ಏಪ್ರಿಲ್‌ನಲ್ಲಿ ನಿಮ್ಮ ರೊಮ್ಯಾಂಟಿಕ್ ಲೈಫ್ ಹೇಗಿರುತ್ತೆ? ನಿಮ್ಮ ಜನ್ಮರಾಶಿ ಪ್ರಕಾರ ನೋಡಿ
ಬರಲಿರುವ ಏಪ್ರಿಲ್ ತಿಂಗಳಲ್ಲಿ ನಿಮ್ಮ ಬದುಕಿನಲ್ಲಿ ಲವ್, ರೊಮ್ಯಾನ್ಸ್ ಇವೆಲ್ಲಾ ಹೇಗಿರುತ್ತವೆ? ಇಲ್ಲಿದೆ ಹನ್ನೆರಡೂ ಜನ್ಮರಾಶಿಗಳಲ್ಲಿ ಹುಟ್ಟಿದವರ ಈ ತಿಂಗಳ ಲವ್ ಲೈಫ್. ನೋಡಿಕೊಳ್ಳಿ.
ಮೇಷ ರಾಶಿ (Aries)
ಸಂಗಾತಿಯೊಂದಿಗೆ ಮಧುರ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗುವ ಸಾಧ್ಯತೆಯಿದೆ. ನಿಮ್ಮ ಸಂಬಂಧ ಅಥವಾ ವೈವಾಹಿಕ ಜೀವನದಲ್ಲಿ ಪ್ರಣಯ ಮತ್ತು ತಿಳುವಳಿಕೆಯ ಸಾಧ್ಯತೆಗಳು ಅಧಿಕವಾಗಿವೆ. ಅವಿವಾಹಿತರು ಭಾವಿ ಸಂಗಾತಿಗಳಿಗೆ ಮದುವೆ ಪ್ರಸ್ತಾಪ ಮಾಡಲು ಅವಕಾಶಗಳಿವೆ ಮತ್ತು ಸಕಾರಾತ್ಮಕ ಉತ್ತರವನ್ನು ಪಡೆಯುವ ದೊಡ್ಡ ಸಾಧ್ಯತೆಗಳಿವೆ. ನಿರೀಕ್ಷೆ ಆಶಾದಾಯಕವಾಗಿರಲಿ, ಅವರು ʻಓಕೆ' ಎಂದು ಹೇಳುವ ಸಂಭವವೇ ಹೆಚ್ಚಿದೆ!
ವೃಷಭ ರಾಶಿ (Taurus)
ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಸಮಯವನ್ನು ಕಳೆಯಲು ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೀರಿ. ಅವಿವಾಹಿತರಿಗೆ ನಿಮ್ಮ ಸಂಗಾತಿ ಮದುವೆ ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. ಇನ್ನೂ ಪ್ರೇಮಿಸದವರು ಚಿಂತಿಸಬೇಕಾಗಿಲ್ಲ! ನಿಮ್ಮ ಜೀವನಕ್ಕೆ ಯಾರೋ ವಿಶೇಷ ವ್ಯಕ್ತಿ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಯಾರೋ ಪ್ರಯತ್ನಿಸುತ್ತಾರೆ ಮತ್ತು ಒಂದು ಹೆಜ್ಜೆ ಮುಂದಿಡುತ್ತಾರೆ. ನಿಮ್ಮ ಹೃದಯಕ್ಕೆ ದಾರಿ ಮಾಡಿಕೊಳ್ಳುತ್ತಾರೆ.
ಮಿಥುನ ರಾಶಿ (Taurus)
ನಿಮ್ಮ ಸಂಬಂಧವು ಬಲಗೊಳ್ಳುತ್ತದೆ ಮತ್ತು ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ. ಸಂಭಾಷಣೆಯ ಸಮಯದಲ್ಲಿ ನಿಮ್ಮ ಸ್ವರ ಮತ್ತು ನಿಮ್ಮ ಮಾತುಗಳ ಸಂದರ್ಭದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಅದು ನಿಮ್ಮ ಸಂಬಂಧದಲ್ಲಿ ಜಗಳ ಉಂಟುಮಾಡಬಹುದು. ಇದೆಲ್ಲ ಇದ್ದರೂ ಈ ತಿಂಗಳು ನಿಮ್ಮ ಪ್ರೀತಿ ಅಥವಾ ವೈವಾಹಿಕ ಜೀವನದ ವಿಷಯದಲ್ಲಿ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ.
