Asianet Suvarna News Asianet Suvarna News

Chanakya Neeti: ಚಾಣಕ್ಯ ಹೇಳುವ ಪ್ರಕಾರ, ಹೆಂಡತಿ ತನ್ನ ಗಂಡನಿಗೆ ಯಾವಾಗ ಸುಳ್ಳು ಹೇಳ್ತಾಳೆ ಗೊತ್ತಾ?

ಸ್ತ್ರೀಯರು ಹಲವು ವೇಳೆ ಸುಳ್ಳು ಹೇಳುತ್ತಾರೆ, ಗಂಡಸರ ಹಾಗೆಯೇ! ಗಂಡನಿಗೆ ಸುಳ್ಳು ಹೇಳುವ ಹೆಂಡತಿಯರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ಯಾವಾಗ ಹೆಣ್ಣು ಮಕ್ಕಳು ತಮ್ಮ ಗಂಡಂದಿರಿಗೆ ಸುಳ್ಳು ಹೇಳುತ್ತಾರೆ ನಿಮಗೆ ಗೊತ್ತೆ? ಆ ಬಗ್ಗೆ ಚಾಣಕ್ಯ ಹೇಳಿರುವುದು ಇಲ್ಲಿದೆ. 
 

When wife tells lies to her husband as per Chanakya bni
Author
First Published Aug 22, 2024, 9:28 PM IST | Last Updated Aug 23, 2024, 8:52 AM IST

ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರದಲ್ಲಿ ಸಾಮಾಜಿಕ- ರಾಜಕೀಯ ಬದುಕಿನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ದಾಂಪತ್ಯವೂ ಒಂದು. ದಾಂಪತ್ಯ ಎಂದರೆ ಮದುವೆಯಾಗಿ ಜೊತೆಯಾಗಿ ಬದುಕಬೇಕಿರುವ ಗಂಡು- ಹೆಣ್ಣಿನ ನಡವಳಿಕೆಗಳ ಕುರಿತು ಹೇಳಿದ್ದಾರೆ. ಎಂಥ ಹೆಣ್ಣು ಎಂಥ ಗಂಡನ್ನು ಮದುವೆಯಾಗಬೇಕು, ಮದುವೆಯಾದ ಬಳಿಕ ಹೇಗಿದ್ದರೆ ಚಂದ, ಯಾವಾಗ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಹಳಸುತ್ತಾರೆ- ಇದೆಲ್ಲಾ ಈ ಸೂಕ್ತಗಳಲ್ಲಿ ಅಡಕವಾಗಿದೆ. ಅಂಥದೇ ಇನ್ನೊಂದು ವಿಷಯ, ಗಂಡನಿಗೆ ಹೆಂಡತಿ ಯಾವಾಗ ಸುಳ್ಳು ಹೇಳುತ್ತಾಳೆ ಎಂಬುದು. ಬನ್ನಿ ಅದನ್ನು ನೋಡೋಣ. 

ತವರಿನ ಶ್ರೀಮಂತಿಕೆ: ಒಳ್ಳೆಯ ಹೆಂಡತಿ ತನ್ನ ಗಂಡನ ಜೊತೆಗೆ ತನ್ನ ತವರಿನ ಶ್ರೀಮಂತಿಕೆಯ ವಿವರಗಳನ್ನು ಮುಚ್ಚಿಡುತ್ತಾಳೆ. ತಾನು ಅದನ್ನೆಲ್ಲ ಬಿಡಿಸಿ ಹೇಳಿದರೆ ತವರಿಗಿಂತ ಗಂಡನ ಮನೆ ಬಡತನದ್ದು ಎಂದು ಹೇಳಿದಂತೆ ಅನಿಸಬಹುದು, ಗಂಡನಿಗೆ ಅವಮಾನ ಅನಿಸಬಹುದು, ಆತನ ಸ್ವಾಭಿಮಾನಕ್ಕೆ ಧಕ್ಕೆ ಆಗಬಹುದು, ಹಾಗಾಗಬಾರದು ಎಂಬುದು ಆಕೆಯ ಕಾಳಜಿ. ಹಾಗಾಗಿ ಗಂಡ ಆ ಬಗ್ಗೆ ಏನು ಕೇಳಿದರೂ ಆಕೆ ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. 

