ಪಿತೃಪಕ್ಷ: ಮಹತ್ವದ ಈ ದಿನದಲ್ಲಿ ಏನು ಮಾಡಿದರೆ ಅದೃಷ್ಟ ಖುಲಾಯಿಸುತ್ತೆ?
ಪಿತೃಪಕ್ಷದಲ್ಲಿ ಪಿತೃಗಳ ಸಂತುಷ್ಟಿಗಾಗಿ ಶ್ರಾದ್ಧ ಕರ್ಮಗಳನ್ನು ಮಾಡಲಾಗುತ್ತದೆ. ಪಿತೃಪಕ್ಷಕ್ಕೆ ವಿಶೇಷವಾದ ಮಹತ್ವವಿದೆ ಎಂಬುದನ್ನು ಹಲವು ಶಾಸ್ತ್ರ ಪುರಾಣಗಳು ಉಲ್ಲೇಖಿಸಿವೆ. ಪ್ರತ್ಯೇಕ ಪುರಾಣಗಳಲ್ಲಿ ಪಿತೃಪಕ್ಷದಲ್ಲಿ ಮಾಡಬೇಕಾದ ಮಹತ್ವದ ಕಾರ್ಯವನ್ನು ಮತ್ತು ಅದರಿಂದಾಗುವ ಲಾಭದ ಬಗ್ಗೆ ವಿವರಣೆಯನ್ನು ಹೇಳಿದೆ. ಬೇರೆ ಬೇರೆ ಪುರಾಣಗಳ ಪ್ರಕಾರ ಪಿತೃಪಕ್ಷದ ಮಹತ್ವ ಮತ್ತು ಲಾಭವೇನೆಂಬುದನ್ನು ತಿಳಿಯೋಣ..
ಹಿಂದೂ ಧರ್ಮದಲ್ಲಿ ಅನೇಕ ಆಚರಣೆಗಳಿರುತ್ತವೆ. ಒಂದೊಂದಕ್ಕೆ ಒಂದೊಂದು ಮಹತ್ವವೂ ಇದೆ. ಈಗ ಪಿತೃಪಕ್ಷ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವು ಆಚರಣೆಗಳು ಒಳ್ಳೆಯದಲ್ಲ ಎಂಬ ನಂಬಿಕೆ ಸಹ ಇದೆ. ಆದರೆ, ಪುರಾಣದಲ್ಲಿ ಉಲ್ಲೇಖವಾದಂತೆ ಕೆಲವು ನೀತಿ-ನಿಯಮಗಳನ್ನು ಅನುಸರಿಸಿದರೆ ಬದುಕಿನಲ್ಲಿ ಲಾಭ ಪಡೆಯಬಹುದಾಗಿದೆ. ಇಲ್ಲಿನ+ ಅನೇಕ ಲಾಭಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬಹುದು.
ಪುರಾಣದಲ್ಲಿ ನಂಬಿಕೆ ಇರುವವರಿದ್ದರೆ ಈ ಉಲ್ಲೇಖಗಳನ್ನು ಗಮನಿಸಬಹುದು. ಪೂರ್ವಜರು ತಮ್ಮವರನ್ನು ಆಶೀರ್ವದಿಸಲು ಯಮರಾಜ ಪಿತೃಪಕ್ಷದಲ್ಲಿ ಕಾಲಾವಕಾಶವನ್ನು ನೀಡುತ್ತಾನೆ. ಜೊತೆಗೆ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಹೇಳಿದಂತೆ ಪೂರ್ವಜರಷ್ಟೇ ಅಲ್ಲ, ದೇವಿ-ದೇವತೆಗಳಿಗೂ, ಬೇರೆ ಬೇರೆ ಜೀವಿಗಳಿಗೂ ಪಿತೃಪಕ್ಷಗಳಂದು ನೀಡುವ ಭೋಜನ/ಅನ್ನದಾನ ಇಲ್ಲವೇ ಧಾರ್ಮಿಕ ವಿಧಿವಿಧಾನಗಳು ತಲುಪಲಿದೆ ಎಂದು ವಿಷ್ಣುಪುರಾಣದಲ್ಲೂ ಉಲ್ಲೇಖಿಸಲಾಗಿದೆ. ಪಿತೃಗಳು ಸಂತುಷ್ಟಗೊಂಡರೆ ಅವರು ಮಾಡುವ ಆಶೀರ್ವಾದದಿಂದ ಎಲ್ಲ ದುಃಖಗಳು ದೂರವಾಗಿ, ಧನ-ಧಾನ್ಯ ಪ್ರಾಪ್ತಿಯಾಗಲಿದೆ.
