ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೂ ಜನ್ಮರಾಶಿ ಫಲಗಳಿಗೂ ನಿಕಟವಾದ ಸಂಬಂಧವಿದೆ. ಪ್ರತಿ ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿ ಕೆಲವು ಆಚರಣೆಗಳ ಮೂಲಕ ಒಂದು ಕಾಸ್ಮಿಕ್ ಪವರ್ ಅನ್ನು ಪಡೆಯುವ ಅಲೌಕಿಕ ಅವಕಾಶ ಇದು.
ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೂ ಜನ್ಮರಾಶಿ ಫಲಗಳಿಗೂ ನಿಕಟವಾದ ಸಂಬಂಧವಿದೆ. ಯಾಕೆಂದರೆ, ಸೂರ್ಯನು ಮಕರ ರಾಶಿಗೆ ಮತ್ತು ಗುರು ವೃಷಭ ರಾಶಿಗೆ ಪ್ರವೇಶಿಸಿದಾಗ ಪ್ರಯಾಗರಾಜ್‌ನಲ್ಲಿ ಕುಂಭೋತ್ಸವ ನಡೆಯುತ್ತದೆ ಎಂದು ಜ್ಯೋತಿಷ್ಯ ಲೆಕ್ಕಾಚಾರ. ಹೀಗಾಗಿ ನೀವು ಜನಿಸಿದ ಜನ್ಮರಾಶಿಗೂ ಇದಕ್ಕೂ ತಾಳೆ ಇರಲಿಕ್ಕೇ ಬೇಕು. ಹೀಗಿರುವಾಗ, ನೀವು ಗಂಗಾಸ್ನಾನ ಹೇಗೆ ಮಾಡಬೇಕು? ಹೇಗೆ ಮಾಡಿದರೆ ಪೂರ್ಣ ಫಲ ಲಭ್ಯ? ಇಲ್ಲಿದೆ ವಿವರ.
ಪೂರ್ಣ ಕುಂಭ ಮೇಳ ಒಂದು ಅತ್ಯಪೂರ್ವ ಆಧ್ಯಾತ್ಮಿಕ ಅನುಭವ. ಇಲ್ಲಿ ಪವಿತ್ರ ಸ್ನಾನ ಮಾಡುವುದು ಎಂದರೆ ನಿಮಗೆ ಒದಗುವ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ. ಪ್ರತಿ ರಾಶಿಚಕ್ರ ಚಿಹ್ನೆಗೆ ಅನುಗುಣವಾಗಿ ಕೆಲವು ಆಚರಣೆಗಳ ಮೂಲಕ ಒಂದು ಕಾಸ್ಮಿಕ್ ಪವರ್ ಅನ್ನು ಪಡೆಯುವ ಅಲೌಕಿಕ ಅವಕಾಶ. ಪವಿತ್ರ ಸ್ನಾನ, ಕೆಲವು ಮಂತ್ರಜಪ, ಕೆಲವು ಮುದ್ರೆ- ಧ್ಯಾನ- ಇತ್ಯಾದಿಗಳ ಮೂಲಕ ಪ್ರತೀ ಜನ್ಮರಾಶಿಯವರೂ ಇಲ್ಲಿ ಅದ್ಬುತ ಪವರ್ ಪಡೆಯಬಹುದು.
ಮೇಷ ರಾಶಿ
ಗಂಗಾ ನದಿಯಲ್ಲಿ ಸೂರ್ಯೋದಯದ ವೇಳೆ ಸೂರ್ಯ ನಮಸ್ಕಾರ ಮಾಡಿ. ಈ ಪವರ್‌ಫುಲ್ ಆಚರಣೆಯು ಮೇಷ ರಾಶಿಯ ರೋಮಾಂಚಕ ಸ್ವಭಾವದೊಂದಿಗೆ ಹೊಂದಿಕೆಯಾಗುತ್ತದೆ. ಮುಂಬರುವ ವರ್ಷಕ್ಕೆ ಧೈರ್ಯ ಮತ್ತು ಚೈತನ್ಯವನ್ನು ಉತ್ತೇಜಿಸುತ್ತದೆ.