ಕಟಕ ರಾಶಿ (Cancer)
ಇವರು ಪ್ರೇಮಜೀವನದಲ್ಲಿ ಸಾಕಷ್ಟು ಸವಾಲುಗಳು ಮತ್ತು ಏರಿಳಿತಗಳನ್ನು ಎದುರಿಸುತ್ತಾರೆ. ಸಾಕಷ್ಟು ಪರೀಕ್ಷೆಗೆ ಒಳಗಾಗುತ್ತಾರೆ. ಗ್ರಹಗಳು ಅನುಕೂಲಕರವಾಗಿಲ್ಲವಾದ್ದರಿಂದ ನೀವು ಹೆಚ್ಚು ಸತ್ಯವಂತರಾಗಿರಬೇಕು ಮತ್ತು ನಿಮ್ಮ ಸಂಬಂಧಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ, ಹಲವಾರು ತೊಂದರೆಗಳು ಉಂಟಾಗಬಹುದು. ನಿಮ್ಮ ಪ್ರೇಮಿಗೆ ಸಾಕಷ್ಟು ಹತ್ತಿರವಾಗಲು ಪ್ರಯತ್ನಿಸಿ. ಆಗ ಅದ್ಭುತ ಕ್ಷಣಗಳನ್ನು ಹೊಂದುತ್ತೀರಿ.
April Horoscope: ಯಾವ ರಾಶಿಗೆ ಕಹಿ, ಯಾವ ರಾಶಿಗೆ ಸಿಹಿ ಈ ಏಪ್ರಿಲ್?
ಸಿಂಹ ರಾಶಿ (Leo)
ನಿಮ್ಮ ಬುದ್ಧಿವಂತಿಕೆ ಮತ್ತು ತಿಳುವಳಿಕೆಯು ನಿಮ್ಮ ಸಂಬಂಧದಲ್ಲಿ ಸಂತೋಷದ ವಾತಾವರಣ ಉಂಟುಮಾಡುತ್ತದೆ. ಗುರುಬಲವು ನಿಮ್ಮ ಸಂಬಂಧದಲ್ಲಿ ಮಾಧುರ್ಯ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಕಹಿ ಕಡಿಮೆಯಾಗುಗುತ್ತದೆ. ಸಂಗಾತಿಯ ಮೇಲಿನ ಪ್ರೀತಿಯ ಬೆಳವಣಿಗೆಗೆ ನೀವು ಸಾಕ್ಷಿಯಾಗುತ್ತೀರಿ. ಗ್ರಹಗಳ ಧನಾತ್ಮಕ ದೃಷ್ಟಿ ಬಿದ್ದು, ಪ್ರೇಮೋತ್ಕರ್ಷ, ಕಂಕಣ ಭಾಗ್ಯದ ದೊಡ್ಡ ಸಾಧ್ಯತೆಗಳಿವೆ!
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರು ತಮ್ಮ ಪ್ರೇಮ ಜೀವನದಲ್ಲಿ ಸಾಕಷ್ಟು ಪರೀಕ್ಷೆಗೆ ಒಳಗಾಗುತ್ತಾರೆ. ಇದು ನಿಮ್ಮ ಸಂಬಂಧವನ್ನು ಬಲಪಡಿಸಲು ನಿಮಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂಬಂಧದ ಬಗ್ಗೆ ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಸಂಗಾತಿಯ ನಡುವೆ ಸಾಮರಸ್ಯ ಮತ್ತು ನಿಕಟತೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಪರಸ್ಪರ ತಿಳುವಳಿಕೆ ಮತ್ತು ಅನ್ಯೋನ್ಯತೆ ಹೆಚ್ಚಾಗುತ್ತದೆ. ನೀವು ಪ್ರಪೋಸ್ ಮಾಡಲು ಬಯಸಿದರೆ, ಇದೀಗ ಸರಿಯಾದ ಸಮಯ!
