ಮೇಷ ರಾಶಿಗೆ ಮೈಗ್ರೇನ್! ನಿಮ್ಮ ರಾಶಿಗೆ ಯಾವ ಅನಾರೋಗ್ಯ?
ನಿಮ್ಮ ರಾಶಿಗೆ ತಕ್ಕಂತೆ ನಿಮ್ಮನ್ನು ಯಾವ ಕಾಯಿಲೆಗಳು ಕಾಡಬಹುದು ಎಂದು ನೋಡೋಣ. ಇದು ನಿಮಗೆ ನಿಮ್ಮ ಆರೋಗ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲು ನೆರವಾಗಬಹುದು.
ನಿಮ್ಮನ್ನು ಪದೇ ಪದೇ ಕಾಡುವ ಅನಾರೋಗ್ಯ ಯಾವುದು ಎಂದು ಗಮನಿಸಿ, ನಿಮ್ಮದೇ ಜನ್ಮರಾಶಿಯ ಇತರ ಜನರನ್ನು ಒಮ್ಮೆ ಈ ಬಗ್ಗೆ ವಿಚಾರಿಸಿ. ಅಚ್ಚರಿ ಎಂಬಂತೆ, ಅವರೂ ಇದೇ ಬಗೆ ಅಸ್ವಾಸ್ಥ್ಯಗಳಿಂದ ಬಳಲುವುದನ್ನು ನೀವು ಗಮನಿಸಬಹುದು. ಅಂದರೇನು> ಒಂದೇ ಜನ್ಮರಾಶಿಯವರನ್ನು ಒಂದೇ ಬಗೆಯ ಅನಾರೋಗ್ಯಗಳು ಕಾಡುತ್ತವೆಯೇ? ಹೌದು ಎನ್ನುತ್ತದೆ ಜ್ಯೋತಿಷ್ಯ. ಇದಕ್ಕೇನು ಕಾರಣ? ಇದಕ್ಕೆ ಆಯಾ ಜನ್ಮರಾಶಿಯ ಕೇಂದ್ರ ಗ್ರಹಗಳ ಪ್ರಭಾವ, ಸೂರ್ಯ- ಮಂಗಳನ ಚಲನೆ, ಸ್ವಾಭಾವಿಕ ರಾಶಿ ಸ್ವಭಾವ ಎಲ್ಲವೂ ಕಾರಣವಾಗುತ್ತವೆ. ಹಾಗಿದ್ದರೆ ಬನ್ನಿ, ನಿಮ್ಮ ರಾಶಿಗೆ ತಕ್ಕಂತೆ ನಿಮ್ಮನ್ನು ಯಾವ ಕಾಯಿಲೆಗಳು ಕಾಡಬಹುದು ಎಂದು ನೋಡೋಣ. ಇದು ನಿಮಗೆ ನಿಮ್ಮ ಆರೋಗ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲು ನೆರವಾಗಬಹುದು.
ಮೇಷ ರಾಶಿ (Aries)
ಸಮಸ್ಯೆ: ತಲೆ, ಮೆದುಳು, ಮುಖ
ಮೇಷ ರಾಶಿಯವರು ಮುನ್ನುಗ್ಗಿ ಕೆಲಸ ಮಾಡುವವರು. ಸವಾಲುಗಳನ್ನು ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ. ಇದರಿಂದಾಗಿಯೇ ಇವರಿಗೆ ದೈಹಿಕ ಮತ್ತು ಮಾನಸಿಕ ಒತ್ತಡ ತಲೆದೋರಿ ತಲೆನೋವು, ಮೈಗ್ರೇನ್ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು. ಒತ್ತಡಕ್ಕೆ ಗುರಿಯಾಗಿದ್ದರೂ, ಮೇಷ ರಾಶಿಯವರು ಖಿನ್ನತೆಗೆ ಬಲಿಯಾಗದಂತೆ, ಅವರನ್ನು ನೋಡಿಕೊಳ್ಳುವ ಅಗತ್ಯವಿದೆ. ನೀವು ಮೇಷ ರಾಶಿಯವರಾಗಿದ್ದರೆ ಈ ಬಗ್ಗೆ ಕಾಳಜಿ ವಹಿಸಿ.
