ದಾಂಪತ್ಯದಲ್ಲಿ ಮಾಧುರ್ಯ ಹೆಚ್ಚಿಸಬೇಕೆ? ಹೀಗೆ ಮಾಡಿ

ದಂಪತಿಗಳ ಜಗಳಕ್ಕೆ ಮನೆಯ ವಾಸ್ತು ದೋಷದಿಂದ ಹಿಡಿದು ಇಬ್ಬರ ಜಾತಕಗಳ ತಿಕ್ಕಾಟದವರೆಗೆ ಹಲವು ಕಾರಣಗಳಿರುತ್ತವೆ. ಅದನ್ನು ನೋಡಿಕೊಂಡು ಈ ಕೆಳಗಿನ ಕ್ರಮಗಳನ್ನು ಕೈಗೊಂಡರೆ ದಾಂಪತ್ಯದಲ್ಲಿ ಸವಿ ಹೆಚ್ಚಾಗುತ್ತದೆ.

 

How to add sweetness to your married life according to astrology

- ಪತಿ ಅಥವಾ ಪತ್ನಿ ಇಬ್ಬರಲ್ಲಿ ಯಾರಿಗಾದರೂ ಕುಜದೋಷವಿದ್ದರೆ ಕುಜದೋಷ ಶಾಂತಿ ಮಾಡಿಸಬೇಕು. ದಂಪತಿಗಳಿಗೆ ಸರ್ಪದೋಷ ಬಾಧೆ ಇದ್ದರೆ ಕಾಳಸರ್ಪ ದೋಷ ಶಾಂತಿ ಮಾಡಿಸಬೇಕು.
- ಮನೆಯ ಅಂಗಳದಲ್ಲಿ ತುಳಸಿ ಗಿಡ ನೆಟ್ಟರೆ ದಂಪತಿಗಳ ಮಧ್ಯದ ದಾಂಪತ್ಯ ಗಟ್ಟಿಯಾಗುತ್ತದೆ. ಮನೆಯಲ್ಲಿರುವ ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಅರಿಶಿನ, ಕುಂಕುಮ ಅರ್ಪಿಸಬೇಕು. ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ಕಾರ್ಯ ಮಾಡಬೇಕು. 
- ಜಾತಕದಲ್ಲಿ ಶುಕ್ರನ ಪ್ರಭಾವ ಕ್ಷೀಣವಾಗಿದ್ದರೆ 3 ರಿಂದ 5 ಕ್ಯಾರೆಟ್‌ನ ವಜ್ರದುಂಗುರವನ್ನು ದಂಪತಿಗಳಿಬ್ಬರೂ ಉಂಗುರ ಬೆರಳಿಗೆ ಧರಿಸಬೇಕು. ಇದರಿಂದ ಇಬ್ಬರ ಮಧ್ಯದ ಸಂಬಂದ ಸುಧಾರಿಸುತ್ತದೆ.
- ಗಂಡ ಹೆಂಡತಿಗೆ ಅಥವಾ ಹೆಂಡತಿ ಗಂಡನಿಗೆ ಉಡುಗೊರೆ ತರುವಾಗ ಅರಿಶಿನ, ಹಸಿರು ಬಣ್ಣದ್ದನ್ನ ತರುವುದು ಒಳ್ಳೆಯದು. ಬೂದು ಮತ್ತು ಕೆಂಪು ಬಣ್ಣ ಮಧ್ಯಮ. ಕಪ್ಪು ಹಾಗೂ ಮಿಶ್ರ ಬಣ್ಣಗಳು ಅಧಮ.
- ಪ್ರತಿ ಶುಕ್ರವಾರ ಉಪವಾಸ ವ್ರತ ಮಾಡುವುದರಿಂದ ಲಕ್ಷ್ಮೀ ದೇವಿಯು ಪ್ರಸನ್ನಳಾಗಿ ವೈವಾಹಿಕ ಜೀವನದಲ್ಲಿ ಮಧುರತೆ ಮೂಡುತ್ತದೆ. ಮಂಗಳವಾರ, ಗುರುವಾರ ಹಾಗೂ ಶನಿವಾರಗಳಂದು ಮಾಂಸಾಹಾರ ತ್ಯಜಿಸಿದಲ್ಲಿ ದಂಪತಿಗಳ ಸಂಬಂಧ ಸುಧಾರಿಸುತ್ತದೆ.

