Asianet Suvarna News Asianet Suvarna News

ನಿಮ್ಮ ಜಾತಕದಲ್ಲಿ ಚಾಂಡಾಲ ಯೋಗವಿರಬಹುದು, ಇದ್ದರೆ ಹೀಗೆ ಮಾಡಿ!

ನಿಮ್ಮಲ್ಲಿ ಸಾಮರ್ಥ್ಯವಿದ್ದರೂ ಮಾಡಿದ ಕೆಲಸಕ್ಕೆ ತಕ್ಕಂತೆ ಯಶಸ್ಸು ಸಿಗದಿದ್ದಾಗ ಸಹಜವಾಗಿ ಬೇಸರವಾಗುತ್ತದೆ. ಇದಕ್ಕೆ ಹಲವಾರು ಕಾರಣವಿರಬಹುದು. ಆದರೆ, ಜಾತಕದಲ್ಲಿರುವ ಈ ದೋಷವೂ ಮುಳುವಾಗಿರಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪರಿಶ್ರಮಕ್ಕೆ ತಕ್ಕಂತೆ ಸಿಗದ ಫಲ ಹೀಗೆ ಹಲವು ಸಮಸ್ಯೆಗಳಿದ್ದರೆ ಒಮ್ಮೆ ಜಾತಕವನ್ನು ತೋರಿಸಿಕೊಳ್ಳಿ, ನಿಮ್ಮ ಜಾತಕದಲ್ಲಿ ಚಾಂಡಾಲ ಯೋಗಿವಿದ್ದರೆ ಭಾರಿ ಸಮಸ್ಯೆಗಳು ಎದುರಾಗಲಿವೆ. ಆದರೆ, ಅದಕ್ಕೆ ತಕ್ಕಂತೆ ಪರಿಹಾರವೂ ಇದ್ದು, ಏನು..? ಎತ್ತ..? ಎಂಬುದನ್ನು ನೋಡೋಣ….

If Chandala Yoga in your Kundali, follow these steps to solve
Author
Bangalore, First Published Sep 13, 2020, 4:10 PM IST

ನೀವು ಎಲ್ಲ ವಿಷಯದಲ್ಲೂ ಸಾಕಷ್ಟು ಪರಿಶ್ರಮವನ್ನು ಹಾಕುತ್ತಿರುತ್ತೀರಿ. ಆದರೆ, ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ದಕ್ಕುವುದಿಲ್ಲ. ಕಾರಣ ಏನೂ ಎಂದೂ ಅರಿಯುವುದಿಲ್ಲ. ಇನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಂದರೆ ಸರಿಯಾಗಿ ಓದಲು ಆಗುತ್ತಿರುವುದಿಲ್ಲ, ಜೊತೆಗೆ ಕೆಟ್ಟವರ ಸಹವಾಸವನ್ನು ಮಾಡಿ ಮತ್ತಷ್ಟು ಹಾಳಾಗುತ್ತಾರೆ. ಇಂಥ ಸಮಸ್ಯೆಗಳು ಕಂಡುಬಂದರೆ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸಿಕೊಳ್ಳುವುದು ಒಳ್ಳೆಯದು. ಕಾರಣ ಚಾಂಡಾಲ ಯೋಗವಿದ್ದರೆ ಇಂತಹ ಸಮಸ್ಯೆಯಾಗುತ್ತದೆ. ಜಾತಕದಲ್ಲಿ ಚಾಂಡಾಲ ಯೋಗವಿದ್ದರೆ ನೀವು ಎಷ್ಟೇ ಶ್ರಮ ಹಾಕಿದರೂ ಅದರ ಪೂರ್ಣಫಲ ಸಿಗುವುದಿಲ್ಲ. ಇದನ್ನು ರಾಹು ಬೃಹಸ್ಪತಿ ಸಂಧಿ ಎಂದಲೂ ಕರೆಯಲಾಗುತ್ತದೆ. ಹಾಗಂತ ಇದಕ್ಕೆ ಪರಿಹಾರವೂ ಇಲ್ಲವೆಂದೇನಲ್ಲ. ಪರಿಹಾರ ಸಿಕ್ಕೇ ಸಿಗುತ್ತದೆ. 