ವೃಷಭ ರಾಶಿ (Taurus)
ಸಮಸ್ಯೆ: ಕುತ್ತಿಗೆ, ಕಿವಿ, ಗಂಟಲು
ವೃಷಭ ರಾಶಿಯವರು ನೆಗಡಿ, ನೋಯುತ್ತಿರುವ ಗಂಟಲು ಮತ್ತು ಕಿವಿನೋವುಗಳಿಂದ ಕಷ್ಟಪಡಬಹುದು. ಗಂಟಲಿನ ಮೇಲೆ ಹೊಂದಿರುವ ಉತ್ತಮ ಹಿಡಿತದ ಪರಿಣಾಮ ಅನೇಕ ವೃಷಭಗಳು ಉತ್ತಮ ಗಾಯಕರು ಮತ್ತು ಸಂಗೀತಗಾರರು ಆಗಿರಬಹುದು. ನೀವು ವೃಷಭ ರಾಶಿಯವರಾಗಿದ್ದರೆ ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆ ನೀವು ಮಂದವಾಗುತ್ತಿದ್ದರೆ, ಮತ್ತು ಮೈಯ ತೂಕ ಹೆಚ್ಚುತ್ತಿದ್ದರೆ, ನಿಮ್ಮಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡಿರಬಹುದು. ಚೆಕ್ ಮಾಡಿಸಿಕೊಳ್ಳಬೇಕು.
ಮಿಥುನ ರಾಶಿ (Gemini)
ಸಮಸ್ಯೆ: ಶ್ವಾಸಕೋಶಗಳು, ಭುಜಗಳು, ತೋಳುಗಳು, ಕೈಗಳು
ಬಡ ಮಿಥುನ ರಾಶಿಯವರು ಜ್ವರ, ನೆಗಡಿ ಮತ್ತು ಕೆಮ್ಮುಗಳಿಂದ ಬಳಲುತ್ತಿರುತ್ತಾರೆ. ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತಲೆ ಕೆಡಿಸಿಕೊಳ್ಳಬಹುದು. ಮಿಥುನ ರಾಶಿಯವರು ತಮ್ಮ ಕೈ ಮತ್ತು ತೋಳುಗಳಿಂದ ಬಲಿಷ್ಠರು. ಉತ್ಸಾಹಭರಿತ ವ್ಯಕ್ತಿಗಳು. ಆದರೆ ಇವರ ನರವ್ಯೂಹ ತುಸು ಋಣಾತ್ಮಕವಾಗಿದೆ. ಇವರ ಸಾಮಾನ್ಯ ಆತಂಕಗಳು ಎಂದರೆ ನಿದ್ರಾಹೀನತೆ ಮತ್ತು ನರಗಳ ಬಳಲಿಕೆ. ನೀವು ಶಾಂತವಾದ ಸಂಗೀತವನ್ನು ದಿನಕ್ಕೆ ಅರ್ಧ ಗಂಟೆಯಾದರೂ ಆಲಿಸಬೇಕು.
ಕಟಕ ರಾಶಿ (cancer)
ಸಮಸ್ಯೆ: ಸ್ತನಗಳು, ಎದೆ, ಹೊಟ್ಟೆ
ಕರ್ಕಾಟಕ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರು. ಇವರಿಗೆ ಖಿನ್ನತೆಯು ಸಾಮಾನ್ಯವಾದ ತೊಂದರೆ. ತಮ್ಮನ್ನು ಸಮಾಧಾನಪಡಿಸಿಕೊಳ್ಳಲು, ಕರ್ಕಾಟಕ ರಾಶಿಯವರು ಆಹಾರದ ಕಡೆಗೆ ತಿರುಗುತ್ತಾರೆ. ಇದರಿಂದ ಉಂಟಾಗುವ ಸ್ಥೂಲಕಾಯತೆಯ ವಿರುದ್ಧ ಹೋರಾಡಬೇಕಾಗಬಹುದು. ಇದೂ ಖಿನ್ನತೆಗೆ ಕಾರಣವಾಗಬಹುದು. ಕರ್ಕಾಟಕ ರಾಶಿಯವರು ಜೀರ್ಣಕಾರಿ ತೊಂದರೆಗಳಿಗೆ ಗುರಿಯಾಗುತ್ತಾರೆ, ಇದು ಅತಿಯಾಗಿ ತಿನ್ನುವುದರಿಂದ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಆಹಾರದ ಮೇಲೆ ಹಿಡಿತವಿರಲಿ.
