ದಿನಾಂಕ 24-o1-2020 ರಿಂದ 29-04-2022ರವರೆಗೆ ಸುಮಾರು ಎರಡು ವರ್ಷ ಮೂರು ತಿಂಗಳ ಕಾಲ ಧನು ರಾಶಿಯಲ್ಲಿ ಸಂಚರಿಸುವುದರಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ವೃಶ್ಚಿಕ ರಾಶಿಯವರಿಗೆ ಸಾಡೇಸಾತ್ ಶನಿ ಬಿಡುಗಡೆಯಾಗುತ್ತದೆ. ಕುಂಭರಾಶಿಯವರಿಗೆ ಸಾಡೇ ಸಾತ್ ಶನಿ ಆರಂಭವಾಗುತ್ತದೆ. ಶನಿಯು ಮೂರು, ಆರು ಮತ್ತು ಹನ್ನೊಂದನೇ ಮನೆಯವರಿಗೆ ಒಳ್ಳೆಯ ಫಲ ಕೊಡುತ್ತದೆ. ಉಳಿದ ಸ್ಥಾನಗಳಿಗೆ ಬೇರೆ ಬೇರೆ ಫಲ ಕೊಡುತ್ತಾನೆ.

ಜಾತಕದಲ್ಲಿ ಶನಿ ಪ್ರಬಲನಾಗಿದ್ದರೆ ಅವನು ಸೂಚಿಸುವ ದುಃಖವನ್ನು ಕಡಿಮೆ ಮಾಡುತ್ತಾನೆ. ಅವನು ನೀಚನಾಗಿ ಅರಿಮೂಢನಾಗಿದ್ದರೆ ಹೆಚ್ಚಿನ ದುಃಖವನ್ನು ಕೊಡುತ್ತಾನೆ. ವ್ಯಕ್ತಿಯು ಜನನ ಕಾಲದಲ್ಲಿ ಶನಿ ಇರುವ ಸ್ಥಿತಿಯಿಂದ ಅವನ ಸುಖದುಃಖಾಧಿಗಳನ್ನು ಹೇಳಬಹುದು. ಶನಿ ಸ್ವಕ್ಷೇತ್ರವಾದ ಮಕರ, ಕುಂಭಗಳಲ್ಲಿ ಉಚ್ಛ ಕ್ಷೇತ್ರವಾದ ತುಲಾ ರಾಶಿಯಲ್ಲಿ ಅಥವಾ ಗುರು ಕ್ಷೇತ್ರಗಳಾದ ಧನು, ಮೀನಗಳಲ್ಲಿದ್ದರೆ ವ್ಯಕ್ತಿಯ ಸ್ವಂತ ದುಃಖ ಕಡಿಮೆಯಾಗುತ್ತದೆ. ಶನಿ ಉಳಿದ ಕ್ಷೇತ್ರಗಳಲ್ಲಿದ್ದರೆ ವ್ಯಕ್ತಿಯ ಜನ್ಮರಾಶಿ ದ್ವಿತೀಯ ದ್ವಾದಶದಲ್ಲಿ ಸಂಚಾರವಾದರೆ ಅದು ಒಟ್ಟು ಏಳೂವರೆ ವರ್ಷದ ಶನಿಯಿಂದ ಕೆಲವರಿಗೆ ಬಹಳ ತೊಂದರೆಯಾಗುತ್ತದೆ. ನಾಲ್ಕು ಮತ್ತು ಐದನೆ ಸ್ಥಾನದಲ್ಲಿ ಸಂಚಾರ ಮಾಡುವಾಗ ಒಟ್ಟು ಐದು ವರ್ಷ ಕಾಲವನ್ನು ಪಂಚಮ ಶನಿ ಎಂದು ಕರೆಯುತ್ತಾರೆ. ಜನ್ಮರಾಶಿಯಿಂದ ಏಳು, ಎಂಟನೇ ಸ್ಥಾನದಲ್ಲಿ ಸಂಚಾರ ಮಾಡುವಾಗ ಐದು ವರ್ಷಗಳ ಕಾಲ ಅಷ್ಟಮ ಶನಿ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಕಷ್ಟಗಳು ಬರುವುದು ಸಾಮಾನ್ಯ. ಶನಿಯು ತುಲಾ ರಾಶಿಯಲ್ಲಿ ಉಚ್ಛನಾಗಿರುತ್ತಾನೆ, ಮೇಷ ರಾಶಿಯಲ್ಲಿ ನೀಚನಾಗಿರುತ್ತಾನೆ. ಮಕರ ಕುಂಭ ರಾಶಿಗಳು ಸ್ವಕ್ಷೇತ್ರವಾಗಿದೆ. ಶನಿಗೆ ಬುಧ ಶುಕ್ರರು ಮಿತ್ರರು. ರವಿ, ಚಂದ್ರ ಮತ್ತು ಕುಜ ಶತ್ರುಗಳಾಗಿರುತ್ತಾನೆ. ಸಾಧಾರಣವಾಗಿ ಶನಿಯು ಯಾವ ಭಾವದಲ್ಲಿದ್ದರೂ ಆ ಭಾವಕ್ಕೆ ನಷ್ಟವಾಗುತ್ತದೆ. ಅದಲ್ಲದೇ ಲಾಭವಾಗುವುದಿಲ್ಲ. ಶನಿಯು ವ್ಯಾದಿ ಮುಂತಾದ ತೊಂದರೆಯನ್ನು ಕೊಡುತ್ತಾನೆ.

