ಸಾಮುದ್ರಿಕಾ ಶಾಸ್ತ್ರದಲ್ಲಿ ಶರೀರದ ರಚನೆಯಿಂದಲೇ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ತಿಳಿಯಬಹುದು. ಬೇರೆ ಬೇರೆ ಅಂಗಗಳ ರಚನೆಯನ್ನು ನೋಡಿ ಅದರ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಇದರ ಬಗ್ಗೆ ಅನೇಕ ಅಧ್ಯಯನಗಳೂ ಸಹ ನಡೆದಿದೆ. ಯಾವುದೇ ವ್ಯಕ್ತಿಯ ಕಾಲಿನ ಬೆರಳುಗಳು ಮತ್ತು ಹೆಬ್ಬೆರಳು ನೋಡಿ ಭವಿಷ್ಯದ ಬಗ್ಗೆ ನಿರ್ಧರಿಸಬಹುದಾಗಿದ್ದು, ಇವರು ಹೀಗೇ ಆಗುತ್ತಾರೆ ಎಂಬುದನ್ನು ತಿಳಿಸಬಹುದು. ಅಲ್ಲದೆ, ವೃತ್ತಿಜೀವನ ಹೇಗಿರಲಿದೆ..? ಯಾವ ವಯಸ್ಸಿಗೆ ಯಶಸ್ಸನ್ನು ಗಳಿಸಬಹುದು..? ಹಣದ ವಿಷಯದಲ್ಲಿ ಅದೃಷ್ಟ ಹೇಗಿದೆ..? ಈ ರೀತಿ ಹಲವು ವಿಚಾರಗಳನ್ನು ಕಾಲ್ಬೆರಳುಗಳನ್ನು ನೋಡಿಯೇ ತಿಳಿಯಬಹುದು. ಹಾಗಾದರೆ ಕಾಲಿನ ಬೆರಳು ಹೇಗಿದ್ದರೆ ಅದೃಷ್ಟ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.

ಉದ್ದವಾದ ಹೆಬ್ಬೆರಳು
ಕಾಲುಬೆರಳುಗಳು ಒಂದೇ ಸಮನಾಗಿದ್ದು, ಹೆಬ್ಬೆರಳು ಉದ್ದವಾಗಿದೆ ಎಂದರೆ, ಅಂಥವರು ಕಲಾಪ್ರೇಮಿಯಾಗಿರುತ್ತಾರೆ. ಇವರ ಮಾತು ಬಹಳ ಮಧುರವಾಗಿರುತ್ತದೆ. ಇವರ ಮಾತುಗಳಿಂದ ಎಲ್ಲರೂ ಪ್ರಭಾವಿತರಾಗುತ್ತಾರೆ. ಅನುಸಂದಾನಗಳ ಕ್ಷೇತ್ರಗಳಲ್ಲಿ ಇವರು ಹೆಚ್ಚು ಹೆಸರುಗಳಿಸುತ್ತಾರೆ. ಹೆಬ್ಬೆರಳು ಉದ್ದವಾಗಿರುವುದಲ್ಲದೆ, ಮೇಲ್ಭಾಗದಲ್ಲಿ ದಪ್ಪವಾಗಿದ್ದರೆ ಹೆಚ್ಚು ದುಡ್ಡು ಗಳಿಸುತ್ತಾರೆಂದು ಅರ್ಥ. ಇವರು 36ರಿಂದ 42 ವರ್ಷ ವಯಸ್ಸಿನಲ್ಲಿ ಯಶಸ್ಸನ್ನು ಪಡೆಯುತ್ತಾರೆ. 

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು!...

ಎಲ್ಲ ಬೆರಳುಗಳೂ ಒಂದೇ ಸಮನಿದ್ದರೆ
ಹೆಬ್ಬೆರಳೂ ಸೇರಿ ಎಲ್ಲ ಐದು ಬೆರಳುಗಳು ಒಂದೇ ಸಮನಾಗಿದ್ದರೆ, ಸ್ವಭಾವದಲ್ಲಿ ಗಟ್ಟಿತನವನ್ನು ಹೊಂದಿರುತ್ತಾರೆ. ತಮ್ಮ ಮಾತಿನಿಂದ ಬೇರೆಯವರನ್ನು ಒಲಿಸಿಕೊಳ್ಳುವ, ಒಪ್ಪಿಸುವುದನ್ನು ಸುಲಭವಾಗಿ ಮಾಡುವ ಇವರು, ಬೇರೆಯವರ ಮೇಲೆ ಪ್ರಭುತ್ವವನ್ನು ತೋರಿಸುವ ಕೆಲಸ ಮಾಡುತ್ತಾರೆ. ಯಾವುದಾದರೂ ಕೆಲಸವನ್ನು ಮಾಡಬೇಕೇಂದುಕೊಂಡರೆ ಅದನ್ನು ಛಲದಿಂದ ಮಾಡಿ ಮುಗಿಸುವ ಛಾತಿಯನ್ನು ಹೊಂದಿದ್ದಾರೆ.ಹಿಮ್ಮಡಿ ಒಡೆದಿದ್ದರೆ ಏನು ಗೊತ್ತಾ..?
ಮಹಿಳೆಯರಾಗಲೀ, ಪುರುಷರಾಗಲೀ ಕಾಲಿನ ಹಿಮ್ಮಡಿ ಒಡೆದುಹೋಗಿದ್ದರೆ ಅವರ ಅದೃಷ್ಟ ಜೊತೆಗಿರುವುದಿಲ್ಲ. ಹಣದ ವಿಷಯದಲ್ಲಿ ಇವರು ಯಾವಾಗಲೂ ಚಿಂತೆಯಿಂದ ಇರುತ್ತಾರೆ. ಒಂದಲ್ಲಾ ಒಂದು ಸಮಸ್ಯೆ ಬರುತ್ತಾ ಇರುತ್ತದೆ. ಇಂಥವರು ತುಂಬಾ ಹಳೇ ವಿಚಾರಧಾರೆಯನ್ನು ಹೊಂದಿರುತ್ತಾರೆ. ಆಲೋಚನೆಯಲ್ಲಿ ಎಂದೂ ಪರಿವರ್ತನೆ ತೋರದ ಇವರು ಸಂಕುಚಿತ ಸ್ವಭಾವವನ್ನು ಹೊಂದಿರುತ್ತಾರೆ. 

