ಹಿಂದೂ ಧರ್ಮದಲ್ಲಿ ಅನೇಕ ಪುರಾಣಗಳಿವೆ. ಪುರಾಣಗಳಿಗೆ ಅದರದ್ದೇ ಆದ ಮಹತ್ವವಿದೆ. ಮಾನವನಿಗೆ ಆದರ್ಶ, ಧರ್ಮ, ನ್ಯಾಯಗಳ ಬಗ್ಗೆ ಮಾರ್ಗದರ್ಶಕಗಳಂತಿವೆ ಈ ಪುರಾಣಗಳು. 

ಹಿಂದೂ ಧರ್ಮದಲ್ಲಿ ಒಟ್ಟು ಹದಿನೆಂಟು ಪುರಾಣಗಳಿವೆ ಎಂಬ ಉಲ್ಲೇಖಗಳಿವೆ. ವಿಷ್ಣು ಪುರಾಣ, ನಾರದ ಪುರಾಣ, ಸ್ಕಂದ ಪುರಾಣ ಮತ್ತು ಇತ್ಯಾದಿ ಪುರಾಣಗಳ ಪಟ್ಟಿಯಲ್ಲಿ ಶಿವ ಪುರಾಣವು ಸಹ ಒಂದಾಗಿದೆ. ಶಿವ ಪುರಾಣದಲ್ಲಿ ಜನನ-ಮರಣ, ಪಾಪ-ಪುಣ್ಯ ಮತ್ತು ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗ್ಗೆ ಹೇಳಲಾಗಿದೆ. ಶಿವನಿಗೆ ಸಂಬಂಧಿಸಿದ ಪುರಾಣವಾದ ಕಾರಣ ಮಹಾದೇವನ ಅನೇಕ ವಿಶೇಷ ವಿಷಯಗಳನ್ನು ಸಹ ಇದರಲ್ಲಿ ತಿಳಿಸಲಾಗಿದೆ. ಮನುಷ್ಯನ ವರ್ತನೆ ಹೇಗಿರಬೇಕು? ಆಚಾರ-ವಿಚಾರಗಳು, ಕರ್ಮಗಳು ಯಾವ ರೀತಿಯಲ್ಲಿರಬೇಕು ಎಂಬುದರ ಬಗ್ಗೆ ಹೇಳಲಾಗಿದೆ.

ಇದನ್ನು ಓದಿ: ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!? 

ಹಾಗೆಯೇ ಶಿವ ಪುರಾಣದಲ್ಲಿ ಏಳು ಪಾಪಗಳ ಬಗ್ಗೆ ತಿಳಿಸಲಾಗಿದ್ದು, ಆ ಪಾಪಗಳನ್ನು ಮಾಡಿದವರ ಮೇಲೆ ಶಿವ ಸಿಟ್ಟಾಗುತ್ತೇನೆಂಬ ಬಗ್ಗೆ ತಿಳಿಸಲಾಗಿರುವುದಲ್ಲದೇ, ಅಂಥಹ ತಪ್ಪಿಗೆ ಕ್ಷಮೆ ಇಲ್ಲವೆಂಬ ಬಗ್ಗೆ ಸಹ ಉಲ್ಲೇಖಿಸಲಾಗಿದೆ. ಹಾಗಾದರೆ ಆ ಪಾಪಗಳ ಬಗ್ಗೆ ತಿಳಿಯೋಣ...

ಕೆಟ್ಟ ಭಾವನೆ
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವುದು ಉತ್ತಮರ ಲಕ್ಷಣ. ಅದೇ ಬೇರೆಯವರಿಗೆ ಕೆಟ್ಟದಾಗಲಿ ಎಂದು ಬಯಸುವುದು ದುರ್ಭಾವನೆ ಅಥವಾ ಕೆಟ್ಟ ಭಾವನೆ. ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಕೆಟ್ಟದ್ದಾಗಿ ಯೋಚಿಸುವುದು, ದ್ವೇಷವಿಟ್ಟುಕೊಳ್ಳವುದು ಒಳ್ಳೆಯದಲ್ಲ ಇದು ಕ್ಷಮೆ ಇರದ ಪಾಪವೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ ಇತರರಿಗೆ ತೊಂದರೆಯಾಗುವಂಥ ಕೆಲಸಗಳನ್ನು ಎಂದಿಗೂ ಮಾಡಬಾರದು, ಹೀಗೆ ಮಾಡಿದ್ದೇ ಆದರೆ ಅದು ಪಾಪಕರ್ಮಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಹಾಗಾಗಿ ಉತ್ತಮ ಕಾರ್ಯಗಳನ್ನು ಮಾಡಬೇಕೆಂಬ ಸಂದೇಶವನ್ನು ಇದು ನೀಡುತ್ತದೆ.

ಇದನ್ನು ಓದಿ: ಲಕ್ಷ್ಮೀ ನೆಲೆಸಬೇಕೆಂದರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನಿಡಿ..! 