ಓದಿದ್ದು ತಲೆಗೆ ಹತ್ತೋಲ್ಲ ಎನ್ನೋರ ಜಾತಕ ಹೀಗಿರುತ್ತೆ

ಎಂಟನೇ ಶನಿ ದೀರ್ಘ ಆಯುಷ್ಯವನ್ನು ನೀಡುತ್ತಾರೆ. ಕರ್ಕಾಟಕದವರಿಗೆ ಶನಿದೃಷ್ಟಿ ಒಳ್ಳೆಯದು. ಸಾಡೇಸಾತ್ ಶನಿ ಕಳೆಯುವ ಕೆಲವು ತಿಂಗಳಲ್ಲಿ ತಡೆ ಹಿಡಿದ ಭೋಗಭಾಗ್ಯಗಳನ್ನು ಶನಿ ದಯಪಾಲಿಸುವನು. 2ನೇ ಶನಿ ಅದರ ಜೊತೆಯಲ್ಲಿ ಗ್ರಹಗಳಿಲ್ಲದಿದ್ದರೆ ಮತ್ತು ದೃಷ್ಟಿ ಇಲ್ಲದಿದ್ದರೆ ಇವರು ಸಂನ್ಯಾಸಿಯಾಗುತ್ತಾರೆ.

ಶನಿಯಿಂದ ಬರುವ ದುಃಖ, ಚಿಂತೆಗಳಿಗೆ ಎಳ್ಳೆಣ್ಣೆಯಲ್ಲಿ ಪ್ರತಿಬಿಂಬವನ್ನು ಪೂರ್ತಿ ನೋಡಿ ಪ್ರಾರ್ಥಿಸಿ, ಗಣಪತಿ ಅಥವಾ ಶಿವನಿಗೆ ಅರ್ಪಿಸಬೇಕು. ಶನಿಸ್ತೋತ್ರವನ್ನು ನಿತ್ಯ ಸ್ನಾನವಾದ ಮೇಲೆ ದೇವರೆದುರು ಓದಬೇಕು. ಗಾಯತ್ರಿ ಮಂತ್ರವನ್ನು ಹಾಸಿಗೆಯಲ್ಲಿ ಏಳುವ ಮೊದಲು, ನಿತ್ಯ ಸ್ನಾನದ ಬಳಿಕ, ಮಧ್ಯಾಹ್ನ ಊಟದ ಮೊದಲು, ರಾತ್ರಿ ಊಟದ ಮೊದಲು, ರಾತ್ರಿ ಮಲಗುವ ಮೊದಲು ಹೇಳಬೇಕು. ಇದರಿಂದ ಶನಿಯು ಒಳ್ಳೆಯದನ್ನೇ ಮಾಡುತ್ತಾನೆ.

ಮಾಂದಿ ಕಾಟ ಇರೋ ಮನುಷ್ಯ ಮಾನಿನಿ ದಾಸನಾಗಿರುತ್ತಾನೆ

ಶನಿಗ್ರಹನು ಮಕರ ರಾಶಿಯಲ್ಲಿ ಸಂಚರಿಸುವಾಗ ದ್ವಾದಶ ರಾಶಿಯವರಿಗೆ ಉಂಟಾಗುವ ಫಲಗಳು:

