ನಾಗಾ ಸಾಧುಗಳು ಗಂಗೆಯನ್ನು ಅತ್ಯಂತ ಪವಿತ್ರ ಎಂದು ಭಾವಿಸುತ್ತಾರೆ. ಪವಿತ್ರ ದಿನಗಳಂದು ಕುಂಭಮೇಳದಲ್ಲಿ ಗಂಗೆಯಲ್ಲಿ ಮಿಂದು ಪಾವನರಾಗುತ್ತಾರೆ. ಸ್ತ್ರೀ ನಾಗಾ ಸಾಧುಗಳೂ ಸಾವಿರಾರು ಸಂಖ್ಯೆಯಲ್ಲಿದ್ದು, ಈ ಲೌಕಿಕ ಬಂಧನಗಳಿಂದ ಕಳಚಿಕೊಂಡಿರುತ್ತಾರೆ. ಆದರೆ ಅವರ ದೇಹ ಲೌಕಿಕ ನಿಯಮದಂತೆ ನಡೆಯುತ್ತಿರುತ್ತದೆ. ಅವರೂ ಇತರರಂತೆ ಮುಟ್ಟಾಗುತ್ತಾರೆ. ಈ ಸಂದರ್ಭದಲ್ಲಿ ಅವರು ಗಂಗೆಗೆ ಇಳಿಯುತ್ತಾರೆಯೇ?
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಇದುವರೆಗೂ 50 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂಬ ಅಂದಾಜು. ಈ ವೇಳೆ 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧುಗಳೂ ಅಲ್ಲಿದ್ದಾರೆ. ಶಾಹಿ ಸ್ನಾನದ ದಿನಗಳಂದು ಮೊದಲನೆಯದಾಗಿ ನಾಗಾ ಸಾಧುಗಳು ಸ್ನಾನ ಮಾಡಿದ ನಂತರ ಸ್ತ್ರೀ ಸಾಧುಗಳು ಸ್ನಾನ ಮಾಡಿದರು. ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆ: ಮಹಿಳಾ ಸಾಧುಗಳು ಮಹಾಕುಂಭದ ಸಮಯದಲ್ಲಿ ಋತುಚಕ್ರವಾದರೆ ಅವರು ಏನು ಮಾಡುತ್ತಾರೆ? ಈ ಸಮಯದಲ್ಲಿ ಅವರು ಹೇಗೆ ಸ್ನಾನ ಮಾಡುತ್ತಾರೆ? ಅವರ ನಿಯಮಾವಳಿ ಏನು ಹೇಳುತ್ತದೆ?
ಸ್ತ್ರೀ ನಾಗಾ ಸಾಧುಗಳು ಋತುಮತಿಯಾಗಿರದ ದಿನಗಳಲ್ಲಿ ಮಾತ್ರ ಗಂಗಾನದಿಯಲ್ಲಿ ಸ್ನಾನ ಮಾಡುತ್ತಾರೆ. ಸಾಧ್ವಿಯರು ಮಹಾಕುಂಭದ ಸಮಯದಲ್ಲಿ ಋತುಮತಿಯಾಗಿದ್ದರೆ, ಅವರು ತಮ್ಮ ತಲೆ ಮೇಲೆ ಗಂಗಾಜಲವನ್ನು ಸಿಂಪಡಿಸಿಕೊಳ್ಳುತ್ತಾರೆ. ಇದು ಗಂಗೆಯಲ್ಲಿ ಸ್ನಾನ ಮಾಡಿದ್ದರ ಫಲವೇ. ವಿಶೇಷವೆಂದರೆ ಪುರುಷ ನಾಗಾ ಸಾಧುಗಳು ಮಹಾಕುಂಭದಲ್ಲಿ ಮೊದಲೇ ಸ್ನಾನ ಮಾಡಿ ನದಿಗೆ ಸ್ನಾನಕ್ಕೆ ತೆರಳುತ್ತಾರೆ. ಅಖಾಡಾದ ಸ್ತ್ರೀ ನಾಗಾ ಸಾಧುಗಳನ್ನು ಮಾಯಿ, ಮಾತಾ, ಅದ್ಬುತಾನಿ ಅಥವಾ ನಾಗಿನ್ ಎಂದು ಕರೆಯಲಾಗುತ್ತದೆ. ನಾಗಾ ಸಾಧು ಆಗುವ ಮೊದಲು ತಮ್ಮ ಪೂರ್ವಾಶ್ರಮದಲ್ಲಿಯೇ ಪಿಂಡವನ್ನು ದಾನ ಮಾಡಬೇಕು ಮತ್ತು ತಲೆ ಬೋಳಿಸಬೇಕು. ನಾಗಿನ್ ಸಾಧ್ವಿ ಆಗಲು ಅವರು 10ರಿಂದ 15 ವರ್ಷಗಳ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕು.
