Asianet Suvarna News Asianet Suvarna News

ಈ ಜನ್ಮರಾಶಿಯವ್ರು ಪರ್‌ಫೆಕ್ಟ್ ಸಹೋದ್ಯೋಗಿಗಳು!

ನಿಮ್ಮ ಆಫೀಸ್‌ನಲ್ಲಿ ಕೆಲವರು ಇಷ್ಟವಾಗ್ತಾರೆ. ನಿಮ್ಮ ಕೆಲಸದಲ್ಲಿ ಸಹಕಾರ ಕೊಡ್ತಾರೆ. ಆಪ್ತರೂ ಆಗುತ್ತಾರೆ. ಕೆಲವು ಜನ್ಮರಾಶಿಯವರು ಒಳ್ಳೆಯ ಸಹೋದ್ಯೋಗಿಗಳಾಗಿರುತ್ತಾರೆ. ಅಂಥವರು ಯಾರು?

 

these zodiac born are perfect colleagues
Author
Bengaluru, First Published Sep 3, 2020, 5:50 PM IST

ಮಿಥುನ ರಾಶಿ
ಮಿಥುನ ರಾಶಿ ಎಂಬ ಹೆಸರಿನಲ್ಲೇ ಜೋಡಿ ಇದೆ. ಇವರು ಜೊತೆಯಾಗಿ ಇರುವುದನ್ನು ಇಷ್ಟಪಡುತ್ತಾರೆ. ಹಾಗಂತ ಒಂಟಿಯಾಗಿ ಯಾವುದೇ ಕೆಲಸವನ್ನೂ ಮಾಡಲಾರರು. ಟೀಮ್‌ವರ್ಕ್‌ನಲ್ಲಿ ಇಂಥವರನ್ನು ಸೇರಿಸಿಕೊಳ್ಳುವುದು ಎಲ್ಲ ಬಗೆಯಿಂದಲೂ ಅನುಕೂಲ. ಇವರು ಒಳ್ಳೆಯ ಬಾಸ್‌ ಕೂಡ ಆಗಬಲ್ಲರು. ಸಹೋದ್ಯೋಗಿಗಳ ಜೊತೆಗೆ ಸೌಹಾರ್ದ ಸಂಬಂಧ ಕಾಪಾಡಿಕೊಂಡು ಆಫೀಸ್‌ನ ವಾತಾವರಣ ಚೆನ್ನಾಗಿಟ್ಟುಕೊಳ್ಳುತ್ತಾರೆ.

ಕನ್ಯಾ ರಾಶಿ
ಇವರು ಮೃದು ಮನಸ್ಸಿನವರು. ನೀವು ಹೇಳದೆಯೂ ನಿಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ನಿಮ್ಮ ಮುಖದಲ್ಲಿ ಒಂದು ಸಣ್ಣ ಬಳಲಿಕೆ ಕಂಡರೂ ನಿಮಗೆ ಕೆಲಸದಿಂದ ತುಸು ಬಿಡುವು ಕೊಟ್ಟು ವಿಶ್ರಾಂತಿ ಮಾಡಲು ಸೂಚಿಸುತ್ತಾರೆ. ನಿಮ್ಮ ಕೆಲಸವನ್ನು ಇವರ ಮೇಲೆ ಆರಾಮವಾಗಿ ಹೊರಿಸಬಹುದು. ಹೇಳಿದಂತೆ ಅಚ್ಚುಕಟ್ಟಾಗಿ ಮಾಡಿ ಅದನ್ನು ಒಪ್ಪಿಸುತ್ತಾರೆ. ಆದರೆ ಇವರ ಸಜ್ಜನಿಕೆಯ ದುರ್ಬಳಕೆ ಒಳ್ಳೆಯದಲ್ಲ.