ಹಿಂದಿನ ಪ್ರಣಯ: ತನ್ನ ಹಿಂದಿನ ಪ್ರಣಯ ಪ್ರಸಂಗಗಳ ಬಗ್ಗೆ ಆಕೆ ಗಂಡನ ಜೊತೆಗೆ ಮುಗುಂ ಆಗಿರುತ್ತಾಳೆ. ಒಂದು ವೇಳೆ ಆಕೆ ಆ ವಿಷಯಗಳನ್ನು ತನ್ನ ಗೆಳತಿಯರ ಜೊತೆಗಾದರೂ ಹೇಳಿಕೊಳ್ಳಬಹುದೋ ಏನೋ. ಆದರೆ ಗಂಡನ ಜೊತೆಗೆ ಊಹೂಂ. ಇದಕ್ಕೆ ಕಾರಣ ನಿಮಗೆ ಗೊತ್ತೇ ಇದೆ. ಅದು ಗಂಡನನ್ನು ಕೆಣಕಬಹುದು, ರೊಚ್ಚಿಗೆಬ್ಬಿಸಬಹುದು, ಆಕೆಯ ಶೀಲದ ಬಗ್ಗೆಯೇ ಶಂಕೆ ಮೂಡುವಂತೆ ಮಾಡಬಹುದು ಎಂಬುದು ಆಕೆಯ ಆತಂಕ. 

ತನ್ನ ಬಳಿ ಇರುವ ಹಣ, ಚಿನ್ನ: ಹೆಂಡತಿ ಎಂದೂ ತಾನು ಬಚ್ಚಿಟ್ಟುಕೊಂಡ ಹಣ ಅಥವಾ ಚಿನ್ನದ ಬಗ್ಗೆ ಗಂಡನ ಬಳಿ ಬಾಯಿ ಬಿಡುವುದಿಲ್ಲ. ಸಾಮಾನ್ಯವಾಗಿ ಇಂದಿನ ಉದ್ಯೋಗಸ್ಥ ಸ್ತ್ರೀಯರು ತಮ್ಮ ದುಡಿಮೆಯ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುತ್ತಾರೆ. ಹಿಂದೆ ಅಡುಗೆ ಮನೆ ಡಬ್ಬಗಳಲ್ಲಿ ಬಚ್ಚಿಡುತ್ತಿದ್ದರು. ಅಥವಾ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದರು. ಈಗಲೂ ಚಿನ್ನ ಮಾಡಿಸಿ ಅದನ್ನು ಆಪತ್ಕಾಲಕ್ಕೆ ಎಂದು ಎತ್ತಿಟ್ಟಿರುತ್ತಾಳೆ. ಗಂಡ ದುರಭ್ಯಾಸದವನಾಗಿದ್ದರೆ, ಆಕೆ ಅದನ್ನೆಲ್ಲ ಅವನ ಕೈಗಿಟ್ಟು ಸರ್ವನಾಶ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. 

