Asianet Suvarna News Asianet Suvarna News

ಯಾವ ಜನ್ಮರಾಶಿಯವರಿಗೆ ಎಷ್ಟು ಲೈಂಗಿಕಾಸಕ್ತಿ ಇರುತ್ತೆ?

ಮನುಷ್ಯನ ಪ್ರತಿಯೊಂದೂ ನಡೆ, ನುಡಿ, ವ್ಯಕ್ತಿತ್ವ ಅವನ ಜಾತಕದ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಜನ್ಮ ರಾಶಿಯವರು ಮಿಲನದಲ್ಲಿ ಹೆಚ್ಚು ಆಸಕ್ತಿ- ಆ ಶಕ್ತಿ ತೋರಿಸುತ್ತಾರೆ?

which zodiac persons want more sex?
Author
Bengaluru, First Published Jan 13, 2020, 5:40 PM IST
  • Facebook
  • Twitter
  • Whatsapp

ಹುಟ್ಟು-ಸಾವು, ನಡೆ-ನುಡಿ, ಜೀವನದ ಏಳು ಬೀಳಿಗೆ ಜಾತಕದಲ್ಲಿರುವ ಗ್ರಹ ಗತಿಗಳ ಪ್ರಭಾವವೇ ಕಾರಣ. ಮನುಷ್ಯನ ವ್ಯಕ್ತಿತ್ವದ ಮೇಲೂ ಪ್ರಬಾವ ಬೀರುವ ಗ್ರಹ ಗತಿಗಳು ಲೈಂಗಿಕಾಸಕ್ತಿಗೂ ಕಾರಣವಾಗುತ್ತವೆ. ಈ ಆಧಾರದಲ್ಲಿ ಯಾವರ ರಾಶಿಯವರ ಲೈಂಗಿಕಾಸಕ್ತಿ ಹೇಗಿರುತ್ತೆ?

ಮೇಷ ರಾಶಿ
ಮೇಷ ಎಂದರೆ ಟಗರು. ಟಗರಿನ ಶಕ್ತಿ ಇವರಿಗೆ. ಇವರಿಗೆ ಕಾಮಾಸಕ್ತಿ ಅಧಿಕ, ಆ ಶಕ್ತಿಯನ್ನೂ ಎಲ್ಲರಿಗಿಂತ ಹೆಚ್ಚೇ ಹೊಂದಿರುತ್ತಾರೆ. ಅಂದರೆ ಇವರನ್ನು ಒಲಿಸಿಕೊಳ್ಳಬೇಕಾದರೆ, ಇವರಿಂದ ಕೆಲಸ ಮಾಡಿಸಿಕೊಳ್ಳಿಸಿಕೊಳ್ಳಬೇಕಾದರೆ ಸೆಕ್ಸ್ನ ಆಮಿಷ ಒಡ್ಡಿದರೆ ಬಹು ಸುಲಭ. ಇದು ಮಹಿಳೆಯರಿಗೂ ಪುರುಷರಿಗೂ ಸಮಾನವಾಗಿ ಅನ್ವಯ. ಸಾಕಷ್ಟು ಕಾಮದ ಅಗತ್ಯ ಇವರ ದೇಹಕ್ಕಿದೆ; ಆದರೆ ಇವರಿಗೆ ಸಂಪೂರ್ಣ ತೃಪ್ತಿ ಎಂಬುದಿಲ್ಲ. ಅದಕ್ಕಾಗಿ ಇವರು ಏನು ಬೇಕಾದರೂ ಮಾಡಬಲ್ಲರು.

ತುಲಾ ರಾಶಿ
ಈ ರಾಶಿಯವರು ಮಂಚದ ಮೇಲೆ ಸಂಪೂರ್ಣ ಸಾಮಥ್ರ್ಯ ಪ್ರದಶರ್ಿಸಬಲ್ಲರು. ಇವರು ತಮ್ಮ ಸಂಗಾತಿಯನ್ನು ತುಂಬ ಚೆನ್ನಾಗಿ ಸಂತೃಪ್ತಿಪಡಿಸಬಲ್ಲ ಸಾಮಥ್ರ್ಯ ಹೊಂದಿರುತ್ತಾರೆ. ಹಾಗೆಯೇ ತಾವೂ ಸಂತೃಪ್ತಿ ಹೊಂದಬಲ್ಲರು. ಹಾಗೆಯೇ ಇವರು ಸಂಗಾತಿ ದೊರೆಯದಿದ್ದರೂ ತಮ್ಮ ಕಾಮಾಸಕ್ತಿಯನ್ನು ತಣಿಸಿಕೊಳ್ಳಬಲ್ಲ ನಾನಾ ಕಲೆಗಳನ್ನು ಬಲ್ಲರು. ಅದನ್ನು ಅವರು ಕಲಾತ್ಮಕವಾಗಿ ಅಬಿವ್ಯಕ್ತಿಪಡಿಸುತ್ತಾರೆ. ತಮ್ಮ ಪ್ರೇಮವನ್ನು ಚೆನ್ನಾಗಿ ನಿವೇದಿಸಿಕೊಳ್ಳಬಲ್ಲರು
.
ವೃಷಭ ರಾಶಿ
ಇವರು ಈ ವಿಷಯದಲ್ಲಿ ನಂಬರ್ ಒನ್ ಸ್ಥಾನಕ್ಕೆ ಸ್ಪಧರ್ಿಸಲು ಅರ್ಹರು. ಇವರ ಜನ್ಮರಾಶಿಯ ಅರ್ಥ ಗೂಳಿ ಎಂದು. ಗೂಳಿಗೆ ಆ ಸಾಮಥ್ರ್ಯ ಅತ್ಯಧಿಕ ಎಂಬುದು ನಿಮಗೆ ಗೊತ್ತಿದ್ದದ್ದೇ ತಾನೆ. ಹಾಗೆಯೇ ಇವರು ತಮ್ಮ ಮಂಚದ ಸಂಗಾತಿಗಳ ಜೊತೆ ಹೆಚ್ಚಿನ ಎಮೋಷನಲ್ ಅಟ್ಯಾಚ್ಮೆಂಟ್ ಕೂಡ ಇಟ್ಟುಕೊಳ್ಳಲಾರರು. ಇಂಥವರು ಒಳ್ಳೆಯ ಪ್ರೇಮಿಗಳಾಗಲು ಸ್ವಲ್ಪ ಹೆಚ್ಚಿನ ಪ್ರಯತ್ನ ಬೇಕು. ಆದರೆ ಒಳ್ಳೆಯ ಸುಖಪುರುಷರಾಗುತ್ತಾರೆ.

