Asianet Suvarna News Asianet Suvarna News

ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಅವರ ಭವಿಷ್ಯವನ್ನು ತಿಳಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿರುವ ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ರೇಖೆಗಳ ಆಕಾರ, ಸ್ಪಷ್ಟತೆಗಳನ್ನು ಪರಿಶೀಲಿಸಿ ವ್ಯಕ್ತಿಯ ಭವಿಷ್ಯ, ವರ್ತಮಾನಗಳನ್ನು ತಿಳಿಸುತ್ತಾರೆ. ಹಾಗೆಯೇ ಹಸ್ತದಲ್ಲಿರುವ ರೇಖೆಯನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಉತ್ತಮ, ಅದೃಷ್ಟ ಬರುತ್ತದೆ ಎಂಬುದರ ಬಗ್ಗೆ ತಿಳಿಯೋಣ..

Know your lucky god by palm lines
Author
Bangalore, First Published Aug 29, 2020, 5:12 PM IST

ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯದ ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡುವಾಗ ಗ್ರಹಗಳ ಸ್ಥಾನ, ಸ್ಥಿತಿ, ಪ್ರಭಾವಗಳ ಬಗ್ಗೆ ಸರಿಯಾಗಿ ಪರಿಶೀಲಿಸಿ ವ್ಯಕ್ತಿಯ ಭವಿಷ್ಯದಲ್ಲಿ ನಡೆಯಬಹುದಾದ ವಿಷಯಗಳ ಬಗ್ಗೆ, ಅದೃಷ್ಟ, ಯೋಗಗಳ ಬಗ್ಗೆ ಹೇಳುತ್ತಾರೆ. ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿ ಶರೀರದಲ್ಲಿರುವ ಚಿಹ್ನೆ, ಮಚ್ಚೆ, ರೇಖೆಗಳಿಂದ ಭವಿಷ್ಯದ ವಿಚಾರಗಳನ್ನು ತಿಳಿಸುತ್ತಾರೆ.

ಭವಿಷ್ಯದಲ್ಲಿನ ಆಗು-ಹೋಗುಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಗ್ರಹಗತಿಗಳು, ಅದೃಷ್ಟ, ದುರಾದೃಷ್ಟಗಳಲ್ಲಿ ಸಹ ವ್ಯತ್ಯಾಸವಿರುತ್ತದೆ. ಅದಕ್ಕೆ ತಕ್ಕಂತೆ ಅವರು ಪೂಜಿಸಬೇಕಾದ ದೇವತೆಗಳು ಬೇರೆ ಬೇರೆಯಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ಜಾತಕವನ್ನು ನೋಡಿ ಯಾವ ಗ್ರಹಗಳ ಉಪಾಸನೆಯಿಂದ ಮತ್ತು ಗ್ರಹಗಳ ಅಧಿಪತಿ ದೇವತೆಗಳ ಆರಾಧನೆಯಿಂದ ಒಳಿತಾಗುತ್ತದೆ ಎಂಬುದನ್ನು ಹೇಳಬಹುದು.

ಇದನ್ನು ಓದಿ: ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..! 

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಜೀವನದಲ್ಲಿ ಯಶಸ್ಸು, ಸಂತೋಷ, ನೆಮ್ಮದಿಯನ್ನು ಕಾಣಬಹುದೆಂದು ತಿಳಿಯಬಹುದಾಗಿದೆ. ಇಷ್ಟಕ್ಕೆ ತಕ್ಕಂತೆ ಬೇರೆ ಬೇರೆ ದೇವರನ್ನು ಪೂಜಿಸುತ್ತಾರೆ, ಗಣಪತಿಯನ್ನು ಪೂಜಿಸುವವರು ಕೆಲವರಾದರೆ, ದೇವಿಯನ್ನು, ಶಿವನನ್ನು ಇನ್ನು ಕೆಲವರು ಪೂಜಿಸುತ್ತಾರೆ. ಶಿವನನ್ನು ಪೂಜಿಸಿದರೆ ಭಾಗ್ಯವಿದೆ ಎಂದು ತಿಳಿಯದೇ ಗಣಪತಿಯನ್ನು ಪೂಜಿಸುತ್ತಿರುತ್ತಾರೆ, ಅವರಿಗೆ ಕೆಟ್ಟದ್ದಾಗದೇ ಇದ್ದರೂ ಭಾಗ್ಯವು ಬದಲಾಗುವುದಿಲ್ಲ. ಅವರವರ ಅದೃಷ್ಟಕ್ಕೆ ಅಥವಾ ಭಾಗ್ಯವನ್ನು ತಂದು ಕೊಡುವ ದೇವರು ಯಾರೆಂದು ತಿಳಿದು ಪೂಜಿಸಿದರೆ ಒಳ್ಳೆಯದಾಗುತ್ತದೆ. 

ಹಸ್ತರೇಖೆಯನ್ನು ನೋಡಿ ಯಾರು? ಯಾವ ದೇವರನ್ನು ಪೂಜಿಸಿದರೆ ಒಳಿತು? ಎಂದು ತಿಳಿದುಕೊಳ್ಳಬಹುದೆಂದು ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಹಸ್ತದಲ್ಲಿ ಯಾವ ಚಿಹ್ನೆ ಅಥವಾ ರೇಖೆ ಇದ್ದರೆ ಯಾವ ದೇವರನ್ನು ಆರಾಧಿಸಬೇಕೆಂದು ತಿಳಿಯೋಣ..

ಇದನ್ನು ಓದಿ: ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್! 

