ನಾಗಾ ಸಾಧು ಆಗೋಕೆ ಮೂರು ಬಾರಿ ಲಿಂಗ ಕತ್ತರಿಸ್ತಾರೆ! ಸಾಧು ಹೇಳಿದ ಬೆಚ್ಚಿಬೀಳಿಸೋ ಸತ್ಯ!
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ನಾನಾ ಥರದ ಬಾಬಾಗಳು ಇದಾರೆ. ಅದರಲ್ಲೂ ನಾಗಾ, ಅಘೋರಿ ಬಾಬಾಗಳು ಎಲ್ಲರ ಗಮನ ಸೆಳೀತಿದಾರೆ. ಈ ನಡುವೆ ನಾಗಾ ಬಾಬಾ, ನಾಗಾ ಆಗಬೇಕಾದರೆ ಏನೇನೆಲ್ಲ ಮಾಡ್ತಾರೆ ಅನ್ನೋದನ್ನು ಹೇಳಿರೋದು ಈಗ ವೈರಲ್ ಆಗಿದೆ. ಬೆಚ್ಚಿಬೀಳಿಸೋ ಥರವೂ ಇದೆ.

ಈ ನಾಗಾ ಸಾಧು ಹೇಳಿರೋದು ಹೀಗಿದೆ: ನಾಗಾ ಸಾಧು ಆಗಬೇಕು ಅಂತ ಇರೋನಿಗೆ ಲಿಂಗವನ್ನು ಮೂರು ಬಾರಿ ಕತ್ತರಿಸಲಾಗುತ್ತೆ. ಅವನ ಮೇಲೆ ಪಂಚಗುರುಗಳು ಇರುತ್ತಾರೆ. ಈ ಪಂಚಗುರುಗಳು ಹೇಳಿದ ಕಠಿಣ ಸಾಧನೆಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ತನ್ನ ಸಂಸ್ಕಾರ ಅಥವಾ ಶ್ರಾದ್ಧವನ್ನು ತಾನೇ ಮಾಡಿ ಮುಗಿಸಬೇಕಾಗುತ್ತದೆ. ತನ್ನ ಪಿಂಡದಾನ ತಾನೇ ಮಾಡಬೇಕು. ಹಸಿದುಕೊಂಡೇ ಇದನ್ನು ಮಾಡಬೇಕಾಗುತ್ತದೆ ಹೊಟ್ಟೆಗೆ ಹನಿ ನೀರೂ ಸೇವಿಸುವಂತಿಲ್ಲ. ಬಟ್ಟೆಗಳನ್ನು ಹರಿದೆಸೆಯಬೇಕು. ಉಡಲು ಒಂದು ಲಂಗೋಟಿ ಕೊಡುತ್ತಾರೆ. ಕೊರೆಯುವ ಚಳಿಯಲ್ಲಿ ಲಂಗೋಟಿ ಉಟ್ಟುಕೊಂಡು ಸಾಧನೆ ಮಾಡಬೇಕು. ಅತಿ ಕೊರೆಯುವ ಚಳಿ ಇದ್ದಾಗ ಕೋಲ್ಡ್ ಪದಾರ್ಥಗಳನ್ನು, ಉರಿಯುವ ಬಿಸಿಲು ಇದ್ದಾಗ ಬಿಸೀ ಪದಾರ್ಥಗಳನ್ನು ಸೇವಿಸಲು ಕೊಟ್ಟು ಪರೀಕ್ಷಿಸಲಾಗುತ್ತದೆ.
ಮುಖ್ಯವಾಗಿ ಈ ನಾಗಾಗಳಾಗೋರಿಗೆ ಎಂಥಾ ನೋವನ್ನೂ ಸಹಿಸುವ ಶಕ್ತಿ ಬರೋ ಥರ ಮಾಡಲಾಗುತ್ತೆ. ಜೊತೆಗೆ ಲೈಂಗಿಕ ಬಯಕೆಗಳು ಇಲ್ಲದಂತೆ ಮಾಡಲಾಗುತ್ತೆ. ಇದನು ಮಾಡೋದು ಹೇಗೆ? ಲಿಂಗವನ್ನು ಕತ್ತರಿಸೋ ಮೂಲಕ. ಲಿಂಗದ ಮೇಲಿನ ಚರ್ಮವನ್ನು ಮೂರು ಬಾರಿ, ಮೂರು ಬೇರೆ ಬೇರೆ ವಿಧದ ರಿಚುವಲ್‌ಗಳಲ್ಲಿ ಕತ್ತರಿಸಲಾಗುತ್ತದೆ. ಹೀಗೆ ಮಾಡುವಾಗ ಆಗುವ ನೋವನ್ನು ಆ ಸನ್ಯಾಸಿ ಸಹಿಸಿಕೋಬೇಕು. ಇದರ ಬಳಿಕ ಆ ಸನ್ಯಾಸಿಯಲ್ಲಿ ಯಾವುದೇ ಬಗೆಯ ಲೈಂಗಿಕ ಬಯಕೆ ಮೂಡೋಕೆ ಸಾಧ್ಯವೇ ಇಲ್ಲ. ಇದು ನಂತರದ ಆತನ ಎಲ್ಲ ಆಧ್ಯಾತ್ಮಿಕ ಸಾಧನೆಗಳಿಗೆ ಸಹಾಯ ಆಗುತ್ತೆ.
