Asianet Suvarna News Asianet Suvarna News

ನಿಮ್ಮ ಸಂಗಾತಿ ರಾಶಿಯಾ ಇದು? ಅವರಿಗೆ ಭಾವನೆಯೇ ಇರೋಲ್ಲ ಬಿಡಿ!

ಸಂಬಂಧದಲ್ಲಿ ಆಳವಾದ ಸಾಂಗತ್ಯ ಬೇಕೆಂದು ಬಹಳಷ್ಟು ಜನರಿಗೆ ಅನಿಸದೇ ಇರಬಹುದು. ಇದಕ್ಕೆ ಅವರವರ ಜನ್ಮ ರಾಶಿಗಳು ಕಾರಣ. ಈ ನಾಲ್ಕು ರಾಶಿಗಳ ಜನರಿಗೆ ಸಾಮಾನ್ಯ ಹಗುರ ಸಂಬಂಧ ಹೊಂದುವುದೆಂದರೆ ಇಷ್ಟ.

 
 

These zodiac sign people do not have deep feeling with their partner
Author
Bangalore, First Published Jul 25, 2022, 1:32 PM IST

ಸ್ನೇಹ ಬಯಸುವ ಎಷ್ಟೋ ಜನರಿಗೆ ನೈಜವಾದ ಗಾಢ ಮತ್ತು ಆಳವಾದ ಬಾಂಧವ್ಯ ಬೇಕಾಗಿರುವುದಿಲ್ಲ. ಪುರುಷ ಮಹಿಳೆಯರ ಆಕರ್ಷಣೆ ಕೆಲವೊಮ್ಮೆ ಕೇವಲ ಸಾಮಾನ್ಯ ಡೇಟಿಂಗ್ ಗೆ ಸೀಮಿತವಾಗಿರುತ್ತದೆ. ಯಾರಾದರೂ ಸ್ನೇಹ ಬಯಸಿದಾಗ ಅನುಮಾನ ಮೂಡುವುದು, ಗೊಂದಲ ಕಾಡುವುದು ಇದಕ್ಕಾಗಿಯೇ ಆಗಿರುತ್ತದೆ. ನಮ್ಮ ಬಗ್ಗೆ ಆಸಕ್ತಿ ತೋರುತ್ತಿರುವ ವ್ಯಕ್ತಿಗೆ ನಿಜವಾದ ಸಂಬಂಧವೊಂದು ಬೇಕಾಗಿದೆಯೇ ಅಥವಾ ಸುಮ್ಮನೆ ಹೀಗೆ ಡೇಟಿಂಗ್ ಮಾಡಲು ಇಚ್ಛಿಸುತ್ತಿದ್ದಾರೆಯೇ ಎನ್ನುವುದು ಅರ್ಥವಾಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದಾದರೆ ಅವರ ಜನ್ಮ ರಾಶಿ ಯಾವುದು ಎಂದು ತಿಳಿದುಕೊಳ್ಳಿ. ಅಚ್ಚರಿ ಆಗುತ್ತಿದೆಯೇ? ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಅಥವಾ ಸುಮ್ಮನೆ ಕ್ಯಾಷುವಲ್ ಸಂಬಂಧ ಹೊಂದುವ ಮನೋಭಾವ ಆಯಾ ರಾಶಿಗಳ ಮೇಲೆ ಅವಲಂಬಿತವಾಗುತ್ತದೆ. ಹೀಗಾಗಿ, ಯಾರಾದರೂ ನಿಮ್ಮ ಸ್ನೇಹ ಬಯಸಿ ಬಂದಾಗ ಅವರ ರಾಶಿಯನ್ನು ಅರಿತುಕೊಂಡರೆ ನಿಮಗೆ ಸಹಕಾರಿ ಆಗಬಲ್ಲದು. ಅವರ ಸಂಬಂಧವನ್ನು ಮುಂದುವರಿಸಬೇಕೇ ಬೇಡವೇ ಎಂದು ನಿರ್ಧಾರ ಕೈಗೊಳ್ಳಲು ಸಹ ಅನುಕೂಲವಾಗಬಲ್ಲದು. ಸಂಗಾತಿ ಜತೆಗೆ ನೈಜವಾದ ಸಾಂಗತ್ಯ ಹೊಂದಬೇಕು ಎನ್ನುವುದು ಕೆಲವರ ಆಶಯವಾಗಿರುತ್ತದೆ. ಅಂಥವರು ಈ ರಾಶಿಗಳ ಜನರೊಂದಿಗೆ ಸಂಬಂಧ ಹೊಂದುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ. ಹಾಗೆಂದು ಇವರು ಅಪಾಯಕಾರಿ ಅಲ್ಲ. ಆದರೆ, ಸ್ವಭಾವ ಸಿದ್ಧವಾಗಿ ಅತ್ಯುತ್ತಮ ಬಾಂಧವ್ಯ ಹೊಂದಲು ಇವರಿಗೆ ಕಷ್ಟವಾಗುತ್ತದೆ ಅಷ್ಟೆ.    

