Asianet Suvarna News Asianet Suvarna News

ಪೋಷಕರು ಮಾಡೋ ಈ ತಪ್ಪಿನಿಂದ ಮಕ್ಕಳು ಮಂಗಳಮುಖಿರಾಗ್ತಾರಾ?

ಸಮಾಜ ದೂರವಿಟ್ಟ ಜನಾಂಗ ಟ್ರಾನ್ಸ್ಜೆಂಡರ್. ತಮ್ಮ ಬದುಕಿಗಾಗಿ ನಿರಂತರ ಹೋರಾಟ ಮಾಡುವ ಮೂರನೇ ಲಿಂಗಿಗಳು ಹೇಗೆ ಹುಟ್ಟುತ್ತಾರೆ, ಅವರು ಹೀಗಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
 

how is a transgender child born roo
Author
First Published Aug 22, 2024, 2:57 PM IST | Last Updated Aug 22, 2024, 3:45 PM IST

ಟ್ರಾನ್ಸ್ಜೆಂಡರ್ (Transgender )… ಮಂಗಳಮುಖಿ, ಕಿನ್ನರ್, ಹಿಜ್ರಾ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಜನಾಂಗ ಸಮಾಜದ ಮೂರನೇ ಲಿಂಗ (third gender). ಮಹಿಳೆಯೂ ಅಲ್ಲದ, ಪುರುಷರೂ ಅಲ್ಲದ ಈ ಲಿಂಗದ ಜನರಿಗೆ ಸಮಾಜದಲ್ಲಿ ಸಾಮಾನ್ಯ ಜನರಿಗಿರುವಷ್ಟು ಮನ್ನಣೆ ಇಲ್ಲ.  

ಟ್ರಾನ್ಜೆಂಡರ್ ಬಗ್ಗೆ ಸಾಕಷ್ಟು ಕುತೂಹಲದ ಸಂಗತಿ ಇದೆ. ಅವರು ಹೇಗೆ ಜನಿಸ್ತಾರೆ ಎನ್ನುವ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಳ್ಳುವುದು ಸಹಜ. ಪುರಾಣಗಳು ಮತ್ತು ಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಪುಂಸಕರು ಹೇಗೆ ಹುಟ್ಟುತ್ತಾರೆ ಮತ್ತು ಅದರೊಂದಿಗೆ ಯಾವ ಧಾರ್ಮಿಕ (religion) ಮತ್ತು ಜ್ಯೋತಿಷ್ಯ ನಂಬಿಕೆಗಳು ಥಳಕು ಹಾಕಿಕೊಂಡಿವೆ, ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ. 

ಉದ್ಯಮಿ ಮುಖೇಶ್ ಅಂಬಾನಿ ರೋಮ್ಯಾಂಟಿಕಾ? ಗಂಡನ ಬಗ್ಗೆ ನೀತಾ ಅಂಬಾನಿ ಏನ್ ಹೇಳಿದ್ರು ನೋಡಿ?

ಶಾಪದಿಂದ ಅರ್ಜುನನೂ ನಪುಂಸಕನಾದ : ವೇದಗಳು, ಸ್ಮೃತಿ ಧರ್ಮಶಾಸ್ತ್ರಗಳು, ಮಹಾಭಾರತ, ಭಗೀರಥನ ಜನ್ಮದಲ್ಲಿ ಈ ಮೂರನೇ ಲಿಂಗದ ಉಲ್ಲೇಖವಿದೆ.  ಮಹಾಭಾರತದಲ್ಲಿ ಊರ್ವಶಿಯ ಶಾಪದಿಂದಾಗಿ ಅರ್ಜುನನು ಒಂದು ಕಾಲಕ್ಕೆ ನಪುಂಸಕನಾಗ್ತಾನೆ. ಊವರ್ಶಿ ಜೊತೆ ಪ್ರಣಯಕ್ಕೆ ಆತ ನಿರಾಕರಿಸಿದಾಗ ಕ್ಲಿಬಾ ಅಥವಾ ಮೂರನೇ ಲಿಂಗದ ವ್ಯಕ್ತಿಯಾಗು ಎಂದು ಆಕೆ ಶಾಪ ನೀಡುತ್ತಾಳೆ. ಅರ್ಜುನ, ವನವಾಸದ ಅಂತಿಮ ದಿನಗಳಲ್ಲಿ ಸ್ತ್ರೀಯಂತೆ ವೇಷಧರಿಸಿ ವಿರಾಟ ರಾಜನ ಆಸ್ಥಾನವನ್ನು ಪ್ರವೇಶ ಮಾಡುತ್ತಾನೆ.