ಹೀಗಾಗಿ ಯಾವ ಯಾವ ಪುರಾಣದಲ್ಲಿ ಯಾವ ರೀತಿಯಾಗಿ ಪಿತೃಪಕ್ಷದಲ್ಲಿ ಪಿತೃಕರ್ಮವನ್ನು ಅನುಷ್ಠಾನಕ್ಕೆ ತರಬೇಕು. ಇದರಿಂದ ಏನಾಗುತ್ತದೆ ಎಂಬ ಬಗ್ಗೆ ಉಲ್ಲೇಖಿಸಲಾಗಿದೆ ಎಂಬ ಬಗ್ಗೆ ನೋಡೋಣ.
ಇದನ್ನು ಓದಿ: ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..!
ಬ್ರಹ್ಮಪುರಾಣದ ಅನುಸಾರ
ಆಶ್ವಯುಜ ಮಾಸದ ಕೃಷ್ಣಪಕ್ಷದಂದು ಯಮರಾಜನು ಎಲ್ಲ ಪಿತೃಗಳನ್ನು ತನ್ನ ಪಾಶದಿಂದ ಮುಕ್ತಿಗೊಳಿಸುತ್ತಾನೆ. ಕಾರಣ, ಪರಿವಾರದವರು ಮಾಡುವ ಶ್ರಾದ್ಧದ ಭೋಜನವನ್ನು ಗ್ರಹಣ ಮಾಡಿಕೊಂಡು ಬರಲಿ ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ. ಹಾಗಾಗಿ ಈ ಮಾಸದಲ್ಲಿ ಶ್ರಾದ್ಧ ಮಾಡದೇ ಇರುವಂಥವರ ಪೂರ್ವಜರು ಅತೃಪ್ತರಾಗಿ ಸಿಟ್ಟಿನಿಂದ ಲೋಕಕ್ಕೆ ವಾಪಸಾಗುವರು. ಇದು ಪಿತೃದೋಷಕ್ಕೂ ಕಾರಣವಾಗುತ್ತದೆ. ಜೊತೆಗೆ ಯಾರು ಶ್ರದ್ಧೆಯಿಂದ ಭಕ್ತಿಪೂರ್ವಕವಾಗಿ ಶ್ರಾದ್ಧವನ್ನು ನೆರವೇರಿಸುತ್ತಾರೋ ಅಂಥವರ ಪರಿವಾರದಲ್ಲಿ ಯಾವುದೇ ದುಃಖ ಅನುಭವಿಸುವ ಸ್ಥಿತಿ ಬರುವುದಿಲ್ಲ.
ಯಮಸ್ಮೃತಿಯ ಪ್ರಕಾರ
ಯಮಸ್ಮೃತಿಯ ಪ್ರಕಾರ, ಶ್ರಾದ್ಧ ಮಾಡಬೇಕಾದಲ್ಲಿ ಅವರ ತಂದೆ, ಅಜ್ಜ, ಮುತ್ತಜ್ಜರನ್ನು ಸ್ಮರಿಸಿ ಪೂರ್ವಜರಿಗೆ ಧಾರ್ಮಿಕ ವಿಧಿವಿಧಾನವನ್ನು ಪೂರೈಸಬೇಕು. ಹೀಗೆ ಸ್ಮರಣೆ ಮಾಡುವುದರಿಂದ ಪಿತೃಗಳು ಸಂತುಷ್ಟಗೊಳ್ಳುವುದಲ್ಲದೆ, ನಿಮಗೂ ಸಹ ಹರಿಸುತ್ತಾರೆ. ಜೊತೆಗೆ ಪಿತೃಗಳ ಆತ್ಮಕ್ಕೂ ಶಾಂತಿ ಲಭಿಸುತ್ತದೆ.
ಇದನ್ನು ಓದಿ: ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ವೃತ್ತಿ ಭವಿಷ್ಯ ಹೇಗಿರತ್ತೆ ಗೊತ್ತಾ..?
