ಪ್ರೀತಿ ಎಂಬುದು ಜೀವನ ಒಂದು ಸುಂದರವಾದ ಅನುಭವ ಹಾಗೂ ಅನುಭೂತಿ. ಅದೃಷ್ಟವಂತರಿಗೆ ಮಾತ್ರ ತುಂಬಾ ನೈಜ ಹಾಗೂ ಭರಪೂರ ಪ್ರೀತಿ ಲಭಿಸುತ್ತದೆ. ಮೋಸ, ವಂಚನೆಯಿಂದ ಪ್ರೀತಿಯನ್ನು ಪಡೆಯಲಾಗದು, ಒಮ್ಮೆ ಪಡೆದರೂ ಸಹ ಅದಕ್ಕೆ ಹೆಚ್ಚು ದಿನ ಉಳಿಗಾಲವಿರುವುದಿಲ್ಲ. ಪ್ರಾಮಾಣಿಕತೆಯಿಂದ ಇದ್ದವರು, ಪ್ರಾಮಾಣಿಕವಾಗಿ ಪ್ರೀತಿಸುವವರು ತಮ್ಮ ಪ್ರೀತಿಯನ್ನು ಕೊನೇತನಕ ನಿಭಾಯಿಸಿಕೊಂಡು ಹೋಗುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ, ಈ ಐದು ರಾಶಿಯವರು ತಮ್ಮ ಪ್ರೀತಿಯನ್ನು ಕೊನೇವರೆಗೂ ಕಾಪಾಡಿಕೊಂಡು ಹೋಗುವುದಲ್ಲದೆ, ತಮ್ಮವರನ್ನು ಬಹಳ ಇಷ್ಟಪಟ್ಟು ನೋಡಿಕೊಳ್ಳುತ್ತಾರೆ.
ನಿಮ್ಮ ಸಂಗಾತಿಯು ಈ ಐದು ರಾಶಿಯವರಲ್ಲಿ ಒಬ್ಬರಾಗಿದ್ದಾರೆಂದರೆ ಅದು ನಿಮಗೆ ಬಹಳ ಅದೃಷ್ಟವೆಂದೇ ಹೇಳಬಹುದು. ಅಂದರೆ, ನೀವು ಈ ಪ್ರೀತಿ ಸಿಗಲು ನಿಜವಾಗಲೂ ಪುಣ್ಯ ಮಾಡಿದ್ದೀರೆಂದೇ ಅರ್ಥ. 

ಇವರ ಸಮರ್ಪಣಾ ಭಾವ, ಪ್ರೀತಿಯಲ್ಲಿನ ಪ್ರಾಮಾಣಿಕತೆ, ಸಂಗಾತಿಯನ್ನು ನೋಡಿಕೊಳ್ಳುವ ಪರಿ ಹೀಗೆ ಪ್ರೀತಿಯ ವಿಷಯದಲ್ಲಿ ಇವರನ್ನು ಮೀರಿಸುವವರೇ ಇರುವುದಿಲ್ಲ.  ಹಾಗಾದರೆ, ಯಾವ ರಾಶಿಯವರು ಎಂಬುದನ್ನು ತಿಳಿಯೋಣ ಬನ್ನಿ…

ಇದನ್ನು ಓದಿ: ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ.

ಮೇಷ ರಾಶಿ
ತಮ್ಮ ಪ್ರಿಯತಮೆಯನ್ನು ಯಾವಾಗಲೂ ಖುಷಿಯಾಗಿಡಲು ಇಷ್ಟಪಡುತ್ತಾರೆ. ಮೇಷ ರಾಶಿಯವರು ತಮ್ಮ ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ. ಅವರು ಯಾರನ್ನು ಪ್ರೀತಿಸುತ್ತಾರೋ ಅವರು ಸದಾ ಕಾಲ ಖುಷಿಯಾಗಿರಬೇಕು ಎಂದು ನೋಡಿಕೊಳ್ಳುತ್ತಾರೆ. ಹೀಗಾಗಿ ಮೇಷ ರಾಶಿಯವರಿಗೆ ಅವರ ಪ್ರೀತಿಯೇ ಪ್ರಪಂಚವಾಗಿರುತ್ತದೆ. 

ಕರ್ಕಾಟಕ ರಾಶಿ
ಪ್ರೀತಿಯ ವಿಷಯದಲ್ಲಿ ಈ ರಾಶಿಯವರು ಎಂದೂ ಬುದ್ಧಿವಂತಿಕೆಯನ್ನು ಉಪಯೋಗಿಸುವುದಿಲ್ಲ. ಪ್ರೀತಿಯನ್ನು ಹೃದಯದಿಂದಲೇ ಗೆಲ್ಲುವುದಕ್ಕೆ ನೋಡುತ್ತಾರೆ. ಹೀಗಾಗಿ ಇವರು ಬುದ್ಧಿಯಂದಲ್ಲ, ಹೃದಯದಿಂದ ಪ್ರೀತಿ ಬಗ್ಗೆ ಯೋಚಿಸುತ್ತಾರೆ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರ ಗ್ರಹವು ಭಾವನೆಗಳ ಕಾರಕ ಗ್ರಹವಾಗಿದೆ. ಹಾಗಾಗಿ ಈ ರಾಶಿಯವರು ತಮ್ಮ ಭಾವನೆಗಳನ್ನು ಹೆಚ್ಚು ಹರಿಬಿಡುತ್ತಾರೆ. ಭಾವನೆಗಳ ಮೂಲಕವೇ ಯೋಚಿಸುತ್ತಾರೆಯೇ ವಿನಃ ಲಾಭಕ್ಕೋಸ್ಕರವಾಗಿ ಚಿಂತಿಸುವವರಲ್ಲ. ಇದರಿಂದ ಈ ರಾಶಿಯವರು ಪ್ರೀತಿಯಲ್ಲಿದ್ದಾರೆಂದಾದರೆ ಅವರು ಪ್ರೀತಿ ಬಿಟ್ಟು ಬೇರೇನನ್ನೂ ಯೋಚಿಸುವುದಿಲ್ಲ. 

