ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳುವಂತೆ ಬೆತ್ತಲೆಯಾಗಿ ಸ್ನಾನ ಮಾಡಬಾರದು ಏಕೆ? ಇಲ್ಲಿದೆ ಕಾರಣ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪೂರ್ಣ ಬೆತ್ತಲೆಯಾಗಿ ಸ್ನಾನ ಮಾಡಬಾರದು. ಹೀಗೆ ಮಾಡುವುದರಿಂದ ಕೆಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸ್ನಾನ ಮಾಡುವಾಗ ಕನಿಷ್ಠ ಒಳಉಡುಪುಗಳನ್ನು ಧರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.

ಹುಟ್ಟುಡುಗೆ
ಜೀವನ ಹೇಗೆ ನಡೆಸಬೇಕು ಎಂಬುದನ್ನು ನಮ್ಮ ಶಾಸ್ತ್ರಗಳಲ್ಲಿ ಮಾಹಿತಿ ಇದೆ. ಇದನ್ನು ಅರಿತು ಜೀವನ ನಡೆಸಿದ್ರೆ ಬದುಕು ನೆಮ್ಮದಿಯಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪೂರ್ಣ ಬೆತ್ತಲೆಯಾಗಿ (ಹುಟ್ಟುಡುಗೆಯಲ್ಲಿ) ಸ್ನಾನ ಮಾಡಬಾರದು. ಯಾಕೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
ಸ್ನಾನ
ದೈನಂದಿನ ಕಾರ್ಯಗಳಲ್ಲಿ ಸ್ನಾನವೂ ಮೊದಲಿನ ಸ್ಥಾನದಲ್ಲಿರುತ್ತದೆ. ಕೆಲವರು ಸ್ನಾನ ಮಾಡಿದ ನಂತರವೇ ದಿನದ ಕೆಲಸಗಳನ್ನು ಆರಂಭಿಸುತ್ತಾರೆ. ಒಂದಿಷ್ಟು ದಿನಕ್ಕೆರಡು ಬಾರಿ ಸ್ನಾನ ಮಾಡುತ್ತಾರೆ. ಈ ಅಭ್ಯಾಸವನ್ನು ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದಿದ್ದಾರೆ. ಆದ್ರೆ ಬೆತ್ತಲೆಯಾಗಿ ಸ್ನಾನ ಮಾಡಬಾರದೆಂದು ವೈದಿಕ ಶಾಸ್ತ್ರದಲ್ಲಿ ಹೇಳಲಾಗಿದೆ.
ಯಾವ ರೀತಿ ಸ್ನಾನ ಮಾಡಬೇಕು?
ವೈದಿಕ ಗ್ರಂಥಗಳಲ್ಲಿ ಯಾವ ರೀತಿ ಸ್ನಾನ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಇಂದು ಕೆಲವರು ಬಟ್ಟೆಗಳಿಲ್ಲದೇ ಬೆತ್ತಲೆಯಾಗಿ ಸ್ನಾನ ಮಾಡುತ್ತಾರೆ. ಹೀಗೆ ಮಾಡೋದರಿಂದ ಜೀವನದಲ್ಲಿ ಅಪಾಯವನ್ನು ಎದುರಿಸಬೇಕಾಗುತ್ತದೆ. ಆ ಅಪಾಯಗಳು ಏನು ಎಂಬುದರ ಕುರಿತು ತಿಳಿಯೋಣ ಬನ್ನಿ.
ಬೆತ್ತಲೆಯಾಗಿ ಸ್ನಾನ ಮಾಡಿದ್ರೆ ಏನಾಗುತ್ತೆ?
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಹೆಚ್ಚು ಸಮಯ ಬಟ್ಟೆ ಹಾಕದೇ ಅಂದ್ರೆ ಬೆತ್ತಲೆಯಾಗಿ ಸ್ನಾನ ಮಾಡೋದರಿಂದ ಮನೆಯೊಳಗೆ ದುಷ್ಟಶಕ್ತಿಗಳ ಆಗಮನವಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸ್ನಾನ ಮಾಡುವಾಗ ಏನು ಧರಿಸಬೇಕು ಎಂಬುದನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಒಳಉಡುಪು
ಬೆತ್ತಲೆಯಾಗಿ ಸ್ನಾನ ಮಾಡಿದ್ರೆ ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ. ಇದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೆತ್ತಲೆಯಾಗಿ ಸ್ನಾನ ಮಾಡೋದರಿಂದ ಕೆಲವೊಮ್ಮೆ ಪಿತೃದೋಷಕ್ಕೂ ತುತ್ತಾಗಬೇಕಾಗುತ್ತದೆ. ಇದರಿಂದ ಅನೇಕ ಕಷ್ಟಗಳನ್ನು ನೋಡಬೇಕಾಗುತ್ತದೆ. ಹಾಗಾಗಿ ಖಾಸಗಿ ಭಾಗ ಮರೆಯಾಗುವಂತೆಯಾದ್ರೂ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಅಂದ್ರೆ ಸ್ನಾನ ಮಾಡುವಾಗ ಒಳಉಡುಪುಗಳನ್ನು ಧರಿಸಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಬೇಸಿಗೆಯ ಬಿಸಿ: ಛಾವಣಿ ಮೇಲಿನ ಟ್ಯಾಂಕ್‌ನಿಂದ ಬಿಸಿನೀರು ಬರ್ತಿದೆಯಾ? ಕೂಲ್ ವಾಟರ್‌ಗೆ ಹೀಗೆ ಮಾಡಿ
ಸ್ನಾನಗೃಹ
ಈ ಹಿಂದೆ ಸ್ನಾನಗೃಹಗಳು ಮನೆಯ ಹೊರಗೆ ದೂರದಲ್ಲಿರುತ್ತದೆ. ಸ್ನಾನ ಮಾಡುವಾಗ ಹಾವು, ಚೇಳು ಸೇರಿದಂತೆ ಅಪಾಯಕಾರಿ ಜೀವಿಗಳು ಬಂದ್ರೆ ಹೊರಗೆ ಬರಬೇಕಾಗುತ್ತದೆ. ಒಂದು ವೇಳೆ ಬೆತ್ತಲಾಗಿದ್ರೆ ಹೊರಗೆ ಬರಲು ಸಾಧ್ಯವಿಲ್ಲ. ಆದ್ದರಿಂದ ಸ್ವಲ್ಪ ಬಟ್ಟೆಯನ್ನಾದ್ರೂ ಧರಿಸಬೇಕೆಂದು ಹಿರಿಯರು ಹೇಳುತ್ತಿದ್ದರು. ಅಂದಿನಿಂದ ಈ ಪದ್ಧತಿ ಚಾಲ್ತಿಯಲ್ಲಿದೆ ಎಂಬ ಮಾತುಗಳಿವೆ.
ಇದನ್ನೂ ಓದಿ: ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

