ಮೇಷ
ನಿಮಗೆ ತಲೆಶೂಲೆಯ ಸಮಸ್ಯೆ ಇರುವ ಎಲ್ಲ ಸಾಧ್ಯತೆಗಳೂ ಇವೆ. ಮೇಷರಾಶಿಃ ಶಿರೋಶೂಲ ಎಂಬ ಮಾತಿನಂತೆ, ತಲೆನೋವನ್ನು ಕಡೆಗಣಿಸಿದರೆ ಸಂಕಷ್ಟಕ್ಕಿಟ್ಟುಕೊಳ್ಳಬಹುದು. ಪಿತ್ತ ಆಹಾರ ಕಡಿಮೆ ಮಾಡಿ. ಮೃತ್ಯುಂಜಯ ಮಂತ್ರ ಪಠನದಿಂದ ಶಮನ.

ವೃಷಭ
ನಿಮಗೆ ಶ್ವಾಸಕೋಶದ ಸಮಸ್ಯೆ ಕಾಡಬಹುದು. ಹೊಗೆ, ದೂಳಿನಲ್ಲಿ ಮಾಡುವ ಕೆಲಸ ಅವಾಯ್ಡ್ ಮಾಡಿ. ಪ್ರಾಣಾಯಾಮ ಮಾಡಿ. ಧೂಮಪಾನ ಮಾಡದಿರಿ. ಆಂಜನೇಯ ಚಾಲೀಸ ಪಠಿಸಿ. ಹಾಗೇ ದಿನಕ್ಕೊಮ್ಮೆ ಜಾಗಿಂಗ್‌ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. 

ಮಿಥುನ
ನಿಮಗೆ ಕಾಲುಗಳ ಗಂಟುಗಳು ಆಗಾಗ ಹಿಡಿದಿಕೊಂಡಂತೆ, ಬಾತುಕೊಂಡಂತೆ ಆಗಬಹುದು. ವೃದ್ಧರಾದಾಗ ಇದು ಸಂಧಿವಾತಕ್ಕೆ ತಿರುಗಬಹುದು. ವಾಯು ಆಹಾರ ಕಡಿಮೆ ಮಾಡಿ. ಆದಿತ್ಯ ಕವಚ ಹೇಳಿಕೊಳ್ಳಿ. ಬೆಳಗ್ಗೆ ಖಾಲಿ ಹೊಟ್ಟೆಗೆ ತುಳಸಿ ನೀರು ಸೇವಿಸಿ.

ಕಟಕ
ನಿಮಗೆ ಬಾಯಿ ಹಾಗೂ ಹಲ್ಲಿಗೆ ಸಂಬಂಧಿಸಿದ ಸಂಕಷ್ಟಗಳು ಸದಾ ಇದ್ದದ್ದೇ. ಸ್ವಚ್ಛತೆ ಆದ್ಯತೆಯಾಗಿರಲಿ. ಹಲ್ಲುನೋವು ತಲೆನೋವಿಗೆ ಶಿಫ್ಟ್ ಆಗಬಹುದು. ಕ್ಯಾಲ್ಷಿಯಂ ಸೇವಿಸಿ. ವಿಷ್ಣು ಸಹಸ್ರನಾಮ‌ ಪಠಿಸಿ. ನೆಲನೆಲ್ಲಿಯ ಕಷಾಯ ನಿತ್ಯವೂ ಕುಡಿಯಿರಿ.

ಸಿಂಹ
ನಿಮಗೆ ಹೃದಯದ ಸಮಸ್ಯೆ ಉಂಟಾಗಬಹುದು ಎಂದು ತೋರುತ್ತದೆ. ರಕ್ತನಾಳಗಳನ್ನು ದಪ್ಪ ಮಾಡುವ ಧೂಮಪಾನದಂಥ ಹವ್ಯಾಸ ಇದ್ದರೆ ಕೈಬಿಡಿ. ಹೆಚ್ಚು ಸಕ್ಕರೆ, ಕರಿದ ತಿಂಡಿ ಸೇವಿಸಬೇಡಿ. ಯೋಗ ಪ್ರಾಣಾಯಾಮ ಇತ್ಯಾದಿಗಳನ್ನು ತಪ್ಪದೆ ಮಾಡಿ. ಧ್ಯಾನ ಕಲಿತರೆ ಒಳ್ಳೆಯದು. ರಾಘವೇಂದ್ರ ಅಷ್ಟಕ ಜಪ ಮಾಡಿ.

ಕನ್ಯಾ
ನಿಮಗೆ ಚರ್ಮದ ಕಾಯಿಲೆಗಳು ತಲೆದೋರಬಹುದು. ಪ್ರಖರ ಬಿಸಿಲು, ಹಿಮಕ್ಕೆ ಒಡ್ಡಿಕೊಳ್ಳದಿರಿ. ಎಳೆಬಿಸಿಲು ಒಳ್ಳೆಯದು. ಹಸಿರು ತರಕಾರಿ ಸೇವಿಸಿ. ಚರ್ಮದ ಆರೋಗ್ಯವನ್ನು ಹೆಚ್ಚು ಮಾಡುವ ಆಹಾರ ಸೇವಿಸಿ. ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ಬೆಳ್ಳಿಯ ಮೊಟ್ಟೆ ಅರ್ಪಿಸಿ. ಸುಬ್ರಹ್ಮಣ್ಯನ ಧ್ಯಾನ ಮಾಡಿ.