ನಾಗಾ ಸಾಧು ಆಗ್ತೀನಿ ಅಂತ ಬಂದವರಿಗೆ ಮೊದಲು 10 ವರ್ಷಗಳ ಕಾಲ ಕಠಿಣ ಪರೀಕ್ಷೆಯನ್ನು ವಿಧಿಸಲಾಗುತ್ತದೆ. ಆ ಬಳಿಕವೇ ಅವರಿಗೆ ದೀಕ್ಷೆ ಕೊಡಬೇಕೋ ಬೇಡವೋ ಅನ್ನೋದು ನಿರ್ಧಾರವಾಗುತ್ತದೆ. ಹತ್ತು ವರ್ಷಗಳ ಬಳಿಕ ಆಯ್ಕೆ ಆಗುವ ಮಂದಿಗೆ ಪ್ರತೀ ಕುಂಭಮೇಳದಲ್ಲಿ ಬಹುದೊಡ್ಡ ಅಖಾಡ ಅನಿಸಿಕೊಂಡಿರೋ ಜುನಾ ಅಖಾಡದ ನೇತೃತ್ವದಲ್ಲಿ ನಾಗಾ ಸಾಧು ದೀಕ್ಷೆ ನೀಡಲಾಗುತ್ತದೆ. ಪಂಚಮುಂಡನದೊಂದಿಗೆ ನಾಗಾ ದೀಕ್ಷೆಯ ಪ್ರಕ್ರಿಯೆ ಆರಂಭವಾಗುತ್ತದೆ. ಅಡಿಯಿಂದ ಮುಡಿವರೆಗೆ ದೇಹದ 5 ಭಾಗಗಳಲ್ಲಿ ಬೆಳೆಯುವ ಎಲ್ಲಾ ಕೂದಲು ತೆಗೆಯಲಾಗುತ್ತದೆ. ಆ ಬಳಿಕ ಭಸ್ಮ ಬಳಿಯಲಾಗುತ್ತದೆ.. ಶಾಸ್ತ್ರೋಕ್ತವಾಗಿ ವಿಧಿಬದ್ಧವಾಗಿ ನಾಗಾ ಸಾಧು ದೀಕ್ಷೆಯ ಪ್ರಕ್ರಿಯೆ ನಡೆಯುತ್ತದೆ.
ಮೊದಲಿಗೆ ತಮ್ಮ ಹಿಂದಿನ 7 ಜನ್ಮ ಹಾಗೂ ಮುಂದಿನ 7 ಜನ್ಮ ಸೇರಿ ತಂದೆ ತಾಯಿಗೆ ಪಿಂಡ ಪ್ರಧಾನ ಮಾಡಬೇಕು. ತಂದೆ ತಾಯಿ ಬದುಕಿದ್ದರೂ ಸಹ ಪಿಂಡ ಪ್ರಧಾನ ಮಾಡಬೇಕು. ತಮ್ಮ ಪ್ರಾಣಕ್ಕೂ ತಾವೇ ಪಿಂಡ ಪ್ರಧಾನ ಮಾಡಬೇಕು. ಈ ಮೂಲಕ ತಮ್ಮ ದೇಹಕ್ಕೂ ತಮಗೂ ಅಧಿಕಾರವಿಲ್ಲ ಅನ್ನೋದನ್ನ ಶಾಸ್ತ್ರೋಕ್ತವಾಗಿ ಒಪ್ಪಿಕೊಳ್ಳಬೇಕು. ಆ ಬಳಿಕ ನಾಗಾ ಸಾಧು ಆಗೋ ವ್ಯಕ್ತಿಯ ಆತ್ಮವಷ್ಟೇ ಅವರಿಗೆ ಸೇರಿದ್ದು. ಉಳಿದಂತೆ ದೇಹವೂ ಸಹ ಅವರ ಸುಪರ್ದಿಗೆ ಸೇರಿದ್ದಲ್ಲ. ದೇಹ ಅವರು ಸೇರುವ ಅಖಾಡದ ಸುಪರ್ದಿಗೆ ಬರುತ್ತದೆ.