these zodiac born are perfect colleagues

ಕುಂಭ ರಾಶಿ
ಇವರ ಸ್ವಭಾವ ಸ್ವಲ್ಪ ದುಡುಕು. ಆದರೆ ನಿಮ್ಮ ಸಹಾಯಕ್ಕೆ ಸದಾ ಸಿದ್ಧರಾಗಿರುವವರು. ಟೀಮ್‌ನಲ್ಲಿ ಆಗಾಗ ಕೆಲವು ತಾಪತ್ರಯ ತಂದಿಡುತ್ತಾರಾದರೂ, ಅದನ್ನು ಅವರು ಕೆಟ್ಟ ಮನಸ್ಸಿನಿಂದ ಮಾಡುವುದಿಲ್ಲ. ಎಲ್ಲರಿಗಿಂತ ಮೊದಲು ತಾನೇ ಒಳ್ಳೆಯ ಕೆಲಸ ಮಾಡಬೇಕು ಎಂದು ಸ್ವಭಾವ ಇವರದು. ಹಣಕಾಸಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವವರಲ್ಲ. ತಮ್ಮ ಗೌರವ ಹಾಗೂ ಖ್ಯಾತಿಯ ಬಗ್ಗೆಯೇ ಇವರ ಗಮನ. ತುಸು ಹೊಗಳಿದರೆ ಇವರಿಂದ ಕೆಲಸ ತೆಗೆಸಬಹುದು.

ವಿಘ್ನ ನಿವಾರಕನ ಈ ಕಥೆಯನ್ನು ಕೇಳಿದರೆ ವಿಘ್ನವೆಲ್ಲವೂ ನಾಶವಾಗುವುದು..! 

ಮೀನ ರಾಶಿ
ಇವರು ಬಹಳ ಜಾಣರು. ಕೊಟ್ಟ ಕೆಲಸದಿಂದ ಮೀನಿನಂತೆ ಜಾರಿಕೊಳ್ಳಬಲ್ಲರು. ಆದರೆ ಇವರನ್ನು ಒಂದು ಕೆಲಸಕ್ಕೆ ಕಟ್ಟಿಹಾಕಿದರೆ, ಆ ಕೆಲಸವನ್ನು, ಆಕಾಶವೇ ತಲೆಮೇಲೆ ಬಿದ್ದರೂ ಮಾಡಿಯೇ ಮುಗಿಸುವವರು. ನಿಮಗೆ ಕಚೇರಿಯಲ್ಲಿ ಕಷ್ಟ ಬಂದರೆ, ಅದನ್ನು ಜಾಣ್ಮೆಯಿಂದ ಪರಿಹರಿಸಿ ಕೊಡಬಲ್ಲವರು ಇವರೇ. ಮೇಲ್ನೋಟಕ್ಕೆ ಇವರು ತುಂಬ ಸಾಮಾನ್ಯರಂತೆ ಕಾಣಬರುತ್ತಾರೆ. ಆದರೆ ಕೊಟ್ಟ ಕೆಲಸದಲ್ಲಿ ದಕ್ಷತೆ ಮೆರೆಯುತ್ತಾರೆ. 

ಧನು ರಾಶಿ
ಇವರು ಪೆಟ್ಟು ಒಂದು ತುಂಡು ಎರಡು ಅನ್ನುವ ಜಾಯಮಾನದವರು. ಯಾವ ಕೆಲಸವನ್ನು ಎಲ್ಲಿ ಹೇಗೆ ಮಾಡಿದರೆ ಹೆಚ್ಚಿನ ಪ್ರಯೋಜನಕಾರಿ ಎಂಬುದು ಇವರಿಗೆ ಗೊತ್ತಿದೆ. ಬಹಳ ಬೇಗನೆ, ಅತಿ ಕಡಿಮೆ ಡೆಡ್‌ಲೈನ್‌ನಲ್ಲಿ ಯಾವುದಾದರೂ ಕೆಲಸ ಮಾಡಿ ಮುಗಿಸಬೇಕಾಗಿ ಬಂದಾಗ ಇಂಥವರ ನೆರವು ಪಡೆಯುವುದು ಭೇಷು. ನಿಮಗೆ ತಕ್ಕ ಟೈಂಟೇಬಲ್‌ ಹಾಕಿ ಕೊಡಬಲ್ಲರು. 

ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ 

ವೃಶ್ಚಿಕ ರಾಶಿ
ಇವರು ಎಷ್ಟೇ ಕೆಲಸ ಇದ್ದರೂ ಅದನ್ನು ಒಂದು ಹೊರೆ ಎಂದು ತಿಳಿಯುವುದಿಲ್ಲ. ಲೀಲಾಜಾಲವಾಗಿ ಮಾಡಿ ಮುಗಿಸಬಲ್ಲವರು. ಟೆನ್ಷನ್‌ ಮಾಡಿಕೊಳ್ಳುವವರಲ್ಲ. ಕೂಲ್‌ ಕೂಲ್‌ ಆಗಿ ನಿಭಾಯಿಸುವವರು. ಏಕಕಾಲಕ್ಕೆ ಹತ್ತಾರು ಟೀಮ್‌ ಮೀಟಿಂಗ್‌ಗಳಿದ್ದರೂ ಅದನ್ನು ನಿಭಾಯಿಸಬಲ್ಲರು. ಆದರೆ ಇವರ ದುಡಿಮೆಗೆ ತಕ್ಕೆ ರಿವಾರ್ಡ್‌ ಸಿಗದೆ ಹೋದರೆ ಮುನಿಸಿಕೊಳ್ಳುತ್ತಾರೆ. ಇವರನ್ನು ಉಳಿಸಿಕೊಳ್ಳುವುದು ಸವಾಲು.

ಕಟಕ ರಾಶಿ
ಇವರದು ಬಹಳ ಸ್ಮಾರ್ಟ್ ಕೆಲಸ. ಎಷ್ಟೇ ಕೆಲಸ ಇದ್ದರೂ ಮಾಡುತ್ತಾರೆ ಹಾಗೂ ಅದನ್ನು ಇನ್ನೊಬ್ಬರು ಮಾಡಲು ಅಸಾಧ್ಯ ಎಂಬಷ್ಟು ನಿಖರವಾಗಿ, ಪರಿಣತಿಯಿಂದ ಮಾಡುತ್ತಾರೆ. ಯಾವುದೇ ಹೊಸ ಪ್ರಾಜೆಕ್ಟ್‌ಳು ಇದ್ದರೂ ಅದರ ಮಾರ್ಕೆಟಿಂಗ್‌ ಸಾಧ್ಯತೆ, ಅದಕ್ಕೆ ಯಾರನ್ನು ಹೇಗೆ ಎಲ್ಲಿ ಹಿಡಿಯಬಹುದು ಎಂಬಂಥ ಯೋಚನೆಗಳು ಇವರಿಗೆ ಬಹಳ. ಇವರನ್ನು ಮಾರ್ಕೆಟಿಂಗ್‌ನಲ್ಲಿ ಹೊಂದಿದ ಕಂಪನಿಗೆ ಅದೃಷ್ಟ ಖುಲಾಯಿಸುತ್ತದೆ. 

ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸಬೇಕೆ? ಹೀಗೆ ಮಾಡಿ 

ಸಿಂಹ ರಾಶಿ
ಇವರ ಹೆಸರೇ ಹೇಳುವ ಹಾಗೆ, ಇವರು ಬಾಸ್‌ ಕೆಲಸಕ್ಕೇ ಹೇಳಿ ಮಾಡಿಸಿದವರು. ಇವರು ಏನೂ ಮಾಡದೇ ಇದ್ದರೂ ಪರವಾಗಿಲ್ಲ, ಇವರ ಒಂದು ಲುಕ್‌ಗೇ ಇಡೀ ಕಚೇರಿ ಥಂಡಾ ಹೊಡೆದು ಹೋಗುತ್ತದೆ. ಆದ್ದರಿಂದ ಇಂಥವರು ಕೆಲಸ ಮಾಡಿಸಿಕೊಳ್ಳುವ ಸ್ಥಾನದಲ್ಲಿದ್ದರೆ ಎಲ್ಲ ಸಲೀಸು.

Follow Us:
Download App:
  • android
  • ios