ಸಿಂಹ ರಾಶಿ (leo)
ಸಮಸ್ಯೆ: ಹೃದಯ, ಬೆನ್ನು, ಬೆನ್ನು, ರಕ್ತ
ಹೃದಯದ ಕಾಯಿಲೆಗಳ ಬಗ್ಗೆ ಎಚ್ಚರದಿಂದಿರಿ, ಸಿಂಹವು ಪ್ರಬಲವಾಗಿದ್ದರೂ, ಅಧಿಕ ರಕ್ತದೊತ್ತಡ, ಅಪಧಮನಿಗಳ ಸಮಸ್ಯೆ ಮತ್ತು ಅನಿಯಮಿತ ಹೃದಯ ಬಡಿತಗಳುನ್ನು ಎದುರಿಸಬೇಕಾದೀತು. ನೀವು ಸಿಂಹ ರಾಶಿಯವರಾಗಿದ್ದರೆ, ಉತ್ತಮ ಹೃದಯದ ಆರೋಗ್ಯಕ್ಕಾಗಿ ಸಾವಧಾನತೆ ಸಾಧಿಸಿ. ಹೆಚ್ಚು ಉಪ್ಪು ಅಥವಾ ಸಕ್ಕರೆ ಸೇವನೆ ತ್ಯಜಿಸಿ. ಧೂಮಪಾನ ಬಿಟ್ಟುಬಿಡಿ. ಕೆಲಸದಲ್ಲಿ ಒತ್ತಡ ಉಂಟುಮಾಡಿಕೊಳ್ಳಬೇಡಿ.
ಕನ್ಯಾ ರಾಶಿ (virgo)
ಸಮಸ್ಯೆ: ಹೊಟ್ಟೆ, ಕರುಳು
ಕನ್ಯಾ ರಾಶಿಯವರು ತಮ್ಮ ಮೈಯ ತೂಕದೊಂದಿಗೆ ಹೋರಾಡಬೇಕಾಗಬಹುದು. ಇವರಿಗೆ ಹೆಚ್ಚು ತೂಕ ಅಥವಾ ತುಂಬಾ ಕಡಿಮೆ ತೂಕ ಕಾಡಬಹುದು. ಕನ್ಯಾ ರಾಶಿಯವರಲ್ಲಿ ಆಹಾರದ ಅಸ್ವಸ್ಥತೆಗಳು ಸಾಮಾನ್ಯವಾಗಿವೆ, ಹೊಟ್ಟೆ ಹುಣ್ಣುಗಳು, ಕರುಳಿನ ತೊಂದರೆಗಳು, ಹೊಟ್ಟೆಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆಲ್ಕೋಹಾಲ್ ತ್ಯಜಿಸಬೇಕು. ಹೆಚ್ಚು ಖಾರದ ಆಹಾರ ಬೇಡ. ನಿಯಮಿತವಾಗಿ ಆಹಾರ ಸೇವಿಸುವುದು ಅಗತ್ಯ.
ತುಲಾ ರಾಶಿ (libra)
ಸಮಸ್ಯೆ: ಮೂತ್ರಪಿಂಡಗಳು, ಮೂತ್ರಜನಕಾಂಗದ ಗ್ರಂಥಿಗಳು, ಚರ್ಮ
ತುಲಾ ರಾಶಿಯವರು ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಸಾಮಾನ್ಯವಾಗಿ ಅತಿಸಾರ ಅಥವಾ ಮಲಬದ್ಧತೆಯನ್ನು ಹೊಂದಿರುತ್ತಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಪದೇ ಪದೇ ಕಾಡದಂತಿರಲು, ಹೊಟ್ಟೆಯನ್ನು ಸದಾ ಖಾಲಿ ಬಿಡುವುದು ತಪ್ಪಿಸಿ. ಖಾರದ ಆಹಾರ ಬೇಡ. ಪ್ರೊಟೀನ್ ಹೆಚ್ಚಾಗಿರುವ ಶ್ರೀಮಂತ ಆಹಾರವನ್ನು ಆಗಾಗ ತೆಗೆದುಕೊಳ್ಳಿ, ಮತ್ತು ನಿಮ್ಮ ಚರ್ಮವು ಸೂಕ್ಷ್ಮವಾಗಿರುವುದರಿಂದ, ಯಾವಾಗಲೂ ಹೈಡ್ರೇಟೆಡ್ ಮತ್ತು moisturized ಆಗಿರಿ. ನೀರು ಸದಾ ಸೇವಿಸಿ.