ಸಂಬಂಧ (Relationship) ಎನ್ನುವುದು ಕೇವಲ ದೈಹಿಕ (Physical) ಮಟ್ಟಕ್ಕೆ ಸೀಮಿತವಾಗಿ ಇರುವುದಿಲ್ಲ. ಆದರೂ ಅವರವರ ಮನೋಭಾವಕ್ಕೆ ಇದು ಸಂಬಂಧಿಸಿರುತ್ತದೆ ಎನ್ನುವುದು ಸುಳ್ಳಲ್ಲ. ಕೆಲವು ರಾಶಿಗಳ (Zodiac Sign) ಜನರು ಆಳವಾದ ಸಂಬಂಧ ಹೊಂದುವ ಬದಲು ತತ್ಕಾಲೀನ ಸ್ನೇಹ ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ತೀವ್ರವಾದ ಬಂಧ ಹೊಂದುವುದನ್ನು ಅವಾಯ್ಡ್ (Avoid) ಮಾಡುತ್ತಾರೆ. ಅಂತಹ ನಾಲ್ಕು ರಾಶಿಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುತಿಸಲಾಗಿದೆ. ಅವು ಯಾವುದೆಂದು ನೋಡಿಕೊಳ್ಳಿ.

ಮಳೆಗಾಲವನ್ನು ಇಷ್ಟಪಡೋ ರಾಶಿಗಳಿವು

·       ಧನು (Sagittarius)
ಧನು ರಾಶಿಯವರು ಜೀವನದ ಎಲ್ಲ ಹಂತದಲ್ಲೂ ಸಾಹಸಮಯ (Adventure) ಚಟುವಟಿಕೆಗಳನ್ನು ಇಷ್ಟಪಡುತ್ತಾರೆ. ಮುಕ್ತ ಮನಸ್ಸನ್ನು (Open Mind) ಹೊಂದಿರುವ ಇವರು ಸಹಜ ಸಾಮಾನ್ಯ ಸಂಬಂಧವನ್ನಷ್ಟೇ ಹೊಂದಲು ಬಯಸುತ್ತಾರೆ. ಆಳವಾದ ಬಂಧ ಹೊಂದುವುದು ಇವರಿಗೆ ಸರಿಹೊಂದುವುದಿಲ್ಲ. ಅಗ್ನಿ (Fire) ತತ್ವದ ಧನು ರಾಶಿಯವರು ಮೋಹ (Passion) ಮತ್ತು ವಿನೋದದ ಸ್ವಭಾವ ಹೊಂದಿರುತ್ತಾರೆ. ಪ್ರವಾಸವನ್ನು ಪ್ರೀತಿಸುವ ಜತೆಗೆ, ತಮಗೆ ಇಷ್ಟವಾಗುವವರೊಂದಿಗೆ ಸಂಬಂಧ ಬೆಳೆಸುತ್ತಾರೆ. ಹಾಗೆಂದು ಅದು ತೀವ್ರ ಆಳವಾಗಿರುವುದಿಲ್ಲ. ತಮ್ಮ ಸ್ವಾತಂತ್ರ್ಯ (Freedom) ನಿರ್ಬಂಧಿಸುವ ಸಂಗಾತಿಯಿಂದ (Partner) ದೂರವಿರುತ್ತಾರೆ.