ವೃಷಭ ರಾಶಿ
ನದಿ ತೀರದ ದೇವಸ್ಥಾನದಲ್ಲಿ ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸಿ. ಈ ಭಕ್ತಿಯ ಕ್ರಿಯೆಯಿಂದ ವೃಷಭ ರಾಶಿಯವರ ಸೌಂದರ್ಯ, ಸ್ಥಿರತೆ, ಪ್ರೀತಿ ವರ್ಧಿಸುತ್ತವೆ. ಅವರ ಶಾಂತಿ ನೆಮ್ಮದಿ ಹೆಚ್ಚಿಸುತ್ತದೆ.
ಮಿಥುನ ರಾಶಿ
ಇಲ್ಲಿ ನಡೆಯುವ ಸತ್ಸಂಗ, ವೈದಿಕ ಜಪತಪ, ಆಧ್ಯಾತ್ಮಿಕ ಪ್ರವಚನಗಳಲ್ಲಿ ಭಾಗವಹಿಸಿ. ಕುಂಭಮೇಳದಲ್ಲಿ ಹಂಚಿಕೊಳ್ಳಲಾಗುವ ಸಂಪನ್ನ ಆಧ್ಯಾತ್ಮಿಕ ಬೋಧನೆಗಳಿಂದ ಮಿಥುನ ರಾಶಿಯ ಜ್ಞಾನದ ಅನ್ವೇಷಣೆಯು ಬೆಳೆಯುತ್ತದೆ.
ಕಟಕ ರಾಶಿ
ಸೂರ್ಯಾಸ್ತದ ಸಮಯದಲ್ಲಿ ಗಂಗೆಯ ನೀರಿನಲ್ಲಿ ಹಣತೆಯನ್ನು ತೇಲಿಬಿಡಿ. ಈ ಹಿತವಾದ ಆಚರಣೆಯು ಕಟಕದವರ ಪೋಷಣೆಯ ಶಕ್ತಿಯನ್ನು ಸ್ಪರ್ಶಿಸುತ್ತದೆ. ಭಾವನಾತ್ಮಕ ಬಿಡುಗಡೆ ಮತ್ತು ನವೀಕರಣವನ್ನು ನೀಡುತ್ತದೆ.
ಸಿಂಹ ರಾಶಿ
ಇಲ್ಲಿನ ಭವ್ಯ ಮೆರವಣಿಗೆಗಳಲ್ಲಿ ಭಾಗವಹಿಸಿ ಅಥವಾ ಆರತಿಯನ್ನು ಅರ್ಪಿಸಿ. ಈ ರೋಮಾಂಚಕ ಆಚರಣೆಗಳಿಂದ ಸಿಂಹ ರಾಶಿಯವರ ನೈಸರ್ಗಿಕ ಕೌಶಲ್ಯವು ಹೊಳೆಯುತ್ತದೆ. ಅವರ ವಿಶ್ವಾಸ ಮತ್ತು ದೈವಿಕ ಸಂಪರ್ಕವನ್ನು ಹೆಚ್ಚಿಸುತ್ತದೆ.
ಕನ್ಯಾ ರಾಶಿ
ಮಂಗಳಕರ ಗ್ರಹಗಳ ಜೋಡಣೆಯ ಸಮಯದಲ್ಲಿ ಧಾರ್ಮಿಕ ಸ್ನಾನ ಮಾಡಿ. ಈ ಪವಿತ್ರವಾದ ಕಾರ್ಯವು ಆಧ್ಯಾತ್ಮಿಕ ಶುದ್ಧೀಕರಣ ಮಾಡುತ್ತದೆ. ಕನ್ಯಾ ರಾಶಿಯವರ ಪ್ರೀತಿಯ ಸ್ವಭಾವವನ್ನು ಹೆಚ್ಚಿಸುತ್ತದೆ.