ನಪುಂಸಕತೆಗೆ ಇದು ಕಾರಣ : ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಒಬ್ಬ ವ್ಯಕ್ತಿ ನಪುಂಸಕನಾಗಿ ಜನಿಸಲು ಏನು ಕಾರಣ ಎಂಬುದನ್ನು ವಿವರಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗರ್ಭಧರಿಸುವ ಸಮಯದಲ್ಲಿ ಮಗುವಿನ ಜಾತಕದಲ್ಲಿ ಗ್ರಹಗಳು ಇದಕ್ಕೆ ಕಾರಣವಾಗುತ್ತವೆ. ಕೆಲವು ಗ್ರಹಗಳ ವಿಶೇಷ ಸ್ಥಾನದಿಂದ ಆ ಭ್ರೂಣವು ಶಕ್ತಿಹೀನವಾಗುತ್ತದೆ. ಅದು ಟ್ರಾನ್ಸ್ಜೆಂಡರ್ ಜನನಕ್ಕೆ ಕಾರಣವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಮಹಿಳೆಯ ಅಂಡಾಣುವಿನಲ್ಲಿ ವೀರ್ಯ ಮತ್ತು ರಕ್ತದ ಪ್ರಮಾಣ ಸಮಾನವಾದಾಗ ನಪುಂಸಕ ಹುಟ್ಟುತ್ತಾನೆ. ಇದರ ಹೊರತಾಗಿ, ಹಿಂದಿನ ಜನ್ಮದ ಕರ್ಮಗಳ ಫಲಿತಾಂಶಗಳನ್ನು ಸಹ ನಪುಂಸಕನಾಗಲು ಕಾರಣವೆಂದು ಪರಿಗಣಿಸಲಾಗುತ್ತದೆ.

