-ಡಾ| ಹರಿಶ್ಚಂದ್ರ ಪಿ. ಸಾಲಿಯಾನ್, ಮೂಲ್ಕಿ                        
     
ಮನುಷ್ಯನಿಗೆ ಜ್ಞಾನವಿದ್ದರೆ ಆತನು ಕಲಿಯುವುದರಲ್ಲಿ ಹುಷಾರ್ ಇರುತ್ತಾರೆ. ವಿದ್ಯೆಯನ್ನು ಎಲ್ಲರೂ ಕಲಿಯುತ್ತಾರೆ. ಅವನು ಗುಣ ಸ್ವಭಾವದಲ್ಲಿ ಕೆಟ್ಟವನಾದರೂ ವಿದ್ಯೆ ಕಲಿಯುವುದರಲ್ಲಿ ಆಸಕ್ತಿ ಇರುವವರು ವಿದ್ಯೆಯನ್ನು ಒಳ್ಳೆಯ ರೀತಿಯಿಂದ ಕಲಿಯುತ್ತಾರೆ. ನಾವು ನಿರಂತರವಾಗಿ ವಿದ್ಯೆ ಕಲಿತರೆ ಆತನು ವಿದ್ಯಾವಂತನಾಗಲು ಸಾಧ್ಯ. ಈಗೀನ ಕಾಲದ ವಿದ್ಯೆಗೂ ಹಿಂದಿನ ಕಾಲದ ವಿದ್ಯೆಗೂ ಬಹಳ ವ್ಯತ್ಯಾಸವಿದೆ. ಈಗೀನ ಕಾಲದಲ್ಲಿ ವಿದ್ಯೆಯ ಪಠ್ಯ ಪುಸ್ತಕದಲ್ಲಿ ಬಹಳ ಪರಿವರ್ತನೆಯಾಗಿದೆ. ಆಗಾಗ ಪಠ್ಯ ಪುಸ್ತಕಗಳನ್ನು ಬದಲಾವಣೆ ಮಾಡಿದರೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಕಷ್ಟ. ಈಗ ಕೆಲಸಕ್ಕೆ ಬೇಕಾಗುವ ವಿದ್ಯೆಯನ್ನು ಕಲಿಸುತ್ತಾರೆ. 

ಸಲ್ಮಾನ್, ರಾಣಿ ಫೇಮಸ್ ಆಗ್ಲಿಕ್ಕೆ ಈ ಹರಳುಗಳೇ ಕಾರಣ

ಮನುಷ್ಯನಿಗೆ ಮೂರು ತಿಳುವಳಿಕೆ ಇದ್ದರೆ ಅವನು ಎಲ್ಲ ಪರೀಕ್ಷೆಯಲ್ಲಿಯೂ ವಿಜಯಿಯಾಗುತ್ತಾನೆ. ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸಲು ಆ ಮೂರು ವಿಷಯಗಳು ತುಂಬಾ ಸಹಕಾರಿ. ವಿದ್ಯಾರ್ಥಿಗಳು ಪಾಠಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಅರ್ಥವಾದ ವಿಷಯವನ್ನು ಮನಸ್ಸಿನಲ್ಲಿಟ್ಟು ಆಗಾಗ ಓದಬೇಕು, ಅರ್ಥವಾದ ವಿಷಯವನ್ನು ಬೇರೆಯವರಿಗೆ ಅರ್ಥವಾಗುವಂತೆ ಹೇಳಿಕೊಳ್ಳುವುದು..

ಮನುಷ್ಯನ ಜಾತಕದಲ್ಲಿರುವ ಗ್ರಹಗಳು ಯಾವುದಕ್ಕೆ ಅನಾನುಕೂಲ ಇರುತ್ತದೆ, ಅದರ ಬಗ್ಗೆ ಆಗಾಗ ಜನರಿಗೆ ಹೇಳಿಕೊಡುವ ವ್ಯವಸ್ಥೆ ಆಗಬೇಕು. ಜಾತಕದಲ್ಲಿ ಇರುವ ಗ್ರಹ ಎಲ್ಲಿವೆ ಎಂದು ನೋಡಿ ಸರಿಯಾದ ವಿಷಯಗಳನ್ನು ಕಲಿಸಬಹುದು. ಚಂದ್ರನ ಹತ್ತಿರವಿದ್ದರೆ ಕೆಲವು ಗ್ರಹಗಳು ಒಳ್ಳೆ ಫಲ ಕೊಡುತ್ತವೆ. ಯಾವುದೇ ಒಂದೇ ಒಂದು ತ್ಯಾಗದ ಮನೋಭಾವ ಇದ್ದರೆ ಇವರ ಬಾಳು ಬಂಗಾರ ಆಗುತ್ತದೆ. ಒಬ್ಬ ಮನುಷ್ಯನಲ್ಲಿ ಇಂತಹ ಗುಣಗಳು ಆ ವ್ಯಕ್ತಿಯ ಒಳ್ಳೆಯ ಗುಣವನ್ನು ಬೇರೆ ಗ್ರಹಗಳು ಅಪಹರಿಸಿ, ಇವರನ್ನು ಕೆಟ್ಟ ದಾರಿಯಲ್ಲಿ ಹೋಗುವುದನ್ನು ಸರಿಮಾಡಬೇಕಾಗುತ್ತದೆ.