ತುಲಾ ರಾಶಿ (Libra)
ನಿಮ್ಮ ಪ್ರೇಮ ಜೀವನದಲ್ಲಿ ಹೆಚ್ಚು ಘರ್ಷಣೆಗಳು ಮತ್ತು ವಾದಗಳು ಸೃಷ್ಟಿಯಾಗಬಹುದು. ಆದರೆ ಗುರುಬಲದಿಂದ ನಿಮ್ಮ ಸಂಬಂಧ ಸುರಕ್ಷಿತ ಮತ್ತು ಸುಭದ್ರವಾಗಿರುತ್ತದೆ. ಕೆಲಸದ ಒತ್ತಡ ನಿಮ್ಮ ಸಂಬಂಧದಲ್ಲಿ ಸ್ವಲ್ಪ ಒತ್ತಡ ಉಂಟುಮಾಡಬಹುದು. ನಂತರ ಉದ್ವೇಗ ನಿಧಾನವಾಗಿ ಮರೆಯಾಗುತ್ತದೆ ಮತ್ತು ನಿಮ್ಮ ಸಂಗಾತಿಯೊಂದಿಗೆ ಹಾಯಾಗಿರುತ್ತೀರಿ. ಅವಿವಾಹಿತರು ಒಂದು ಹೆಜ್ಜೆ ಮುಂದಿಡಲು, ಸಂಗಾತಿಯನ್ನು ಮದುವೆಯಾಗಲು ಯೋಜಿಸಬಹುದು. ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ (Scorpio)
ಪ್ರೀತಿ ನಿಮ್ಮ ಜೀವನದಲ್ಲಿ ಅಯಾಚಿತವಾಗಿಯೇ ಬರಬಹುದು ಮತ್ತು ನಿಮಗೆ ತುಂಬಾ ಸುಖ ನೀಡಬಹುದು. ನೀವು ಈಗಾಗಲೇ ಸಂಬಂಧದಲ್ಲಿದ್ದರೆ, ಈ ಅವಧಿಯಲ್ಲಿ ನಿಮ್ಮ ಬಂಧವು ಗಟ್ಟಿಯಾಗುತ್ತದೆ. ನಿಮ್ಮ ಸಂಬಂಧವು ಸುಂದರವಾದ ಸಾಮರಸ್ಯದಿಂದ ತುಂಬಿರುತ್ತದೆ. ಪರಸ್ಪರ ನಂಬಿಕೆ ಬೆಳೆಯುತ್ತದೆ ಮತ್ತು ಪರಿಣಾಮವಾಗಿ, ನಿಮ್ಮ ಆಲೋಚನೆಗಳನ್ನು ಪರಸ್ಪರ ಮುಕ್ತವಾಗಿ ಚರ್ಚಿಸುತ್ತೀರಿ. ಪ್ರೇಮಿಯೊಂದಿಗೆ ಪ್ರವಾಸವನ್ನು ಆಯೋಜಿಸಬಹುದು.
ಧನು ರಾಶಿ (Sagittarius)
ನಿಮ್ಮ ಸಂಬಂಧದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅನೇಕ ಅಡೆತಡೆಗಳನ್ನು ಅನುಭವಿಸಬಹುದು. ನಿಮ್ಮ ಪ್ರೀತಿಗೆ ಸಂಪೂರ್ಣವಾಗಿ ಬದ್ಧರಾಗಿರಬೇಕಾದ್ದಂತೂ ಅಗತ್ಯ. ರೊಮ್ಯಾನ್ಸ್‌ನಲ್ಲಿ ಒತ್ತಡ ಹೆಚ್ಚುತ್ತದೆ. ಸಂಗಾತಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಘರ್ಷಣೆಗಳು ಉಲ್ಬಣಗೊಳ್ಳಬಹುದು. ಗುರುವಿನ ಅನುಗ್ರಹವಾದಾಗ ನೀವು ಹೆಚ್ಚಿನ ಪ್ರೇಮ ಕಾಣುತ್ತೀರಿ.