ಸ್ತ್ರೀ ನಾಗಾ ಸಾಧುಗಳು ಪುರುಷ ನಾಗಾ ಸಾಧುಗಳಿಗಿಂತ ಭಿನ್ನರು. ಅವರು ದಿಗಂಬರರಾಗಿ ಇರುವುದಿಲ್ಲ. ಅವರೆಲ್ಲರೂ ಕಾಷಾಯ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಅವು ಹೊಲಿಯದ ಬಟ್ಟೆಗಳಾಗಿರುತ್ತವೆ. ನಾಗಾ ಸಂತ ಅಥವಾ ಸನ್ಯಾಸಿಯಾಗಲು 10ರಿಂದ 15 ವರ್ಷಗಳ ಕಾಲ ಕಟ್ಟುನಿಟ್ಟಾದ ಬ್ರಹ್ಮಚರ್ಯವನ್ನು ಪಾಲಿಸಬೇಕು. ನಾಗಾ ಸಾಧ್ವಿಯಾಗಲು ತನ್ನನ್ನು ತಾನು ದೇವರಿಗೆ ಸಮರ್ಪಿಸಿಕೊಂಡಿದ್ದಾಳೆ ಎಂದು ಗುರುಗಳು ಖಚಿತಪಡಿಸಿಕೊಳ್ಳಬೇಕು. ಆಗ ಮಾತ್ರ ಗುರುಗಳು ಆಕೆಗೆ ನಾಗ ಸಾಧ್ವಿ ಆಗಲು ಅವಕಾಶ ನೀಡುತ್ತಾರೆ. ನಾಗಾ ಸಾಧು ಆಗುವ ಮೊದಲು, ಅವಳು ದೇವರಿಗೆ ಸಮರ್ಪಿತಳೇ ಅಥವಾ ಇಲ್ಲವೇ, ನಾಗಾ ಸನ್ಯಾಸಿಯಾದ ನಂತರ ಅವಳು ಕಠಿಣ ಸಾಧನೆ ಮಾಡಬಹುದೇ ಎಂದು ಪರೀಕ್ಷಿಸಲಾಗುತ್ತದೆ. ನಾಗಾ ಸನ್ಯಾಸಿ ಆಗುವ ಮೊದಲು ಆಕೆ ಪಿಂಡವನ್ನು ದಾನ ಮಾಡಬೇಕು ಮತ್ತು ತಲೆ ಬೋಳಿಸಬೇಕು.
ನಾಗಾ ಸಾಧು ಆಗೋಕೆ ಮೂರು ಬಾರಿ ಲಿಂಗ ಕತ್ತರಿಸ್ತಾರೆ! ಸಾಧು ಹೇಳಿದ ಬೆಚ್ಚಿಬೀಳಿಸೋ ಸತ್ಯ!