ಈ ತಪ್ಪುಗಳನ್ನು ಮಾಡಬೇಡಿ : ಜಾತಕ, ಗ್ರಹ ದೋಷ ಅಥವಾ ಹಿಂದಿನ ಜನ್ಮದ ಕರ್ಮಫಲವನ್ನು ಅರಿಯಲು ನಮ್ಮಿಂದ ಸಾಧ್ಯವಿಲ್ಲ. ಆದ್ರೆ ಈಗಿನ ವಿಜ್ಞಾನವನ್ನು ನಾವು ಬಲವಾಗಿ ನಂಬುವ ಅಗತ್ಯವಿದೆ. ಈಗ ಅಲ್ಟ್ರಾಸೌಂಡ್ ನಂತಹ ತಂತ್ರಜ್ಞಾನ ನಮ್ಮಲ್ಲಿದೆ. ಇದ್ರ  ಮೂಲಕ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಮೊದಲೇ ತಿಳಿಯಬಹುದಾಗಿದೆ. ಇದರಿಂದ ಗರ್ಭಾವಸ್ಥೆಯಲ್ಲಿ ಉಂಟಾಗಬಹುದಾದ ಯಾವುದೇ ತೊಂದರೆಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ, ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಆದ್ರೆ ಇಲ್ಲಿ ಮಗು ಟ್ರಾನ್ಸ್ಜೆಂಡರ್ ಎಂಬುದು ಪತ್ತೆಯಾಗುವುದಿಲ್ಲ ಎನ್ನುವುದು ನೆನಪಿನಲ್ಲಿರಲಿ. ಮಗು ಹುಟ್ಟಿದ ನಂತ್ರ ಆಗುವ ಬದಲಾವಣೆಯನ್ನು ಗಮನಿಸಿ ನೀವು ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ. ಮಗು ಜನಿಸಿದ ಆರು ತಿಂಗಳಲ್ಲಿ ಜನನಾಂಗದಲ್ಲಿ ಕೆಲ ಬದಲಾವಣೆಯಾಗುತ್ತದೆ. ಪಾಲಕರು ಅದನ್ನು ಗಮನಿಸುವ ಅಗತ್ಯವಿದೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಮಗುವಿನಲ್ಲಿ ಲಿಂಗ-ಆಧಾರಿತ ಟುವಟಿಕೆಗಳಲ್ಲಿ ಆಸಕ್ತಿಯ ಕೊರತೆ, ಕೇಶ ವಿನ್ಯಾಸ, ಹೆಸರಿನ ಮೇಲೆ ಕೋಪ, ವಿರುದ್ಧ ಲಿಂಗದ ಮೇಲೆ ಆಸಕ್ತಿ ಇಲ್ಲದಿರುವುದು, ಶೌಚಾಲಯ ಬಳಕೆಯಲ್ಲಿ ಗೊಂದಲ ಹಾಗೂ ಬಟ್ಟೆ ಆಯ್ಕೆ ಸೇರಿದಂತೆ ಅನೇಕ ವಿಷ್ಯದಲ್ಲಿ ಮಕ್ಕಳ ವರ್ತನೆ ಭಿನ್ನವಾಗುತ್ತದೆ.  ಅದನ್ನು ಪಾಲಾಕರು ಪತ್ತೆ ಹಚ್ಚುವ ಅಗತ್ಯವಿದೆ. ವೈದ್ಯರನ್ನು ಭೇಟಿಯಾಗಿ ಅಗತ್ಯವಿರುವ ಚಿಕಿತ್ಸೆಗೆ ಪಾಲಕರು ಮುಂದಾಗಬೇಕು. ಮಕ್ಕಳಿಗೆ ಧೈರ್ಯ ತುಂಬಬೇಕು. 

ಸೀತಾರಾಮ ಸೀರಿಯಲ್‌: ವೀಕ್ಷಕರ ತಲೆಗೆ ಹುಳ ಬಿಡ್ತಿರೋ ಡಾ ಮೇಘಶ್ಯಾಮ್! ಇಲ್ಲೊಂದು ಸಮಸ್ಯೆ ಇದೆ ಅಂತಿರೋದ್ಯಾಕೆ ನೆಟ್ಟಿಗರು?

ವೈದ್ಯರು ಹೇಳೋದೇನು? : ಮಹಿಳೆಯರು x-x ವರ್ಣತಂತುಗಳನ್ನು ಹೊಂದಿರುತ್ತಾರೆ. ಪುರುಷನಲ್ಲಿ x-y. ಮಹಿಳೆಯ X ವರ್ಣತಂತುಗಳು ಪುರುಷನ X ಕ್ರೋಮೋಸೋಮ್‌ಗಳನ್ನು ಸೇರಿದಾಗ ಹೆಣ್ಣು ಭ್ರೂಣ ರೂಪುಗೊಳ್ಳುತ್ತದೆ. ಮಹಿಳೆಯ X ಕ್ರೋಮೋಸೋಮ್‌ಗಳು ಮತ್ತು ಪುರುಷನ Y ಕ್ರೋಮೋಸೋಮ್‌ಗಳು ಸಂಧಿಸಿದಾಗ ಪುರುಷ ಭ್ರೂಣ ರೂಪುಗೊಳ್ಳುತ್ತದೆ. ಆದರೆ ಕ್ರೋಮೋಸೋಮ್ ಅಸ್ವಸ್ಥತೆಯಿಂದಾಗಿ ಮೂರನೇ ಲಿಂಗ ಭ್ರೂಣವು ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ.  
 

Latest Videos
Follow Us:
Download App:
  • android
  • ios