ನಿಮ್ಮ ಜನ್ಮ ರಾಶಿಗೆ ಅನುಗುಣವಾಗಿ ನಿಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತ ನೆಡಬೇಕಾದ ಗಿಡಗಳ ಬಗ್ಗೆ ತಿಳಿಯಿರಿ. ರಾಶಿಚಕ್ರದ ಪ್ರತಿಯೊಂದು ಚಿಹ್ನೆಗೂ ಅದೃಷ್ಟ ತರುವ ನಿರ್ದಿಷ್ಟ ಗಿಡಗಳಿವೆ. ಈ ಗಿಡಗಳನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿ, ಆರೋಗ್ಯ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ನಿಮ್ಮ ಮನೆ ವಾಸ್ತುವಿಗೂ ನಿಮ್ಮ ಜನ್ಮರಾಶಿಗೂ ಸಂಬಂಧವಿದೆ. ಹಾಗೇ ನಿಮ್ಮ ಮನೆಯ ಗಾರ್ಡನ್‌ನಲ್ಲಿ ಅಥವಾ ಸುತ್ತಮುತ್ತ, ಅಥವಾ ಟೆರೇಸ್ ಗಾರ್ಡನ್‌ನಲ್ಲಿ ಯಾವ ಗಿಡ- ಮರ ಇರಬೇಕು ಎಂಬುದನ್ನೂ ನಿಮ್ಮ ಸ್ವಭಾವಸಹಜವಾದ ಜನ್ಮರಾಶಿಯನ್ನೇ ಹೊಂದಿಕೊಂಡು ನಿರ್ಧರಿಸಬಹುದು. ಜನ್ಮರಾಶಿಗೆ ಸಂಬಂಧಿಸಿ ಅದೃಷ್ಟ ತರುವ ಗಿಡಗಳಿರುತ್ತವೆ. ಹೀಗಾಗಿಯೇ, ನಿಮ್ಮ ಮನೆಯಲ್ಲಿ ಅಥವಾ ಸುತ್ತ ಮುತ್ತ ಈ ಗಿಡಗಳನ್ನು ನೆಡಲು ಮರೆಯಬೇಡಿ. ನಿಮ್ಮ ಜನ್ಮರಾಶಿಯನ್ನು ಅನುಸರಿಸಿ ನಿಮಗೆ ಸದಾ ಅದೃಷ್ಟ ತರುವ ಗಿಡ ಯಾವುದು ಎಂಬುದನ್ನು ತಿಳಿದು ನೀವೇ ನೆಟ್ಟರೆ ಅದು ತುಂಬಾ ಫಲದಾಯಕ.
ಮೇಷ ರಾಶಿ
ನಿಮ್ಮ ರಾಶಿಚಿಹ್ನೆಯನ್ನು ಬೆಂಕಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇವರು ಬೆಟ್ಟದ ನೆಲ್ಲಿ ಮತ್ತು ಅಂಜೂರದ ಗಿಡಗಳನ್ನು ನೆಡಬೇಕು. ಈ ಸಸ್ಯಗಳು ಮೇಷ ರಾಶಿಯ ಜನರಿಗೆ ಹೆಚ್ಚು ಪ್ರಯೋಜನಕಾರಿ. ಈ ಸಸ್ಯಗಳನ್ನು ನೆಡುವುದರಿಂದ ನಿಮ್ಮ ಆರೋಗ್ಯ ಸದೃಢವಾಗಿರುತ್ತದೆ.
ವೃಷಭ ರಾಶಿ
ವೃಷಭ ರಾಶಿಗೆ ಶುಕ್ರನು ಒಡೆಯನಾಗಿರುತ್ತಾನೆ. ಈ ರಾಶಿಯ ಜನರು ಯಾವುದಾದರೂ ಹಣ್ಣುಗಳ ಗಿಡಗಳನ್ನು ನೆಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಶನಿಯ ಅಶುಭ ಪರಿಣಾಮಗಳನ್ನು ಸಹ ತೆಗೆದುಹಾಕಬಹುದು.