ಹಸ್ತದ ರೇಖೆಗಳ ಬಗ್ಗೆ ಮೊದಲು ತಿಳಿಯೋಣ
ಹೃದಯ ರೇಖೆ: ಕಿರು ಬೆರಳ ಕೆಳಗಿನಿಂದ ಆರಂಭವಾಗಿ ತೋರು ಬೆರಳ ಕಡೆಗೆ ಹೋಗಿರುವ ರೇಖೆಯೇ ಹೃದಯ ರೇಖೆ.
ಜೀವನ ರೇಖೆ: ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯದಿಂದ ಆರಂಭವಾಗಿ  ಮಣಿಕಟ್ಟಿನ ಕಡೆಗೆ ಹೋಗಿರುವ ರೇಖೆಯೇ ಜೀವನ ರೇಖೆ.
ಮಸ್ತಿಷ್ಕ ರೇಖೆ: ಜೀವನ ರೇಖೆಯ ಮೇಲಿರುವ ರೇಖೆಯೇ ಮಸ್ತಿಷ್ಕ ರೇಖೆ.
ಭಾಗ್ಯ ರೇಖೆ: ಹಸ್ತದ ಮಧ್ಯ ಭಾಗದಲ್ಲಿರುವ ಅಂದರೆ ಮಣಿಕಟ್ಟಿನಿಂದ ಆರಂಭವಾಗಿ ಮಧ್ಯದ ಬೆರಳಿನ ಕಡೆಗೆ ಹೋಗಿರುವ ರೇಖೆಯೇ ಭಾಗ್ಯ ರೇಖೆ.

ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದ್ದರೆ
ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹೃದಯ ರೇಖೆಯಲ್ಲಿ ತ್ರಿಶೂಲದಂತಹ ಚಿಹ್ನೆಯಿದ್ದರೆ, ಅಂಥವರು ಶಿವನನ್ನು ಆರಾಧಿಸಬೇಕು. ಇದರಿಂದ ಜೀವನದಲ್ಲಿ ಕಷ್ಟಗಳಿಂದ ಮುಕ್ತಿ ಹೊಂದಬಹುದು. ಹೃದಯ ರೇಖೆಯ ಕೊನೆಯಲ್ಲಿ ಒಂದು ರೇಖೆ ಗುರು ಪರ್ವತದ ಕಡೆಗೆ ಹೋದರೆ ಅಂಥವರು ಹನುಮಂತನನ್ನು ಪೂಜಿಸಬೇಕು. ಇದರಿಂದ ಮುಂದೆ ಬರುವ ಕಷ್ಟಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಹಸ್ತದಲ್ಲಿ ಸೂರ್ಯಗ್ರಹದ ಚಿಹ್ನೆ ಇದ್ದರೆ
ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಸ್ತದಲ್ಲಿ ಸೂರ್ಯ ಗ್ರಹದ ಚಿಹ್ನೆ ಹುದುಗಿದ್ದರೆ ಅಂಥವರು ಸೂರ್ಯ ದೇವನನ್ನು ಆರಾಧಿಸಬೇಕು. ಅಲ್ಲದೇ ಭಾಗ್ಯ ರೇಖೆಯು ತುಂಡಾಗಿದ್ದು, ಅದರಲ್ಲಿ ದೋಷವಿದ್ದರೆ ಅಥವರು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಲಕ್ಷ್ಮೀ ಮಂತ್ರವನ್ನು ಪಠಿಸುವುದರಿಂದ ಶುಭಫಲ ಸಿಗುತ್ತದೆ. ಜೀವನ ರೇಖೆಯನ್ನು ಮತ್ತು ಭಾಗ್ಯ ರೇಖೆಯನ್ನು ಯಾವುದಾದರೂ ದಪ್ಪ ರೇಖೆ ತುಂಡು ಮಾಡಿದ್ದರೆ ಅಂಥವರು ಸಹ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಒಳಿತನ್ನು ಕಾಣಬಹುದಾಗಿದೆ.

ಇದನ್ನು ಓದಿ: ಮುದ್ದು ಮಗುವಿನ ಮೇಲೆ ಕೆಟ್ಟ ಕಣ್‌ದೃಷ್ಟಿ ತಾಕಿದರೆ ಹೀಗೆ ಮಾಡಿ .. 

ಹೃದಯ ರೇಖೆ ಮತ್ತು ಮಸ್ತಿಷ್ಕ ರೇಖೆ ಹೀಗಿದ್ದರೆ
ಹಸ್ತಸಾಮುದ್ರಿಕಾ ಶಾಸ್ತ್ರದ ಅನುಸಾರ ಹೃದಯ ರೇಖೆ ಮತ್ತು ಮಸ್ತಿಷ್ಕ ರೇಖೆ ಒಂದುಗೂಡಿದ್ದರೆ ಅಥವಾ ಮಸ್ತಿಷ್ಕ ರೇಖೆ ಮಂಗಳ ಕ್ಷೇತ್ರದವರೆಗೆ ಹೋಗಿದ್ದರೆ ಅಂಥವರು ಕೃಷ್ಣನನ್ನು ಪೂಜಿಸಬೇಕು. ಹೃದಯ ರೇಖೆ ತುಂಡಾಗಿದ್ದರೆ ಅಥವಾ ಅದರಿಂದ ಇನ್ನೂ ಹಲವು ರೇಖೆಗಳು ಕವಲೊಡೆದು ಮಸ್ತಿಷ್ಕ ರೇಖೆಯ ಕಡೆಗೆ ಹೋಗಿದ್ದರೆ ಅಂಥ ವ್ಯಕ್ತಿಗಳು ದೇವಿ ಭಗವತಿಯನ್ನು ಆರಾಧಿಸಬೇಕು.

Follow Us:
Download App:
  • android
  • ios