ಮುಂಡನದ ನಂತರ, ಮಹಿಳೆಗೆ ನದಿಯಲ್ಲಿ ಸ್ನಾನವನ್ನು ಮಾಡಿಸಲಾಗುತ್ತದೆ. ನಂತರ ನಾಗಾ ಸಾಧ್ವಿ ದಿನವಿಡೀ ಭಗವಂತನ ನಾಮವನ್ನು ಜಪಿಸುತ್ತಾರೆ. ಪುರುಷರಂತೆ ಹೆಣ್ಣು ನಾಗಾ ಸಾಧು ಕೂಡ ಶಿವನನ್ನು ಪೂಜಿಸುತ್ತಾರೆ. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶಿವನ ನಾಮಸ್ಮರಣೆ ಮಾಡುತ್ತಾರೆ ಮತ್ತು ಸಂಜೆ ದತ್ತಾತ್ರೇಯನನ್ನು ಪೂಜಿಸುತ್ತಾರೆ. ಊಟದ ನಂತರ ಮತ್ತೆ ಶಿವನ ನಾಮವನ್ನು ಜಪಿಸುತ್ತಾರೆ. ನಾಗಾ ಸಾಧುಗಳು ಬೇರುಗಳು, ಹಣ್ಣುಗಳು, ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಅನೇಕ ರೀತಿಯ ಎಲೆಗಳನ್ನು ಸೇವಿಸುತ್ತಾರೆ. ಹೆಣ್ಣು ನಾಗಾ ಸಾಧುಗಳ ನಿವಾಸಕ್ಕೆ ಪ್ರತ್ಯೇಕ ಅಖಾಡವನ್ನು ಒದಗಿಸಲಾಗಿದೆ.
2012ರಲ್ಲಿ ನಡೆದ ಪ್ರಯಾಗರಾಜ್ ಕುಂಭದಲ್ಲಿ ಮೊದಲ ನಾಗಾ ಮಹಿಳಾ ಅಖಾರಾ ವಿಶೇಷ ಮನ್ನಣೆಯನ್ನು ಪಡೆಯಿತು. ತ್ರಿವೇಣೀ ಸಂಗಮ ದಡದಲ್ಲಿರುವ ಈ ಅಖಾರಾವನ್ನು ಹಳೆಯ ಸನ್ಯಾಸಿನ್ ಅಖಾರಾ ಎಂದು ಪರಿಗಣಿಸಲಾಗಿದೆ. ನಾಗಾ ಮಹಿಳಾ ಅಖಾರದ ನಾಯಕಿ ದಿವ್ಯಾ ಗಿರಿ ಅವರು ಸಾಧ್ವಿ ಆಗುವ ಮೊದಲು ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಆಂಡ್ ವೇದಿಕ್ ಮೆಡಿಸಿನ್‌ನಿಂದ ವೈದ್ಯಕೀಯ ತಂತ್ರಜ್ಞರಾಗಿ ಶಿಕ್ಷಣ ಪಡೆದಿದ್ದರು. 2004ರಲ್ಲಿ ಅವರು ಮಹಿಳಾ ನಾಗಾ ಸಾಧು ಆದರು. "ನಾವು ವಿಭಿನ್ನವಾಗಿ ಸಾಧಿಸಲು ಬಯಸಿದ್ದೇವೆ. ಜುನಾ ಅಖಾರದ ಅಧಿದೇವತೆ ದತ್ತಾತ್ರೇಯ; ನಾವು ದತ್ತಾತ್ರೇಯನ ತಾಯಿ ಅನುಸೂಯಾಳನ್ನು ನಮ್ಮ ಅಧಿದೇವತೆಯನ್ನಾಗಿ ಮಾಡಲು ಬಯಸುತ್ತೇವೆ" ಎಂದು ಹೇಳಿದ್ದರು.
Indian Mythology: ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನಿಂದಲೂ ಹಿರಿಯಜ್ಜನೊಬ್ಬ ಹೋರಾಡಿದ್ದ! ಅವನ್ಯಾರು ಗೊತ್ತೆ?