ತುಲಾ
ನಿಮ್ಮದು ತುಸು ಶೀತಪ್ರಕೃತಿ ಆಗಿರಬಹುದು. ಆದ್ದರಿಂದ ಸಣ್ಣ ಮಳೆಗೆ ಒಡ್ಡಿಕೊಂಡರೂ ನೆಗಡಿಯಾಗುವುದು. ಪ್ರಸ್ತುತ ಕೊರೊನಾ ಸಂದರ್ಭ ನಿಮಗೆ ಹೆದರಿಕೆಯದ್ದೇ. ದೇಹದ ಪ್ರತಿರೋಧ ಶಕ್ತಿ ಚೆನ್ನಾಗಿಟ್ಟುಕೊಳ್ಳಿರಿ. ಪ್ರತಿದಿನ ಮುಂಜಾನೆ ಹಾಗೂ ಸಂಜೆ ರಾಮಜಪದಿಂದ ಒಳಿತು.

ವೃಶ್ಚಿಕ
ನೀವು ಲಿವರ್ ಅನ್ನು ಅತ್ಯಂತ ಜೋಪಾನವಾಗಿ ನೋಡಿಕೊಳ್ಳಬೇಕು. ಕರಿದ ತಿಂಡಿ, ಮದ್ಯಪಾನ, ಅತಿಯಾದ ಮಸಾಲೆ ಒಳ್ಳೆಯದಲ್ಲ. ಕಲುಷಿತ ನೀರು ಜಾಂಡೀಸ್‌ಗೆ ಕಾರಣವಾಗಬಹುದು. ದುರ್ಗಾದೇವಿಯ ಧ್ಯಾನ ಸತತವಾಗಿ ಮಾಡುವುದರಿಂದ ಸಂಕಷ್ಟ ದೂರ.

ಈ ರಾಶಿಯವ್ರು ಲೈಂಗಿಕ ಸಾಹಸಕ್ಕಿಳಿಬೇಡಿ, ಡೇಂಜರ್! ...

ಧನು 
ವಾಯುಪ್ರಕೋಪದ ಸಮಸ್ಯೆಗಳು ನಿಮಗೆ ಸಾಮಾನ್ಯ. ಮಲಬದ್ಧತೆಯೂ ಇರಬಹುದು. ವಾಯುಕಾರಕ ಆಹಾರಗಳನ್ನು ತ್ಯಜಿಸಿ. ಗಡ್ಡೆಗೆಣಸು, ಕಡಲೆ ಇವುಗಳ ಸೇವನೆ ಮಿತಗೊಳಿಸಿ. ಹಸಿರು ತರಕಾರಿ ಮತ್ತು ಹಣ್ಣು ಹೆಚ್ಚಾಗಿ ಸೇವಿಸಿ. ಲಲಿತಾ ಸಹಸ್ರನಾಮ  ಜಪ ಮಾಡಿ.

ಮಕರ
ಕ್ಯಾಲ್ಷಿಯಂನ ಕೊರತೆ ನಿಮ್ಮಲ್ಲಿ ಇರುವುದರಿಂದ ಮೂಳೆಗಳು ಆಗಾಗ ಲಟಕ್ ಎನ್ನಬಹುದು. ಬೆನ್ನಿನ ಮೇಲೆ ಹೆಚ್ಚಿನ ಭಾರ ಹೊರಬೇಡಿ. ವಾಕಿಂಗ್ ನಿಮಗೆ ಸೂಕ್ತ ವ್ಯಾಯಾಮ. ಮೊಟ್ಟೆ ಸಾಕಷ್ಟು ಸೇವಿಸಿ. ಹಾಲು ಕುಡಿಯಿರಿ. ಲಕ್ಷ್ಮೀ ದೇವಿಯನ್ನು ಧ್ಯಾನಿಸುವುದರಿಂದ ಸ್ವಾಸ್ಥ್ಯ.

ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!? 

ಕುಂಭ
ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳಿಂದ ಬರುವ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸೊಳ್ಳೆಗಳು ಹೊತ್ತು ತರುವ ಜ್ವರ ಮುಂತಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಾಗಿರಿ. ರುದ್ರ ನಮಕ ಚಮಕವನ್ನು ಪಾರಾಯಣ ಮಾಡುವುದರಿಂದ ಒಳಿತು.

ಮೀನ
ಜಠರಕ್ಕೆ ಸಂಬಂಧಿಸಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಗ್ಯಾಸ್ಟ್ರೋ ಎಂಟರೈಟಿಸ್ ಸಮಸ್ಯೆ ಅತೀವ ಹಾನಿಕರ. ಉಪವಾಸ ವ್ರತಗಳನ್ನು ಮಿತಿಗೊಳಿಸಿ. ಅತಿ ಆಹಾರ ಸೇವನೆಯೂ ಬೇಡ. ಶಿವಪಂಚಾಕ್ಷರಿ ಪಠನದಿಂದ ಆರೋಗ್ಯ ಸಿದ್ದ. ತಾಮ್ರದ ತಂಬಿಗೆಯಲ್ಲಿ ಒಂದು ಗಂಟೆ ಇಟ್ಟ ನೀರನ್ನು ಕುಡಿಯಿರಿ. 

ಶಿವಪುರಾಣದ ಪ್ರಕಾರ ಈ ಪಾಪಗಳಿಗೆ ಕ್ಷಮೆಯೇ ಇಲ್ಲ..!