Asianet Suvarna News Asianet Suvarna News

ಈ ರಾಶಿಯವ್ರು ಲೈಂಗಿಕ ಸಾಹಸಕ್ಕಿಳಿಬೇಡಿ, ಡೇಂಜರ್!

ಅದು ದಾಂಪತ್ಯವೇ ಇರಬಹುದು, ಮದುವೆಯಾಚಿನ ಸಾಹಸಗಳೇ ಇರಬಹುದು, ಕೆಲವೊಮ್ಮೆ ಅನಿರೀಕ್ಷಿತ ಲೈಂಗಿಕ ಅನುಭವಗಳಾಗಿ ಬಿಡುತ್ತವೆ. ಆದರೆ ಕೆಲವೊಮ್ಮೆ ಈ ವಿಚಾರದಲ್ಲಿ ಕೊಂಚ ಯಾಮಾರಿದ್ರೂ ತಲೆ ಹೋಗೋದು ಗ್ಯಾರೆಂಟಿ. ಈ ವಾರ ಕೆಲವು ರಾಶಿಯವ್ರು ಅಂಥಾ ಸಂಕಷ್ಟದಲ್ಲಿದ್ದಾರೆ. ಆ ರಾಶಿಯವ್ರು ಸದ್ಯಕ್ಕೆ ಇಂಥಾ ಸಾಹಸಕ್ಕಿಳಿಯದೇ ಸುಮ್ಮನಿರೋದು ಉತ್ತಮ,

 

These Zodiac born Dont rush to sexual adventures
Author
Bengaluru, First Published Oct 9, 2020, 4:39 PM IST
  • Facebook
  • Twitter
  • Whatsapp

ಮೇಷ
ನಿಮಗೆ ಹೊರಗಿನಿಂದ ಸೆಕ್ಸ್‌ಗೆ ಸಂಬಂಧಿಸಿದ ಆಮಿಷಗಳು ಬರಬಹುದು. ಆದರೆ ಅವರ ಬಣ್ಣದ ಮಾತುಗಳಿಗೆ ಮರುಳಾದ್ರೂ ಅದೇ ಉರುಳಾಗೋದು ಗ್ಯಾರೆಂಟಿ. ಮನೆಯಲ್ಲಿ ಸಂಗಾತಿಯೂ ಲೈಂಗಿಕ ವಿಚಾರದಲ್ಲಿ ಅನಾಸಕ್ತಿ ತೋರಬಹುದು. ಮನಸ್ತಾಪದಿಂದ ಸೆಕ್ಸ್ ಲೈಫ್ ಮುಗಿದೇ ಹೋಯ್ತು ಅನ್ನೋ ಲೆವೆಲ್ ಗೂ ಹೋಗಬಹುದು. ಆದರೆ ಇದೆಲ್ಲ ಕ್ಷಣಿಕ. ನಿಮಗೆ ದಾಂಪತ್ಯದಾಚೆ ಸಂಬಂಧ ಬೆಳೆಸೋ ಹುಂಬತನ ಇದ್ರೂ ಈ ಜನ್ಮದಲ್ಲಿ ಅದು ನಿಮ್ಮಿಂದ ಸಾಧ್ಯವಾಗಲ್ಲ. ನೀವು ಮುಂದುವರಿದರೂ ನೋ ಯೂಸ್. ಹೀಗಾಗಿ ಸದ್ಯಕ್ಕೆ ಮೌನಕ್ಕೆ ಶರಣಾಗಿ. ಪರಿಸ್ಥಿತಿ ತಿಳಿಯಾಗೋ ತನಕ ಕಾಯಿರಿ. ಬಹುಶಃ ಅಕ್ಟೋಬರ್ ೧೮ ರ ನಂತರ ಸಂಗಾತಿಯೇ ಬಂದು ನಿಮ್ಮ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ.

