Chamarajanagar: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ

ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿಯ ಚಿಕ್ಕ ರಥೋತ್ಸವ ಭಾನುವಾರ ಜರುಗಲಿರುವುದರಿಂದ ದೇವಾಲಯದ ಸುಣ್ಣ ಬಣ್ಣ ಬಳಿಯಲಾಗಿದ್ದು, ರಥವನ್ನು ಶೃಂಗರಿಸಲಾಗುತ್ತಿದೆ.

Sankranti Rathotsava at Biligiri Ranganathaswamy Hill In Chamarajanagar gvd

ಅಂಬಳೆ ವೀರಭದ್ರ ನಾಯಕ

ಯಳಂದೂರು (ಜ.14): ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿಯ ಚಿಕ್ಕ ರಥೋತ್ಸವ ಭಾನುವಾರ ಜರುಗಲಿರುವುದರಿಂದ ದೇವಾಲಯದ ಸುಣ್ಣ ಬಣ್ಣ ಬಳಿಯಲಾಗಿದ್ದು, ರಥವನ್ನು ಶೃಂಗರಿಸಲಾಗುತ್ತಿದೆ. ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಪುನರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರಿಂದ ಸಂಕ್ರಾಂತಿಯ ಚಿಕ್ಕ ರಥೋತ್ಸವ ಕಳೆದ ಐದು ವರ್ಷಗಳಿಂದ ಸ್ಧಗಿತಗೊಂಡಿತ್ತು. 

ಆದರೆ, ಕಳೆದ ವರ್ಷವಷ್ಟೇ ದೇವಾಲಯ ಪ್ರಾರಂಭಗೊಂಡಿದ್ದರಿಂದ ಐದು ವರ್ಷದ ಬಳಿಕ ಮಕರ ಸಂಕ್ರಾಂತಿಯ ಬಿಳಿಗಿರಿ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುವುದರಿಂದ ದೇವಾಲಯಕ್ಕೆ ಸುಣ್ಣ ಬಣ್ಣ ಗಳಿಂದ ಶೃಂಗೇರಿಸುತ್ತಿದ್ದಾರೆ.ಬಿಳಿಗಿರಿ ರಂಗನಾಥ ಸ್ವಾಮಿಯ ಕಲ್ಯಾಣಿ, ಹಂತಗಳು ಆಂಜನೇಯ ದೇವಾಲಯ ಗಂಗಾಧರೇಶ್ವರ ದೇವಾಲಯ ಕಮರಿಯಲ್ಲಿರುವ ಬಿಳಿಗಿರಂಗನಾಥ ಸ್ವಾಮಿಯ ಪ್ರತಿಷ್ಠಾನಗೊಳಿಸಿದ ಮೂಲ ಗರ್ಭಗುಡಿಯನ್ನು ಕೂಡ ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿದೆ. ರಾಜಗೋಪುರದಿಂದ ಇಳಿಯುವ ಹಂತಗಳಿಗೆ ಸುಣ್ಣ ಬಣ್ಣ ಬಳಿದು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. 

Chamarajanagar: ನೋಟಿಸ್‌ ನೀಡಿದ್ರೂ ಗಣಿ ಸದ್ದು ನಿಂತಿಲ್ಲ: ಕದ್ದು ಮುಚ್ಚಿ ಗಣಿಗಾರಿಕೆ

ಜಾತ್ರೆ ತೆಗೆದುಕೊಂಡಿದ್ದರಿಂದ ರಾಜ್ಯದ ನಾನಾ ಹಬ್ಬಗಳ ಭಕ್ತರು ನಿರಾಸೆಗೊಂಡಿದ್ದರು. ಆದರೆ, ಈ ಬಾರಿ ಯಾವುದೇ ಸಾಂಕ್ರಾಮಿಕ ರೋಗದ ಭಯಭೀತಿ ಇಲ್ಲದೆ ಇದ್ದರಿಂದ ಅದ್ಧೂರಿ ಜಾತ್ರೆ ನಡೆಸಲು ಪೂರ್ವ ಸಿದ್ಧತೆ ನಡೆಸುತ್ತಿದ್ದಾರೆ. ಚಿಕ್ಕ ಜಾತ್ರೆ ನಡೆಯುವ ಸಂಭ್ರಮದಿಂದ ಸೋಲಿಗರ ಭಾವ ಎಂದೇ ಕರೆಯುವ ಗಿರಿಜನರು ರಂಗಪ್ಪನ ಜಾತ್ರೆಗೆ ಬೇಕಾದ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಚಿಕ್ಕತೇರು ಶೃಂಗರಿಸಲು ಕಾಡಿನಿಂದ ಅಗತ್ಯ ಬೇಕಾದ ಮರಗಳನ್ನು ತರಲಾಗಿದೆ ಅಲ್ಲದೆ ದೇವಾಲಯದ ಆಡಳಿತ ಮಂಡಳಿ ಕೂಡ ಸೋಲಿಗ ಸಮುದಾಯದ ಆಶ್ರಯದಲ್ಲಿ ಎಲ್ಲಾ ಸಿದ್ಧತೆ ಮಾಡುತ್ತಿರುವುದರಿಂದ ಸೋಲಿಗ ಸಮುದಾಯ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. 

