ಜಾತಕದಲ್ಲಿ ಮಾಂದಿ ಕಾಟವಿದ್ದರೆ ಮನುಷ್ಯ ಮಾನಿನಿ ದಾಸನಾಗುತ್ತಾನೆ!

ಗುಳಿಗೆ ಕಾಲಕ್ಕೆ ತಕ್ಕಂತೆ ಜಾತಕದಲ್ಲಿ ಪ್ರಭಾವ ಬೀರುವ ಅಂಶ ಮಾಂದಿ. ಗ್ರಹಗಳ ಬಲಾಬಲದಷ್ಟೇ ಮಾಂದಿಯೂ ಮನುಷ್ಯನ ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಆದರಿದು ಯಾವ ಮನೆಯಲ್ಲಿ, ಎಷ್ಟರ ಮಟ್ಟಿಗೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಾಂದಿ ಎಲ್ಲಿದ್ದರೆ, ಏನು ಫಲ?

Effect of Mandi in various houses of horoscope in astrology

ಜಾತಕದಲ್ಲಿ ಗ್ರಹವಲ್ಲದೇಯೂ, ಮನುಷ್ಯನ ಮೇಲೆ ಪ್ರಭಾವ ಬೀರುವ, ಕಾಲಕ್ಕೆ ತಕ್ಕಂತೆ ಲೆಕ್ಕೆ ಹಾಕುವ ಅಂಶವೇ ಮಾಂದಿ. ಇದು ಶನಿಯ ದೃಷ್ಟಿ ಅಥವಾ ಜೊತೆಯಲ್ಲಿ ಇದ್ದಾಗ ಅನಿಷ್ಟ ಫಲ ಕೊಡುತ್ತದೆ. ಎಂತಹ ಬಲವಾದ ಯೋಗಗಳಿದ್ದರೂ ಅಷ್ಟಮ ಮಾಂದಿಯು ಎಳೆ ಪ್ರಾಯದಲ್ಲಿ ಮೃತ್ಯು ತರಬಹುದು. ಮಾಂದಿಯು ಎಡಕ್ಕೆ ಸುತ್ತುವ ಗ್ರಹ, ಅನಿಷ್ಟ ಪ್ರೇತ ಬಾಧೆ ಆಕಸ್ಮಿಕವಾಗಿ ಮರಣ ಕೊಡುತ್ತದೆ. ಜಾತಕ ನೋಡುವಾಗ ಅಥವಾ ಪ್ರಶ್ನೆ ಹೇಳುವಾಗ- ಮಾಂದಿಯನ್ನು ನೋಡಲೇಬೇಕು ಹಾಗೆಯೇ ಮಾಂದಿಯ ಬಗ್ಗೆ ಜಾಗ್ರತೆ ಮಾಡಬೇಕು.

ನಿಮ್ಮ ಅದೃಷ್ಟದ ಹರಳು - ಸಂಖ್ಯೆ ಯಾವುದು ?

