ಗ್ರಹಗಳ ರಾಶಿ ಪರಿವರ್ತನೆಯಿಂದ ಹಲವಾರು ಬದಲಾವಣೆಗಳಾಗುತ್ತವೆ. ರಾಹು ಗ್ರಹದ ರಾಶಿ ಪರಿವರ್ತನೆಯು ಇದೇ ಸೆಪ್ಟೆಂಬರ್ 23ರಂದು ಆಗಲಿದೆ. ಕ್ರೂರ ಗ್ರಹವಾದ ರಾಹುಗ್ರಹ ರಾಶಿ ಪರಿವರ್ತನೆಯಿಂದ ಜನರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ರಾಹುವಿನ ಅಶುಭ ಪ್ರಭಾವದಿಂದ ವ್ಯಕ್ತಿಯು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ರಾಹುವು ಜಾತಕದಲ್ಲಿ ನೀಚವಾಗಿದ್ದರೆ ವ್ಯಕ್ತಿಯ ಮನಸ್ಸಿನಲ್ಲಿ ಭಯ ಉಂಟಾಗುತ್ತದೆ, ಆಲೋಚನಾ ಶಕ್ತಿ ಕುಂದುತ್ತದೆ ಮತ್ತು ಶತ್ರು ಕಾಟ ಹೆಚ್ಚಾಗುತ್ತದೆ. ಹಾಗಾಗಿ ರಾಹುಗ್ರಹದ ರಾಶಿ ಪರಿವರ್ತನೆಯಿಂದ ಯಾವ್ಯಾವ ರಾಶಿಯವರಿಗೆ ಯಾವ ಫಲ? ಎಂಬುದನ್ನು ತಿಳಿಯೋಣ....

ಮೇಷ ರಾಶಿ
ರಾಹು ಗ್ರಹದ ಗೋಚರದಿಂದ ಮೇಷ ರಾಶಿಯವರಿಗೆ ಶುಭವಾಗುತ್ತದೆ. ಶಕ್ತಿ-ಸಾಹಸ ಹೆಚ್ಚುತ್ತದೆ. ಇದರಿಂದ ನಿಮ್ಮ ಎಲ್ಲ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಪೂರ್ತಿಗೊಳಿಸಿಕೊಳ್ಳಬಹುದಾಗಿದೆ. ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.ವೃಷಭ ರಾಶಿ
ರಾಹುವಿನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಮಿಶ್ರ ಫಲವಿದೆ. ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಮಾತಿನ ಮೇಲೆ ಹೆಚ್ಚು ನಿಗಾಇಟ್ಟು ಯೋಚಿಸಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..!

ಮಿಥುನ ರಾಶಿ
ರಾಹುವಿನ ಗೋಚರದಿಂದ ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ದೈಹಿಕ ಮತ್ತು ಮಾನಸಿಕ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ  ಮೊದಲು ಹತ್ತು ಬಾರಿ ಯೋಚಿಸುವುದು ಒಳ್ಳೆಯದು.

ಕರ್ಕಾಟಕ ರಾಶಿ
ರಾಹು ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಶುಭವನ್ನುಂಟು ಮಾಡುತ್ತದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆಯಿದೆ. ಖರ್ಚು ಹೆಚ್ಚಾಗಲಿದೆ ಮತ್ತು ಬರಬೇಕಿದ್ದ ಹಣ ಯಾವುದಾದರು ಇದ್ದಲ್ಲಿ ವಾಪಾಸ್ ನಿಮ್ಮ ಕೈ ಸೇರಲಿದೆ.

ಸಿಂಹ ರಾಶಿ
ಈ ರಾಶಿಯವರಿಗು  ರಾಹುವಿನ ಗೋಚರದಿಂದ ಶುಭವಾಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಂಭವವಿದೆ.

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..!

