ಈ ಏಳು ಜನ್ಮರಾಶಿಯವರು ಭಯಂಕರ ಕ್ರೇಜಿಗಳು!

ಈ ಏಳು ರಾಶಿಯವರು ಲೈಫಿನಲ್ಲಿ ಭಿನ್ನವಾಗಿ ಬದುಕುತ್ತಾರೆ. ಅವರ ಲೈಫ್‌ಸ್ಟೈಲೇ ಬೇರೆ. ಸಖತ್ ಕ್ರೇಜಿ ಅಂತ ಎಲ್ಲರಿಂದ ಕರೆಸಿಕೊಳ್ಳೋ ಈ ಏಳು ರಾಶಿಯಲ್ಲಿ ನಿಮ್ಮ ರಾಶಿಯೂ ಇದೆಯಾ, ಒಮ್ಮೆ ಚೆಕ್‌ ಮಾಡಿಕೊಳ್ಳಿ.

7 Zodiac signs are very crazy know their personality traits

ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರು ಜಾಣ, ವಿನೋದ, ಚಮತ್ಕಾರಿ ವ್ಯಕ್ತಿಗಳಾಗಿರುವಂತೆಯೇ ಕ್ರೇಜಿ ವ್ಯಕ್ತಿಗಳೂ ಆಗಿರುತ್ತಾರೆ. ಈ ಜನರು ಯಾವ ಕ್ಷಣದಲ್ಲಿ ಏನು ಮಾಡಬಹುದು ಎಂಬುದನ್ನು ಅವರು ಮಾತ್ರವೇ ಹೇಳಬಹುದು. ಅವರ ಬಗ್ಗೆ ಯಾರೂ ಏನನೂ ಹೇಳಲು ಸಾಧ್ಯವೇ ಇಲ. ಈ ಕ್ಷಣ ಬೆಂಗಳೂರಿನಲ್ಲಿದ್ದರೆ ನಾಳೆ ಕನ್ಯಾಕುಮಾರಿಯಲ್ಲಿ ಇರಬಹುದು. ಇಂದು ಸರ್ಕಾರಿ ಕೆಲಸದಲ್ಲಿದ್ದರೆ ನಾಳೆ ಅದನ್ನು ತೊರೆದು ಕೃಷಿಗೆ ಹೋಗಬಹುದು. ಇವರು ಅಸಾಮಾನ್ಯ ಚಿಂತನೆಯನ್ನು ಹೊಂದಿರುತ್ತಾರೆ. ವಿಭಿನ್ನ ರೀತಿಯ ಪ್ರತಿಭೆಯನ್ನು ಹೊಂದಿರುತ್ತಾರೆ. ಮನಸ್ಸಿಗೆ ಬಂದದ್ದನ್ನು ಥಟ್ಟನೆ ಮಾಡಲು ಹೊರಡುವ ಇವರ ಲೈಫಿನಲ್ಲಿ ಪ್ಲಾನ್ ಪ್ರಕಾರ ನಡೆಯೋದು ಕಡಿಮೆ. ಪ್ರತೀ ಕ್ಷಣವನ್ನೂ ಜೀವಿಸುವ ಆ ಕಾರಣಕ್ಕೇ ಜೀವನಪರ್ಯಂತ ಎಲ್ಲರಿಗಿಂತ ವಿಭಿನ್ನವಾಗಿ ಬದುಕುವ ರಾಶಿಯವರಿವರು. ಇವರ ಒಡನಾಟ, ಸ್ನೇಹ ಕೆಲವರಿಗೆ ಸಮಸ್ಯೆ ಆಗಬಹುದು. ಇನ್ನೂ ಕೆಲವರ ಬದುಕು ಇವರಿಂದ ಬದಲಾಗಬಹುದು. ಅಂಥ ರಾಶಿಗಳು ಯಾರು ಅಂತ ಇಲ್ಲಿ ನೋಡೋಣ ಬನ್ನಿ...