ಮಿಥುನ
ನಿಮ್ಮದೀಗ ನುಂಗಲೂ ಆಗದ ಉಗುಳಲೂ ಆಗದ ಸ್ಥಿತಿ. ನಿಮ್ಮ ಕಾಮನೆಗಳೇ ನಿಮ್ಮ ಶತ್ರುಗಳಾಗಿ ಕಾಡಬಹುದು. ಕಾರಣ ಈ ಸಂದರ್ಭ ನಿಮ್ಮಲ್ಲಿ ಲೈಂಗಿಕ ಪ್ರಚೋದನೆ ಹೆಚ್ಚಾಗಲಿದೆ. ಆದರೆ ಹಲ್ಲಿದ್ದಾಗ ಕಡಲೆ ಇಲ್ಲದ, ಕಡಲೆ ಇದ್ದಾದ ಹಲ್ಲಿಲ್ಲದ ಸ್ಥಿತಿ ನಿಮ್ಮದು. ದುರಾದೃಷ್ಟವಶಾತ್ ನಿಮಗೀಗ ಬಯಕೆ ತಣಿಸಬಲ್ಲ ಸಿಗೋದಿಲ್ಲ. ಪತ್ನಿ ಯಾವುದೋ ಕೆಲಸದಲ್ಲಿ ಮೈಮರೆಯಬಹುದು. ಅಥವಾ ಪತಿಗೆ ಅಚಾನಕ್ ಎಲ್ಲೋ ಹೋಗಬೇಕಾಗಿ ಬರಬಹುದು. ಹಾಗಂತ ಇದೇನೂ ವಿರಸ ಅಲ್ಲ. ಈ ಕ್ಷಣದ ನಿಮ್ಮ ಸೆಕ್ಸ್ ಬಯಕೆಗಳು ಉತ್ತುಂಗದಲ್ಲಿದ್ದರೂ ಶಮನ ಮಾತ್ರ ಅಸಾಧ್ಯ ಅನ್ನೋ ಸ್ಥಿತಿ. 

ಸೆಕ್ಸ್‌ ಬಗ್ಗೆ ನೀವು ಹೀಗೆಲ್ಲ ಅಂದ್ಕೊಂಡಿದ್ದೀರಾ? ಅಷ್ಟಕ್ಕೂ ವಾಸ್ತವ ಏನು? 

ಕನ್ಯಾ
ನಿಮ್ಮದು ಎಲ್ಲದರಲ್ಲೂ ನಿಮಗೇ ಇಂಪಾರ್ಟೆನ್ಸ್ ಸಿಗಬೇಕು ಅನ್ನೋ ಮನಸ್ಥಿತಿ. ಪ್ರತಿಯೊಬ್ಬರೂ ನಿಮ್ಮ ಮಾತನ್ನೇ ಕೇಳಬೇಕು, ನಿಮ್ಮ ಮಾತಿಗೆ ಮನ್ನಣೆ ಸಿಗಬೇಕು, ಎಲ್ಲರೂ ನಿಮ್ಮನ್ನು ಪ್ರೀತಿಸಬೇಕು, ನೀವು ಆಕರ್ಷಣೆಯ ಕೇಂದ್ರಬಿಂದುವಾಗಿರಬೇಕು ಅಂತೆಲ್ಲ ಚಿಂತಿಸುತ್ತಿರುತ್ತೀರಿ. ಆದರೆ ಸದ್ಯಕ್ಕೆ ನಿಮಗೇ ಲೈಂಗಿಕತೆ ಬಗ್ಗೆ ನಿರಾಸಕ್ತಿ ಮೂಡಬಹುದು. ಹೊರಗಿನ ಒತ್ತಡ ಹೆಚ್ಚಿ ಮನಸ್ಸು ಮ್ಲಾನವಾಗಬಹುದು. ಹಳೆಯ ನೋವು ಮತ್ತೆ ನೆನಪಾಗಿ ಮನಸ್ಸು ಮುದುಡಬಹುದು. ಲೈಂಗಿಕ ಆಕರ್ಷಣೆ ಇಲ್ಲವೇ ಇಲ್ಲ ಅಂತನಿಸೋ ಟೈಮ್. ಆದರೆ ಒಂದುವೇಳೆ ಇದನ್ನೆಲ್ಲ ಮೀರಿ ನೀವು ಸೇಫ್ ಸೆಕ್ಸ್ ಮಾಡಿದ್ರೆ ಮನಸ್ಸು ಮತ್ತೆ ಹಿಂದಿನಂತೇ ಫ್ರೆಶ್ ಆಗೋದು ಗ್ಯಾರೆಂಟಿ. 

