ವಾರದ ಏಳು ದಿನಗಳು ಪ್ರತಿಯೊಬ್ಬರಿಗೂ ಬೇರೆ ಬೇರೆ ಅನುಭವವನ್ನು ನೀಡಿರುತ್ತದೆ. ಕೆಲವರಿಗೆ ಅದೃಷ್ಟ ಒಲಿದು ಬಂದಿದ್ದರೆ, ಮತ್ತೆ ಕೆಲವರಿಗೆ ದುರಾದೃಷ್ಟ ಕಾಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಯವರಿಗೂ ಒಂದೊಂದು ದಿನ ಶುಭವಾದರೆ, ಮತ್ತೊಂದು ದಿನ ಅಶುಭವಾಗಿರುತ್ತದೆ. 

ಹಾಗಾಗಿ ರಾಶಿಯ ಅನುಸಾರವಾಗಿ ಯಾವ ರಾಶಿಯವರಿಗೆ ಯಾವ ದಿನ ಶುಭ? ಎಂದು ತಿಳಿದುಕೊಂಡರೆ ಆ ದಿನದಂದೇ ಹೊಸ ಕಾರ್ಯಗಳನ್ನು ಆರಂಭಿಸಬಹುದು. ಆ ದಿನ ಆರಂಭಿಸಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಎಂಬ ಬಗ್ಗೆ ಶಾಸ್ತ್ರದಲ್ಲಿ ಹೇಳಲಾಗಿದೆ.  

ಮೇಷ ರಾಶಿ
ಮೇಷ ರಾಶಿಯವರು ತುಂಬಾ ಚುರುಕಾಗಿರುವುದಲ್ಲದೇ, ಸದಾ ಕ್ರೀಯಾಶೀಲರಾಗಿರುತ್ತಾರೆ. ಉತ್ಸಾಹವೇ ಇವರ ಶಕ್ತಿ ಮತ್ತು ಸ್ಪೂರ್ತಿಯಾಗಿರುತ್ತದೆ. ಮೇಷ ರಾಶಿಯ ಅಧಿಪತಿ ಗ್ರಹ ಮಂಗಳ, ಹಾಗಾಗಿ ಇವರಿಗೆ ಮಂಗಳವಾರ ಶುಭವೆಂದು ಹೇಳಲಾಗುತ್ತದೆ.   

ಇದನ್ನು ಓದಿ: ಲಕ್ಷ್ಮೀ ನೆಲೆಸಬೇಕೆಂದರೆ ನಿಮ್ಮ ಮನೆಯಲ್ಲಿ ಈ ನಾಲ್ಕು ವಸ್ತುಗಳನ್ನಿಡಿ..! 

ವೃಷಭ ರಾಶಿ
ಈ ರಾಶಿಯ ಅಧಿಪತಿ ಗ್ರಹ ಶುಕ್ರ. ವೃಷಭ ರಾಶಿಯವರು ಹುಟ್ಟಿನಿಂದಲೂ ಹಠವಾದಿಗಳು ಮತ್ತು ಗುರಿ ತಲುಪುವ ಬಗ್ಗೆಯೇ ಯೋಚಿಸುತ್ತಿರುವವರಾಗಿರುತ್ತಾರೆ. ಯಾವುದನ್ನಾದರು ಮಾಡಬೇಕೆಂದು ಅಂದುಕೊಂಡರೆ, ಅದನ್ನು ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ. ಈ ರಾಶಿಯವರಿಗೆ ಶುಭದಿನ ಬುಧವಾರ ಮತ್ತು ಶುಕ್ರವಾರ. ಈ ದಿನಗಳಂದು ಇವರಿಗೆ ಒಳ್ಳೆಯದಾಗಲಿದೆ.


ಮಿಥುನ ರಾಶಿ
ಈ ರಾಶಿಯ ಅಧಿಪತಿ ಬುಧಗ್ರಹ. ಈ ರಾಶಿಯವರ ಗ್ರಹಿಕೆ ಮತ್ತು ಸ್ಮರಣಾ ಶಕ್ತಿ ತುಂಬಾ ಚೆನ್ನಾಗಿರುತ್ತದೆ. ಕ್ಷಣದಲ್ಲಿಯೇ ಎಂಥವರನ್ನೂ ಸೆಳೆಯುವ ಕ್ಷಮತೆ ಇವರಲ್ಲಿರುತ್ತದೆ. ವಾರದ ಏಳು ದಿನಗಳಲ್ಲಿ ಬುಧವಾರವು ಇವರಿಗೆ ಅತ್ಯಂತ ಶುಭದಿನವಾಗಿದೆ. ಈ ರಾಶಿಯವರ ಹೆಚ್ಚು ಕೆಲಸಗಳು ಈ ದಿನದಂದೇ ಪೂರ್ಣವಾಗುತ್ತವೆ.

