Asianet Suvarna News Asianet Suvarna News

Chamarajanagar: ಮಲೆ ಮಹದೇಶ್ವರ ಬೆಟ್ಟಕ್ಕೆ ಸಚಿವ ಸೋಮಣ್ಣ ಭೇಟಿ

ಮಲೆ ಮಹದೇಶ್ವರ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ವಸತಿ ಸಚಿವ ವಿ ಸೋಮಣ್ಣ ಕುಟುಂಬ ಸಮೇತ ಭೇಟಿ ನೀಡಿ ಮಲೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿದರು. ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರಾಭಿವೃದ್ಧಿ ಧಾರ್ಮಿಕ ಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ವಸತಿ ಸಚಿವ ವಿ.ಸೋಮಣ್ಣ ಕುಟುಂಬ ಸಮೇತ ಪತ್ನಿ ಶೈಲಜಾ, ಪುತ್ರಿ ಪ್ರಿಯ, ಮೊಮಕ್ಕಳಾದ ದಕ್ಷ ಗೌರಿ ಮಲೆ ಮಾದೇಶ್ವರನ ದರ್ಶನ ಪಡೆದರು. 

Minister V Somanna visits Male Mahadeshwara Hills At Chamarajanagar gvd
Author
First Published Jan 9, 2023, 7:43 PM IST

ಹನೂರು (ಜ.09): ಮಲೆ ಮಹದೇಶ್ವರ ಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ವಸತಿ ಸಚಿವ ವಿ ಸೋಮಣ್ಣ ಕುಟುಂಬ ಸಮೇತ ಭೇಟಿ ನೀಡಿ ಮಲೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿದರು. ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಪ್ರಾಧಿಕಾರಾಭಿವೃದ್ಧಿ ಧಾರ್ಮಿಕ ಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ವಸತಿ ಸಚಿವ ವಿ.ಸೋಮಣ್ಣ ಕುಟುಂಬ ಸಮೇತ ಪತ್ನಿ ಶೈಲಜಾ, ಪುತ್ರಿ ಪ್ರಿಯ, ಮೊಮಕ್ಕಳಾದ ದಕ್ಷ ಗೌರಿ ಮಲೆ ಮಾದೇಶ್ವರನ ದರ್ಶನ ಪಡೆದರು. 

ಕಾಮಗಾರಿ ಪರಿಶೀಲನೆ: ಬಹು ನಿರೀಕ್ಷಿತ ಮಲೆಮಹದೇಶ್ವರ ವಿಗ್ರಹ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಸಚಿವ ವಿ. ಸೋಮಣ್ಣ ನೂತನ ವರ್ಷದ ಫೆಬ್ರವರಿ ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ರಾಜ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಯಿ ಅವರನ್ನು ಮತ್ತೊಮ್ಮೆ ಮಲೆಮಹದೇಶ್ವರ ಬೆಟ್ಟಶ್ರೀಕ್ಷೇತ್ರಕ್ಕೆ ಕರೆ ತಂದು ಮಲೆಮಹದೇಶ್ವರ ವಿಗ್ರಹ ಲೋಕಾರ್ಪಣೆಗೊಳಿಸಿ ಭಕ್ತರ ಅನುಕೂಲಕ್ಕಾಗಿ ಸಕಲ ರೀತಿಯಲ್ಲಿಯೂ ಅನುಕೂಲ ಕಲ್ಪಿಸಲಾಗುವುದು. ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಲೋಕದಶಗಳಿಲ್ಲದಂತೆ ಇಲ್ಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿದರು. 

ಇನ್ಸ್‌ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಕೊಟ್ಟ ಪುಟ್ಟಸ್ವಾಮಿ!