ಮಿಥುನ ರಾಶಿ
ಮಿಥುನ ರಾಶಿಗೆ ಬುಧನು ಮಾಲೀಕನಾಗಿರುತ್ತಾನೆ. ನೀವು ಬಿದಿರನ್ನು ನೆಡಬೇಕು. ಹೀಗೆ ಮಾಡುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಬಯಸಿದರೆ ನಿಮ್ಮ ಮನೆಯಲ್ಲಿ ಬಿದಿರಿನ ಗಿಡವನ್ನು ಸಣ್ಣ ಬಟ್ಟಲಿನಲ್ಲಿ ನೆಡಿ.
ಕಟಕ ರಾಶಿ
ಕಟಕ ರಾಶಿಯವರು ಅರಳಿ ಮರ ಅಥವಾ ನಾಗದಾಳಿ ಸಸ್ಯವನ್ನು ನೆಡಬೇಕು. ಆದಾಗ್ಯೂ, ಅರಳಿ ಮರ ಸಾಮಾನ್ಯವಾಗಿ ನೆಡುವುದಿಲ್ಲ, ಅದು ತಾನಾಗಿಯೇ ಪ್ರಕೃತಿ ದತ್ತವಾಗಿ ಬೆಳೆಯುತ್ತದೆ. ಈ ಎರಡೂ ಗಿಡಗಳನ್ನು ನೆಡುವುದರಿಂದ ನೀವು ಶುಭ ಫಲಿತಾಂಶ ಪಡೆಯುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಗೆ ಸೂರ್ಯನು ಒಡೆಯ ಎಂದು ಪರಿಗಣಿಸಲಾಗುತ್ತದೆ. ಸೂರ್ಯನನ್ನು ಗುಣಪಡಿಸುವ ಮತ್ತು ಗೌರವ ನೀಡುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ರಾಶಿಯ ಸ್ಥಳೀಯರು ಆಲದ ಗಿಡ, ನೀರು ಸೇಬು (ಸ್ಟಾರ್ ಫ್ರೂಟ್), ಪಾರಿವಾಳದ ಗಿಡವನ್ನು ನೆಡಬೇಕು. ಇವನ್ನು ನೆಡುವುದರಿಂದ ನಿಮ್ಮ ಬದುಕಿನಲ್ಲಿ ಸಂತೋಷ ಸಿಗುತ್ತೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಿಲ್ವಪತ್ರೆ, ಮಲ್ಲಿಗೆ ಗಿಡವನ್ನು ನೆಡುವುದು ವಾಸ್ತು ಪ್ರಕಾರ ಸೂಕ್ತ ಎಂದು ಪರಿಗಣಿಸಲಾಗಿದೆ. ಈ ಸಸ್ಯಗಳು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಕನ್ಯಾ ರಾಶಿಗೆ ಬುಧನು ಮಾಲೀಕ ಎಂದು ಪರಿಗಣಿಸಲಾಗಿದೆ. ಪ್ರತಿ ಬುಧವಾರ ನೀವು ದೇವಸ್ಥಾನದಲ್ಲಿ ಮಲ್ಲಿಗೆ ಎಣ್ಣೆಯಲ್ಲಿ ದೀಪ ಬೆಳಗುವುದರಿಂದ ನಿಮಗೆ ಪ್ರಯೋಜನ ಸಿಗುತ್ತದೆ.
ತುಲಾ ರಾಶಿ
ತುಲಾ ರಾಶಿಗೆ ಶುಕ್ರ ಗ್ರಹವು ಮಾಲೀಕ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರು ಅರ್ಜುನ ಮತ್ತು ನಾಗಕೇಸರ ಸಸಿಗಳನ್ನು ನೆಡಬೇಕು. ಶುಕ್ರ ನಿಮ್ಮ ರಾಶಿಯ ಮಾಲೀಕನಾಗಿರುವುದರಿಂದ ಈ ಎರಡೂ ಗಿಡಗಳನ್ನು ನೆಟ್ಟರೆ ನಿಮ್ಮ ವೈವಾಹಿಕ ಸಂಬಂಧ ಬಲವಾಗುತ್ತದೆ. ಅರ್ಜುನ ಮರದ ತೊಗಟೆಯನ್ನು ಮೈಗೆ ಉಜ್ಜಿಕೊಂಡರೆ ತುರಿಕೆ ಮೊದಲಾದ ಚರ್ಮದ ಕಾಯಿಲೆಗಳು ವಾಸಿಯಾಗುತ್ತವೆ.
