ವಾಸ್ತುಶಾಸ್ತ್ರ : ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಯಾವಾಗ್ಲೂ ಹ್ಯಾಪಿ

First Published Mar 4, 2021, 3:54 PM IST

ಮನೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಕೆಲವೊಮ್ಮೆ ವಾಸ್ತು ಪ್ರಕಾರ  ಆಯ್ಕೆ ಮಾಡಿಕೊಂಡ ಸಸ್ಯವು ವಾಸ್ತು ದೋಷಗಳನ್ನು ಮನೆಗೆ ತರಬಹುದು. ಬಾಲ್ಯವನ್ನು ನೋಡಿದರೆ ಅಜ್ಜಿ, ಅಮ್ಮ ಮನೆಯಲ್ಲಿ ಬಾಳೆ, ತುಳಸಿ, ಮೊದಲಾದ ಗಿಡಗಳನ್ನು ಬೆಳೆಸುತ್ತಿದ್ದರು. ಇದು ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವೂ ಹೌದು. ಸಂಪ್ರದಾಯದ ಪ್ರಕಾರ ಈ ಸಸ್ಯಗಳು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಇದು  ಜೀವನವನ್ನು ಒತ್ತಡ ಮುಕ್ತಗೊಳಿಸುತ್ತದೆ. ಹಾಗೆಯೇ ಈ ಸಸ್ಯಗಳಿಗೆ ವಾಸ್ತು ಪ್ರಾಮುಖ್ಯತೆಯನ್ನು ಸಹ ನೀಡಲಾಗಿದೆ. ಅವುಗಳನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ ಅದು ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ.