Asianet Suvarna News Asianet Suvarna News

Chitradurga ಶಿರಡಿಯಲ್ಲಿ ಭಕ್ತರ ವೇಷದಲ್ಲಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಗಾಂಜಾ ಕಿಂಗ್ ಪಿನ್ , ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ಓರ್ವ ಭಕ್ತನಂತೆ ನಾಟಕವಾಡ್ತಿದ್ದ ಜಪಾನ್ ಸೀನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

chitradurga Ganja peddler arrested gow
Author
Bengaluru, First Published May 28, 2022, 4:09 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.28): ಕೋಟೆನಾಡಿನಲ್ಲಿ ಗಾಂಜಾ ಗಮ್ಮತ್ತಿನಿಂದಾಗಿ ಕಳೆದೊಂದು ವಾರದಿಂದ ಜನರು ಆತಂಕಕ್ಕೆ ಒಳಗಾಗಿದ್ರು. ಎಲ್ಲಿ ನಮ್ಮ‌ ಮಕ್ಕಳು ಶಾಲೆಗೆ (School) ಹೋದಾಗ ದುಷ್ಚಟಕ್ಕೆ ದಾಸರಾಗಿ ಬಲಿಯಾಗ್ತಾರೋ ಎಂದು ಪೋಷಕರು ಭಯ ಪಡ್ತಿದ್ರು. ಆದ್ರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್ ಆಗಿರೋದಕ್ಕೆ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.  

ಕಳೆದೊಂದು ವಾರದಿಂದಲೂ ಚಿತ್ರದುರ್ಗ (Chitradurga) ಜಿಲ್ಲೆಯಾದ್ಯಂತ ಬರೀ ಗಾಂಜಾದೆ ಸುದ್ದಿ. ಪ್ರತಿಷ್ಠಿತ ಕಾಲೇಜುಗಳಿಗೆ ಗಾಂಜಾ (Ganja) ಸಪ್ಲೆ ಆಗ್ತಿದೆ. ಅಲ್ಲಿರೋ ವಿಧ್ಯಾರ್ಥಿಗಳು ಹಾಳಾಗ್ತಿದ್ದಾರೆ ಹೀಗೆ ಹತ್ತು ಹಲವು ವಿಚಾರಗಳು ಹರಿದಾಡುತ್ತಲೇ ಇದ್ದವು. ಈ ಕುರಿತು ಕೋಟೆನಾಡಿನ ಪೊಲೀಸರು ಗಾಂಜಾ ಮಾರುತ್ತಿದ್ದ ಇಬ್ಬರು ಹಾಗೂ ಸೇವನೆ ಮಾಡ್ತಿದ್ದ ಮೂವರನ್ನು ಹಿಡಿದು ತಂದು ಜೈಲಿಗಟ್ಟಿದ್ರು. ಅದಾದ ಬಳಿಕ ಆ ದಿನವೇ ಜಿಲ್ಲೆಯ ಗಾಂಜಾ ಕಿಂಗ್ ಪಿನ್ ಎಂದೇ ಹೆಸರುವಾಸಿಯಾಗಿದ್ದ ಸೀನ ಅಲಿಯಾಸ್ ಜಪಾನ್ ಸೀನ ಪೊಲೀಸರಿಗೆ ಚಳ್ಳಹಣ್ಣು ತಿನ್ನಿಸಿ ಪರಾರಿಯಾಗಿದ್ದ.

ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, PRATAP SIMHA ಕಿಡಿ

ಪೊಲೀಸರ ಕಣ್ಣೆದುರೇ ಆರೋಪಿ ಪರಾರಿ ಆಗಿದ್ದಕ್ಕೆ, ಸ್ಥಳೀಯರು ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೇ ಚಾಲೆಂಜಿಗ್ ಆಗಿ ತೆಗೆದುಕೊಂಡ ಎಸ್ಪಿ ಕೂಡಲೇ ಕರ್ತವ್ಯ ಲೋಪ ಎಸಗಿದ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿದ್ದರು. ಅದಾದ ಬಳಿಕ ಶೀಘ್ರವೇ ಗಾಂಜಾ ಕಿಂಗ್ ಪಿನ್ ಜಪಾನ್ ಸೀನ ನನ್ನು ಬಂಧಿಸಲಿಕ್ಕೆಂದು ಸ್ಪೆಷಲ್‌ ಟೀಂ ಒಂದನ್ನು ರೆಡಿ ಮಾಡಿದರು.