ಕೊಲೆಯಾದ ಆ ಬಾಲ ನಟಿಯ ದೆವ್ವೆ ಇನ್ನೂ ಇದೆ ಆ ಮನೆಯಲ್ಲಿ!

ಕರ್ಕಾಟಕ ರಾಶಿ
ಈ ರಾಶಿಯ ಅಧಿಪತಿ ಚಂದ್ರ ಗ್ರಹ. ಈ ರಾಶಿಯವರು ಉತ್ತಮ ವಿಚಾರ ಮತ್ತು ಕಲ್ಪನಾ ಶಕ್ತಿಗೆ ಹೆಸರುವಾಸಿಯಾಗಿರುತ್ತಾರೆ. ಈ ರಾಶಿಯವರಿಗೆ ಸೋಮವಾರ ಅದೃಷ್ಟದ ದಿನವೆಂದು ಹೇಳಬಹುದಾಗಿದೆ. ಸೋಮವಾರದಂದು ಮಾಡಿದ ಕೆಲಸಗಳು ಇವರಿಗೆ ಶುಭಫಲವನ್ನು ನೀಡುತ್ತವೆ. ಶುಭವಾರ್ತೆಯನ್ನು ಸೋಮವಾರದಂದೇ ಕೇಳುವಂಥಾಗುತ್ತದೆ.

ಸಿಂಹ ರಾಶಿ
ಈ ರಾಶಿಯವರ ಅಧಿಪತಿ ಗ್ರಹ ಸೂರ್ಯ ಮತ್ತು ಶುಭದಿನ ಭಾನುವಾರ. ಸೂರ್ಯ ಗ್ರಹದ ಅಧಿಪತ್ಯದಲ್ಲಿರುವ ಸಿಂಹರಾಶಿಯವರಿಗೆ ಭಾನುವಾರವು ಅತ್ಯಂತ ಮಹತ್ವಪೂರ್ಣ ಮತ್ತು ಪ್ರಭಾವದ ದಿನವಾಗುತ್ತದೆ. ಸಿಂಹ ರಾಶಿಯವರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಈ ದಿನ ಪ್ರಶಸ್ತವಾದ ದಿನವಾಗಿರುತ್ತದೆ.

ಕನ್ಯಾ ರಾಶಿ
ಈ ರಾಶಿಯವರ ಅಧಿಪತಿ ಗ್ರಹ ಬುಧ.  ತಮ್ಮ ಪ್ರತಿಭೆಯನ್ನು ಎಲ್ಲಿ ತೋರಿಸಬೇಕೆಂಬ ಬಗ್ಗೆ ಈ ರಾಶಿಯವರಿಗೆ ಚೆನ್ನಾಗಿ ಅರಿವಿರುತ್ತದೆ. ಕನ್ಯಾ ರಾಶಿಯವರ ಪರಿಪೂರ್ಣತೆಯು ಇತರರನ್ನು ಮೆಚ್ಚಿಸುವಂತಿರುತ್ತದೆ. ಈ ರಾಶಿಯವರಿಗೆ ಬುಧವಾರ ಅದೃಷ್ಟದ ದಿನವಾಗಿರುತ್ತದೆ.

ಇದನ್ನು ಓದಿ: ಈ ಜೀವಿಗಳನ್ನು ಕನಸಿನಲ್ಲಿ ಕಂಡರೆ ಧನಲಾಭ..! 

ತುಲಾ ರಾಶಿ
ತುಲಾ ರಾಶಿಯವರ ಅಧಿಪತಿ ಗ್ರಹ ಶುಕ್ರ. ಮನೆ ಮತ್ತು ಕಚೇರಿ ಎರಡನ್ನು ಅತ್ಯಂತ ಚೆನ್ನಾಗಿ ನಿಭಾಯಿಸುವ ಚಾಕಚಕ್ಯತೆ ಇವರಲ್ಲಿರುತ್ತದೆ. ಬೇರೆ ದಿನಗಳಿಗೆ ಹೋಲಿಸಿದರೆ ಶುಕ್ರವಾರ ಇವರಿಗೆ ಅತ್ಯಂತ ಖುಷಿ ಕೊಡುವ ವಾರವಲ್ಲದೇ ಉತ್ತಮ ಅನುಭವಗಳಾಗುವ ದಿನವಾಗಿರುತ್ತದೆ.