ಚಾಂಡಾಲ ಯೋಗವೆಂದರೇನು..?
ರಾಹು ಮತ್ತು ಗುರು ಗ್ರಹವು ಒಂದೇ ಮನೆಯನ್ನು ಪ್ರವೇಶಿಸಿದರೆ ಅದನ್ನು ಚಾಂಡಾಲಯೋಗ ಎಂದು ಕರೆಯಲಾಗುತ್ತದೆ. ಬೃಹಸ್ಪತಿ ದೇವಗುರು, ರಾಹು ರಾಕ್ಷಸನಾಗಿರುವುದರಿಂದ ಸಭ್ಯ ಪುರಷನ ಜೊತೆ ರಾಕ್ಷಸನಿದ್ದಾಗ ಸಭ್ಯ ವ್ಯಕ್ತಿಗೇ ಕಷ್ಟವಾಗುತ್ತದೆ. ಅಂದರೆ ಗುರುವಿನ ಎಲ್ಲ ಕೆಲಸದಲ್ಲೂ ರಾಹು ಅಡಚಣೆಯನ್ನುಂಟು ಮಾಡುತ್ತಾನೆ. ಯಾರದ್ದಾದರೂ ಜಾತಕದಲ್ಲಿ ಈ ಯೋಗವಿದ್ದರೆ ಅಂಥವರು ಈ ಸಮಯದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಗುರು, ರಾಹುವಿನ ಪ್ರಭಾವವಿದ್ದಾಗ ಕ್ರೂರ ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ. ಜ್ಞಾನವಿದ್ದೂ ಪಾಪ ಮಾಡಿದವನನ್ನು ಚಾಂಡಾಲ ಎಂದು ಕರೆಯಲಾಗುತ್ತದೆ. ಅಜ್ಞಾನದಿಂದ ನೀಚ ಕಾರ್ಯ ಮಾಡಿದವರನ್ನು ರಾಕ್ಷಸ ಎನ್ನುತ್ತಾರೆ. 

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..!

ಜಾತಕದಲ್ಲಿ ಚಾಂಡಾಲ ಯೋಗವಿದ್ದರೆ ಈ ಉಪಾಯ ಮಾಡಿ
ಚಾಂಡಾಲ ದೋಷವು ಗುರು ಅಥವಾ ಗುರುವಿನ ಮಿತ್ರ ರಾಶಿ ಇಲ್ಲವೇ ಗುರುವು ಉಚ್ಛ ರಾಶಿಯ ಸ್ಥಿತಿಯಲ್ಲಿದ್ದಾಗ ರಾಹುವನ್ನು ಶಾಂತಗೊಳಿಸಿಕೊಳ್ಳಲು ಪರಿಹಾರವನ್ನು ಮಾಡಿಕೊಳ್ಳಬೇಕು. ಕಾರಣ, ಆ ಸಮಯದಲ್ಲಿ ಗುರು ನಮಗೆ ಉತ್ತಮ ಪ್ರಭಾವವನ್ನು ನೀಡುತ್ತಿರುತ್ತಾನೆ. ರಾಹು ಶಾಂತಿಗೆ ಮಂತ್ರ ಜಪ ಹಾಗೂ ಹೋಮಗಳನ್ನು ಮಾಡಿಸಬೇಕು. ಅಲ್ಲದೆ, ದಾನವನ್ನೂ ಮಾಡಬೇಕಾಗುತ್ತದೆ.  ಅದೇ ಗುರುವಿನ ಶತ್ರುವಿನ ರಾಶಿಯಲ್ಲಿ ಈ ದೋಷವಿದ್ದರೆ ಗುರು ಮತ್ತು ರಾಹು ಎರಡೂ ಗ್ರಹಕ್ಕೂ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ಸಾಮಾನ್ಯ ಪರಿಹಾರಗಳು
ಒಂದು ವೇಳೆ ಜಾತಕದಲ್ಲಿ ಚಾಂಡಾಲ ಯೋಗವಿದ್ದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲೇಬೇಕು. ರಾಹುವಿನ ಜಪ ಮತ್ತು ದಾನ ಮಾಡಬೇಕು, ಯೋಗ್ಯ ಗುರುವಿನ ಸೇವೆ ಮಾಡಿ ಅವರಿಂದ ಆಶೀರ್ವಾದ ಪಡೆಯಬೇಕು, ಮಾತಿನಲ್ಲಿ ನಿಯಂತ್ರಣವನ್ನಿಟ್ಟುಕೊಳ್ಳಬೇಕು, ಸಾಮಾಜಿಕ ಕಾರ್ಯಗಳನ್ನು ಮಾಡಬೇಕು, ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದಿದ್ದರೆ ದೊಡ್ಡವರ ಸಲಹೆಗಳನ್ನು ಪಡೆಯಬೇಕು, ತಂದೆ-ತಾಯಿ ಹಾಗೂ ವೃದ್ಧರಿಗೆ ಗೌರವನ್ನು ಕೊಡಬೇಕಾಗುತ್ತದೆ. ಹೀಗೆ ಮಾಡಿದರೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇದಲ್ಲದೆ ಇನ್ನಷ್ಟು ಕ್ರಮಗಳಿದ್ದು, ಇದನ್ನು ಸಹ ಅನುಸರಿಸಿ…

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..!

