Chikkamagaluru; ಕೊಟ್ಟಿಗೆಗೆ ಬೆಂಕಿ, ಜಾನುವಾರುಗಳು ಸಜೀವ ದಹನ
- ದನದ ಕೊಟ್ಟಿಗೆಗೆ ಬೆಂಕಿ 2 ಹಸುಗಳ ಸಜೀವ ದಹನ
- ಕೊಪ್ಪ ತಾಲೂಕಿನ ಹಿರೇಕೊಡಿಗೆ ಶಿವಪುರದಲ್ಲಿ ಘಟನೆ
- ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿ
- ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರ ಭೇಟಿ
ವರದಿ : ಆಲ್ದೂರು ಕಿರಣ್ ಏಷ್ಯಾ ನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.28) : ಆ ಬಡ ಕುಟುಂಬಕ್ಕೆ ಎರಡು ಹಸುಗಳೇ (cows) ಆಧಾರ. ಕೂಲಿ ಕೆಲಸದ ಜೊತೆಗೆ ಹಸು ಸಾಕಣೆ ಮಾಡಿ ಅದರಿಂದ ಬರುವ ಆದಾಯದಲ್ಲಿ ಬಡ ಕುಟುಂಬ ಜೀವನ ನಡೆಸುತ್ತಿತ್ತು. ಆದ್ರೆ ಇಂದು ಬೆಳಿಗ್ಗೆ ಆಕಸ್ಮಿಕವಾಗಿ ದನ ಕೊಟ್ಟಿಗೆಗೆ ಬಿದ್ದ ಬೆಂಕಿ (fire) ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇಂತಹ ಮನುಕುಲ ಘಟನೆಗೆ ಸಾಕ್ಷಿ ಆಗಿರುವುದು ಚಿಕ್ಕಮಗಳೂರು (chikkamagaluru) ಜಿಲ್ಲೆಯ ಕೊಪ್ಪ (koppa) ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ.
ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿ
ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಆಕ್ಮಸಿಕ ಬೆಂಕಿ ಹೊತ್ತಿಕೊಂಡ ಎರಡು ಹಸುಗಳ ಸಜೀವ ದಹನ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಶಿವಪುರದಲ್ಲಿ ನಡೆದಿದೆ.ದನದ ಕೊಟ್ಟಿಗೆ ಬೆಂಕಿ ತಗುಲಿದ ಪರಿಣಾಮವಾಗಿ ಎರಡು ಹಸುಗಳು ಸಜೀವ ದಹನವಾಗಿದೆ. ಇಂದು ಬೆಳಿಗ್ಗೆ (ಶನಿವಾರ )ಶಿವಪುರ ಗ್ರಾಮದ ನಾಗೇಶ್ ಎಂಬುವವರ ಮನೆಯ ಹಿಂಬದಿಯಲ್ಲಿರುವ ಕೊಟ್ಟಿಗೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಬೆಂಕಿ ತಗುಲಿದೆ.
ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, PRATAP SIMHA ಕಿಡಿ
ಮನೆ ಹಿಂಭಾಗದ ಕೊಟ್ಟಿಗೆಯಲ್ಲಿ ಎರಡು ರಾಸುಗಳನ್ನ ಕಟ್ಟಿದ್ದರು. ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎರಡು ರಾಸುಗಳು ಸಜೀವ ದಹನವಾಗಿವೆ. ರಾಸುಗಳನ್ನ ಹಗ್ಗದಿಂದ ಕಟ್ಟಿ ಹಾಕಿದ್ದರಿಂದ ಅವು ತಪ್ಪಿಸಿಕೊಳ್ಳಲು ಸಾಧ್ಯವಾಗದೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಉಸಿರು ಚೆಲ್ಲಿವೆ. ಮನೆ ಮೇಲೆ ಹಾಗೂ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದರಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದಾಗ ಬೆಂಕಿ ತಗುಲಿರುವುದು ತಿಳಿದು ಬಂದಿದೆ. ಸ್ಥಳಿಯರು ರಾಸುಗಳನ್ನ ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ವೇಳೆಗಾಗಲೇ ರಾಸುಗಳು ಬೆಂಕಿಯಲ್ಲಿ ಬೆಂದು ಉಸಿರು ಚೆಲ್ಲಿದ್ದವು.
CHITRADURGA ಶಿರಡಿಯಲ್ಲಿ ಭಕ್ತರ ವೇಷದಲ್ಲಿದ್ದ ಗಾಂಜಾ ಕಿಂಗ್ ಪಿನ್ ಅರೆಸ್ಟ್
ಕುಟುಂಬಕ್ಕೆ ಜೀವನಾಧಾರವಾಗಿದ್ದ ರಾಸುಗಳು
ನಾಗೇಶ್ ಕೂಲಿ ಕೆಲಸ ಮಾಡಿಕೊಂಡು , ರಾಸುಗಳನ್ನು ಸಾಕಣೆ ಮಾಡುವ ಮೂಲಕ ಜೀವನ ನಡೆಸುತ್ತಿದ್ದರು. ನಾಗೇಶ್ ಕುಟುಂಬಕ್ಕೆ ರಾಸುಗಳೆಂದರೆ ಪಂಚಪ್ರಾಣ, ಹಾಲಿನ ಆದಾಯದ ಮೂಲ ಅವರ ಕುಟುಂಬಕ್ಕೆ ಜೀವನಾಧಾರವಾಗಿತ್ತು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ರಾಸುಗಳು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾಸುಗಳು ಮೃತಪಟ್ಟಿರುವುದು ನಾಗೇಶ್ ಕುಟುಂಬಕ್ಕೆ ಈಗ ದಿಕ್ಕುತೋಚದಂತಾಗಿದೆ.ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅಭಿಷೇಕ್, ಕೊಪ್ಪ ಪಿ.ಎಸ್.ಐ. ಶ್ರೀನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.