ಮಕರ ರಾಶಿ (Capricorn)
ಮಕರ ರಾಶಿಯವರು ತಮ್ಮ ಲವ್ ಲೈಫ್ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ನೀವು ಶ್ರಮಿಸದಿದ್ದರೆ, ಅವರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಸಂಬಂಧದ ಬಿರುಕಿಗೆ ಕಾರಣವಾಗಬಹುದು. ಪರಿಣಾಮವಾಗಿ ಜಾಗರೂಕರಾಗಿರುವುದು ಅತ್ಯಗತ್ಯ. ಉತ್ತರಾರ್ಧದಲ್ಲಿ ನಿಮ್ಮ ಸಂಬಂಧದ ನಿಕಟತೆ ಮತ್ತು ಅನ್ಯೋನ್ಯತೆ ಬೆಳೆಯುತ್ತದೆ. ನೀವಿಬ್ಬರೂ ಒಟ್ಟಿಗೆ ಭವಿಷ್ಯದ ಯೋಜನೆಗಳನ್ನು ಮಾಡಬಹುದು.
ಕುಂಭ ರಾಶಿ (Aquarius)
ಮೀನ ರಾಶಿಯವರು ಈಗ ತಮ್ಮ ಪ್ರೇಮ ವ್ಯವಹಾರಗಳಲ್ಲಿ ಹೆಚ್ಚು ಸಕಾರಾತ್ಮಕ ಫಲಿತಾಂಶಗಳನ್ನು(Result) ಹೊಂದಿರುತ್ತಾರೆ. ನಿಮ್ಮ ಚಂದ್ರನ ಚಿಹ್ನೆಯಲ್ಲಿ ನೆಲೆಸಿರುವ ಗುರುವು ನಿಮ್ಮ ಐದನೇ ಮತ್ತು ಒಂಬತ್ತನೇ ಮನೆಗಳನ್ನು ನೋಡುತ್ತಾನೆ. ಅಂತಹ ಸಂದರ್ಭದಲ್ಲಿ, ನೀವು ನಿಜವಾಗಿಯೂ ಯಾರನ್ನಾದರೂ ಮದುವೆಯಾಗಲು ಬಯಸಿದರೆ, ಇದು ನಿಮಗೆ ಪ್ರಪೋಸ್(Propose) ಮಾಡಲು ಅತ್ಯುತ್ತಮ ಕ್ಷಣ.
ಈ ಸಮಯದ ನಂತರ, ನಿಮ್ಮ ಪರಿಸ್ಥಿತಿಗಳು ಬದಲಾಗಬಹುದು ಮತ್ತು ಸಂಬಂಧದಲ್ಲಿ ತುಸು ಸಂಘರ್ಷ ಸಂಭವಿಸಬಹುದು.
ಮೀನ ರಾಶಿ (Pisces)
ಮಂಗಳನು ಐದನೇ ಮನೆಗೆ ಸಾಗುವುದರಿಂದ ನಿಮ್ಮ ಸಂಬಂಧದಲ್ಲಿ ತೀವ್ರ ಸಮಸ್ಯೆಗಳು(Problem) ಉಂಟಾಗಬಹುದು. ಈ ಸಂದರ್ಭದಲ್ಲಿ ನಿಮ್ಮ ಪ್ರಿಯತಮೆಯೊಂದಿಗೆ(Lover) ಚರ್ಚೆ ಅಥವಾ ಸಂಘರ್ಷದ ಅಪಾಯವೂ ಇದೆ. ಅಂತಹ ಸಮಸ್ಯೆಗಳುಂಟಾದಾಗ ಅವುಗಳನ್ನು ಪರಿಹರಿಸಲು ನೀವು ಪ್ರಯತ್ನಗಳನ್ನು ಮಾಡಬೇಕು. ಇಲ್ಲದಿದ್ದರೆ, ನಿಮ್ಮ ಸಂಬಂಧವು ಹಾನಿಗೊಳಗಾಗಬಹುದು. ಹೊಸ ಜಾಗಗಳಿಗೆ ಪ್ರವಾಸ ಹೋಗಿ ಪ್ರಣಯದ ಉತ್ಕರ್ಷವನ್ನು ಅನುಭವಿಸಬಹುದು.
April Grah Gochar 2023: ಏಪ್ರಿಲ್‌ನಲ್ಲಿ 4 ಗ್ರಹಗಳ ರಾಶಿ ಬದಲಾವಣೆ; 5 ರಾಶಿಗಳಿಗೆ ಲಾಭ