1. ಮೇಷ

ಅತಿಯಾದ ಆತ್ಮವಿಶ್ವಾಸ, ಮನಸ್ಸಿಗೆ ತೋಚಿದ್ದನ್ನು ಆ ಕ್ಷಣವೇ ಮಾಡಿಬಿಡುವ ತರಾತುರಿ ಸದ್ಯಕ್ಕೀಗ ಈ ರಾಶಿಯವರ ವರ್ತನೆಯಲ್ಲಿ ಕಾಣಬಹುದು. ಇತರರ ಮೇಲೆ ತಮ್ಮ ಅಭಿಪ್ರಾಯ ಹೇರುವ ಗುಣವೂ ಎದ್ದು ಕಾಣಬಹುದು. ಜೊತೆಗೆ ನೀವು ಮಾಡಿದ್ದೆಲ್ಲ ಸರಿ ಅನ್ನುವ ಮನೋಭಾವೂ ಹೆಚ್ಚಾಗಬಹುದು. ಈ ಎಲ್ಲ ನಿಮ್ಮ ಗುಣಗಳೇ ನಿಮ್ಮ ಮಾನಸಿಕ ಅಶಾಂತಿ ಹೆಚ್ಚಿಸಬಹುದು. ತಕ್ಷಣಕ್ಕೆ ನೀವು ಗಡಿಬಿಡಿಯಲ್ಲಿ ಯಾವ ನಿರ್ಧಾರಕ್ಕೂ ಬರಬೇಡಿ. ಈ ಕ್ಷಣ ಬಿಟ್ಟರೆ, ಮುಂದಿನ ಕ್ಷಣದಲ್ಲಿ ಏನು ಬೇಕಿದ್ರೂ ಆಗಬಹುದು, ಹೀಗಾಗಿ ಈಗಲೇ ಆ ಕೆಲಸ ಮುಗಿಸುತ್ತೇನೆ ಅನ್ನುವ ತರಾತುರಿ ಬೇಡವೇ ಬೇಡ. ಒಂದು ವೇಳೆ ನೀವು ಇಂಥಾ ಪ್ರಯತ್ನಕ್ಕಿಳಿದರೆ ಪರಿಣಾಮ ಋಣಾತ್ಮಕವಾಗಿರಬಹುದು. ಹೀಗಾಗಿ ಕೊಂಚ ಸಮಯ ತೆಗೆದುಕೊಂಡು ಮುಂದುವರಿಯುವುದು ಉತ್ತಮ.

ಶನಿದೇವರಿಗೆ ಎಳ್ಳೆಣ್ಣೆಯ ಸೇವೆ ಮಾಡುವುದರಿಂದ ಒಳಿತಾಗುವುದು.

2. ಕಟಕ

ನಿಮ್ಮದು ಈಗ ಗೊಂದಲದ ಮನಸ್ಥಿತಿ. ಯಾವ ನಿರ್ಧಾರ ತೆಗೆದುಕೊಳ್ಳಲೂ ಮನಸ್ಸು ಹಿಂಜರಿಯಬಹುದು. ಕೆಲವೊಮ್ಮೆ ಮನಸ್ಸು ಒಂದು ಮಾತು ಹೇಳಿದರೆ, ಬುದ್ಧಿ ಸರೀ ವಿರುದ್ಧವಾದ ವರ್ತನೆಯನ್ನು ಸೂಚಿಸಬಹುದು. ಇಲ್ಲಿ ಏನು ಮಾಡಬೇಕೆಂದು ತೋಚದೇ ಹೈರಾಣಾಗುವ ಸ್ಥಿತಿ ಸದ್ಯಕ್ಕಿದೆ. ನಿಮ್ಮ ಕುಲದೇವರನ್ನು ಸ್ಮರಿಸುತ್ತಿರುವುದು ಬಹಳ ಅಗತ್ಯ. ಅದೇ ರೀತಿ ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಇಂಥಾ ಗೊಂದಲಮಯ ಸನ್ನಿವೇಶದಲ್ಲಿ ಯಾವೊಂದು ಗಟ್ಟಿ ನಿರ್ಣಯಕ್ಕೆ ಬರಬೇಡಿ. ದೊಡ್ಡ ಪ್ರಾಜೆಕ್ಟ್, ನಿವೇಶನ ಖರೀದಿಯಂಥಾ ವಿಚಾರಗಳು ಸದ್ಯಕ್ಕೆ ಬೇಡ. ಇತರರ ಜೊತೆಗೆ ಎಚ್ಚರಿಕೆಯಿಂದ ಮಾತಾಡಿ. ನಿಮ್ಮ ಒಂದು ಮಾತೇ ನಿಮಗೆ ಕಂಟಕವಾಗಬಹುದು.

ಆದಿತ್ಯ ಹೃದಯಂ ಶ್ಲೋಕಗಳನ್ನು ಪ್ರತಿನಿತ್ಯ ಬೆಳಗ್ಗೆ ಎದ್ದು ಶುಚಿರ್ಭೂತರಾಗಿ ಪಠಿಸುವುದರಿಂದ ಮನಸ್ಸು ಏಕಾಗ್ರಗೊಳ್ಳುತ್ತದೆ.

ವಾಸ್ತುಶಾಸ್ತ್ರ : ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಯಾವಾಗ್ಲೂ ಹ್ಯಾಪಿ ...