ಹನುಮಂತನ ಆರಾಧನೆ
ಹನುಮಂತನ ಆರಾಧನೆಯಿಂದ ರಾಹುವಿನಲ್ಲಿ ಭಯ ಹುಟ್ಟುತ್ತದೆ. ಹೀಗಾಗಿ ಹನುಮಾನ್ ಚಾಲೀಸವನ್ನು ಪ್ರತಿದಿನ ಪಠಿಸುವುದರಿಂದ ಸಮಸ್ಯೆಯಿಂದ ಮುಕ್ತಿಪಡೆಬಹುದು.

ಹಸುವಿಗೆ ಹಸಿರು ಹುಲ್ಲು ಹಾಕಿ
ಹಸುವು ಗೋಮಾತೆಯಾಗಿರುವ ಕಾರಣ ಅದಕ್ಕೆ ಹಸಿರು ಹುಲ್ಲನ್ನು ನೀಡಬೇಕು. ಹೀಗೆ ಮಾಡುವುದರಿಂದ ದೋಷದ ಪ್ರಮಾಣ ಕಡಿಮೆಯಾಗುತ್ತದೆ. ಜೊತೆಗೆ ಬಡವರಿಗೆ ದಾನ-ಧರ್ಮ ನೀಡಿದರೆ ಇನ್ನೂ ಉತ್ತಮ.

ಶಿವ ಮತ್ತು ಗಣೇಶನ ಪೂಜೆ ಮಾಡಿ
ಗಣೇಶ ಮತ್ತು ಶಿವನ ಆರಾಧನೆಯಿಂದ ಹಾಗೂ ಮಂತ್ರಗಳನ್ನು ಜಪಿಸುವುದರಿಂದ ದೋಷ ನಿವಾರಣೆಯಾಗಿ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಶಿವನ ಆರಾಧನೆಯನ್ನು ಪ್ರತಿದಿನ ಮಾಡುವುದಲ್ಲದೆ, ಪ್ರತಿ ಸೋಮವಾರ ಶಿವನ ಲಿಂಗಕ್ಕೆ ಜಲಾಭಿಷೇಕವನ್ನು ನೆರವೇರಿಸಬೇಕು. 

ಆಲದ ಮರದ ಬೇರಿಗೆ ಹಾಲೆರಿಯಿರಿ
ಆಲದ ಮರದ ಬೇರಿಗೆ ಹಾಲನ್ನು ಎರೆಯುವುದರಿಂದ ಸಮಸ್ಯೆಗಳು ತಗ್ಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇದನ್ನು ಓದಿ: ಪಿತೃಪಕ್ಷ: ಮಹತ್ವದ ಈ ದಿನದಲ್ಲಿ ಏನು ಮಾಡಿದರೆ ಅದೃಷ್ಟ ಖುಲಾಯಿಸುತ್ತೆ?

ಗುರು - ರಾಹು ಶಾಂತಿ
ದೋಷವಿದೆ ಎಂದು ತಿಳಿದಾಗ ಸರಿಯಾದವರನ್ನು ಸಂಪರ್ಕಿಸಿ ಅವರಿಂದ ರಾಹು ಶಾಂತಿ ಮಾಡಿಸುವುದು ಬಹಳ ಒಳ್ಳೆಯದು. ಹೀಗೆ ಮಾಡುವುದರಿಂದ ಅಶುಭ ಪ್ರಭಾವ ನಿಮ್ಮ ಹಾಗೂ ಕುಟುಂಬದ ಮೇಲೆ ಬೀಳುವುದಿಲ್ಲ. ಹೀಗಾಗಿ ಅಭಿವೃದ್ಧಿಯನ್ನೂ ಹೊಂದಬಹುದಾಗಿದೆ. ಅಲ್ಲದೆ, ಗುರು ಹಾಗೂ ರಾಹುವಿಗೆ ಸಂಬಂಧಿಸಿದ ಮಂತ್ರವನ್ನು ಜಪಿಸಬೇಕು. ಪೂಜೆ, ಹೋಮಗಳನ್ನು ಮಾಡಬೇಕು. ಈ ಎರಡೂ ಗ್ರಹಗಳಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ರಾಹು ಬೃಹಸ್ಪತಿ ಸಂಧಿ ಶಾಂತಿ ಮಾಡಿಸುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 

Follow Us:
Download App:
  • android
  • ios