ಶನಿ ಸಾಡೇಸಾತ್‌ನಿಂದ ಸಂಕಷ್ಟಕ್ಕೀಡಾಗಿದ್ದರೆ ಹೀಗೆ ಮಾಡಿ....
ಶನಿ ಸಾಡೇಸಾತ್ ಎಂದರೆ ಎಲ್ಲರಿಗೂ ಆತಂಕವಾಗುತ್ತದೆ. ಶನಿ ಸಾಡೇಸಾತ್‌ನ ಪ್ರಭಾವ ಅಶುಭವೇ ಆಗಿರಬೇಕೆಂದಿಲ್ಲ. ಶನಿಯು ಶುಭ ಪ್ರಭಾವವನ್ನು ಸಹ ನೀಡುತ್ತಾನೆಂದು ಹೇಳಲಾಗುತ್ತದೆ. ಕರ್ಮಕ್ಕೆ ತಕ್ಕ ಫಲವನ್ನು ನೀಡುತ್ತಾನೆ. ಆದ್ದರಿಂದ ಧರ್ಮ-ಕರ್ಮಗಳಿಗೆ ಅನುಸಾರ ಫಲ ಸಿದ್ಧಿಸುತ್ತದೆ. ಶನಿ ಸಾಡೇಸಾತ್‌ನಿಂದ ತೊಂದರೆ ಅನುಭವಿಸುತ್ತಿದ್ದವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಕರ್ಮಕ್ಕೆ ತಕ್ಕ ಫಲವನ್ನು ನೀಡುವ ದೇವರು ಶನಿ. 2021ರಲ್ಲಿ ಶನಿಯು ಸ್ವರಾಶಿಯಾದ ಮಕರ ರಾಶಿಯಲ್ಲಿ ಸ್ಥಿತನಾಗಿರುತ್ತಾನೆ. ಹೀಗಾಗಿ ಧನು, ಮಕರ ಮತ್ತು ಕುಂಭ ರಾಶಿಯವರಿಗೆ ಶನಿ ಸಾಡೇಸಾತ್ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಚಂದ್ರ ರಾಶಿಯಿಂದ 12ನೇ, ಮೊದಲನೇ ಮತ್ತು ಎರಡನೇ ಮನೆಯಿಂದ ಚಲಿಸುವ ಅವಧಿಗೆ ಸಾಡೇಸಾತ್ ಎನ್ನಲಾಗುತ್ತದೆ. ಈ ಅವಧಿಯು ಏಳೂವರೆ ವರ್ಷದ್ದಾಗಿರುತ್ತದೆ. ಈ ಅವಧಿಯಲ್ಲಿ ಶನಿಯು ವ್ಯಕ್ತಿಯ ಕರ್ಮಕ್ಕೆ ತಕ್ಕ ಫಲವನ್ನು ನೀಡುತ್ತಾನೆ ಮತ್ತು ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಶುಭಫಲವು ಪ್ರಾಪ್ತವಾಗುತ್ತದೆ.
ಶನಿಯು ಕರ್ಮಕ್ಕೆ ತಕ್ಕ ಫಲವನ್ನು ನೀಡುತ್ತಾನೆ. ಆದ್ದರಿಂದ ಧರ್ಮ-ಕರ್ಮಗಳಿಗೆ ಅನುಸಾರ ಫಲ ಸಿದ್ಧಿಸುತ್ತದೆ. ಶನಿ ಸಾಡೇಸಾತ್‌ನಿಂದ ತೊಂದರೆ ಅನುಭವಿಸುತ್ತಿದ್ದವರಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ...
ಇದನ್ನು ಓದಿ: ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಗೊತ್ತಾ..!
ಶಮಿ ವೃಕ್ಷ
ಶನಿ ಸಾಡೇಸಾತ್ ನಡೆಯುತ್ತಿದ್ದರೆ ಅಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಮಸ್ಯೆಗಳಲ್ಲಿ ಸಿಲುಕಿರುತ್ತಾರೆ. ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಶಮಿ ವೃಕ್ಷದ ಬೇರನ್ನು ಕಪ್ಪು ಬಟ್ಟೆಯಿಂದ ಸುತ್ತಬೇಕು. ನಂತರ ಅದನ್ನು ಶನಿವಾರದಂದು ಸಂಧ್ಯಾಕಾಲದಲ್ಲಿ ಬಲಗೈಗೆ ಅಥವಾ ಬಲ ಭುಜಕ್ಕೆ ಕಟ್ಟಿಕೊಳ್ಳಬೇಕು. ಶನೀಶ್ವರ ಮಂತ್ರವನ್ನು ಜಪಿಸಬೇಕು. ಶನಿ ದೇವರಿಗೆ ಸಂಬಂಧಿಸಿದ ಸ್ತೋತ್ರಗಳನ್ನು ಪಠಿಸಬೇಕು.
ತಂದೆ-ತಾಯಿಗೆ ಗೌರವ
ಶನಿ ಸಾಡೇಸಾತಿಯ ಅಶುಭ ಪ್ರಭಾವದಿಂದ ಪಾರಾಗಲು ಹಿರಿಯರಿಗೆ ಗೌರವ ನೀಡಬೇಕು. ತಂದೆ-ತಾಯಿಗೆ ಪ್ರತಿನಿತ್ಯ ವಂದಿಸಬೇಕು ಮತ್ತು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಬೇಕು. ತಂದೆ-ತಾಯಿಯಿಂದ ದೂರವಿದ್ದರೆ ಅವರನ್ನು ಮನಸಿನಲ್ಲೇ ಸ್ಮರಿಸಬೇಕು ಮತ್ತು ಅವರ ಮನಸ್ಸಿಗೆ ಖುಷಿಯಾಗುವಂತೆ ನಡೆದುಕೊಳ್ಳಬೇಕು. ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಶನಿಯ ಕೃಪೆ ಲಭಿಸುತ್ತದೆ.