ಕೂಡಲೇ ಕಾರ್ಯಾಚರಣೆ ಶುರು ಮಾಡಿದ ಪೊಲೀಸ್ ತಂಡದ  ಪರಿಣಾಮವಾಗಿ ಶಿರಡಿಯ ಸಾಯಿಬಾಬಾ ಮಂದಿರದಲ್ಲಿ ಓರ್ವ ಭಕ್ತನಂತೆ ನಾಟಕವಾಡ್ತಿದ್ದ ಜಪಾನ್ ಸೀನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈತ ತಲೆಮರೆಸಿಕೊಳ್ಳೋದಕ್ಕೆ ಅತನ‌ ಮಗ ದೊರೆಸ್ವಾಮಿಯೇ ಕಾರಣವಾಗಿದ್ದು, ಆತನ ಕೂಡಲ ಓರ್ವ ಗಾಂಜಾ ವ್ಯಾಪಾರಿ ಮತ್ತು ಗಾಂಜಾ ಸೇವಕ ನಾಗಿದ್ದು ತಲೆಮರೆಸಿಕೊಂಡಿದ್ದು ಕೂಡಲೇ ಅತನನ್ನು ಬಂಧಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

ಇನ್ನೂ ಜಿಲ್ಲಾ ಪೊಲೀಸರ ಈ ಮಹಾತ್ ಕಾರ್ಯಕ್ಕೆ ಇಡೀ ಜಿಲ್ಲೆಯ ಜನರು ಶಹಬ್ಬಾಶ್ ಹೇಳುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ. ಯಾಕೆಂದ್ರೆ ಜಿಲ್ಲೆಯಲ್ಲಿ ಹಲವಾರು ಪ್ರತಿಷ್ಠಿತ ಕಾಲೇಜುಗಳಿವೆ. ಅಲ್ಲಿಗೆ ಬೇರೆ ಬೇರೆ ರಾಜ್ಯಗಳಿಂದಲೂ ವಿಧ್ಯಾರ್ಥಿಗಳು ಬಂದು ವ್ಯಾಸಂಗ ಮಾಡ್ತಿದ್ದಾರೆ. ಆಂತವರಿಗೆ ಗಾಂಜಾ ಸಪ್ಲೆ ಮಾಡ್ತಿದ್ದರು ಎನ್ನಲಾಗ್ತಿದೆ. ಆದ್ರೆ‌ ಸದ್ಯ ಗಾಂಜಾ‌ ಕಿಂಗ್ ಪಿನ್ ಅಂದರ್ ಆಗಿದ್ದು ಎಲ್ಲರೂ ನೆಮ್ಮದಿಯಿಂದ‌ ಇರಲು ಕಾರಣವಾಗಿದೆ. 

Haveriಯಲ್ಲಿ ಹಾಲು ಕೊಡೋ ಗಂಡು‌ ಮೇಕೆ!

ಇದರ ಜೊತೆ ಜೊತೆಗೆ ಸದ್ಯ ಪೋಷಕರು ತಮ್ಮ ಮಕ್ಕಳನ್ನು ಶಾಲಾ‌ ಕಾಲೇಜುಗಳಿಗೆ ಕಳಿಸೋದಕ್ಕೂ ಭಯ ಪಡ್ತಿದ್ದಾರೆ. ಎಲ್ಲಿ ಮತ್ತೋರ್ವ ಗಾಂಜಾ ಮಾರಾಟ ಮಾಡೋರು ವಿಧ್ಯಾರ್ಥಿಗಳ ಭವಿಷ್ಯ ಹಾಳು ಮಾಡ್ತಾರೋ ಎಂಬ ಆತಂಕ ಪೋಷಕರಲ್ಲಿ ಮೂಡಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿರುವ ಎಲ್ಲಾ ಪ್ರತಿಷ್ಠಿತ ಕಾಲೇಜುಗಳ ಬಳಿ ಒಂದು ವಿಶೇಷ ಸ್ಕ್ಚಾಡ್ ಹಾಕಬೇಕು. ಜೊತೆಗೆ ಎಲ್ಲಾ ಕಾಲೇಜಿನಲ್ಲಿ ಪರಿಶೀಲನೆ ನಡೆಸಿ, ಇನ್ನಿತರ ಗಾಂಜಾ ಮಾರಾಟ ಮಾಡುವ ಆರೋಪಿಗಳು ಕಂಡು ಬಂದಲ್ಲಿ ಅಂತವರನ್ನು ಕೂಡಲೇ ಬಂಧಿಸಬೇಕು ಎಂದು ಪೋಷಕರು ಆಗ್ರಹಿಸಿದರು.

ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿರೋ ಕಾಲೇಜುಗಳಿಗೆ ಗಾಂಜಾ ಸಪ್ಲೆ ಆಗುತ್ತೆ ಅನ್ನೋದೆಲ್ಲಾ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರೋ ವಿಷಯ. ಇನ್ನಾದ್ರು ಪೊಲೀಸರು ಎಲ್ಲಾ‌ ಕಡೆಗಳಲ್ಲಿ ಸೂಕ್ತ ಗಮನಹರಿಸಿ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

Follow Us:
Download App:
  • android
  • ios