ಪಾನಿಪುರಿಗೂ ಮಹಾಭಾರತ ಕಾಲಕ್ಕೂ ಇದೆ ಸಂಬಂಧ! ಮೊದಲು ತಯಾರಿಸಿದ್ದೇ ದ್ರೌಪದಿ!
ಜನ ಬಾಯಿ ಚಪ್ಪರಿಸಿ ತಿನ್ನುವ ಪಾನೀಪುರಿ ತಯಾರಾಗಿದ್ದು ಮಹಾಭಾರತ ಕಾಲದಲ್ಲಿ, ಅದೂ ಕೂಡ ದ್ರೌಪದಿ ಇದನ್ನು ತಯಾರಿಸಿದ್ದಂತೆ, ನಿಜಾನ?

ಭಾರತದಲ್ಲಿ, ಪಾನಿ ಪುರಿ (Panipuri) ದೇಶದ ಮೂಲೆ ಮೂಲೆಯಲ್ಲೂ ಜನರು ಇಷ್ಟಪಟ್ಟು ತಿಂತಾರೆ. ಅದು ಮಹಿಳೆಯಾಗಿರಲಿ ಅಥವಾ ಪುರುಷರಾಗಿರಲಿ, ಎಲ್ಲರೂ ಪಾನಿ ಪುರಿ ಅಂದ್ರೆ ಅದೇನೋ ಮೋಹ. ಆದರೆ ಈ ಪಾನಿಪುರಿ ಅಥವಾ ಗೋಲ್ ಗಪ್ಪಾ ಯಾವಾಗ ಮತ್ತು ಎಲ್ಲಿ ಹುಟ್ಟಿಕೊಂಡಿತು ಎಂದು ನಿಮಗೆ ತಿಳಿದಿದೆಯೇ?
ಪಾನಿಪುರಿ ಇತಿಹಾಸ ಶತಮಾನಗಳಷ್ಟು ಹಳೆಯದು
ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿರುವ ಸ್ಟ್ರೀಟ್ ಫುಡ್ (street food) ಬಗ್ಗೆ ಮಾತನಾಡಿದ್ರೆ, ಮೊದಲು ನೆನಪಿಗೆ ಬರೋದು ಗೋಲ್ಗಪ್ಪ. ಇದನ್ನು ಸಿಹಿ ಮತ್ತು ಹುಳಿ ನೀರು, ಆಲೂಗಡ್ಡೆ ಮತ್ತು ಕಡಲೆ ಮಸಾಲೆಯಿಂದ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ತಿನ್ನಲು ತುಂಬಾ ಟೇಸ್ಟೀಯಾಗಿರುತ್ತೆ. ಗೋಲ್ಗಪ್ಪವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಎಲ್ಲೋ ಇದನ್ನು ಪಾನಿ ಪುರಿ ಎಂದು ಕರೆಯಲಾಗುತ್ತದೆ ಮತ್ತು ಇನ್ನೆಲ್ಲೋ ಜನರು ಇದನ್ನು ಪುಚ್ಕಾ ಎಂದು ಕರೆಯುತ್ತಾರೆ. ಆದರೆ ಈ ಪಾನಿಪುರಿ ಇತಿಹಾಸವು ಹೊಸದಲ್ಲ, ಶತಮಾನಗಳಷ್ಟು ಹಳೆಯದು ಅನ್ನೋದು ನಿಮಗೆ ತಿಳಿದಿದೆಯೇ. ಇಲ್ಲಿವೆ ಪಾನಿ ಪುರಿಯ ಆಸಕ್ತಿದಾಯಕ ಇತಿಹಾಸ.
ಪಾನಿಪುರಿಗೂ ಮಹಾಭಾರತಕ್ಕೂ ಇದೆ ಸಂಬಂಧ
ಪುರಾಣಗಳ ಪ್ರಕಾರ, ಪಾನಿಪುರಿ ಮಹಾಭಾರತದ (Mahabharat) ಕಾಲದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ ಮತ್ತು ಕಷ್ಟದ ಸಮಯದಲ್ಲಿ, ದ್ರೌಪದಿ ಗೋಲ್ಗಪ್ಪ ಮಾಡಿದ್ದಳು, ಅದೇ ಪಾನಿಪುರಿ ಇಂದಿಗೂ ಕೂಡ ಜನರು ಇಷ್ಟಪಟ್ಟು ತಿನ್ನುವಂತಾಗಿದೆ.