ಮೇಷ - ಸಾಲದಿಂದ ತೊಂದರೆಯಾಗಲಿದೆ. ಹಣಕಾಸಿನ ಸಂಸ್ಥೆಗೆ ಕಟ್ಟಿದ ಹಣ ಸಕಾಲದಲ್ಲಿ ದೊರೆಯುವುದಿಲ್ಲ. ಸರಕಾರಿ ನೌಕರರಿಗೆ ಮುಂಭಡ್ತಿ ಸಿಕ್ಕಿ ಒಳ್ಳೆಯ ಸ್ಥಳಕ್ಕೆ ವರ್ಗಾವಣೆಯಾಗಲಿದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸ್ಥಾನಮಾನ ಸಿಗುತ್ತದೆ. ಮನೆ ನಿರ್ಮಿಸುವುದಕ್ಕೆ ಹಣಕಾಸಿನ ಅನಾನುಕೂಲ ಇದೆ.
ವೃಷಭ - ಮಕ್ಕಳಿಂದ ತೊಂದರೆಯನ್ನು ಅನುಭವಿಸುತ್ತೀರಿ. ಮನೆಯಲ್ಲಿ ವಾದ ವಿವಾದ ಆಗುತ್ತದೆ. ಕಚೇರಿಯಲ್ಲಿ ಮಸ್ಯೆ ಇರುತ್ತದೆ. ಸ್ತ್ರೀಯರಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮಿಥುನ - ದುಷ್ಟರ ಸಂಗ ಮಾಡುತ್ತೀರಿ. ಇದರಿಂದ ಸಮಾಜದ ಜನರಿಂದ ತೊಂದರೆ ಆಗಲಿದೆ. ಗೆಳೆಯರಿಂದ ತೊಂದರೆಯನ್ನು ಅನುಭವಿಸುತ್ತೀರಿ. ದೂರದ ಊರಿಗೆ ಕೆಲಸಕ್ಕೆ ಹೋದರೂ ತೊಂದರೆಯಾಗುತ್ತದೆ. ನ್ಯಾಯಾಲಯದ ಕೆಲಸದಲ್ಲಿ ಅಪಜಯವಾಗುತ್ತದೆ.
ಕರ್ಕಾಟಕ - ಹೆಂಡತಿಯಿಂದ ತೊಂದರೆಯನ್ನು ಅನುಭವಿಸುತ್ತೀರಿ. ಮನೆ ನಿರ್ಮಾಣದ ಕೆಲಸವು ಪ್ರಗತಿಯಲ್ಲಿ ಇರುವುದಿಲ್ಲ. ಮಕ್ಕಳಿಂದ ತೊಂದರೆಯನ್ನು ಅನುಭವಿಸುತ್ತೀರಿ. ಸ್ತ್ರೀಯರಿಂದ ತೊಂದರೆಯನ್ನು ಅನುಭವಿಸುತ್ತೀರಿ. ಮಹಿಳೆಯರ ಸ್ಥಾನಮಾನ ತಪ್ಪುತ್ತದೆ.
ಸಿಂಹ - ನೌಕರಿಯಲ್ಲಿ ಮುಂಭಡ್ತಿಯಾಗುವ ಸಂಭವ ಇದೆ. ಧಾರ್ಮಿಕ ಸಭೆ ಸಮಾರಂಭದಲ್ಲಿ ಭಾಗವಹಿಸುತ್ತೀರಿ. ಮನೆಯಲ್ಲಿ ಶುಭ ಮಂಗಳ ಕಾರ್ಯ ನಡೆಯುತ್ತದೆ. ಮನೆ ಆಸ್ತಿ ಖರೀದಿಸುವ ಯೋಗ ಇದೆ. ನೆಂಟರು, ಬಂಧುಗಳು ಅನ್ಯೂನ್ಯವಾಗಿರುತ್ತಾರೆ. ಮಕ್ಕಳಿಲ್ಲದವರಿಗೆ ಸಂತತಿಯಾಗುತ್ತದೆ.
ಕನ್ಯಾ - ಮನಸ್ಸಿನಲ್ಲಿ ಗೊಂದಲ ಇರುತ್ತದೆ. ಕೆಲಸ ಕಾರ್ಯದಲ್ಲಿ ಅಸಡ್ಡೆ ಇರುತ್ತದೆ. ಕೆಲವರಿಗೆ ಮಕ್ಕಳಿಂದ ತೊಂದರೆ ಇರುತ್ತದೆ. ಕೆಟ್ಟ ಕೆಲಸದಲ್ಲಿ ಆಸಕ್ತಿ ಇರುತ್ತದೆ. ವಿನಾ ಕಾರಣ ಹಣ ಖರ್ಚಾಗುತ್ತದೆ. ಸಾಲದಿಂದ ತೊಂದರೆಯಾಗಲಿದೆ. ಕಳ್ಳರಿಂದ ಹಣ ಕಳೆದುಕೊಳ್ಳುತ್ತೀರಿ.
ತುಲಾ - ಕೆಲಸ ಕಾರ್ಯದಲ್ಲಿ ಆಸಕ್ತಿ ಇರುವುದಿಲ್ಲ. ವಾಹನ ಮಾರಾಟದಿಂದ ನಷ್ಟವಾಗುತ್ತದೆ. ವಾಹನವನ್ನು ಆಗಾಗ ದುರಸ್ತಿ ಮಾಡ ಬೇಕಾಗುತ್ತದೆ. ವೈರಿಗಳಿಂದ ತೊಂದರೆಯನ್ನು ಅನುಭವಿಸುತ್ತೀರಿ. ಗೆಳೆಯರಿಂದಲೂ ತೊಂದರೆಯಾಗುತ್ತದೆ. ಹಣಕಾಸಿನ ನಷ್ಟವಾಗುತ್ತದೆ.
ವೃಶ್ಚಿಕ - ಹಣಕಾಸಿನ ಲಾಭ ಇರುತ್ತದೆ. ಮನೆ ವಾಹನ ಖರೀದಿಸುತ್ತೀರಿ. ಸರಕಾರಿ ನೌಕರರಿಗೆ ಮುಂಭಡ್ತಿ ಸಿಗುತ್ತದೆ. ಹೊಸ ಕೆಲಸ ಆರಂಭಿಸುವುದಕ್ಕೆ ಸರಿಯಾದ ಸಮಯ. ತಾವು ತಮ್ಮ ಪ್ರಯತ್ನಿಸಿದ ಕೆಲಸವನ್ನು ಮಾಡಿ ಮುಗಿಸುತ್ತೀರಿ. ಸ್ತ್ರೀಯರಿಂದ ಲಾಭ ಇರುತ್ತದೆ.
ಧನು - ಗೆಳೆಯರಲ್ಲಿ, ಆಪ್ತರಲ್ಲಿ ಮನಸ್ತಾಪವಾಗುತ್ತದೆ. ಮನೆಯಲ್ಲಿ ವಾದ ವಿವಾದಗಳಿಂದ ಮಾನಸಿಕ ನೆಮ್ಮದಿ ಕೆಡುತ್ತದೆ. ನೆರೆಹೊರೆಯ ಜನರಲ್ಲಿ ವೈರತ್ವ ಇರುತ್ತದೆ. ಸ್ತ್ರೀಯರಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ. ಮದುವೆಯ ಸಂಬಂಧಗಳು ಮುರಿದು ಬೀಳುತ್ತದೆ.