ಕುಂಭ ರಾಶಿ
ಕುಂಭ ರಾಶಿ( Aquarius) ಯಲ್ಲಿ ಜನಿಸಿದವರು ಬರೀ ಒಂದು ಚಡ್ಡಿ ಮತ್ತು ಹ್ಯಾಟ್‌ ಧರಿಸಿಕೊಂಡು ಪ್ರತಿಷ್ಠಿತ ಪಾರ್ಟಿಗೆ ಬರಬಲ್ಲರು. ಇತರರು ಏನು ಯೋಚಿಸುತ್ತಾರೆ ಎಂಬುದನ್ನು ಲೆಕ್ಕಿಸಲಾರರು. ಜ್ಯೋತಿಷ್ಯದ ಪ್ರಕಾರ ಇವರು ಕ್ರೇಜಿಯೆಸ್ಟ್(Craziest) ಜನ್ಮರಾಶಿಯವರು. ಶನಿಯು ಕುಂಭ ರಾಶಿಯನ್ನು ಆಳುತ್ತಾನೆ. ಹೀಗಾಗಿ ಇವರ ಪ್ರಾಥಮಿಕ ಬಯಕೆಯೆಂದರೆ ಪ್ರತ್ಯೇಕತೆ, ಭಿನ್ನತೆ, ಸ್ವಂತಿಕೆ ಕಾಯ್ದುಕೊಳ್ಳುವುದು. ಯಥಾಸ್ಥಿತಿಯನ್ನು ಧಿಕ್ಕರಿಸುವುದು. ಕುಂಭ ರಾಶಿಯವರು ತಮ್ಮ ಗೆಳೆಯರ ನಡವಳಿಕೆ ಬಗ್ಗೆ ಅತೃಪ್ತಿ ಹೊಂದಿರುತ್ತಾರೆ. ಇವರ ಮೋಡಿ ಸಾಮಾನ್ಯವಲ್ಲ. ಇವರ ತೀಕ್ಷ್ಣವಾದ ಬುದ್ಧಿವಂತಿಕೆ ಇವರನ್ನು ಹೆಚ್ಚು ಸೃಜನಶೀಲರನ್ನಾಗಿ ಮಾಡುತ್ತದೆ. ಇವರು ಹೊಸ ಆಲೋಚನೆಗಳೊಂದಿಗೆ ಮುಂದೆ ಬರುತ್ತಾರೆ.

ಮಿಥುನ ರಾಶಿ
ಭಾವನೆಗಳು ಮತ್ತು ಬುದ್ಧಿಶಕ್ತಿಯ ನಡುವಿನ ಎಂದಿಗೂ ಮುಗಿಯದ ಆಂತರಿಕ ಸಂಘರ್ಷದಿಂದಾಗಿ ಮಿಥುನದವರು ವಿಲಕ್ಷಣವಾದ ರಾಶಿಚಕ್ರದ ಚಿಹ್ನೆಗಳವರಾಗಿದ್ದಾರೆ. ಇವರ ಮೆದುಳು ಯಾವತ್ತೂ ಹಿಂದಕ್ಕೆ ಮತ್ತು ಮುಂದಕ್ಕೆ ಜೀಕುತ್ತಾ ಇರುತ್ತದೆ. ಇವರ ಅನಿಯಮಿತ ಭಾವನೆಗಳನ್ನು ಚಾನೆಲ್ ಮಾಡಲು ಕಷ್ಟವಾಗಬಹುದು. ಮಿಥುನ ರಾಶಿಯ ಪುರುಷರು ಮತ್ತು ಮಹಿಳೆಯರು ದಿನನಿತ್ಯದ ಅನೇಕ ಮನಸ್ಥಿತಿ ಬದಲಾವಣೆಗಳು ಮತ್ತು ಕೋಪೋದ್ರೇಕಗಳನ್ನು ಅನುಭವಿಸಬಹುದು. ಇವರು ನಿಮ್ಮೊಂದಿಗೆ ಸಂಭಾಷಣೆಯನ್ನು ಆನಂದಿಸುತ್ತಾರೆ, ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಕೆಲವೊಮ್ಮೆ ಅಸಾಮಾನ್ಯ ವಿಷಯಗಳ ಬಗ್ಗೆ ಚರ್ಚಿಸುತ್ತಾರೆ. ಕೆಲವೊಮ್ಮ ವಿಚಿತ್ರ ವೇಷ ಹಾಕಿಕೊಳ್ಳಬಹುದು. ಇವರು ಒಂದೇ ದಿನಚರಿಗೆ ಅಂಟಿಕೊಳ್ಳುವುದು ಅಸಾಧ್ಯ. ಅತ್ಯಂತ ಲಘುವಾದ ರೀತಿಯ, ಹುಚ್ಚುತನವೆಂಬಂಥ ವರ್ತನೆಗಳನ್ನು ಯೋಜಿಸುತ್ತಾರೆ. ಇವರು ತುಂಬಾ ನಗುವುದನ್ನು ನೀವು ನೋಡುತ್ತೀರಿ.

ಆಗಸ್ಟ್‌ನಲ್ಲಿ ಈ ರಾಶಿಗಳ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ..

ಮೇಷ (Aeris) ರಾಶಿ
ಮೇಷ ರಾಶಿಯು ಪ್ರಚೋದಕ ಮನೋಧರ್ಮದ ರಾಶಿಚಕ್ರ ಚಿಹ್ನೆ. ಅವರು ಬೇಸರವನ್ನು ತಿರಸ್ಕರಿಸುತ್ತಾರೆ ಮತ್ತು ಹೊಸ ಉತ್ತೇಜಕ ಸಂಗತಿಗಳನ್ನು ಯಾವಾಗಲೂ ಹುಡುಕುತ್ತಿರುತ್ತಾರೆ. ಕೆಲವೊಮ್ಮೆ ಅತಿರೇಕವಾಗಿ ಯೋಜನೆಗಳನ್ನು ಗುರಿಹಾಕಿಕೊಳ್ಳುತ್ತಾರೆ. ಕೆಲವು ಕ್ರೇಜಿ ಸ್ಥಳಗಳಿಗೆ ಭೇಟಿ ನೀಡಲು ಅವರು ರಾಷ್ಟ್ರದಾದ್ಯಂತ ಓಡಾಡಬಹುದು. ಅವರು ಕ್ವಿಕ್‌(Quick) ಆಗಿ ಆಯ್ಕೆಯನ್ನು ಮಾಡುತ್ತಾರೆ ಮತ್ತು ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತರುತ್ತಾರೆ. ಹೆಚ್ಚಿನ ಮೇಷ ರಾಶಿಯ ಪುರುಷರು ಮತ್ತು ಮಹಿಳೆಯರ ಫ್ಯೂಸ್ ಬಹಳ ಬೇಗನೆ ಹೋಗುತ್ತದೆ. ಕಿರಿಕಿರಿ ಸಹ ಅನುಭವಿಸಬಹುದು. ಅವರು ಕೋಪಗೊಂಡರೆ ಅವರ ಹತ್ತಿರ ಬೆಲೆಬಾಳುವ ಯಾವುದೇ ವಸ್ತು ಬಿಡಬಾರದು. ಕೋಪಗೊಂಡಾಗ ಸ್ವಯಂ ನಿಯಂತ್ರಣ ಹೊಂದಿರುವುದಿಲ್ಲ. ತಾವು ಮೊದಲ ವಸ್ತುವನ್ನು ಹಾಳುಮಾಡುತ್ತಾರೆ. ಆದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಮರೆತುಬಿಡುತ್ತಾರೆ. ಅವರ ಧ್ಯೇಯವಾಕ್ಯವೆಂದರೆ - ಮೊದಲು ಕೆಲಸ ಮಾಡಿ, ನಂತರ ಯೋಚಿಸಿ.