ವೃಶ್ಚಿಕ ರಾಶಿ (scorpion)
ಸಮಸ್ಯೆ: ಮೂತ್ರಕೋಶ, ಗುದನಾಳ, ಜನನಾಂಗಗಳು, ಅಂಡಾಶಯಗಳು, ವೃಷಣಗಳು
ಲೈಂಗಿಕ ಹಾರ್ಮೋನುಗಳು ವೃಶ್ಚಿಕ ರಾಶಿಯಲ್ಲಿ ಹೆಚ್ಚು ಅಸ್ಥಿರವಾಗಿ ಹರಿಯುತ್ತವೆ. ಕೆಲವೊಮ್ಮೆ ಇದು ಹೆಚ್ಚಿನ ಬ್ರಹ್ಮಚರ್ಯಕ್ಕೆ ಕಾರಣವಾಗಿ, ಮಾನಸಿಕ ಒತ್ತಡ ಸೃಷ್ಟಿಸಬಹುದು. ಹಾರ್ಮೋನುಗಳು ಇನ್ನೊಂದು ದಿಕ್ಕಿಗೆ ತಿರುಗಿದಾಗ, ಲೈಂಗಿಕವಾಗಿ ಹರಡುವ ರೋಗಗಳಂತಹ ಪರಿಣಾಮಗಳಿಗೆ ಗುರಿಯಾಗಬಹುದು. ಪ್ರಾಸ್ಟೇಟ್ ಸಮಸ್ಯೆ ಸೃಷ್ಟಿಯಾಗಬಹುದು. ನಲುವತ್ತರ ನಂತರ ಚೆಕಪ್ ಅಗತ್ಯ.
ನಿಮ್ಮ ಸಂಗಾತಿ ರಾಶಿಯಾ ಇದು? ಅವರಿಗೆ ಭಾವನೆಯೇ ಇರೋಲ್ಲ ಬಿಡಿ!
ಧನು ರಾಶಿ (sagittarius)
ಸಮಸ್ಯೆ: ಸೊಂಟ, ತೊಡೆಗಳು, ಸಿಯಾಟಿಕ್ ನರಗಳು, ದೃಷ್ಟಿ
ಧನು ರಾಶಿಯವರು ಸದಾ ಪ್ರಕ್ಷುಬ್ಧವಾಗಿರುತ್ತಾರೆ. ಗಡಿಬಿಡಿಯಲ್ಲಿ ಇರುತ್ತಾರಾದ್ದರಿಂದ ಇವರಿಗೆ ಅಪಘಾತಗಳು ಸಂಭವಿಸಬಹುದು. ಧನು ರಾಶಿಯವರ ಕಣ್ಣುಗಳಲ್ಲಿಯೂ ಸಮಸ್ಯೆ ಇರಬಹುದು. ನೆನಪಿಡಿ, ನಿಮ್ಮ ದೃಷ್ಟಿ ದುರ್ಬಲವಾಗಿದ್ದರೆ, ನೀವು ಅಪಘಾತಗಳನ್ನು ಮಾಡುವ ಸಾಧ್ಯತೆ ಹೆಚ್ಚು. ಸೂಕ್ತ ಸಮಯದಲ್ಲಿ ಕಣ್ಣಿನ ದೃಷ್ಟಿಗೆ ಅಗತ್ಯವಾದ ಕನ್ನಡದ ಹೊಂದಿರಿ.