ಮೂಲಸೌಲಭ್ಯ ಒದಗಿಸುವುದು ಸರ್ಕಾರದ ಧ್ಯೇಯ: ಪ್ರಧಾನಿ ಮೋದಿಯವರು ಉತ್ತಮ ಆಡಳಿತ ನೀಡುವ ಮೂಲಕ ದೇಶಕ್ಕೆ ಅನಿವಾರ್ಯ ಎಂದು ತೋರಿಸಿಕೊಟ್ಟಿದ್ದಾರೆ, ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ, ಜೊತೆಗೆ ಆಯಾ ವಾರ್ಡ್‌ನಿಂದ ಆಯ್ಕೆಯಾದ ನಗರಸಭಾ ಸದಸ್ಯರ ಹೊಣೆಯೂ ಆಗಿದೆ ಎಂದು ಸಚಿವ ಸೋಮಣ್ಣ ಹೇಳಿದರು. ಅವರು ಮುನೇಶ್ವರ ಗುಡಿ ಬೀದಿಯಲ್ಲಿ ಬೂತ್‌ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾಭಿಮಾನದಿಂದ ಬದುಕುವ ಅವಕಾಶ ಭಾರತ ದೇಶ ಬಿಟ್ಟರೆ ಇನ್ನಾವ ದೇಶದಲ್ಲೂ ಇಲ್ಲ, 

ಭಾರತ ದೇಶದಲ್ಲಿ ಮಾತ್ರ ಸುಲಲಿತವಾಗಿ ಬದುಕುವ ಹಕ್ಕಿದೆ. ಅಂತಹ ಹಕ್ಕನ್ನು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರಿಗೂ ಒದಗಿಸಿಕೊಡುವ ಮೂಲಕ ಮೋದಿ ಅನಿವಾರ್ಯ ಎಂಬುದನ್ನ ತೋರಿಸಿಕೊಟ್ಟಿದ್ದಾರೆ, ಅವರ ಉತ್ತಮ ಆಡಳಿತ ಇದಕ್ಕೆ ನಿದರ್ಶನವಾಗಿದೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಮುಂದಾಗಿ ಎಂದರು. ನಗರಸಭಾ ಅಧಿಕಾರಿಗಳು ಸಹಾ ಬಡಾವಣೆಗಳ ಅಭಿವದ್ದಿಗೆ ಮುಂದಾಗಬೇಕು ಎಂದರು.

ಶಾಲಾ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಜಾಗೃತಿ: ಬಂಡೀಪುರ ಯುವ ಮಿತ್ರ ಯೋಜನೆಗೆ ಚಾಲನೆ

ನಗರ ಘಟಕದ ಅಧ್ಯಕ್ಷ ರಮೇಶ ಮುರಾರಿ ಮಾತನಾಡಿ, ಪಕ್ಷ ಸಂಘಟನೆಗೆ ಶ್ರಮಿಸುವೆ, ಇಂದು ಮುನೇಶ್ವರ ಗುಡಿಬೀದಿಯಿಂದ ಪ್ರಾರಂಭವಾದ ಅಭಿಯಾನ ಪಕ್ಷದ ಹಿರಿಯ ಕಾಯ9ಕತ9ರು, ಮುಖಂಡರು ನಗರಸಭಾ ಸದಸ್ಯರ ಸಹಕಾರದೊಂದಿಗೆ ಪ್ರತಿ ಬೂತ… ಮಟ್ಟದಲ್ಲೂ ಜರುಗಲಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ನಂಜುಂಡಸ್ವಾಮಿನಗರಸಭೆ ಸದಸ್ಯೆ ಕವಿತಾ, ಪವಿತ್ರ ರಮೇಶ್‌, . ಸೋಮಣ್ಣ, ಮಧುಚಂದ್ರ, ಜಿಲ್ಲಾ ವಕ್ತಾರ ಬಸವರಾಜಪ್ಪ, ಮುಖಂಡರುಗಳಾದ ಕಿಟ್ಟಿ, ಪ್ರಕಾಶ್‌, ಕೃಷ್ಣ, ಎಸ್‌ ಟಿ ಮೋರ್ಚಾದ ಶಂಕರ್‌, ಬೂದಿತಿಟ್ಟು ಸ್ವಾಮಿ, ಗಿರೀಶ್‌, ಸಚಿವರ ವಿಶೇಷಾಧಿಕಾರಿ ಸ್ವಾಮಿ ಇದ್ದರು.

Follow Us:
Download App:
  • android
  • ios