ವೃಶ್ಚಿಕ ರಾಶಿ
ಇವರು ತಂಪಾದ, ಶಾಂತ ಮನೋಭಾವದವರಂತೆ ಮೊದಲಿಗೆ ಕಾಣಬಹುದು. ಆದರೆ ಇವರು ಬಹಳಷ್ಟು ಅಭದ್ರತೆ ಹೊಂದಿರುತ್ತಾರೆ. ಇತರರ ಅಭಿಪ್ರಾಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆದರೆ ನೀವು ವೃಶ್ಚಿಕ ರಾಶಿಯವರನ್ನು ಪ್ರಚೋದಿಸಿದರೆ ಎಚ್ಚರಿಕೆ ವಹಿಸಿ. ಅವರನ್ನು ಭಾವನಾತ್ಮಕವಾಗಿ ನೋಯಿಸುವ ಯಾರನ್ನಾದರೂ ನಾಶಮಾಡಲು ಅವರು ಯಾವಾಗಲೂ ಸಿದ್ಧ. ವೃಶ್ಚಿಕ ರಾಶಿಯವರು ತಮ್ಮ ಕಣ್ಣಿನ ಕೋಪಕ್ಕೆ ಹೆಸರುವಾಸಿ. ಇವರ ಕಪ್ಪು ಮತ್ತು ಬಿಳಿ ಚಿಂತನೆಯು ಈ ವಿಪರೀತಗಳಿಗೆ ಕಾರಣವಾಗುತ್ತದೆ. ಅವರ ಮನಸ್ಸು ಯಾವುದೋ ಒಂದು ವಿಷಯದ ಮೇಲೆ ಸ್ಥಿರವಾಗಿರುತ್ತದೆ. ಹೀಗಾಗಿ ಅವರು ಲಾಜಿಕ್‌(Logic) ಕಳೆದುಕೊಳ್ಳುತ್ತಾರೆ. ಇದಲ್ಲದೆ, ಅಸೂಯೆ ಕ್ರೋಧದ ವಿಷಕಾರಿ ಜ್ವಾಲೆಯಿಂದ ವೃಶ್ಚಿಕರು ಸುಲಭವಾಗಿ ಪ್ರಚೋದನೆಗೆ ಒಳಗಾಗುತ್ತದೆ.

ಧನು ರಾಶಿ
ಧನು ರಾಶಿಗಳಿಗೆ ಮುಕ್ತ ಜೀವನ ಹೇಗೆ ನಡೆಸಬೇಕೆಂದು ತಿಳಿದಿದೆ. ನೀವು ಖಂಡಿತವಾಗಿಯೂ ಅವರೊಂದಿಗೆ ಕೆಲವು ವಿಲಕ್ಷಣ ಸಾಹಸಗಳನ್ನು ಮಾಡಬಹುದು. ಅವರನ್ನು ತಡೆಯಬೇಡಿ. ಏಕೆಂದರೆ ಅವರು ಕೆರಳಿದರೆ ತಕ್ಷಣವೇ ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಧನು ರಾಶಿಯವರು ಪಾರ್ಟಿ ಪ್ರಾಣಿಗಳು. ಅತ್ಯಂತ ಗುಂಪುಗಾರಿಕೆ ವ್ಯಕ್ತಿಯಾಗಿರಬಹುದು. ಅವರು ತಮ್ಮ ಕ್ರೇಜಿ ಸ್ಟಂಟ್‌ಗಳಿಗೆ ಜನರನ್ನು ಹುಡುಕುತ್ತಾರೆ. ಹೆಚ್ಚಿನ ಜನರನ್ನು ಮೋಜಿಗೆ ಸೇರಲು ಪ್ರಚೋದಿಸುತ್ತಾರೆ. ಎಲ್ಲಾ ಸಮಯದಲ್ಲೂ ಗಮನ ಕೇಂದ್ರೀಕರಿಸುತ್ತಾರೆ.