ಮನಸ್ಸಿನ ಚಂಚಲ, ಓದುವುದರಲ್ಲಿ ಆಸಕ್ತಿ ಇಲ್ಲದೆ ಇರುವುದು, ಓದಿದ ವಿಷಯ ಪರೀಕ್ಷೆಯ ಸಂದರ್ಭದಲ್ಲಿ ಮರೆತು ಹೋಗುವುದು, - ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವನ್ನು ಸೂಚಿಸಿದ್ದಾರೆ. ಪ್ರತಿದಿನ ಪಾಠ ಓದಲು ಕುಳಿತಾಗ ದೇಹ ಶುದ್ಧಿ ಮಾಡಿಕೊಳ್ಳಬೇಕು. ನಂತರ ಮೂರರಿಂದ ಐದು ನಿಮಿಷಗಳ ಕಾಲ ಧ್ಯಾನ ಮಾಡಬೇಕು. ಕಲಿಯುವುದರಲ್ಲಿ ಆಸಕ್ತಿ ಇಲ್ಲದೆ ಇರುವುದು, ಆಯಾಸ, ಸೋಮಾರಿತನ ಎದುರು ಬರುತ್ತದೆ. ಇದಕ್ಕೆಲ್ಲಾ ಜನ್ಮ ಸಮಯದಲ್ಲಿರುವ ಚಂದ್ರ ದೋಷಗಳೇ ಕಾರಣ.

ಜಾತಕದಲ್ಲಿ ಈ ರೀತಿ ಇದ್ದವರಿಗೆ ಮಾನಿನಿ ದಾಸರಾಗಿರುತ್ತಾರೆ

ದೋಷಗಳಿರುವವರು ಸೋಮವಾರ ಜಪ ಮಾಡಬೇಕು. ಕಠಿಣವಾದ ಚಂದ್ರದೋಷ ಇರುವವರು ಸೋಮವಾರ ಪೂರ್ಮ ಉಪವಾಸ ಮಾಡುವುದು ಒಳ್ಳೆಯದು. ಓದಿನಲ್ಲಿ ಆಸಕ್ತಿ ಇಲ್ಲದಿರುವವರು, ಓದುದಕ್ಕೆ ಮನಸ್ಸೇ ಇರುವುದಿಲ್ಲ- ಇದರಿಂದ ಇವರಿಗೆ ದೋಷ ಇದೆ ಎಂದು ತಿಳಿಯುತ್ತದೆ. ಜನನ ಕಾಲದಲ್ಲಿ ಬುಧ ಗ್ರಹದ ಬಲ ಕಡಿಮೆ ಇದ್ದು, ಬುಧ ಗ್ರಹಕ್ಕೆ ಪಾಪ ಗ್ರಹಗಳ ದೃಷ್ಟಿ ಇದ್ದರೆ ಪಾಪಗ್ರಹದೊಂದಿಗೆ ಇದ್ದರೂ- ಓದುವಿನಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ. ಇಂತಹ ದೋಷ ಇದ್ದವರು ಬುಧವಾರ ಬುಧಗ್ರಹ ಸ್ತೋತ್ರ ಮತ್ತು ವಿಷ್ಣು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಗ್ರಹದೋಷ ಇರುವ ಬಗ್ಗೆ ಹೇಳಿ ಪ್ರಾರ್ಥಿಸಬೇಕು. ಬುಧವಾರ ಹಯಗ್ರೀವ ಸ್ತೋತ್ರವನ್ನು ನಿತ್ಯವೂ ಪಠಿಸಿದರೆ ಒಳ್ಳೆಯದು. ಅದರಂತೆ ಹಸಿರು ವಸ್ತ್ರದಾನ ಮಾಡಬೇಕು. ಸರಸ್ವತೀ ಯಂತ್ರ ಮುಂತಾದವು ವಿದ್ಯೆ ಕಲಿಯುವವರಿಗೆ ಉತ್ತಮ ಫಲ ನೀಡುತ್ತದೆ. ಗ್ರಹದೋಷ ಇರುವವರು ನೋಡಿ ಮೂಲ ಸರಸ್ವತಿ ಮಂತ್ರ ಪಠಿಸಬೇಕು, ಆಗ ವಿದ್ಯಾರ್ಥಿಗಲಿಗೆ ಒಳ್ಳೆಯದಾಗುತ್ತದೆ..