ಮಕರ ರಾಶಿ (capricorn)
ಸಮಸ್ಯೆ: ಮೂಳೆಗಳು, ಮೊಣಕಾಲುಗಳು, ಹಲ್ಲುಗಳು, ಚರ್ಮ, ಕೀಲುಗಳು
ಇವರು ದುರ್ಬಲವಾದ ಮೂಳೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಮಕರ ರಾಶಿಯವರು ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಮೂಳೆಗಳ ಆರೋಗ್ಯಕ್ಕಾಗಿ ಚಿಕ್ಕಂದಿನಿಂದಲೇ ಕ್ಯಾಲ್ಷಿಯಂ ಹೆಚ್ಚು ಇರುವ, ಮೊಟ್ಟೆ ಮುಂತಾದ ಆಹಾರಗಳನ್ನು ಸೇವಿಸಿ. ಎತ್ತರದ ಹಿಮ್ಮಡಿಯ ಬೂಟುಗಳನ್ನು ಎಚ್ಚರಿಕೆಯಿಂದ ಧರಿಸಿ ಓಡಾಡಬೇಕು.
ಕುಂಭ ರಾಶಿ (aquarius)
ಸಮಸ್ಯೆ: ಮೊಣಕಾಲುಗಳು, ಕಣಕಾಲುಗಳು, ಪರಿಚಲನೆ
ಕುಂಭ ರಾಶಿಯವರು ಅತ್ಯಂತ ಆಕರ್ಷಕವಾದ ವ್ಯಕ್ತಿಗಳು. ಆದರೂ ಕೆಲವೊಮ್ಮೆ ಕುಂಭರು ವಿಪರೀತ ಕ್ರೌರ್ಯವನ್ನು ಪ್ರದರ್ಶಿಸಬಹುದು. ನೀವು ಕುಂಭ ಚಿಹ್ನೆಯಡಿಯಲ್ಲಿ ಜನಿಸಿದರೆ, ದುರ್ಬಲ ಕಣಕಾಲುಗಳ ಸಮಸ್ಯೆ ಎದುರಿಸಬಹುದು. ನಿಮ್ಮ ಕಾಲುಗಳಲ್ಲಿ ಉಬ್ಬಿರುವ ರಕ್ತನಾಳಗಳ ವೇರಿಕೋಸ್ ವೇನ್ಸ್ ಸಮಸ್ಯೆ ಉಂಟಾಗಬಹುದು. ಒಂದು ವಯಸ್ಸಿನ ನಂತರ ನಿಯಮಿತ ಚೆಕಪ್ ಬೇಕಾದೀತು.
ಮೀನ ರಾಶಿ (pisces)
ಸಮಸ್ಯೆ: ನರಮಂಡಲ, ಪಾದಗಳು, ಥಾಲಮಸ್
ಸೂಕ್ಷ್ಮ ಮೀನ ರಾಶಿಯವರು ಆಗಾಗ ಅನಾರೋಗ್ಯದಿಂದ ಬಳಲುತ್ತಿದ್ದರೆ ಅದಕ್ಕೆ ಕಾರಣ ಇವರು ಸಾಮಾನ್ಯವಾಗಿ ದುರ್ಬಲ ರೋಗ ಪ್ರತಿರೋಧ ವ್ಯವಸ್ಥೆಯನ್ನು ಹೊಂದಿರುತ್ತಾರೆ. ನೀವು ಮೀನ ರಾಶಿಯವರಾಗಿದ್ದರೆ ಆಗಾಗ ಶೀತ ಜ್ವರದಿಂದ ಬಳಲಬಹುದು. ಆಗಾಗ ನರಗಳು ಜೋಮು ಹಿಡಿದಂತೆ ಆಗಬಹುದು. ನರಗಳನ್ನು ಶಾಂತಪಡಿಸುವ ಧ್ಯಾನ ಮುಂತಾದವುಗಳನ್ನು ನೀವು ಮಾಡುತ್ತಿದ್ದರೆ ಆರೋಗ್ಯವಾಗಿರುತ್ತೀರಿ.
ಈ ಏಳು ಜನ್ಮರಾಶಿಯವರು ಭಯಂಕರ ಕ್ರೇಜಿಗಳು!