ಮಾಂದಿಯು ಲಗ್ನದಲ್ಲಿದ್ದರೆ ಇವರು ಒರಟು ಮನಸ್ಸಿನವರಾಗಿದ್ದು, ಇವರಲ್ಲಿ ಕೆಟ್ಟ ಗುಣಗಳಿರುತ್ತದೆ. ಕೆಲವರಿಗೆ ಅನಾರೋಗ್ಯ ಕಾಡುತ್ತದೆ. ಜೀವನದಲ್ಲಿ ಛಲ ಇಲ್ಲದೇ ಹೇಡಿ ಜೀವನ ಮಾಡುತ್ತಾರೆ. ಮಾಂದಿಯು ಎರಡನೇಯ ಮನೆಯಲ್ಲಿದ್ದರೆ ಇವರ ಮಾತು ಕೆಟ್ಟದಾಗಿದ್ದು, ಜಗಳ ಗಂಟರಾಗಿರುತ್ತಾರೆ. ವಿದ್ಯೆಗೆ ತೊಂದರೆ ಇರುತ್ತದೆ. ಹಣಕಾಸು ಸಮಸ್ಯೆ ವಿಪರೀತ ಕಾಡುತ್ತದೆ. ಮೂರನೇ ಮನೆಯಲ್ಲಿ ಮಾಂದಿ ಇದ್ದರೆ ಇವರು ದೀರ್ಘಾಯುಷ್ಯ, ಸಂಪತ್ತು, ಕರ‍್ತಿ, ಎದುರು ಕೋಪ, ಇವರಿಗೆ ಶತ್ರುಗಳು ಜಾಸ್ತಿ ಇದ್ದು ಜನರಿಂದ ಬೇರೆ ಇರುವ ಸ್ವಭಾವ ಇವರದ್ದಾಗಿರುತ್ತದೆ. ನಾಲ್ಕನೇಯ ಮಾಂದಿಯು ಹಣಕಾಸು, ವಿದ್ಯೆ, ಮನೆ, ವಾಹನ, ಬಂಧುಗಳು ಇಲ್ಲದವರಾಗುತ್ತಾರೆ. ಸದಾ ಸಂಚಾರದಲ್ಲಿ ಇರುತ್ತಾರೆ. ಪಾಪಗ್ರಹ ನೋಡಿದರೆ ಬಾಣಂತಿ ಮೃತ್ಯುವಿಗೆ ಸಿಗುತ್ತಾರೆ. ಐದನೇಯ ಮನೆಯಲ್ಲಿ ಮಾಂದಿ ಇದ್ದರೆ ಮನಸ್ಸು ಚಂಚಲ, ಆಯುಷ್ಯ ಕಡಿಮೆ, ಹಿರಿಯರಿಗೆ ಗೌರವ ಕೊಡುವುದಿಲ್ಲ. ಆರನೇ ಮನೆಯಲ್ಲಿ ಮಾಂದಿ ಇದ್ದರೆ ಶತ್ರುಗಳು ದೂರ ಆಗುತ್ತಾರೆ. ಇವರಿಗೆ ದೈರ್ಯವಂತ, ಶಕ್ತಿಶಾಲೆ ಪುತ್ರರು ಇರುತ್ತಾರೆ, ಚಾಣಾಕ್ಯರಾಗಿ ಇರುತ್ತಾರೆ. ಏಳರಲ್ಲಿ ಮಾಂದಿ ಇದ್ದರೆ ವಿರಸ ದಾಂಪತ್ಯ, ಅನೈತಿಕ ಸಂಬಂಧ ಹೊಂದುತ್ತಾರೆ.

ರಾತ್ರಿ ಉಗುರು ಕತ್ತರಿಸಿದ್ರೆ ಏನು ಪ್ರಾಬ್ಲಂ ಅನ್ನೋರು ಇದನ್ನೊಮ್ಮೆ ಓದಿ!

ಎಂಟರಲ್ಲಿ ಮಾಂದಿ ಇದ್ದರೆ ಆಯುಷ್ಯ ಕಡಿಮೆ, ಮುಖ ಕಣ್ಣುಗಳಲ್ಲಿ ದೋಷ ಇರುತ್ತದೆ. ಆಗಾಗ ಅನಾರೋಗ್ಯ ಇರುತ್ತದೆ. ನವಮದಲ್ಲಿ  ಮಾಂದಿ ಇದ್ದರೆ ಹಿರಿಯರ ದೋಷವನ್ನು ಕಂಡು ಹಿಡಿಯುವ, ದರಿದ್ರ - ಅರ‍್ಮಿ ಸಂತಾನ ಇದ್ದರೆ ಅಲ್ಪಾಯುಷ್ಯ ಇರುತ್ತದೆ. ದಶಮದಲ್ಲಿ ಮಾಂದಿ ಇದ್ದರೆ ಪ್ರಯತ್ನಿಸಿದ ಕೆಲಸದಲ್ಲಿ ಅಪಜಯ, ಬೇಡವಾದ ಕೆಲಸಗಳನ್ನು ಮಾಡುತ್ತಾನೆ. ಹನ್ನೊಂದರಲ್ಲಿ ಮಾಂದಿ ಇದ್ದರೆ ಇವರಿಗೆ ನಿಧಿ ಸಿಕ್ಕಿ ಅದೃಷ್ಟಶಾಲಿಯಾಗುತ್ತಾರೆ. ಸದೃಡ ಶರೀರ, ದಾಂಪತ್ಯದಲ್ಲಿ ಸುಖ ಇರುತ್ತದೆ. ವ್ಯಯದಲ್ಲಿ ಮಾಂದಿ ಇದ್ದರೆ ದುಂದು ವೆಚ್ಚ ಮಾಡುವವ, ಪಾಪಿ ಕೆಲಸ ಮಾಡುತ್ತಾನೆ. ಸುಖ ಇಲ್ಲದವ, ಸಂಚಾರದಲ್ಲಿ ತೊಂದರೆ ಬರುತ್ತದೆ. ಇವರಿಗೆ ಕೆಲಸ ಕಾರ್ಯಗಳಲ್ಲಿ ಅಸಡ್ಡೆ ಇರುತ್ತದೆ.

ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

ಮಂದಿ ಗುರುವಿನೊಂದಿಗಿದ್ದರೆ....

ಮಾಂದಿಯು ಗುರುವಿನೊಂದಿಗೆ ಇದ್ದರೆ ಕರ್ಮ ನಿಂದನೆ ಮಾಡುತ್ತಾನೆ. ವೇದ ಶಾಸ್ತ್ರಗಳನ್ನು ಟೀಕಿಸುತ್ತಾನೆ. ರವಿಯೊಂದಿಗೆ ಮಾಂದಿ ಇದ್ದರೆ ಆತ್ಮಾಭಿಮಾನ ಇಲ್ಲದವ ತಂದೆಯ ದ್ವೇಷಿಯಾಗುತ್ತಾನೆ. ಚಂದ್ರನೊಂದಿಗೆ ಮಾಂದಿ ಇದ್ದರೆ ತಾಯಿಗೆ ಕೇಡು ಬಗೆಯುವವನಾಗುತ್ತಾನೆ. ಕುಜನ ಜೊತೆ ಇದ್ದರೆ ಬೆಂಕಿಯಿಂದ ತೊಂದರೆ ಇರುತ್ತದೆ. ಸಹೋದರನನ್ನು ಕಳೆದು ಕೊಳ್ಳುತ್ತಾನೆ. ಬುಧನೊಂದಿಗೆ ಮಾಂದಿ ಇದ್ದರೆ ಬುದ್ಧಿ ಮಾಂದ್ಯ, ವಿದ್ಯೆಗೆ ತೊಂದರೆ ಇರುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ಶುಕ್ರನ ಜೊತೆ ಮಾಂದಿ ಇದ್ದರೆ ಸ್ತ್ರೀಸಂಗ, ಅಸುಖಿ, ಸ್ತ್ರೀ ರೋಗ ಪೀಡಿತನಾಗುತ್ತಾನೆ. ಮಾಂದಿ ಶನಿಯೊಂದಿಗೆ ಇದ್ದರೆ ಕುಷ್ಠರೋಗ ಕಾಯಿಲೆ ಇರುವ ಅಲ್ಪಾಯುಷಿಯಾಗುತ್ತಾನೆ. ರಾಹುವಿನೊಂದಿಗೆ ಮಾಂದಿ ಇದ್ದರೆ ವಿಷದಿಂದ ಪೀಡೆ ಇರುತ್ತದೆ. ಕೇತುವಿನೊಂದಿಗೆ ಮಾಂದಿ ಇದ್ದರೆ ಅಗ್ನಿಯಿಂದ ಭಯ, ಮಾಟ ಮಂತ್ರದಲ್ಲಿ ತಲ್ಲಿಣರಾಗುತ್ತಾರೆ. ಲಗ್ನ ಅಥವಾ ತ್ರಿಕೋನದಲ್ಲಿ ಮಾಂದಿ ಇರುವ ಅಧಿಪತಿಯು ಇದ್ದರೆ ಜಾತಕನಿಗೆ ಸಂಪತ್ತು ಕರ‍್ತಿ ಬರುತ್ತದೆ.

Latest Videos
Follow Us:
Download App:
  • android
  • ios