ಕಲ್ಯಾಣಿ ಬಳಿ ಇರುವ ಮುಡಿ ಕೇಂದ್ರಕ್ಕೆ ಸುಣ್ಣ ಬಣ್ಣ ಬಳಿದು ಭಕ್ತರು ತಮ್ಮ ಹರಕೆ ತೀರಿಸಲು ಅನುವು ಮಾಡಿಕೊಡಲಾಗಿದೆ. ದೇವಾಲಯದ ಆಡಳಿತ ಮಂಡಳಿ ಜಾತ್ರೆಯ ಆಹ್ವಾನ ಪತ್ರಿಕೆಗಳನ್ನು ನಾಡಿನ ಎಲ್ಲಾ ಭಕ್ತರಿಗೂ ಕಳಿಸುವುದರ ಜೊತೆಗೆ ಸಾರ್ವಜನಿಕ ಅಂಗಡಿ ಮುಂಗಟುಗಳಲ್ಲಿ ಜಾತ್ರೆಯ ಆಹ್ವಾನ ಪತ್ರಿಕೆಗಳನ್ನು ಅಂಟಿಸುವ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೂ ಕೂಡ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಬಸ್‌ಗಳನ್ನು ನಿಯೋಜಿಸಲಾಗಿದೆ. ಇನ್ನು ತಾಲೂಕು ಆಡಳಿತದಿಂದ ಭಕ್ತರಿಗೆ ಕುಡಿವ ನೀರಿನ ವ್ಯವಸ್ಥೆ ಸುರಕ್ಷತೆಗೆ ಆರೋಗ್ಯ ಸೇವೆಯನ್ನು ಅಲ್ಲಲ್ಲಿ ತಾತ್ಕಾಲಿಕ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ.

ಬಿಳಿಗಿರಿರಂಗನಾಥ ಸ್ವಾಮಿ ಸಂಕ್ರಾಂತಿ ಚಿಕ್ಕ ರಥೋತ್ಸವ ಜರುಗುವುದರಿಂದ ಈಗಾಗಲೇ ಬಿಳಿಗಿರಿರಂಗನಾಥಸ್ವಾಮಿಗೆ ಕಂಕಣ ಕಟ್ಟಲಾಗಿದ್ದು ನಿತ್ಯ ಉತ್ಸವ ನಡೆಸಲಾಗುತ್ತಿದೆ.
-ರವಿ, ಪ್ರಧಾನ ಆರ್ಚಕ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ.

ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ ಐದು ವರ್ಷದ ಬಳಿಕ ನಡೆಯುತ್ತಿರುವ ಎಲ್ಲಾ ಭಕ್ತರಿಗೂ ಅನುಕೂಲವಾಗಲಿ ಎಲ್ಲಾ ಸಕಲ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಬರುವಂತ ಭಕ್ತರಿಗೆ ಅವಸ್ಥೆ ಶೌಚಾಲಯ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ.
-ಮೋಹನ್‌ ಕುಮಾರ್‌, ಸಿಇಒ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ

Chamarajanagar: ಮಲೆ ಮಹದೇಶ್ವರ ಬೆಟ್ಟಕ್ಕೆ ಸಚಿವ ಸೋಮಣ್ಣ ಭೇಟಿ

ಬಿಳಿಗಿರಿ ರಂಗನಾಥ ಸ್ವಾಮಿ ಚಿಕ್ಕಜಾತ್ರೆ ನಡೆಯುತ್ತಿರುವುದು ಗಿರಿಜನರಲ್ಲಿ ಉತ್ಸಾಹಕರಾಗಿದ್ದೇವೆ ಪ್ರತಿ ಮನೆಯಲ್ಲೂ ಕೂಡ ನಮ್ಮ ಮನೆದೇವರು ರಂಗಭವನ ಜಾತ್ರೆಗೆ ನಮ್ಮ ಸಮುದಾಯದಿಂದ ಎಲ್ಲಾ ರೀತಿಯ ಸೇವೆಗಳನ್ನು ಕೂಡ ಒದಗಿಸುತ್ತಿದ್ದೇವೆ.
-ರಂಗೇಗೌಡ, ಪುರಾಣಿ ಪೋಡು, ಬಿಳಿಗಿರಿರಂಗನಬೆಟ್ಟ

Latest Videos
Follow Us:
Download App:
  • android
  • ios