ವೃಶ್ಚಿಕ ರಾಶಿ
ಈ ರಾಶಿಯವರ ಅಧಿಪತಿ ಗ್ರಹ ಮಂಗಳ. ಎಲ್ಲ ಕ್ಷೇತ್ರಗಳಲ್ಲೂ ಉತ್ತಮರೆಂದು ಸಾಬೀತು ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ. ಈ ರಾಶಿಯವರಿಗೆ ಮಂಗಳವಾರದಷ್ಟು  ಉತ್ತಮ ದಿನ ಮತ್ಯಾವುದೂ ಆಗಲು ಸಾಧ್ಯವಿಲ್ಲ. ಈ ದಿನ ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನವಾಗಿರುತ್ತದೆ.

ಧನು ರಾಶಿ
ಈ ರಾಶಿಯವರ ಅಧಿಪತಿ ಗ್ರಹ ಗುರು. ಹಾಗಾಗಿ ಈ ರಾಶಿಯವರಿಗೆ ಗುರುವಾರ ಅತ್ಯಂತ ಶುಭದಿನವಾಗಿರುತ್ತದೆ. ಗುರುವಿನಿಂದ ಆಳಲ್ಪಡುವ ಈ ರಾಶಿಯವರು ಉತ್ತಮ ವ್ಯಕ್ತಿತ್ವಕ್ಕೆ, ಉದಾರತೆಗೆ ಹೆಸರುವಾಸಿಯಾಗಿರುತ್ತಾರೆ. ಗುರುವಾರದಂದು ಮಾಡುವ ಕೆಲಸಗಳು ಇವರಿಗೆ ಯಶಸ್ಸನ್ನು ತಂದುಕೊಡಲಿದೆ.

ಮಕರ ರಾಶಿ
ಈ ರಾಶಿಯ ಅಧಿಪತಿ ಗ್ರಹ ಶನಿ. ಭಿನ್ನವಾದ ಕಾರ್ಯಗಳನ್ನು ಮಾಡಿ ಎಲ್ಲರ ನಡುವೆ ಎದ್ದು ಕಾಣಲು ಬಯಸುವ ಗುಣ ಈ ರಾಶಿಯವರದ್ದು. ಇವರಿಗೆ ಶುಭದಿನ ಶನಿವಾರ. ಶನಿವಾರದಂದು ಮಾಡುವ ಕಾರ್ಯಗಳು ಇವರಿಗೆ ಸಫಲತೆಯನ್ನು ತಂದುಕೊಡುತ್ತದೆ.

ಕುಂಭ ರಾಶಿ
ಈ ರಾಶಿಯವರಿಗೂ ಅಧಿಪತಿ ಗ್ರಹ ಶನಿದೇವನಾಗಿರುತ್ತಾನೆ. ಎಲ್ಲ ಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಈ ರಾಶಿಯವರು ಬದಲಾವಣೆಗಳಿಗೆ ವಿಚಲಿತರಾಗುವುದಿಲ್ಲ, ಇವರಿಗೆ ಶನಿವಾರವು ಶುಭವನ್ನು ತಂದುಕೊಡುವ ದಿನವಾಗಿರುತ್ತದೆ.

ಇದನ್ನು ಓದಿ: ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!? 

ಮೀನ ರಾಶಿ
ಈ ರಾಶಿಗೆ ಅಧಿಪತಿ ಗ್ರಹ ಗುರು. ಇವರಿಗೆ ಉತ್ತಮ ದಿನ ಗುರುವಾರವಾಗಿರುತ್ತದೆ.  ಗುರುವಾರದಂದು ಹೆಚ್ಚು ಉತ್ಸುಕರಾಗಿರುವ ಈ ರಾಶಿಯವರು, ಗುರುವಾರದಂದು ಯಾವುದೇ ಕೆಲಸವನ್ನು ಪೂರ್ಣಗೊಳಿಸುತ್ತಾರೆ.