ನನ್ನ ಊಟ ಆಗಿದೆ: ಸಾಮಾನ್ಯವಾಗಿ ಬಂಧುಗಳು ಅಕಸ್ಮಾತ್‌ ಬಂದಾಗ ಅಡುಗೆ ಬೇಗನೆ ಖಾಲಿಯಾದರೆ, ಹೆಂಡತಿ ಊಟ ಮಾಡುವುದಕ್ಕೂ ಮೊದಲೇ ಅಡುಗೆ ಮನೆಯಲ್ಲಿ ಮಾಡಿದ ಖಾದ್ಯಗಳು ಮುಗಿದಿದ್ದರೆ, ಆಕೆ ʼನನ್ನ ಊಟ ಆಗಿದೆʼ ಎಂದೇ ಹೇಳುತ್ತಾಳೆ. ಗಂಡನ ಊಟ ಆದ ಬಳಿಕ ತನ್ನದು ಎಂದು ಆಕೆ ಕುಳಿತಿದ್ದರೆ, ಗಂಡ ಬಂದು ಅಡುಗೆಯನ್ನೆಲ್ಲ ಕಬಳಿಸಿದರೆ, ಆಗಲೂ ಆಕೆ ನನ್ನ ಊಟ ಆಗಿದೆ ಎಂದೇ ಹೇಳುತ್ತಾಳೆ. ಯಾವತ್ತೂ ಗಂಡನಿಗೆ ಮುಜುಗರಪಡಿಸಲು ಆಕೆ ಇಚ್ಛಿಸುವುದಿಲ್ಲ. 

ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?
 

ಅನೈತಿಕ ಸಂಬಂಧ: ವಿವಾಹದಾಚೆಗಿನ ಸಂಬಂಧ ಹೊಂದಿರುವವಳಾಗಿದ್ದರೆ, ಅಂಥ ಹೆಣ್ಣು ತನ್ನ ಗಂಡನಿಗೆ ಮಾತ್ರವಲ್ಲ, ಸುತ್ತಮುತ್ತಲಿರುವ ಯಾರಿಗೂ ಯಾವ ಸುಳಿವೂ ಇಲ್ಲದಂತೆ ಕಾಪಾಡಿಕೊಳ್ಳಬಲ್ಲಳು! ಗಂಡನಿಗಂತೂ ಅದರ ವಾಸನೆ ಎಳ್ಳಷ್ಟೂ ಬಡಿಯದ ಹಾಗೆ ನೋಡಿಕೊಳ್ಳಬಲ್ಲಳು. ಗಂಡನನ್ನು ತನ್ನ ಈ ಪ್ರಣಯ ಹಗರಣದಿಂದ ದೂರವಿಡಲು ಸುಳ್ಳಿನ ಮೇಲೆ ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಉದುರಿಸಬಲ್ಲಳು.

ಸುಖದ ಸುಳ್ಳು: ಲೈಂಗಿಕ ಕ್ರಿಯೆ ನಡೆಸಿದ ಬಳಿಕ, ಗಂಡ ಆಕೆಗೆ ಅದು ತೃಪ್ತಿಕರವಾಗಿತ್ತಾ ಎಂದು ಕೇಳಿದಾಗ ಆಕೆ ತನಗದು ತೃಪ್ತಿಕರವಾಗಿತ್ತು ಎಂದೇ ಹೇಳುತ್ತಾಳಂತೆ. ಹೆಚ್ಚಿನ ಬಾರಿ ಆಕೆ ಸಂತೃಪ್ತಳಾಗಿರುವುದಿಲ್ಲ. ಆದರೆ ಅದನ್ನಾಕೆ ಒಂದು ಪ್ರಮುಖ ವಿಷಯ ಎಂದು ಪರಿಗಣಿಸುವುದೇ ಇಲ್ಲ. ಎಲ್ಲ ಚೆನ್ನಾಗಿತ್ತು ಎಂದು ಹೇಳಿ ಗಂಡನ ಅಹಂ ಅನ್ನು ತಣಿಸಿಬಿಡುತ್ತಾಳೆ!


ಭಾರತದ 5 ಅತ್ಯಂತ ನಿಗೂಢ-ಪವಾಡ ದೇವಾಲಯಗಳು, ಇವುಗಳ ಮುಂದೆ ವಿಜ್ಞಾನವೂ ಫೇಲ್‌!
 

Latest Videos
Follow Us:
Download App:
  • android
  • ios