2027ರ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಯಾರಿಗೆ? ಆರ್‌ಸಿಬಿ ಹ್ಯಾಟ್ರಿಕ್ ಸಾಧನೆಗೆ ಸಜ್ಜಾಗಿದ್ದಾರೆ. ಇತ್ತ ಬಲಿಷ್ಠ ತಂಡಗಳು ಟ್ರೋಫಿ ಮೇಲೆ ಕಣ್ಣಿಟ್ಟಿದ. ಇದರ ನಡುವೆ ಖ್ಯಾತ ಜ್ಯೋತಿಷಿ 2027ರ ಐಪಿಎಲ್ ವಿನ್ನರ್ ಕುರಿತು ಭವಿಷ್ಯ ನುಡಿದಿದ್ದಾರೆ.
ಐಪಿಎಲ್ 2027ರ ಹರಾಜು ತಯಾರಿಗಳು ನಡೆಯುತ್ತಿದೆ. ಈಗಾಗಲೇ ತಂಡಗಳು ರಿಟೇನ್ ಹಾಗೂ ರಿಲೀಸ್ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಕಳೆದೆರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ಇದೀಗ ಹ್ಯಾಟ್ರಿಕ್ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ಇತ್ತ ಮುಂಬೈ ಇಂಡಿಯನ್ಸ್ ಸೇರಿದಂತೆ ಇತರ ತಂಡಗಳು ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಬೆಳವಣಿಗೆ ನಡುವೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ, 2027ರ ಐಪಿಎಲ್ ಟ್ರೋಫಿ ಗೆಲ್ಲುವ ತಂಡ ಯಾವುದು ಅನ್ನೋ ಭವಿಷ್ಯ ನುಡಿದಿದ್ದಾರೆ. ವಿಶೇಷ ಅಂದರೆ ಪ್ರಶಾಂತ್ ಕಿಣಿ ನುಡಿದ ಭವಿಷ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸತತ 3 ಪಂದ್ಯ ಗೆಲ್ಲುವ ತಂಡಕ್ಕೆ ಟ್ರೋಫಿ
ಪ್ರಶಾಂತ್ ಕಿಣಿ ನುಡಿದ ಭವಿಷ್ಯದ ಪ್ರಕಾರ, 2027ರ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ 3 ಪಂದ್ಯ ಸತತವಾಗಿ ಗೆಲ್ಲುವ ತಂಡ ಟ್ರೋಫಿ ಗೆಲ್ಲಲಿದೆ. ಸತತವಾಗಿ ಮೊದಲ ಮೂರು ಪಂದ್ಯ ಗೆಲ್ಲುವ ಯಾವುದೇ ತಂಡ ಟ್ರೋಫಿ ಎತ್ತಿಹಿಡುವ ಅವಕಾಶವಿದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಇದೇ ಭವಿಷ್ಯ ತೀವ್ರ ಕುತೂಹಲ ಕೆರಳಿಸಿದೆ.
ಆರ್‌ಸಿಬಿಗೆ ಹ್ಯಾಟ್ರಿಕ್ ಚಾನ್ಸ್
ಜ್ಯೋತಿಷ್ಯ ಏನೇ ಇರಲಿ ಆದರೆ ಈ ಬಾರಿ ಮತ್ತೆ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಕೆಳೆದೆರಡು ಆವೃತ್ತಿಗಳಲ್ಲಿ ಅದ್ಭುತ ಪ್ರದರ್ಶನ ಮೂಲಕ ಟ್ರೋಫಿ ಗೆದ್ದಿದೆ. 2027ರ ಐಪಿಎಲ್ ಟೂರ್ನಿಯಲ್ಲೂ ಟ್ರೋಫಿ ಗೆಲ್ಲಲಿದೆ. ಆರ್‌ಸಿಬಿ ತನ್ನ ಕೋರ್ ತಂಡವನ್ನು ಬದಲಿಸಿಲ್ಲ. ಹೀಗಾಗಿ ಆರ್‌ಸಿಬಿ ಈ ಬಾರಿಯೂ ಗೆಲುವಿನ ಮೂಲಕ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳು ಕಮೆಂಟ್ಸ್ ಮಾಡುತ್ತಿದ್ದಾರೆ.
ಹರಾಜಿಗೂ ಮುನ್ನ ಆರ್‌ಸಿಬಿ ತಂಡದಿಂದ ಕೈಬಿಟ್ಟ ಪ್ಲೇಯರ್ಸ್
ಆರ್‌ಸಿಬಿ ತಂಡದ 2027ರ ಐಪಿಎಲ್ ಹರಾಜಿಗೂ ಮುನ್ನ 6 ಕ್ರಿಕೆಟಿಗರನ್ನು ತಂಡದಿಂದ ರಿಲೀಸ್ ಮಾಡಿದೆ. ಜೇಕಬ್ ಬೆಥೆಲ್ , ರಿಚರ್ಡ್ ಗ್ಲೀಸನ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರ, ಸಾತ್ವಿಕ್ ದೇಸ್ವಾಲ್, ಸ್ಪಪ್ನಿಲ್ ಸಿಂಗ್ ತಂಡದಿಂದ ರಿಲೀಸ್ ಆಗಿದ್ದಾರೆ.
20 ಕ್ರಿಕೆಟಿಗರ ರಿಟೇನ್ ಮಾಡಿದ ಆರ್‌ಸಿಬಿ
ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ಕೋರ್ ತಂಡ ಉಳಿಸಿಕೊಂಡಿದೆ. 20 ಕ್ರಿಕೆಟಿಗರ ರಿಟೇನ್ ಮಾಡಿಕೊಂಡಿದೆ. ರತನ್ ಪಾಟೀದಾರ್, ವಿರಾಟ್ ಕೊಹ್ಲಿ, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಕ್ರುನಾಲ್ ಪಾಂಡ್ಯ, ಜೋಶ್ ಹೇಜಲ್‌ವುಡ್, ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ದೇವದತ್ ಪಡಿಕ್ಕಲ್, ನುವಾನ್ ತುಷಾರ್, ವೆಂಕಟೇಶ್ ಅಯ್ಯರ್, ಜೇಕಬ್ ಡಫಿ, ಜೊರ್ಡನ್ ಕಾಕ್ಸ್, ರಸಿಕ್ ಧರ್, ಸೂಯಶ್ ಶರ್ಮಾ, ವಿಕ್ಕಿ ಒಟ್ಸಾವಲ್, ಅಭಿನಂದನ್ ಸಿಂಗ್, ಕಾನಿಷ್ಕ್ ಚೌವ್ಹಾಣ್, ಯಶ್ ದಯಾಳ್
