ತುಲಾ ರಾಶಿ
ಆಂತರಿಕ ಶಕ್ತಿಯನ್ನು ಸಮತೋಲನಗೊಳಿಸಲು ನದಿಯ ದಡದಲ್ಲಿ ಧ್ಯಾನ ಮಾಡಿ. ಪರ್ವದ ಆಧ್ಯಾತ್ಮಿಕ ಕಂಪನಗಳ ನಡುವೆ ಈ ಧ್ಯಾನವು ನಿಮ್ಮ ಮನಸ್ಸಿನ ಸಾಮರಸ್ಯವನ್ನು ನೆರವೇರಿಸುತ್ತದೆ.
ವೃಶ್ಚಿಕ ರಾಶಿ
ಹೋಮ ಆಚರಣೆಗಳು ಅಥವಾ ಹವನಗಳಲ್ಲಿ ಭಾಗವಹಿಸಿ. ವೃಶ್ಚಿಕರ ಪರಿವರ್ತಕಾರಿ ಶಕ್ತಿಯು ಬೆಂಕಿಯಿಂದ ಹಿಂದಿನ ಕರ್ಮವನ್ನು ಸುಟ್ಟು ಸಾಂಕೇತಿಕ ಹೊಸ ಶಕ್ತಿಯಾಗಿ ಬೆಳಗುತ್ತದೆ.
ಧನು ರಾಶಿ
ಕುಂಭದಲ್ಲಿ ಸ್ನಾನದ ಜೊತೆಗೆ ಪವಿತ್ರ ಸ್ಥಾನಗಳ ಯಾತ್ರೆಯನ್ನು ಕೈಗೊಳ್ಳಿ. ಆಧ್ಯಾತ್ಮದೊಂದಿಗೆ ಅಲೌಕಿಕ ಅನ್ವೇಷಣೆಯನ್ನು ವಿಲೀನಗೊಳಿಸುವ ಪ್ರಯಾಣಗಳಲ್ಲಿ ಧನು ರಾಶಿ ಅಭಿವೃದ್ಧಿ ಹೊಂದುತ್ತದೆ.
ನಾಗಾ ಸಾಧ್ವಿಗಳು ಮುಟ್ಟಾದಾಗ ಮಹಾಕುಂಭದಲ್ಲಿ ಸ್ನಾನ ಮಾಡಬಹುದಾ?
ಮಕರ ರಾಶಿ
ಸ್ನಾನದ ಸಂಗಡ ಮುಂಜಾನೆ ಧ್ಯಾನಕ್ಕೆ ಬದ್ಧರಾಗಿರಿ. ಮಕರ ರಾಶಿಯ ಗಮನ ಮತ್ತು ಸಮರ್ಪಣೆಯು ಬೆಳಗಿನ ಆಚರಣೆಗಳ ಶಾಂತ ಶಕ್ತಿಯೊಂದಿಗೆ ಸಮನ್ವಯಗೊಳ್ಳುತ್ತದೆ.
ಕುಂಭ ರಾಶಿ
ಅನ್ನದಾನದಂಥ ಸೇವಾ ಕಾರ್ಯಗಳು ಅಥವಾ ಸಮುದಾಯ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಿ. ಕುಂಭ ರಾಶಿಯವರು ಸಮಾಜವನ್ನು ಉನ್ನತೀಕರಿಸುವ ಸಾಮೂಹಿಕ ಆಚರಣೆಗಳಲ್ಲಿ ಜನ್ಮದ ಸಾರ್ಥಕತೆಯನ್ನು ಕಂಡುಕೊಳ್ಳುತ್ತಾರೆ.
ಮೀನ ರಾಶಿ
ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ಮೀನ ರಾಶಿಯ ಆಧ್ಯಾತ್ಮಿಕ ಆಳವು ಹೆಚ್ಚಿದೆ. ಸ್ವಯಂ ಆತ್ಮದ ಹಾಗೂ ಜಾಗತಿಕ ಶಾಂತಿಗಾಗಿ ಈ ಮಂತ್ರದ ಪಠಣವು ಸುಂದರವಾಗಿ ಸಂಪರ್ಕಿಸುತ್ತದೆ.