ವೃಶ್ಚಿಕ ರಾಶಿ
ಮಂಗಳನ ಒಡೆತನದಲ್ಲಿರುವ ವೃಶ್ಚಿಕ ರಾಶಿಯ ಜನರು ಕೆಂಪು ಹೂ ಬಿಡುವ ಗಿಡವನ್ನು ನೆಡಬೇಕು. ಕೆಂಪು ಹೂವು ಬಿಡುವ ಮರವು ನಿಮಗೆ ಶುಭ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಂದು ಕಾರ್ಯದಲ್ಲೂ ಶುಭ ಫಲಿತಾಂಶಗಳನ್ನು ನೀಡುತ್ತದೆ.
ಧನು ರಾಶಿ
ಗುರು ಗ್ರಹವು ಧನು ರಾಶಿಯ ಮಾಲೀಕ ಎಂದು ಪರಿಗಣಿಸಲಾಗುತ್ತದೆ. ಗುರುವಿನ ಅನುಗ್ರಹ ಪಡೆಯಲು ನೀವು ಭಾನುವಾರ ರಾಲ ಮತ್ತು ಹಲಸಿನ ಗಿಡ ನೆಡಬೇಕು. ಹೀಗೆ ಮಾಡುವುದರಿಂದ ನಿಮಗೆ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ನೀವು ದೇವರ ಕೃಪೆಗೂ ಪಾತ್ರರಾಗುತ್ತೀರಿ.
ಮಕರ ರಾಶಿ
ಶನಿಯನ್ನು ಮಕರ ರಾಶಿಯ ಒಡೆಯ ಎಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ರಾಶಿಯವರು ಎಕ್ಕದ ಗಿಡವನ್ನು ನೆಡಬೇಕು. ಪ್ರತಿ ಶನಿವಾರ ಕಪ್ಪು ಎಳ್ಳನ್ನು ದಾನ ಮಾಡುವುದರ ಜೊತೆಗೆ, ನೀವು ಸೋಮವಾರ ಶಿವನಿಗೆ ಎಕ್ಕದ ಹೂವನ್ನು ಅರ್ಪಿಸಬೇಕು.
ಶನಿದೇವನ 4 ಅತ್ಯಂತ ನೆಚ್ಚಿನ ರಾಶಿ, ಈ ರಾಶಿಗೆ ಸಂತೋಷ, ಆಸ್ತಿ ಮತ್ತು ಸಂಪತ್ತಿನ ಕೊರತೆಯಿಲ್ಲ
ಕುಂಭ ರಾಶಿ
ಕುಂಭ ರಾಶಿಯವರು ಕದಂಬ ಮತ್ತು ಮಾವಿನ ಗಿಡವನ್ನು ನೆಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಶನಿಯು ನಿಮ್ಮ ರಾಶಿಯ ಒಡೆಯ. ಹಾಗಾಗಿ ನೀವು ಶನಿಯನ್ನು ಶಾಂತಿಗೊಳಿಸಲು ಮೇಲೆ ಹೇಳಿದ ಎರಡು ಗಿಡಗಳನ್ನು ನೆಡುವುದರ ಜೊತೆಗೆ ಪ್ರತಿ ಶನಿವಾರ ಸುಂದರ ಕಾಂಡವನ್ನು ಪಠಿಸಿ ಬನ್ನಿ ಗಿಡಿವನ್ನು ನೆಡಬೇಕು.
ಮೀನ ರಾಶಿ
ಮೀನ ರಾಶಿಯವರು ಜ್ಯೇಷ್ಠಮಧು ಮತ್ತು ಮಹುವಾ ಗಿಡವನ್ನು ನೆಡಬೇಕು. ಈ ಸಸ್ಯಗಳು ಮೀನ ರಾಶಿಯ ಜನರ ಆರೋಗ್ಯವನ್ನು ಸ್ಥಿರವಾಗಿಡುತ್ತದೆ. ಈ ಎರಡೂ ಗಿಡವನ್ನು ನೆಡುವುದರಿಂದ ನೀವು ಮಾನಸಿಕವಾಗಿ ಶಾಂತಿರಾಗಿರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿಯಲ್ಲೂ ಹೆಚ್ಚಳವಾಗುತ್ತದೆ.