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ರಾಹುವಿನ ರಾಶಿ ಪರಿವರ್ತನೆಯಿಂದ ಹೆಚ್ಚೆಚ್ಚು ಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು. ವೃತ್ತಿ ಕ್ಷೇತ್ರದಲ್ಲು ಆಗುವ ಕೆಲಸ ಸರಿಯಾಗಿ ಆಗದೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಶತ್ರುಗಳ ಬಗ್ಗೆ ಎಚ್ಚರವಹಿಸುವುದು  ಅಗತ್ಯವಾಗಿದೆ. ರಾಹುವಿಗೆ ಸಂಬಂಧಪಟ್ಟ ಪರಿಹಾರಗಳನ್ನು ಮಾಡಿಕೊಳ್ಳವುದರಿಂದ ಸಮಸ್ಯೆಗೆ ಸಮಾಧಾನ ಲಭಿಸುತ್ತದೆ.

ತುಲಾ ರಾಶಿ
ರಾಹುಗ್ರಹದ ರಾಶಿ ಪರಿವರ್ತನೆಯು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ರಾಹು ಗ್ರಹದ ಅಶುಭ ಪ್ರಭಾವ ಈ ರಾಶಿಯ ಮೇಲಾಗಲಿದೆ. ಸಂಗಾತಿಯೊಂದಿಗೆ ಮನಸ್ಥಾಪವಾಗುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ
ರಾಹುಗ್ರಹದ ಗೋಚರ ಈ ರಾಶಿಯವರಿಗೆ ಸಫಲತೆಯನ್ನು ತಂದುಕೊಡುತ್ತದೆ. ಸ್ವಾಸ್ಥ್ಯದ ಸಮಸ್ಯೆ ಹೆಚ್ಚಾಗಿ ಕಾಡುವ ಸಂಭವವಿದೆ. ವಾಹನವನ್ನು ಚಲಾಯಿಸುವ ಸಮಯದಲ್ಲಿ ಹೆಚ್ಚು ಜಾಗರೂಕರಾಗಿದ್ದರೆ ಒಳಿತು.

ಧನು ರಾಶಿ
ರಾಹು ಗ್ರಹದ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಅಶುಭ ಪ್ರಭಾವವನ್ನು ಬೀರಲಿದೆ. ಪಾರ್ಟನರ್‌ಶಿಪ್‌ನಲ್ಲಿ ಕೆಲಸ ಮಾಡುವವರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಸಹ ತೊಂದರೆ ಬರುವ ಸಂಭವವಿದೆ.

ಮಕರ ರಾಶಿ
ಸೆಪ್ಟೆಂಬರ್ ನಂತರ ಆರ್ಥಿಕ ಸ್ಥಿತಿಯಲ್ಲಿ ತೊಂದರೆ ಬರುವ ಸಾಧ್ಯತೆ ಇದೆ. ಸಾಲ ತೆಗೆದುಕೊಳ್ಳುವ ಸಂಭವವೂ ಎದುರಾಗಲಿದೆ. ವೃತ್ತಿಕ್ಷೇತ್ರದಲ್ಲಿ ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು, ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ಹೀಗಿದ್ದರೆ ರಾಜಯೋಗ, ನಿಮ್ಮ ರಾಶಿಗಿದೆಯಾ ಈ ಯೋಗ?

ಕುಂಭ ರಾಶಿ
ರಾಹುವಿನ ರಾಶಿ ಪರಿವರ್ತನೆ ನಿಮ್ಮ ಸಂತಾನಕ್ಕೆ ಸಮಸ್ಯೆಯಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು ಎದುರಾಗಬಹುದು. ಆರೋಗ್ಯ ಸಂಬಂಧಿ ತೊಂದರೆಗಳು ಕಾಡಬಹುದು.

ಮೀನ ರಾಶಿ
ರಾಹುವಿನ ಗೋಚರ ಈ ರಾಶಿಯವರ ತಾಯಿಯ ಆರೋಗ್ಯದ ಸಮಸ್ಯೆಯನ್ನು ತಂದೊಡ್ಡುವ ಸಂಭವವಿದೆ. ಆಪ್ತರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಸಹ ಇದೆ.