37 ವರ್ಷಗಳ ಬಳಿಕ ಅಂಗಾರಕ ಯೋಗ; ಈ ರಾಶಿಗಳಿಗೆ 15 ದಿನ ಕಷ್ಟ ಕಷ್ಟ..

ಸಿಂಹ ರಾಶಿ
ಸಿಂಹ(Leo) ರಾಶಿಯವರು ಸದಾ ಉತ್ಸಾಹಭರಿತರು ಮತ್ತು ನಾಟಕೀಯ ವರ್ತನೆಯವರು. ಸಿಂಹ ರಾಶಿಯವರು ಎಲ್ಲರ ಗಮನ ಸೆಳೆಯುವುದನ್ನು ಆನಂದಿಸುತ್ತಾರೆ. ಜನಸಂದಣಿಯಲ್ಲಿ ಎದ್ದು ಕಾಣುವಂತೆ ಬೋಲ್ಡ್ ಆಗಿ ವರ್ತಿಸುತ್ತಾರೆ. ಇವರ ಹುಚ್ಚುತನ ಗಮನಕ್ಕಾಗಿ ಅವರ ನಿರಂತರ ಸ್ಪರ್ಧೆಯಿಂದ ಉಂಟಾಗುತ್ತದೆ. ಎಷ್ಟೇ ಅತ್ಯಲ್ಪವಾಗಿದ್ದರೂ ಅವರು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಶ್ಲಾಘಿಸಬೇಕೆಂದು ಅವರು ಬಯಸುತ್ತಾರೆ. ಇವರು ಹೆಚ್ಚಾಗಿ ತಮ್ಮ ಮಿನುಗುವ ಬಟ್ಟೆಗಳು ಮತ್ತು ಅತಿರಂಜಿತ ಆಭರಣಗಳು ಮತ್ತು ಪರಿಕರಗಳಿಂದ ಗುರುತಿಸಿಕೊಳ್ಳಬಹುದು. ಅವರ ಡ್ರೆಸ್ಸಿಂಗ್ ಸೆನ್ಸ್ ಮತ್ತು ಅಸಾಮಾನ್ಯ ದೃಷ್ಟಿಕೋನವು ಅವರು ಹೊಂದಿರುವ ಹುಚ್ಚುತನವನ್ನು ಕಾಣಿಸುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಕ್ರೇಜಿತನವನ್ನು ಧಿಕ್ಕರಿಸಿದರೂ ತಾವೇ ಸ್ವತಃ ಕ್ರೇಜಿಗಳು ಎಂಬುದು ಅವರಿಗೆ ಗೊತ್ತಿರುವುದಿಲ್ಲ. ಕನ್ಯಾ ರಾಶಿಯವರು ತಮ್ಮ ಜೀವನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದುವ ಬಯಕೆ ಹೊಂದಿರುತ್ತಾರೆ. ಈವರು ಪರಿಪೂರ್ಣತಾವಾದಿಗಳು. ವಿಷಯಗಳು ಹೇಗಿರಬೇಕು ಎಂಬುದರ ಕುರಿತು ಪೂರ್ವಕಲ್ಪಿತ ಊಹೆಗಳ ಸಮೃದ್ಧವಾಗಿರುತ್ತವೆ. ಹೊರಗಿನಿಂದ ಇದು ವಿಚಿತ್ರವಾಗಿ ಕಾಣಿಸಬಹುದು. ಆದಾಗ್ಯೂ, ಆರೋಗ್ಯ ಇವರ ಕೀವರ್ಡ್. ಡಯಟ್‌ ವಿಚಾರದಲ್ಲಿ ಕ್ರೇಜಿಯಾಗಿ ವರ್ತಿಸುವುದನ್ನು ಕಾಣಬಹುದು.

Latest Videos
Follow Us:
Download App:
  • android
  • ios