ಹಣದಲ್ಲಿ ವಂಚನೆ
ಹಣವೇ ಎಲ್ಲ, ಹಣವಿಲ್ಲದೇ ಏನೂ ಇಲ್ಲವೆಂಬ ಜಗತ್ತು ಇಂದಿನದು. ಮನುಷ್ಯನ ಗುಣ, ಆಚಾರ- ವಿಚಾರ, ಸಂಪ್ರದಾಯ, ಆದರ್ಶಗಳಿಗಿಂತ ಹಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವ ಕಾಲವಾದ್ದರಿಂದ, ಹಣಕ್ಕಾಗಿ ಅನೇಕ ಮೋಸ ವಂಚನೆಗಳು ಆಗುತ್ತಲೇ ಇರುತ್ತವೆ. ಶಿವ ಪುರಾಣದಲ್ಲಿ ಹೇಳಿರುವಂತೆ ಹಣಕ್ಕಾಗಿ ಇತರರನ್ನು ಮೋಸಗೊಳಿಸಿದರೆ ಅದು ದೊಡ್ಡ ಪಾಪ ಅಷ್ಟೇ ಅಲ್ಲದೇ ಬೇರೆಯವರಿಗೆ ಮೋಸ ಮಾಡುವ ಬಗ್ಗೆ ಯೋಚಿಸುವುದು ಸಹ ಪಾಪವೆಂದು ಹೇಳಲಾಗಿದೆ. ದುರಾಸೆಯಿಂದ ಮೋಸ ಮಾಡುವವರ ಜೊತೆ ಸೇರಿಕೊಂಡರೂ ಅದು ಪಾಪವೆಂದು ಉಲ್ಲೇಖಿಸಲಾಗಿದೆ. ಪರಿಶ್ರಮದಿಂದ ಸಂಪಾದಿಸಿದ ಹಣ ಮಾತ್ರವೇ ಸಫಲತೆಯನ್ನು ತಂದುಕೊಡುತ್ತದೆ.

ಪರ ಸ್ತ್ರೀ ಅಥವಾ ಪುರುಷರನ್ನು ಮೋಹಿಸುವುದು
ಒಂದು ಸಂಬಂಧದಲ್ಲಿ ಇದ್ದುಕೊಂಡು ಮತ್ತೊಬ್ಬರನ್ನು ಮೋಹಿಸುವುದು ಪಾಪವೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಇಂಥಹ ತಪ್ಪಿಗೆ ಕ್ಷಮೆ ಇರುವುದಿಲ್ಲವೆಂದು ಮತ್ತು ಒಬ್ಬೊರೊಂದಿಗೆ ಇದ್ದು, ಇನ್ನೊಬ್ಬರ ಬಗ್ಗೆ ಕೆಟ್ಟ ಭಾವನೆಯನ್ನು ಇಟ್ಟು ಮೋಹಿಸುವುದು ಸಹ ಅಪರಾಧವೆಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ಕೆಟ್ಟ ಉದ್ದೇಶದಿಂದ ಇನ್ನೊಬ್ಬರ ಸಂಬಂಧದಲ್ಲಿ ಬಿರುಕು ಮೂಡುವಂಥಹ ಕೆಲಸ ಮಾಡುವುದು ಸಹ ಕ್ಷಮೆಯಿಲ್ಲದ ಪಾಪವೆಂದು ಹೇಳಲಾಗಿದೆ.

ಗರ್ಭಿಣಿ ನಿಂದನೆ
ಗರ್ಭಿಣಿಯರ ಮನಃಸ್ಥಿತಿ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂಥಹ ಸ್ತ್ರೀಯರ ಮನಸ್ಸನ್ನು ನೋಯಿಸುವುದು ಪಾಪವೆಂದು, ಹೀಗೆ ಮಾಡಿದರೆ ಭಗವಂತನು ಅಪ್ರಿಯಗೊಳ್ಳುತ್ತಾನೆಂಬ ಬಗ್ಗೆ ಶಿವ ಪುರಾಣದಲ್ಲಿ ತಿಳಿಸಲಾಗಿದೆ. ಗರ್ಭಣಿಯನ್ನು ನಿಂದಿಸುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಗರ್ಭಿಣಿಯರನ್ನು ನಿಂದಿಸಬಾರದೆಂದು ಹೇಳಲಾಗಿದೆ.

ಇದನ್ನು ಓದಿ: ಈ ಜೀವಿಗಳನ್ನು ಕನಸಿನಲ್ಲಿ ಕಂಡರೆ ಧನಲಾಭ..! 

ಅಸೂಯೆ
ಮನುಷ್ಯನಿಗಿರುವ ಅತೀ ಕೆಟ್ಟ ಸ್ವಭಾವ ಅಸೂಯೆ. ಅಸೂಯೆ ಇದ್ದಾಗ ವಿನಾ ಕಾರಣ ಇನ್ನೊಬ್ಬರನ್ನು ದ್ವೇಷಿಸುವಂತಾಗುತ್ತದೆ. ಇತರರು ತಮಗಿಂತ ಹೆಚ್ಚು ಅಭಿವೃದ್ಧಿ ಹೊಂದಿರುವುದನ್ನು ಸಹಿಸಲಾಗದೇ, ಅವರಿಗೆ ಕೆಟ್ಟದ್ದನ್ನು ಬಯಸುವುದು ಕ್ಷಮೆಯಿಲ್ಲದ ಪಾಪವೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಅಧರ್ಮ
ಧರ್ಮವನ್ನು ಪಾಲಿಸದೇ ಅಧರ್ಮದ ದಿಕ್ಕಿನಲ್ಲಿ ನಡೆಯುವುದು ಮಹಾಪಾಪ. ಧರ್ಮಕ್ಕೆ ಗೌರವ ನೀಡುತ್ತಾ ಅದೇ ಹಾದಿಯಲ್ಲಿ ಸಾಗಿದರೆ ಮೋಕ್ಷಪ್ರಾಪ್ತಿಯಾಗುತ್ತದೆ. ಅಧರ್ಮ ಕಾರ್ಯಗಳಿಗೆ ಕ್ಷಮೆ ಇಲ್ಲವೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.