಿಲ್ಲಿಸುವುದು ಧಾರ್ಮಿಕ ಮತ್ತು ನೈತಿಕ ಮಹತ್ವವನ್ನೂ ಹೊಂದಿತ್ತು. 

ಇಷ್ಟೆಲ್ಲ ಇದ್ದರೂ ಕುರುಕ್ಷೇತ್ರದಲ್ಲಿ ಒಂದು ದಿನ ಮಾತ್ರ ನಿಯಮ ಉಲ್ಲಂಘಿಸಿ ರಾತ್ರಿ ಯುದ್ಧ ನಡೆಸಲಾಯಿತು. ಈ ಯುದ್ಧದಲ್ಲಿ ಪಾಂಡವರು ಘಟೋತ್ಕಚನ ಮರಣದ ಮೂಲಕ ತೀವ್ರ ನಷ್ಟ ಅನುಭವಿಸಿದರು. 

ಪಾಕ್‌ನ ಬಲೂಚಿಸ್ತಾನದಲ್ಲಿರುವ ಈ ಹಿಂದೂ ದೇಗುಲಕ್ಕೆ ಮುಸಲ್ಮಾನರು ಕೂಡ ಭಕ್ತಿಯಿಂದ ತಲೆ ಬಾಗುತ್ತಾರೆ