ಇದನ್ನು ಓದಿ: ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..‍! 

ತುಲಾ ರಾಶಿ
ಈ ರಾಶಿಯವರು ಪ್ರೀತಿಯ ವಿಷಯದಲ್ಲಿ ಗಂಭೀರವಾಗಿರುತ್ತಾರೆ. ಅಂದರೆ ಗಂಭೀರ ಸ್ವಭಾವದ ಪ್ರೇಮಿಯಾಗಿರುತ್ತಾರೆ. ಒಂದು ಬಾರಿ ಯಾರನ್ನಾದರೂ ಪ್ರೀತಿಸಿದ್ದೇ ಆದಲ್ಲಿ ಕೊನೇವರೆಗೂ ಆ ಪ್ರೀತಿಯನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಅರಿತಿರುತ್ತಾರೆ. ಜೀವನ ಪೂರ್ತಿ ಪ್ರೀತಿ ಬೇಕೆಂದರೆ ತುಲಾ ರಾಶಿ ವಿಶ್ವಸನೀಯ ರಾಶಿ ಎಂದರೂ ತಪ್ಪಾಗಲಾರದು. ಇವರು ತಮ್ಮ ಸಂಬಂಧವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಕಷ್ಟು ಶ್ರಮ ವಹಿಸುತ್ತಾರೆ. 

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರನ್ನು ಜನರು ಬಹಳ ಮಾಮೂಲಿ ಎಂದೇ ಭಾವಿಸುತ್ತಾರೆ. ಅಷ್ಟರ ಮಟ್ಟಿಗೆ ಇವರು ಸಿಂಪಲ್ ಆಗಿ ಇರುತ್ತಾರೆ. ಆದರೆ, ಸಿಟ್ಟಿನ ಸ್ವಭಾವವೆಂದೂ ಕೆಲವರು ಅಂದುಕೊಳ್ಳುವುದುಂಟು. ಆದರೆ, ಪ್ರೀತಿಯ ವಿಷಯ ಬಂತೆಂದರೆ ಇವರು ಅತ್ಯಂತ ಗಾಂಭೀರ್ಯವನ್ನು ಹೊಂದುತ್ತಾರೆ. ಪ್ರೀತಿಯನ್ನು ಕಾಪಾಡಿಕೊಳ್ಳುವಲ್ಲಿ ಇವರು ಮೊದಲಿಗರಾಗಿರುತ್ತಾರೆ. ಅಷ್ಟರಮಟ್ಟಿಗೆ ತಮ್ಮ ಪ್ರೀತಿಯನ್ನು ಬಿಟ್ಟುಕೊಡಲು ಇವರು ಬಯಸುವುದಿಲ್ಲ. ಈ ರಾಶಿಯವರು ಸಂಗಾತಿಯಿಂದ ವಿಶ್ವಾಸ ಮತ್ತು ಸಮರ್ಪಣಾ ಭಾವವನ್ನು ಹೆಚ್ಚಾಗಿ ಬಯಸುತ್ತಾರೆ. ಈ ಎರಡು ಅಂಶಗಳನ್ನು ಸಂಗಾತಿಯು ನೆರವೇರಿಸಿದ್ದೇ ಆದಲ್ಲಿ, ಜೀವನವು ಪ್ರೀತಿಮಯವಾಗಿರುತ್ತದೆ. 

ಇದನ್ನು ಓದಿ: ಮಂಗಳ ಗ್ರಹದ ರಾಶಿ ಪರಿವರ್ತನೆ ಈ ರಾಶಿಯವರಿಗೆ ಧನಲಾಭ..! 

ಮೀನ ರಾಶಿ
ಮೀನ ರಾಶಿಯ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ಮನಸ್ಸಿನ ಮಾತನ್ನು ಮಾತ್ರ ಕೇಳುತ್ತಾರೆ. ಒಮ್ಮೆ ಮನಸ್ಸಿನಲ್ಲಿ ಪ್ರೇಮವು ಅಂಕುರವಾದರೆ ಸಾಕು, ಇವರ ಅತಿಯಾದ ಪ್ರೀತಿಯನ್ನು ಸಂಗಾತಿ ಪಡೆಯುತ್ತಾರೆ. ಹೀಗಾಗಿ ಈ ರಾಶಿಯವರಿಗೆ ಪ್ರೀತಿಯೇ ಜಗತ್ತಾಗಿ ಇರುತ್ತದೆ. ಈ ಪ್ರೀತಿ ಪರಿಪೂರ್ಣವಾಗಿಯೂ ಇರಲಿದ್ದು, ಇತರ ಅಲೋಚನೆಗಳು ಸುಳಿಯುವುದಿಲ್ಲ. ಇವರು ಪ್ರೀತಿಯಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಜೊತೆಗೆ ಸಮರ್ಪಣಾ ಭಾವವನ್ನೂ ಹೊಂದಿರುತ್ತಾರೆ.