ಆತ್ಮಹತ್ಯೆಗೂ ಕಾರಣವಾಗ್ತಾನೆ ಈ ಚಂದ್ರ

ಮಕರ ರಾಶಿ
ಇವರು ತಮಗೆ ಕಾಮ ಸದಾ ಬೇಕೆಂದು ಬಯಸುವವರು. ಅದಕ್ಕಾಗಿ ಏನನ್ನು ಮಾಡಲು ಸಿದ್ಧರು. ಆದರೆ ಅವರ ಮನಸ್ಸಿನ ಆಸಕ್ತಿಯಂತೆಯೇ ಅವರ ದೇಹವೂ ಸಹಕರಿಸುವುದು ಎಂದೇನಿಲ್ಲ. ಆದರೆ ತಮ್ಮ ಬಯಕೆಗಳನ್ನು ತಣಿಸುವುದಕ್ಕಾಗಿ ನಾನಾ ಚಿತ್ರವಿಚಿತ್ರ ತಂತ್ರ, ಸಾಧನಗಳ ಮೊರೆ ಹೋಗಬಹುದು. ಹಾಗೆಯೇ ತಮಗೆ ಇಂಥದೇ ಸಂಗಾತಿಗಳಾಗಬೇಕು ಎಂಬ ನಿರ್ದಿಷ್ಟ  ಬಯಕೆಯೂ ಇರುವುದಿಲ್ಲ. ಅಂದರೆ ಆ ಕ್ಷಣಕ್ಕೆ ಯಾರು ಸಿಗತ್ತಾರೋ ಅವರನ್ನು ಪ್ರೇಮಿಸಲು ಇವರು ಸಿದ್ಧ.

ಮೀನ ರಾಶಿ
ಮೀನ ರಾಶಿಯವರು ತಮ್ಮ ಬಗ್ಗೆ ಹೆಚ್ಚಿನ ಆತ್ಮಾಭಿಮಾನ ಹೊಂದಿದವರು. ಇವರು ಸುಲಭವಾಗಿ ಸಂಗಾತಿಗಳನ್ನು ಒಪ್ಪುವುದಿಲ್ಲ. ತಮ್ಮ ಸಂಗಾತಿ ಕೂಡ ತಮ್ಮಷ್ಟೇ ಪ್ರೇಮಿಯಾಗಿರಬೇಕು ಎಂದಿವರು ಬಯಸುತ್ತಾರೆ. ಇವರಿಗೆ ಮಂಚದಲ್ಲಿ ತೋರುವ ದೈಹಿಕ ಸಾಮಥ್ರ್ಯಕ್ಕಿಂತಲೂ ತಮ್ಮ ದೇಹದ ಬಗ್ಗೆ ಸಂಗಾತಿ ಹೆಚ್ಚಿನ ಮೆಚ್ಚುಗೆ, ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದು ಬಯಸುತ್ತಾರೆ. ಈ ರಾಶಿಯವರನ್ನು ನೀವು ಒಲಿಸಿಕೊಳ್ಳಬೇಕೆಂದಿದ್ದರೆ, ಇವರನ್ನು ಹೊಗಳದೆ ನಿಮಗೆ ಬೇರೆ ಉಪಾಯವೇ ಇಲ್ಲ.

ಕೊಂಡವರಿಗೆಲ್ಲ ಲಾಟರಿ ಏಕೆ ಹೊಡೆಯೋಲ್ಲ?

ಸಿಂಹ ರಾಶಿ
ಸಿಂಹ ರಾಶಿಯವರು, ಹೆಸರೇ ಸೂಚಿಸುವಂತೆ ಅಧಿಕಾರ ಸ್ಥಾಪಿಸುವ ಸ್ವಭಾವವನ್ನು ಹೆಚ್ಚು ಹೊಂದಿರುತ್ತಾರೆ. ಅವರ ಈ ಸ್ವಭಾವ ಮಂಚದ ಮೇಲೂ ಕಾಣಿಸಿಕೊಳ್ಳುತ್ತದೆ. ಇವರು ತಮ್ಮ ಸಂಗಾತಿಗಿಂತ ಕೆಳಗೆ ಎನಿಸಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಹೆಚ್ಚಿನ ಸಾಮರ್ಥ್ಯ ತೋರಿಸಲು ಇಷ್ಟಪಡುತ್ತಾರೆ. ಸಂಗಾತಿಯನ್ನು ತೃಪ್ತಿಪಡಿಸುವುದರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಗಳಿಸಿಕೊಳ್ಳುತ್ತಾರೆ. ಮಂಚದಲ್ಲಿ ಸೋಲಾದರೆ ಕಳವಳಪಡುತ್ತಾರೆ.
 

 

Follow Us:
Download App:
  • android
  • ios