ಯಾವ ಜನ್ಮ ರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?

ಮಕರ - ತನ್ನ ಆಪ್ತರಿಂದ ತೊಂದರೆಯನ್ನು ಅನುಭವಿಸುತ್ತೀರಿ. ದೂರ ಸಂಚಾರ ಮಾಡುವುದರಿಂದ ನಷ್ಟ ಅನುಭವಿಸುತ್ತೀರಿ. ಸಾಲದಿಂದ ತೊಂದರೆಯನ್ನು ಅನುಭವಿಸುತ್ತೀರಿ. ವ್ಯಾಪಾರಕ್ಕೆ ಹಾಕಿದ ಹಣ ನಷ್ಟವಾಗುತ್ತದೆ. ವೈರಿಗಳಿಂದ ದೂರ ಇರುವುದು ಒಳ್ಳೆಯದು.
ಕುಂಭ - ಸಾಲ ಕೊಡುವುದರಿಂದ ನಷ್ಟ ಬರುತ್ತದೆ. ವಾಹನದಿಂದ ನಷ್ಟವನ್ನು ಅನುಭವಿಸುತ್ತೀರಿ. ಕಾರಣ ಇಲ್ಲದೇ ಹಣ ಖರ್ಚಾಗುತ್ತದೆ. ದೂರದ ಸಂಬಂಧಿಕರು ಮನೆಗೆ ಬಂದು ಹಣ ನಷ್ಟವಾಗುತ್ತದೆ. ಸರಕಾರದಿಂದ ಸಿಗುವ ಸವಲತ್ತು ಸಕಾಲದಲ್ಲಿ ಸಿಗುವುದಿಲ್ಲ. ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ.
ಮೀನ - ವಿವಿಧ ಮೂಲದಿಂದ ಬರ ಬೇಕಾದ ಹಣ ಸಕಾಲದಲ್ಲಿ ಕೈ ಸೇರುತ್ತದೆ. ವಾಹನ ಆಸ್ತಿ ಮಾರಾಟದಿಂದ ಲಾಭವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುತ್ತದೆ. ಮಕ್ಕಳಿಂದ ಲಾಭವಾಗುತ್ತದೆ. ಸಂಬಂಧಿಕರು ಎಲ್ಲಾ ಕೆಲಸಗಳಿಗೆ ಸಹಾಯ ಮಾಡುತ್ತಾರೆ.