·       ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರಿಗೆ ಯಾರೊಂದಿದೂ ಆಳವಾದ ಸಾಂಗತ್ಯ ಹೊಂದುವ ಮನೋಭಾವ ಇರುವುದಿಲ್ಲ. ಅವರಿಗೆ ಲೈಂಗಿಕ (Sex) ಕ್ರಿಯೆ ಎಂದರೆ ಕೇವಲ ದೈಹಿಕ ಅಗತ್ಯವಷ್ಟೇ ಆಗಿರುತ್ತದೆ. ಭಾವನಾತ್ಮಕ (Emotional) ಬಂಧ ಹೊಂದಿರುವುದು ಕಡಿಮೆ. ಸಂಗಾತಿಯಿಂದ ಲೈಂಗಿಕ ತೃಪ್ತಿ ಸಿಗದಿದ್ದರೆ ಬೇಸರ ಮಾಡಿಕೊಳ್ಳುತ್ತಾರೆ.

ಈ ರಾಶಿಯವರಿಗೆ ಮದುವೆಯಾದರೂ ಎಕ್ಸ್ ಬಗ್ಗೆಯೇ ಚಿಂತೆ

·       ಮೇಷ (Aries)
ಪ್ರೀತಿ (Love) ಮತ್ತು ಸಂಬಂಧದ ವಿಚಾರಕ್ಕೆ ಬಂದರೆ ಮೇಷ ರಾಶಿಯವರು ತೀವ್ರವಾದ ಸಾಂಗತ್ಯ ಹೊಂದಲು ಬಯಸುವುದಿಲ್ಲ. ಭಾವನಾತ್ಮಕ ಸಾಂಗತ್ಯ ಅವರ ಆದ್ಯತೆಯಲ್ಲ. ತೀವ್ರವಾದ ಲೈಂಗಿಕ ಬಯಕೆ  ಹೊಂದಿರುತ್ತಾರೆ. ತಮ್ಮ ಬಯಕೆಯನ್ನು ತೀರಿಸಿಕೊಳ್ಳುವುದು ಇವರ ಆದ್ಯತೆಯಾಗಿರುತ್ತದೆ. ಇವರು ಅತ್ಯುತ್ತಮ ಲವರ್ (Lover) ಆಗಬಹುದೇ ಹೊರತು ಆಳವಾದ ವಾತ್ಸಲ್ಯ ಹೊಂದಿರುವುದಿಲ್ಲ.

·       ವೃಷಭ (Taurus)
ವೃಷಭ ರಾಶಿಯವರು ಲೈಂಗಿಕ ಸಂಬಂಧವನ್ನಷ್ಟೇ ಹೊಂದಲು ಬಯಸುತ್ತಾರೆ. ಸಂಬಂಧದಲ್ಲಿ ತಮ್ಮ ಬಯಕೆಯನ್ನು ಮಾತ್ರವೇ ತೀರಿಸಿಕೊಳ್ಳಲು ಇಷ್ಟಪಡುತ್ತಾರೆ. ಬದಲಿಗೆ ಪ್ರೀತಿ ನೀಡುವ ಕುರಿತು ವಿಚಾರ ಮಾಡುವುದಿಲ್ಲ. ವೃಷಭ ರಾಶಿಯವರು ಹೊಸ ಹೊಸ ವಿಚಾರಗಳ ಆವಿಷ್ಕಾರ ಮಾಡಲು ಇಷ್ಟಪಡುತ್ತಾರೆ. ಸಾಮಾನ್ಯ ಸಂಬಂಧವನ್ನಷ್ಟೇ (Casual Dating) ಹೊಂದಲು ಬಯಸುತ್ತಾರೆ.

Follow Us:
Download App:
  • android
  • ios