ಮಾರ್ಕಂಡೇಯ ಪುರಾಣ
ಯಾವ ಕುಲದಲ್ಲಿ ಶ್ರಾದ್ಧ ಕರ್ಮವನ್ನು ಮಾಡುವುದಿಲ್ಲವೋ, ಅಂಥವರಿಗೆ ಸಂತಾನದಲ್ಲಿ ತೊಂದರೆಗಳು ಉಂಟಾಗುತ್ತವೆ ಎಂದು ಮಾರ್ಕಂಡೇಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಧಾರ್ಮಿಕ ವಿಧಾನವನ್ನು ಅನುಸರಿಸಬೇಕು. ಆಗ ಆ ಪೀಳಿಗೆ ಸೇರಿದಂತೆ ಮುಂದಿನ ಪೀಳಿಗೆಗೂ ಸಮಸ್ಯೆಗಳು ಬಾಧಿಸದು ಎನ್ನಲಾಗಿದೆ.
ಮಹಾಭಾರತದ ಪ್ರಕಾರ
ಮಹಾಭಾರತದಲ್ಲಿ ಹೇಳುವ ಪ್ರಕಾರ, ಯಾವ ಮನುಷ್ಯ ಪಿತೃಗಳಿಗೆ ಶ್ರಾದ್ಧ ಮಾಡುವುದಿಲ್ಲವೋ, ಅಂಥವನು ಒಬ್ಬ ಬುದ್ಧಿವಂತ ವ್ಯಕ್ತಿಯಿಂದ ಮೂರ್ಖ ಎಂಬ ಹಣೆಪಟ್ಟಿಯನ್ನು ಹೊತ್ತುಕೊಳ್ಳುತ್ತಾನೆ. ಇದಕ್ಕಾಗಿಯೇ ಶ್ರಾದ್ಧ ಕಾರ್ಯಗಳನ್ನು ನೆರವೇರಿಸುವ ಮೂಲಕ ಪಿತೃಗಳ ಆತ್ಮಕ್ಕೆ ಶಾಂತಿ ಲಭಿಸುವಂತೆ ನೋಡಿಕೊಳ್ಳಬೇಕು.
ವಿಷ್ಣು ಪುರಾಣದ ಪ್ರಕಾರ
ಶ್ರಾದ್ಧ ಮಾಡುವುದರಿಂದ ಕೇವಲ ಪಿತೃಗಣವಲ್ಲದೆ, ಬ್ರಹ್ಮ, ಇಂದ್ರ, ಸೂರ್ಯ, ಅಗ್ನಿ, ವಾಯು, ಋಷಿ, ಮನುಷ್ಯ ಮತ್ತು ಪಶುಪಕ್ಷಿ ಹೀಗೆ ಸಮಸ್ತ ಪ್ರಾಣಿಯು ತೃಪ್ತಿಯ ಅನುಭವವನ್ನು ಪಡೆಯುತ್ತವೆ. ಹೀಗಾಗಿ ಈ ಎಲ್ಲ ದೇವತೆಗಳು ಹಾಗೂ ಜೀವ ಸಂಕುಲಗಳ ಆಶೀರ್ವಾದವೂ ಲಭಿಸಲಿದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಸೆಪ್ಟೆಂಬರ್‌ನಲ್ಲಿ ಜನಿಸಿದವರು ಹೀಗಿರ್ತಾರೆ..!
ಗರುಡ ಪುರಾಣ
ಗರುಡ ಪುರಾಣದ ಪ್ರಕಾರ, ಶ್ರದ್ಧಾ ಪೂರ್ವಕವಾಗಿ ಶ್ರಾದ್ಧವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪಿತೃಗಣಗಳು ಮನುಷ್ಯರಿಗೆ ಆಯಷ್ಯ, ಪುತ್ರ ಸಂತಾನ, ಯಶಸ್ಸು, ಮೋಕ್ಷ, ಸ್ವರ್ಗ, ಕೀರ್ತಿ, ಬಲ, ವೈಭವ, ಧನ ಮತ್ತು ಧಾನ್ಯಗಳು ವೃದ್ಧಿಯಾಗಲಿ ಎಂದು ಆಶೀರ್ವಾದವನ್ನು ಮಾಡುತ್ತವೆ. ಆದರೆ, ಇಲ್ಲಿ ಶ್ರದ್ಧೆಯಿಂದ ಮಾಡಬೇಕಾಗುತ್ತದೆ.