ಇದನ್ನು ಓದಿ: ವೈಕುಂಠ ಏಕಾದಶಿಯಂದು ವ್ರತ ಕಥೆ ಕೇಳಿದರೆ ಇಷ್ಟಾರ್ಥ ಸಿದ್ಧಿ!...

ಕಾಲು ಬೆರಳ ಮಧ್ಯೆ ಹೆಚ್ಚು ಅಂತರವಿದ್ದರೆ
ಕಾಲಿನ ಬೆರಳುಗಳ ಮಧ್ಯೆ ಹೆಚ್ಚಿನ ಅಂತರವಿದ್ದರೆ, ಅಂಥವರು ತಾವು ಎಲ್ಲರಿಗಿಂತ ಭಿನ್ನ ಎಂದು ಅಂದುಕೊಳ್ಳುತ್ತಲೇ ಇರುತ್ತಾರೆ. ಒಬ್ಬರೇ ಇರಲು ಇಷ್ಟಪಡುವ ಇವರು, ತಮ್ಮ ಕುಟುಂಬದವರೊಂದಿಗೂ ಸಹ ಹೆಚ್ಚು ಬೆರೆಯಲು ಇವರು ಇಷ್ಟಪಡುವುದಿಲ್ಲ. ಅಷ್ಟರಮಟ್ಟಿಗೆ ಒಂಟಿತನವನ್ನು ಇವರು ಅಪ್ಪಿಕೊಳ್ಳುತ್ತಾರೆ. ಹೀಗಾಗಿ ಕಾಲ ಬೆರಳುಗಳ ಮಧ್ಯೆ ಅಂತರವಿದೆ ಎಂದರೆ ಗುಣ-ಸ್ವಭಾವದಲ್ಲಿ ಸ್ವಲ್ಪ ಭಿನ್ನವೇ ಆಗಿರುತ್ತಾರೆಂಬುದನ್ನು ಗಮನಿಸಬಹುದು.

ಹೀಗಿದ್ದರೆ ಬಹಳ ಒಳ್ಳೆಯದು…!
ಕೋಮಲವಾದ, ಸ್ವಚ್ಛವಾದ ಹಾಗೂ ಕೆಂಪಾದ ಪಾದಗಳಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಯಾರ ಪಾದವು ಈ ರೀತಿಯಾಗಿರಲಿದೆಯೋ ಅವರ ಅದೃಷ್ಟ ಬಹಳ ಚೆನ್ನಾಗಿರುವುದಲ್ಲದೆ, ಇವರು ಜೀವನದಲ್ಲಿ ಹಣ, ಗೌರವ, ಪ್ರತಿಷ್ಠೆ ಎಲ್ಲವನ್ನೂ ಗಳಿಸುತ್ತಾರೆ. ಕಡಿಮೆ ವಯಸ್ಸಿನಲ್ಲಿಯೇ ಹೆಚ್ಚು ಹಣವನ್ನು ಗಳಿಸುತ್ತಾರೆ. 23ರಿಂದ 28 ವರ್ಷದ ಅವಧಿಯಲ್ಲೇ ಇವರಿಗೆ ಅದೃಷ್ಟ ಖುಲಾಯಿಸುತ್ತದೆ. 

ಇದನ್ನು ಓದಿ: ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ.

ಹೆಬ್ಬರಳಿಂದ ಕಿರು ಬೆರಳವರೆಗೆ ಉದ್ದ ಕಡಿಮೆ ಇದ್ದರೆ..?
ಹೆಬ್ಬರಳು ಉದ್ದವಾಗಿದ್ದು, ನಂತರ ಬೆರಳುಗಳು ಒಂದೊಂದಾಗಿ ಉದ್ದ ಕಡಿಮೆಯಾಗುತ್ತಾ ಹೋದರೆ ಅಂಥವರು ಬಹಳವೇ ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ, ತಮ್ಮದೇ ಮಾತು ನಡೆಯಬೇಕು ಎಂಬ ಹಂಬಲ ಹಾಗೂ ಹಪಾಹಪಿ ಇವರದ್ದಾಗಿರುತ್ತದೆ. ಇದರಿಂದಾಗಿ ತಮ್ಮ ಮಾತನ್ನು ಬಿಟ್ಟರೆ ಬೇರೆಯವರ ಮಾತಿಗೆ ಇವರು ಹೆಚ್ಚು ಬೆಲೆ ಕೊಡಲಾರರು. ಇದರಿಂದ ಹಲವು ಸಮಸ್ಯೆಗಳನ್ನೂ ಹುಟ್ಟುಹಾಕಿಕೊಳ್ಳುತ್ತಾರೆ. ಇವರ ಈ ಸ್ವಭಾವದಿಂದಲೇ ವೈವಾಹಿಕ ಜೀವನದಲ್ಲಿಯೂ ಸಮಸ್ಯೆಗಳು ಎದುರಾಗುತ್ತವೆ.