ವಿಘ್ನ ನಿವಾರಕನ ಈ ಕಥೆಯನ್ನು ಕೇಳಿದರೆ ವಿಘ್ನವೆಲ್ಲವೂ ನಾಶವಾಗುವುದು..! 
- ಮನೆಯ ಯಜಮಾನ ಯಾವಾಗಲೂ ಹಣೆಗೆ ಒಂದು ಗಂಧದ ಬೊಟ್ಟು, ಭಸ್ಮದ ಲೇಪನ ಅಥವಾ ಕುಂಕುಮದ ತಿಲಕ ಇಡಬೇಕು. ದಿನಕ್ಕೊಮ್ಮೆಯಾದರೂ ಮನೆಯ ದೇವರ ಪಟಕ್ಕೆ ನಮಸ್ಕರಿಸಬೇಕು. ಮನೆಯ ಯಜಮಾನಿ ತಲೆಕೂದಲು ಬಾಚಿ, ಹಣೆಗೆ ಕುಂಕುಮದ ಬೊಟ್ಟು ಇಟ್ಟು, ಮುಡಿಗೊಂದು ಹೂವನ್ನು ಮುಡಿದಿರಬೇಕು. ಇಂಥ ಪಾವಿತ್ರಿಕ ಕೆಲಸಗಳಲ್ಲಿ ಕೊಂಚವೂ ಶ್ರದ್ಧೆ ತೋರಿಸದೆ ಇದ್ದರೆ ಅಲ್ಲಿ ದರಿದ್ರ ಲಕ್ಷ್ಮಿ ಇರಬಹುದು.
- ದಿನಕ್ಕೊಂದು ಬಾರಿ ವಿಷ್ಣು ಸಹಸ್ರನಾಮ ಅಥವಾ 108 ಬಾರಿ ಗಾಯತ್ರಿ ಮಂತ್ರ ಜಪಿಸಿದರೆ ಜೀವನದಲ್ಲಿನ ನಕಾರಾತ್ಮಕ ಅಂಶಗಳು ದೂರವಾಗುತ್ತವೆ. ಮೃತ್ಯುಂಜಯ ಮಂತ್ರ, ಶಿವಪಂಚಾಕ್ಷರಿ ಮಂತ್ರಗಳನ್ನು ದಂಪತಿಗಳಿಬ್ಬರೂ ಜೊತೆಯಾಗಿ ಸಾಧನೆ ಮಾಡಬಹುದು.
How to add sweetness to your married life according to astrology
- ಮನೆಯ ಹೆಣ್ಣು ಮಕ್ಕಳು ಚಿನ್ನದ ಅಥವಾ ಹಳದಿ ಬಣ್ಣದ ಬಳೆಗಳನ್ನು ಧರಿಸಿದರೆ ಉತ್ತಮ ಫಲಿತಾಂಶ ಸಿಗುತ್ತವೆ. ಹನ್ನೊಂದು ಗೋಮತಿ ಚಕ್ರಗಳನ್ನು ಸಿಂಧೂರದಲ್ಲಿ ಕಟ್ಟಿ ಇಡಬೇಕು. ಇದರಿಂದ ದಂಪತಿಗಳ ಮಧ್ಯದ ವಿರಸ ಕಡಿಮೆಯಾಗುತ್ತದೆ.

ಕೇರಳದಲ್ಲಿ ಓಣಂ ಸಂಭ್ರಮ: ಪ್ರಜೆಗಳ ನೋಡಲು ಬರ್ತಿದ್ದಾನೆ ಮಾವೇಲಿ..! 

- ಮಂಗಳವಾರ, ಗುರುವಾರ ಹಾಗೂ ಶನಿವಾರಗಳಂದು ಉಗುರು ಮತ್ತು ಕೂದಲು ಕತ್ತರಿಸಕೂಡದು. ಗುರುವಾರ ಹಾಗೂ ಶನಿವಾರ ಬಟ್ಟೆ ಒಗೆಯಕೂಡದು. ಶುಭ ಶುಕ್ರವಾರಗಳಂದು ದಂಪತಿಗಳಿಬ್ಬರೂ ತಮಗಾಗಿ ಹೊಸ ಬಟ್ಟೆ ಹಾಗೂ ಸುಗಂಧ ದ್ರವ್ಯಗಳನ್ನು ಖರೀದಸಬೇಕು.
- ಮಲಗುವ ಕೋಣೆಯ ಗೋಡೆಗಳಿಗೆ ಗುಲಾಬಿ ವರ್ಣದ ಪೇಂಟ್ ಮಾಡಿಸಬೇಕು. ಇದನ್ನು ಮಾಡಲು ಆಗದಿದ್ದರೆ ಕೋಣೆಯ ನಾಲ್ಕೂ ಮೂಲೆಗಳಲ್ಲಿ ಗುಲಾಬಿ ಬಣ್ಣದ ದಾರಗಳನ್ನು ನೇತು ಹಾಕಬೇಕು.
- ದಂಪತಿಗಳು ದಕ್ಷಿಣ ಹಾಗೂ ಪೂರ್ವ ದಿಕ್ಕಿನಲ್ಲಿ ಮಲಗಬೇಕು. ಮಲಗುವ ಕೋಣೆಯಲ್ಲಿ ಹರಿಯುವ ನೀರಿನ ಚಿತ್ರಪಟಗಳನ್ನು ಗೋಡೆಗೆ ನೇತು ಹಾಕಬೇಕು. ಹಾಗೆಯೇ ಮಲಗುವ ಕೋಣೆಯಲ್ಲಿ ಯಾವುದೇ ದೇವರ ಪಟಗಳನ್ನು ಹಾಕಬಾರದು.

ಶಾಪ ನಿಜ ಆಗುತ್ತಾ? ಶಾಪ ಇದೆಯಾ ತಿಳಿಯೋದು ಹೇಗೆ? 

- ಮನೆಯಲ್ಲಿ ಪ್ರತಿನಿತ್ಯ ಧೂಪವನ್ನು ಉರಿಸಬೇಕು. ದೇವರ ಮನೆಯಲ್ಲಿ ಮುಂಜಾನೆ ಹಾಗೂ ಸಂಜೆ ನಂದಾದೀಪವನ್ನು ಉರಿಸಬೇಕು. ತುಳಸಿಗೆ ಮುಂಜಾನೆ ಕೈಮುಗಿಯಬೇಕು. ಮನೆಯನ್ನು ಸದಾ ಶುಚಿಯಾಗಿ, ಒಪ್ಪ ಓರಣವಾಗಿ ಇಟ್ಟುಕೊಳ್ಳಬೇಕು. ಹಳೆಯ ಹಾಗೂ ಹರಿದ ಬಟ್ಟೆಗಳನ್ನು ಹೊರಹಾಕಿ, ಶುಚಿಯಾದ ಬಟ್ಟೆಗಳನ್ನು ಧರಿಸಬೇಕು. 

Latest Videos
Follow Us:
Download App:
  • android
  • ios