These Zodiac born Dont rush to sexual adventures

ಕಟಕ
ನಿಮ್ಮದು ಪ್ರತೀ ಸಲವೂ ಒಂದು ಸಮಸ್ಯೆ. ಯಾವ ವಿಚಾರದಲ್ಲೂ ನೀವು ಮುಂದುವರಿಯೋದೇ ಇಲ್ಲ. ಮನಸ್ಸಿನ ತುಂಬ ಭಾವನೆಗಳನ್ನು ಬಯಕೆಗಳನ್ನು ತುಂಬಿಕೊಂಡು, ಇನ್ನೊಬ್ಬರು ಅದನ್ನು ಅರ್ಥ ಮಾಡಿಕೊಂಡು ಮುಂದುವರಿಯಲಿ ಅಂತ ಬಯಸುತ್ತೀರಿ. ಆದರೆ ಎದುರಿರುವ ವ್ಯಕ್ತಿಗೂ ಅವರದೇ ಭಾವನೆಗಳಿರುತ್ತವಲ್ಲಾ, ಇಡೀ ದಿನ ಅವರು ನಿಮ್ಮ ಮನಸ್ಸನ್ನೇ ಅಳೆಯುತ್ತಾ ಕೂರಲು ಸಾಧ್ಯವಿಲ್ಲ. ಸದ್ಯದ ನಿಮ್ಮ ಲೈಂಗಿಕ ಬದುಕು ತುಸು ಹಳಿ ತಪ್ಪಲು ಇದೇ ಮನಸ್ಥಿತಿ ಕಾರಣ. ಇದು ನಿಮ್ಮ ರಾಶಿಯೊಂದಿಗೆ ಬಂದ ಮನಸ್ಥಿತಿಯಾದ ಕಾರಣ ಈ ವಿಚಾರದಲ್ಲಿ ನೀವು ಅಸಹಾಯಕರೂ ಹೌದು. ಆದರೆ ದೈವಬಲ ನಿಮಗಿರುವ ಕಾರಣ ಇದೆಲ್ಲ ಬೇಗ ಪರಿಹಾರವಾಗುತ್ತೆ. 

ಗ್ರಹದೋಷದಿಂದ ಸಂಬಂಧ ಹಾಳು, ಸರಿಮಾಡಿಕೊಳ್ಳಲು ಹೀಗೆ ಮಾಡಿ..! 

ಧನು
ಈ ವಾರ ನಿಮ್ಮ ದಿನಗಳು ತುಸು ಆತಂಕ, ಗೊಂದಲದಲ್ಲಿ ಕಳೆದುಹೋಗಬಹುದು. ಲೈಂಗಿಕ ವಿಚಾರಗಳತ್ತ ಮನಸ್ಸು ತಿರುಗದು. ನಿಮ್ಮ ಈ ಅನಾಸಕ್ತಿ ಸಂಗಾತಿಯಲ್ಲಿ ತಳಮಳ ಹುಟ್ಟಿಸಬಹುದು. ಹಾಗೆಂದು ನೀವು ಕಾಂಪ್ರಮೈಸ್ ಮಾಡಿ ಮೈ ಒಪ್ಪಿಸಿದರೆ ಸೆಕ್ಸ್ ರೋಚಕತೆ ಕಳೆಗುಂದಬಹುದು. ತುಸು ದಿನ ತಡೆಯಿರಿ. ನಿಮ್ಮ ಸಂಗಾತಿಗೆ ಈ ಮನಸ್ಥಿತಿಯ ಬಗ್ಗೆ ತಿಳಿಸಿ. ಕೊಂಚ ಲೈಂಗಿಕಾಸಕ್ತಿ ಬೆಳೆಸಿಕೊಳ್ಳಲು ಪ್ರಯತ್ನಿಸಿ. ರೊಮ್ಯಾಂಟಿಕ್ ಸಿನಿಮಾಗಳು, ಪುಸ್ತಕಗಳು ಮರೆತು ಹೋದಂತಿರುವ ಬಯಕೆಗಳನ್ನು ಮತ್ತೆ ಜೀವಂತಗೊಳಿಸಬಹುದು. ಈ ಮೂಲಕ ನಿಮ್ಮ ಸೆಕ್ಸ್ ಲೈಫ್ ಹಾಗೂ ದಾಂಪತ್ಯ ಚೆನ್ನಾಗಾಗಬಹುದು. 

ಪುರಾಣಕಾಲದಲ್ಲೂ ಹನಿ ಟ್ರ್ಯಾಪ್ ಇತ್ತಾ? 

Follow Us:
Download App:
  • android
  • ios