ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, Pratap Simha ಕಿಡಿ

ಉಡುಪಿಯಲ್ಲಿ  ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ಮೈಸೂರು ಸಂಸದ ಪ್ರತಾಪಸಿಂಹ ದೇವನೂರು ಮಹಾದೇವ  ರಂತಹ ಹಿರಿಯ ಸಾಹಿತಿಗಳು ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿದ್ದಾರೆ ಎಂದಿದ್ದಾರೆ.

Mysuru MP Pratap simha statement about  textbook controversy gow

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.28): ದೇವನೂರು ಮಹಾದೇವ (Devanuru Mahadeva) ರಂತಹ ಹಿರಿಯ ಸಾಹಿತಿಗಳು ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದಾರೆ. ಉಡುಪಿಯಲ್ಲಿ (Udupi) ಪಠ್ಯಪುಸ್ತಕ ಪರಿಷ್ಕರಣೆ (Textbook Revision) ವಿಚಾರವಾಗಿ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ಅವರು,  ದೇವನೂರು ಮಹಾದೇವ 2014, 2019 ರಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ , ಪ್ರಚಾರ ಮಾಡಿದ್ದಾರೆ. ದೇವನೂರು ಕಾಂಗ್ರೆಸ್ ಪರ ನನ್ನ ವಿರುದ್ಧ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆ ಭಾಗದಲ್ಲಿ ಜನ ಏನು ತೀರ್ಪು ಕೊಟ್ಟಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ.

ದೇವನೂರು ಮಹಾದೇವ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಕುಸುಮಬಾಲೆ ಎಂಬ ಅದ್ಭುತ ಕೃತಿಯನ್ನು ಬರೆದವರು. ಕಾಂಗ್ರೆಸ್ ಪ್ರಚಾರ ಊಹಾಪೋಹಗಳನ್ನು ಬಿಟ್ಟು ಹಿಂದಿನ ಮಹಾದೇವರಾಗಿ ,ಮತ್ತೆ ಕೈಗೆತ್ತಿಕೊಂಡು ಒಂದು ಅದ್ಭುತ ಕೃತಿಯನ್ನು ರಚನೆ ಮಾಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.

HAVERIಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

ಇವರಿಗೆ ವಿಚಾರ ನಪುಂಸಕತೆ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರ ವಾಗಿ ಮಾತನಾಡಿದ ಸಂಸದ ಪ್ರತಾಪಸಿಂಹ, ಸಮಾಜ ಮತ್ತು ಕನ್ನಡ ಪಠ್ಯ ಪರಿಷ್ಕರಣೆ ಮಾಡಿದ್ದೇವೆ.ಡಿಕೆಶಿ, ಸಿದ್ದರಾಮಯ್ಯ ಇಲ್ಲದ ಸಲ್ಲದ ಊಹಾಪೋಹ ಸೃಷ್ಟಿ ಮಾಡಿದ್ದಾರೆ.ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಇಲ್ಲಸಲ್ಲದ ಊಹಾಪೋಹ ಸೃಷ್ಟಿ ಮಾಡಿ ಹಬ್ಬಿಸಿದ್ದಾರೆ.ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ  ರೋಹಿತ್ ಚಕ್ರತೀರ್ಥ ಬಹಿರಂಗ ಚರ್ಚೆ ಆಹ್ವಾನ ನೀಡಿದ್ದಾರೆ.ಖುಲ್ಲಂ ಖುಲ್ಲ ಚರ್ಚೆ ಮಾಡೋಣ ಎಂದು ಕರೆ ನೀಡಿದರೂ, ಚರ್ಚೆಯಿಂದ ಯಾಕೆ ಪಲಾಯನ ಮಾಡಿತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಅನುಮಾನ ಸೃಷ್ಟಿ ಮಾಡುವುದು, ಊಹಾಪೋಹ ಹಬ್ಬಿಸುವುದಷ್ಟೇ ಇವರ ಉದ್ದೇಶ.ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು.ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ ಇರೋದು. ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾಯಿತು, ಈಗ ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರ ರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.ವಿಚಾರ ನಪುಂಸಕತೆ ಇಲ್ಲದಿದ್ದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ ಎಂದು ಪಂಥಾಹ್ವಾನ ಮಾಡಿದರು.

ಸಚಿವ Ashwath Narayan ವಿರುದ್ಧ FIR ದಾಖಲು

ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಕ್ಕೆ ಸಾಕ್ಷ ತೋರಿಸಿ ಎಂದು ಸವಾಲೊಡ್ಡಿದ ಪ್ರತಾಪ ಸಿಂಹ,ನಾರಾಯಣ ಗುರು ಪಠ್ಯವನ್ನು ಸಮಾಜದಿಂದ ಕನ್ನಡ ಪಾಠಕ್ಕೆ ವರ್ಗಾಯಿಸಲಾಗಿದೆ.ಏಳನೇ ತರಗತಿಯ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ‌ ಎಂದು ಸಮಜಾಯಿಸಿ ನೀಡಿದರು.

ರೋಹಿತ್ ಚಕ್ರತೀರ್ಥ ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ನಾಡಗೀತೆಗೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ ಎಂಬ ಆರೋಪ ವಿಚಾರವನ್ನು ನಾನು ಕೂಡ ಗಮನಿಸಿದ್ದೇನೆ .ಅವರು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಫೇಸ್ಬುಕ್ನಲ್ಲಿ ಹಾಕಿದ್ದರು.  ನಾಡಗೀತೆಯನ್ನು ಯಾರೋ ವ್ಯಂಗ್ಯ ಮಾಡಿದ್ದರು, ಅದು ತಪ್ಪು.ಅದನ್ನು ರೋಹಿತ್ ಚಕ್ರತೀರ್ಥ ರಚನೆ ಮಾಡಿದ್ದಲ್ಲ.ಸಿದ್ದರಾಮಯ್ಯ ಸಿಎಂ ಆಗಿರುವಾಗ ಈ ಕುರಿತು ಕೇಸುದಾಖಲಾಗಿದೆ ಬಿ ರಿಪೋರ್ಟ್ ಆಗಿದೆ.ಅನಗತ್ಯವಾಗಿ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ.ಕುವೆಂಪು ಮೈಸೂರಿನಲ್ಲಿ ನೆಲೆ ಇದ್ದಂತಹವರು.  ನಾನು ಕುವೆಂಪು ಅಭಿಮಾನಿ ಅವರ ಮೇಲೆ ಅಪಾರ ಗೌರವವಿದೆ. ರೋಹಿತ್ ಚಕ್ರತೀರ್ಥ ಅವರನ್ನು ತುಳಿಯುವ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ.ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದರು.

ಆರ್ ಎಸ್ ಎಸ್ ಮೂಲ ಹುಡುಕುವ ಮೊದಲು ಸೋನಿಯಾಗಾಂಧಿಯ ಮೂಲ ಹುಡುಕಿ: ಸಿದ್ದರಾಮಯ್ಯ ಆರ್.ಎಸ್.ಎಸ್ ಮೂಲದ ಪ್ರಶ್ನಿಸಿರುವುದನ್ನು ಪ್ರತಾಪಸಿಂಹ ಖಾರವಾಗಿ ವಿರೋಧಿಸಿದ್ದಾರೆ.ಸಿದ್ದರಾಮಯ್ಯ ಜೆ.ಡಿ.ಎಸ್ ನಲ್ಲಿದ್ದಾಗ ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದರು.ಈಗ ಅವರದ್ದೇ ಪಕ್ಷಕ್ಕೆ ಹೋಗಿ ಮಹಾತಾಯಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಹಾತಾಯಿ, ಮಹಾನಾಯಕಿ ಎಂದು ಒಪ್ಪಿಕೊಳ್ಳುವ ದಯನೀಯ ಸ್ಥಿತಿಯಲ್ಲಿದ್ದಾರೆ.ನೀವೂ ಆರ್.ಎಸ್.ಎಸ್ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಿ.ಕರ್ನಾಟಕದ ಜನತೆಗೆ ಇದನ್ನು ಮೊದಲು ತಿಳಿಸಿ, ಆಮೇಲೆ ಬೇರೆಯವರ ಬಗ್ಗೆ ಪ್ರಶ್ನೆ ಮಾಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

Latest Videos
Follow Us:
Download App:
  • android
  • ios