ದ್ರೌಪದಿಯನ್ನು ಪರೀಕ್ಷಿಸಿದ್ದ ಕುಂತಿ
ಕಥೆಗಳ ಪ್ರಕಾರ, ಪಾಂಡವರು ವನವಾಸದಲ್ಲಿದ್ದಾಗ, ದ್ರೌಪದಿ (Draupadi) ಮತ್ತು ಮಾತಾ ಕುಂತಿ ಕೂಡ ಅವರೊಂದಿಗೆ ಇದ್ದರು. ಆ ಸಮಯದಲ್ಲಿ, ಅವರಿಗೆ ಹೆಚ್ಚು ಆಹಾರವಿರಲಿಲ್ಲ ಮತ್ತು ಅವರ ಬಳಿ ಏನು ಇದೆಯೋ? ಅದರಲ್ಲೇ ಬದುಕಬೇಕಾಯಿತು. ಈ ಸಂದರ್ಭದಲ್ಲಿ ಮಾತಾ ಕುಂತಿ ತನ್ನ ಸೊಸೆ ದ್ರೌಪದಿಯನ್ನು ಪರೀಕ್ಷಿಸಲು ಯೋಚಿಸಿದಳು, ಇದರಿಂದ ದ್ರೌಪದಿ ಎಷ್ಟು ಕೌಶಲ್ಯಪೂರ್ಣಳಾಗಿದ್ದಾಳೆಂದು ತಿಳಿದುಕೊಳ್ಳಲು ನಿರ್ಧರಿಸಿದ್ದಳು ಕುಂತಿ.
ದ್ರೌಪದಿಗೆ ಒಂದು ಕೆಲಸ ಕೊಟ್ಟ ಮಾತಾ ಕುಂತಿ
ನಂತರ ಮಾತಾ ಕುಂತಿ (Mata Kunti) ದ್ರೌಪದಿಗೆ ಕೆಲವು ಆಲೂಗಡ್ಡೆ, ಕೆಲವು ಮಸಾಲೆಗಳು ಮತ್ತು ಹಿಟ್ಟನ್ನು ಕೊಟ್ಟಳು. ಈ ಪದಾರ್ಥಗಳನ್ನು ನೀಡುತ್ತಾ, ಐದು ಪಾಂಡವರ ಹೊಟ್ಟೆಯನ್ನು ತುಂಬುವ ಮತ್ತು ತಿನ್ನಲು ರುಚಿಕರವಾಗಿರುವ ಖಾದ್ಯವನ್ನು ತಯಾರಿಸಲು ಹೇಳಿದಳು.
ದ್ರೌಪದಿ ತಯಾರಿಸಿದಳು ಪಾನಿಪುರಿ
ದಂತಕಥೆಗಳ ಪ್ರಕಾರ, ಮಾತಾ ಕುಂತಿಯ ಆದೇಶದಂತೆ, ದ್ರೌಪದಿ ಹಿಟ್ಟಿನ ಪೂರಿ ಮಾಡಿ , ಅದರೊಳಗೆ ಆಲೂಗಡ್ಡೆ ಮಸಾಲ ಮತ್ತು ನೀರನ್ನು ಸೇರಿಸಿ ಪಾಂಡವರಿಗೆ ಬಡಿಸಿದಳು. ಪಾಂಡವರಿಗೆ ಗೋಲ್ಗಪ್ಪ ತುಂಬಾ ಇಷ್ಟವಾಗಿದ್ದವು, ಇದರಿಂದ ಅವರ ಹೊಟ್ಟೆ ಕೂಡ ತುಂಬಿತ್ತು. ಅಂದಿನಿಂದ ಎಲ್ಲೆಡೆ ಪಾನಿಪುರಿ ತಯಾರಾಗಲು ಆರಂಭಿಸಿದವು ಎನ್ನುವ ಕಥೆ ಇದೆ.
ಪಾನಿಪುರಿ ಮಗಧಕ್ಕೂ ಸಂಬಂಧಿಸಿದೆ
ಇತರ ಕೆಲವು ಕಥೆಗಳ ಪ್ರಕಾರ, ಗೋಲ್ಗಪ್ಪ ಮಗಧದಿಂದ (Magadha) ಪ್ರಾರಂಭವಾಯಿತು. ಮಗಧವು ಬಿಹಾರದ ಒಂದು ಪ್ರದೇಶವಾಗಿದ್ದು, ಇದನ್ನು ಇಂದು ದಕ್ಷಿಣ ಬಿಹಾರ ಎಂದು ಕರೆಯಲಾಗುತ್ತದೆ. ಗೋಲ್ಗಪ್ಪವನ್ನು ಮೊದಲು ಮಗಧದಲ್ಲಿ ತಯಾರಿಸಲಾಯಿತು ಎಂದು ಸಹ ಹೇಳಲಾಗುತ್ತದೆ.