10 ವರ್ಷಗಳ ಕಠಿಣ ಪರೀಕ್ಷೆ ಬಳಿಕವೇ ಕುಂಭಮೇಳದಲ್ಲಿ ವಿಜಯ ಹವನ ಸಂಸ್ಕಾರದಿಂದ ದೀಕ್ಷೆಯ ಪ್ರಕ್ರಿಯೆ ಆರಂಭಿಸುತ್ತಾರೆ. ವಿಜಯ ಹವನ ಸಂಸ್ಕಾರ ದೀಕ್ಷೆ ಅಂದರೆ ಸತತ 24 ಗಂಟೆಗಳ ಕಾಲ ಉಪವಾಸವಿದ್ದು, ಹನಿ ನೀರನ್ನೂ ಮುಟ್ಟದೇ ನಾಗಾ ಸಾಧು ಆಗೋದಕ್ಕೆ ದೇಹ ಮನಸ್ಸುಗಳನ್ನು ಸಜ್ಜುಗೊಳಿಸೋ ಪ್ರಕ್ರಿಯೆ. ಅಲ್ಲಿ ಧರ್ಮಧ್ವಜದ ಕೆಳಗೆ ಕೂರಿಸಿ ಹಿರಿಯ ನಾಗಾ ಸಾಧುಗಳು ಬಂದು ಅಸಲಿ ಪ್ರಕ್ರಿಯೆ ಆರಂಭಿಸ್ತಾರೆ. ಆ ಸಂದರ್ಭ ಪ್ರಾಣವೂ ಹೋಗಬಹುದು. ಆ ನಡುರಾತ್ರಿಯ ಕಠಿಣ ಪ್ರಕ್ರಿಯೆ ತುಂಬಾ ನಿಗೂಢ. ಅದು ರಿಯಲ್ ನಾಗಾ ಸಾಧುಗಳನ್ನು ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ.
Indian Mythology: ಮಹಾಭಾರತದಲ್ಲಿ ಕರ್ಣನ ಜನ್ಮರಹಸ್ಯ ಹನ್ನೊಂದು ಮಂದಿಗೆ ತಿಳಿದಿತ್ತು!
ನಾಗಾ ಸಾಧುಗಳು ಏನು ತಿನ್ನುತ್ತಾರೆ? ಈ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಬರುತ್ತದೆ. ನಾಗಾ ಸಾಧುಗಳು ಭೋಲೆ ಬಾಬಾ ಎಂದರೆ ಶಿವನ ಭಕ್ತಿಯಲ್ಲಿ ಲೀನರಾಗಿರುತ್ತಾರೆ. ನಾಗಾ ಸಾಧುಗಳು ವಿವಿಧ ವಸ್ತುಗಳನ್ನು ತಿನ್ನುತ್ತಾರೆ. ಉದಾಹರಣೆಗೆ ಗಿಡಮೂಲಿಕೆಗಳು, ಕಂದಮೂಲ ಹಣ್ಣುಗಳು ಇತ್ಯಾದಿ. ನಾಗಾ ಸಾಧುಗಳು ಕಾಡುಗಳಲ್ಲಿ ಅಲೆದಾಡುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ. ಮತ್ತು ಕುಂಭ ಅಥವಾ ಮಹಾಕುಂಭದಲ್ಲಿ ಭಾಗವಹಿಸಲು ಬಂದು ಸೇರುತ್ತಾರೆ. ವರ್ಷಗಳ ಕಾಲ ಗುಹೆಗಳಲ್ಲಿ ಉಳಿದು ತಪಸ್ಸು ಮಾಡುತ್ತಾರೆ. ಗುಹೆಗಳನ್ನು ಬದಲಾಯಿಸುತ್ತಾರೆ. ಅವರು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದರ ನಿಖರ ವಿಳಾಸ ಹೇಳುವುದು ಕಷ್ಟ. ಕಾಲಕಾಲಕ್ಕೆ ನಾಗಾ ಸಾಧುಗಳು ನೆಲೆ ಬದಲಾಯಿಸುತ್ತಲೇ ಇರುತ್ತಾರೆ. ಇದು ಕೂಡ ಅವರು ಒಂದೇ ಪ್ರದೇಶದ ಬಗ್ಗೆ ಆತ್ಮೀಯತೆ ಬೆಳೆಸಿಕೊಳ್ಳದಂತೆ ಮಾಡುವ ರೂಢಿ.
ಒಂದೇ ಕಡೆ ಹೆಚ್ಚು ದಿನ ತಂಗುವಂತಿಲ್ಲ, ಕಂಡ ಕಂಡಲ್ಲಿ ಭಿಕ್ಷೆ ಬೇಡುವಂತಿಲ್ಲ, ನಾಗ ಸಾಧುಗಳ ವರ್ಗವೆಷ್ಟು ಗೊತ್ತಾ?