3. ತುಲಾ

ನೀವು ಮಾಡುವ ಕೆಲಸ ಚೆನ್ನಾಗಿಯೇ ಇರುತ್ತದೆ. ಮನಸ್ಸೂ ಒಳ್ಳೆಯದೇ. ಆದರೆ ಕೆಲವೊಮ್ಮೆ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ. ಇದು ಎಲ್ಲರ ಬದುಕಿನಲ್ಲೂ ಇರುವಂಥದ್ದೇ. ನಿಮ್ಮ ಬದುಕಿನಲ್ಲಿ ಅಂಥ ಕ್ಷಣ ಈಗ ಬಂದಿದೆ ಅಷ್ಟೇ. ಹಾಗೆಂದು ಚಿಂತೆ ಬೇಡ. ಇಂಥಾ ಸ್ಥಿತಿ ಹೆಚ್ಚು ಕಾಲ ಇರುವುದಿಲ್ಲ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿಯೇ ದೊರಕುತ್ತದೆ. ಆದರೆ ಅಲ್ಲೀವರೆಗೆ ಕಾಯುವ ತಾಳ್ಮೆ ಇರಲಿ. ಮಕ್ಕಳ ವಿಚಾರಕ್ಕೆ ಮನಸ್ಸಿಗೆ ಘಾಸಿಯಾಗುವಂಥಾ ಪ್ರಸಂಗ ಬರಬಹುದು. ಆಸ್ತಿ ಪಾಲು ಮಾತುಕತೆಯಲ್ಲಿ ನಿಮಗೆ ನ್ಯಾಯಬದ್ಧ ಪಾಲು ಸಿಗದೇ ಹೋಗಬಹುದು. ಆದರೆ ನಿಮ್ಮದು ಸದಾ ನ್ಯಾಯಮಾರ್ಗ. ಇಂದಲ್ಲ ನಾಳೆ ನ್ಯಾಯಕ್ಕೇ ಬೆಲೆ ಸಿಗುವುದು. ಆದರೂ ನಿಮ್ಮ ಬುದ್ಧಿ ಉಪಯೋಗಿಸಿ, ಯಾವುದೇ ಕೆಲಸಕ್ಕೆ ಎರಡೆರಡು ಸಲ ಯೋಚಿಸಿ ಮುಂದಡಿ ಇಡಿ.

ಶನಿ ದೇವರ ದೇವಸ್ಥಾನಕ್ಕೆ ಹೋಗಿ ಒಳಿತಿಗಾಗಿ ಪ್ರಾರ್ಥಿಸಿ.

ಗಾಂಧಾರಿ ಶಾಪದಂತೆ ಯಾದವ ಕುಲ ನಶಿಸಿ, ಭೂಭಾರ ಕಡಿಮೆಯಾಗುವುದು ಹೀಗೆ ...

4. ಮೀನ

ನಿಮ್ಮದು ಮೊದಲಿಂದಲೂ ಸದ್ಭುದ್ದಿ. ಯಾವಾಗಲೂ ಇತರರ ಸಹಾಯಕ್ಕೆ ಸಿದ್ಧರಿರುತ್ತೀರಿ. ಇನ್ನೊಬ್ಬರು ನಿಮ್ಮ ಸಲಹೆ, ಸೂಚನೆಯನ್ನು ಪಾಲಿಸಿ ಮೇಲಕ್ಕೆ ಬಹು ಮೇಲಕ್ಕೆ ಹೋಗುತ್ತಾರೆ. ನಿಮ್ಮ ಮಾರ್ಗದರ್ಶನದಂತೆ ನಡೆಯುವವರಿಗೆ ಯಶಸ್ಸು ಸಿಗುತ್ತದೆ. ಆದರೆ ಇದ್ಯಾವುದೂ ನಿಮಗಲ್ಲ. ಅಂದರೆ ಇದರಿಂದ ಸ್ವಂತಕ್ಕೇನೂ ಲಾಭವಿಲ್ಲ. ನಿಮ್ಮ ಮೂಲಕ ಇತರರು ಯಶಸ್ಸು ಸಾಧಿಸುತ್ತಾರೆ ಅಷ್ಟೇ. ನಿಮಗೆ ಸದಾ ಕಷ್ಟ ಬೆಂಬಿಡದ ಬೇತಾನನಂತೆ ಹಿಂದಿಂದೇ ಸುತ್ತುತ್ತಿರುತ್ತದೆ. ನಿಮ್ಮ ಪ್ರಾಮಾಣಿಕತೆ ಕೆಲವೊಮ್ಮೆ ಶ್ಲಾಘನೆಗೆ ಕಾರಣವಾಗಬಹುದು. ನಿಮ್ಮಿಂದ ಸಲಹೆ ಪಡೆದವರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಬಹುದು. ಆದರೆ ಇವ್ಯಾವುದರಿಂದಲೂ ನಿಮ್ಮ ಸ್ಥಿತಿ ಸುಧಾರಿಸುವುದಿಲ್ಲ. ನಿಮ್ಮ ಸ್ವಂತ ಪರಿಶ್ರಮ ನೆನೆಗುದಿಗೆ ಬೀಳಬಹುದು.

ಪ್ರೀತಿ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಈ ಫೆಂಗ್ ಶುಯಿ ಸಲಹೆ ಅನುಸರಿಸಿ ...

ಇದರಿಂದ ಒಂದಿಷ್ಟು ಶಮನ ಸಿಗಬೇಕು ಅಂತಾದರೆ ಹಾಗಲ ಕಾಯಿಯನ್ನು ಎರಡು ಭಾಗ ಮಾಡಿ. ಅದರೊಳಗಿನ ತಿರುಳು ತೆಗೆಯಿರಿ. ಆ ಟೊಳ್ಳು ಭಾಗಕ್ಕೆ ಎಳ್ಳೆಣ್ಣೆ ಹಾಕಿ. ಅದರಿಂದ ದೀಪ ಹಚ್ಚಿ ಶನಿದೇವರಿಗೆ ಆರತಿ ಮಾಡಿ. ನಿಮ್ಮ ಕಷ್ಟಕ್ಕೆ ಪರಿಹಾರ ಸಿಗುತ್ತೆ.