ಪರಮೇಶ್ವರನ ಆರಾಧನೆ
ಶನಿ ಸಾಡೇಸಾತ್‌ನಿಂದಾಗುವ ತೊಂದರೆಗಳನ್ನು ಪರಿಹಾರ ಮಾಡಿಕೊಳ್ಳಲು ಉತ್ತಮವಾದ ಮಾರ್ಗವೇ ಪರಶಿವನನ್ನು ಆರಾಧಿಸುವುದು. ಪ್ರತಿನಿತ್ಯ ಶಿವ ಸಹಸ್ರನಾಮ ಅಥವಾ ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಇದರಿಂದ ಶನಿಯ ಅಶುಭ ಪ್ರಭಾವ ತಗ್ಗುವುದಲ್ಲದೇ, ಶಿವ ಮತ್ತು ಶನಿಯ ಕೃಪೆ ಪ್ರಾಪ್ತವಾಗುತ್ತದೆ. ಪರಮೇಶ್ವರನ ಪೂಜೆ, ಆರಾಧನೆಯಿಂದ ಸಮಸ್ಯೆಗಳಿಗೆಲ್ಲ ಮುಕ್ತಿ ದೊರಕುತ್ತದೆ.
ಆಂಜನೇಯ ಸ್ಮರಣೆ
ಶಿವನನ್ನು ಆರಾಧಿಸುವುದರ ಜೊತೆಗೆ ಹನುಮಂತನನ್ನು ಸ್ಮರಿಸಿ, ಪೂಜಿಸುವುದರಿಂದ ಶನಿಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಪ್ರತಿ ನಿತ್ಯ ಸುಂದರಕಾಂಡವನ್ನು ಪಠಿಸುವುದರಿಂದ ಜಾತಕದಲ್ಲಿ ಶನಿಗೆ ಸಂಬಂಧಿಸಿದ ದೋಷಗಳೇನಾದರೂ ಇದ್ದಲ್ಲಿ ಪರಿಹಾರವಾಗುತ್ತದೆ. ಅಷ್ಟೇ ಅಲ್ಲದೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶಕ್ತ್ಯಾನುಸಾರ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ, ನಂತರ ಪ್ರಸಾದವನ್ನು ಬಡವರಿಗೆ ಹಂಚುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ.
ಇದನ್ನು ಓದಿ: ವಾಸ್ತು ಶಾಸ್ತ್ರದಂತೆ ಈ ಉಡುಗೊರೆ ಕೊಟ್ಟರೆ ಸಂಬಂಧ ಕೆಡುತ್ತೆ!
ಈ ಮಂತ್ರ ಪಠಿಸಬೇಕು
ಶನಿ ಸಾಡೇಸಾತ್ ನಡೆಯುತ್ತಿರುವಾಗ ಆಗುವ ತೊಂದರೆಯಿಂದ ಪಾರಾಗಲು ಶನಿಯ ಈ ಮಂತ್ರ ಅತ್ಯಂತ ಸಹಕಾರಿಯಾಗಿದೆ. ಶನಿದೇವರ ಈ ಮಂತ್ರವನ್ನು ನಿತ್ಯ ಜಪಿಸುವುದರಿಂದ ಉತ್ತಮವಾದ ಫಲವನ್ನು ಪಡೆಯಬಹುದಾಗಿದೆ.
ಸೂರ್ಯ ಪುತ್ರೋ ದೀರ್ಘ ದೇಹೋ ವಿಶಾಲಾಕ್ಷಃ ಶಿವ ಪ್ರಿಯಃ /
ಮಂದಾಚಾರಾಃ ಪ್ರಸನ್ನಾತ್ಮಾಪೀಡಾಂ ದಹತು ಮೇ ಶನಿಃ//
ಶಮಿ ವೃಕ್ಷಕ್ಕೆ ಪೂಜೆ
ಶಮಿ ವೃಕ್ಷವನ್ನು ಮನೆಯಲ್ಲೇ ಬೆಳೆಸಿ ಅದನ್ನು ಪೂಜಿಸುವುದರಿಂದ ಶನಿದೇವರ ಕೃಪೆ ಲಭಿಸುವುದಲ್ಲದೆ, ಮನೆಯ ವಾಸ್ತು ದೋಷವು ನಿವಾರಣೆಯಾಗುತ್ತದೆ.
ಇದನ್ನು ಓದಿ: ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...!
ಶಂಖಪುಷ್ಪ
ಶನಿವಾರದ ದಿನ ಶನಿ ದೇವರಿಗೆ ನೀಲಿ ಬಣ್ಣದ ಶಂಖಪುಷ್ಪವನ್ನು ಅರ್ಪಿಸಬೇಕು. ಅಷ್ಟೇ ಅಲ್ಲದೆ ಕಪ್ಪು ಬಣ್ಣದ ಬತ್ತಿ ಮತ್ತು ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಬೇಕು. ಶನಿವಾರದಂದು ಮಹಾರಾಜ ದಶರಥ ರಚಿಸಿರುವ ಶನಿಸ್ತೋತ್ರವನ್ನು ಪಠಿಸಬೇಕು. ಶನಿವಾರ ಅಥವಾ ಅಮಾವಾಸ್ಯೆಯ ದಿನ ಸೂರ್ಯಾಸ್ತದ ನಂತರ ಅಶ್ವತ್ಥ ಮರದಡಿಯಲ್ಲಿ ಕುಳಿತು ಶನಿದೇವರನ್ನು ಆರಾಧಿಸಬೇಕು ಮತ್ತು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿಡಬೇಕು.