Asianet Suvarna News Asianet Suvarna News

ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..!

ಜಾತಕದಲ್ಲಿ ಗ್ರಹಗಳ ಸ್ಥಾನ ಮತ್ತು ಸ್ಥಿತಿ ಬಲವಾಗಿದ್ದರೆ ಶುಭ ಪ್ರಭಾವವನ್ನು ನಿರೀಕ್ಷಿಸಬಹುದು. ಗ್ರಹಗಳ ಸ್ಥಿತಿ ಬಲಹೀನವಾಗಿದ್ದರೆ ಅಥವಾ ಕ್ರೂರಗ್ರಹಗಳಾಗಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಾರಿ ರಾಹುಗ್ರಹದ ರಾಶಿ ಪರಿವರ್ತನೆಯಿಂದಾಗಿ ಕೆಲವರಿಗೆ ಶುಭ ಮತ್ತು ಹಲವರಿಗೆ ತೊಂದರೆ ಎದುರಾಗುತ್ತದೆ. ಹಾಗಾಗಿ ರಾಹುಗ್ರಹದ ಅಶುಭ ಪ್ರಭಾವದಿಂದ ಪಾರಾಗಲು ಜ್ಯೋತಿಷ್ಯದಲ್ಲಿ ಹೇಳಿರುವ ಉಪಾಯಗಳನ್ನು ನೋಡೋಣ..

Rahu planet transit some tips  to overcome the bad effects
Author
Bangalore, First Published Sep 10, 2020, 6:51 PM IST

ಗ್ರಹಗಳ ಸ್ಥಾನ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಶುಭ ಪ್ರಭಾವ ನೀಡುವ ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯು ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾನೆ. ಅದೇ ಕ್ರೂರ ಗ್ರಹಗಳು ಅಥವಾ ಅಶುಭ ಗ್ರಹಗಳ ಪ್ರಭಾವದಿಂದ ವ್ಯಕ್ತಿಯು ಎಲ್ಲ ವಿಷಯಗಳಲ್ಲೂ ಹಿನ್ನಡೆಯನ್ನು,ಅವಮಾನವನ್ನು,ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ.

ಹಾಗೆಯೇ ಅಶುಭ ಗ್ರಹವಾದ ರಾಹು ಗ್ರಹದ ಸ್ಥಾನ ಬದಲಾವಣೆಯ ಕಾಲ ಬಂದಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಹದಿನೆಂಟು ತಿಂಗಳು ತೆಗೆದುಕೊಳ್ಳುವ ಈ ಗ್ರಹದ ರಾಶಿ ಪರಿವರ್ತನೆಯು ಇದೇ ಸೆಪ್ಟೆಂಬರ್ 23ರಂದು ಆಗಲಿದೆ. ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿ ಸ್ಥಿತವಾದರೆ ಉತ್ತಮ ಫಲಗಳನ್ನು ಕಾಣದಿದ್ದರೂ ಸಹ ಕೆಡುಕಾಗುವುದಿಲ್ಲ, ಅದೇ ಅಶುಭ ಸ್ಥಾನದಲ್ಲಿ ಸ್ಥಿತವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗದರೆ ಅಂತಹ ಸಮಸ್ಯೆಗಳಿಂದ ಪಾರಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಈ ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ...

ಇದನ್ನು ಓದಿ: ಪಿತೃಪಕ್ಷ: ಮಹತ್ವದ ಈ ದಿನದಲ್ಲಿ ಏನು ಮಾಡಿದರೆ ಅದೃಷ್ಟ ಖುಲಾಯಿಸುತ್ತೆ? 

ಬೀಜ ಮಂತ್ರದ ಜಪ
ಶಾಸ್ತ್ರದಲ್ಲಿ ಹೇಳಿರುವಂತೆ ರಾಹುಗ್ರಹಕ್ಕೆ ತನ್ನದೆ ಆದ ಯಾವುದೇ ಅಸ್ತಿತ್ವವಿಲ್ಲ. ರಾಹುಗ್ರಹಕ್ಕೆ ಯಾವುದೇ ಅಧಿಪತಿ ಗ್ರಹವೂ ಇಲ್ಲ. ಈ ಗ್ರಹವನ್ನು ಒಂದು ಛಾಯಾಗ್ರಹವೆಂದು ಹೇಳಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಈ ಗ್ರಹವನ್ನು ಶಾಂತಗೊಳಿಸಲು 108 ಬಾರಿ ಬೀಜ ಮಂತ್ರದ ಜಪವನ್ನು ಮಾಡಬೇಕು. ಮನೆಯಲ್ಲಿ ರಾಹು ಯಂತ್ರವನ್ನು ಇಡುವುದರಿಂದ ಜಾತಕದಲ್ಲಿ ರಾಹುಗ್ರಹದ ದೋಷವಿದ್ದರೆ ಅದು ನಿವಾರಣೆಯಾಗುತ್ತದೆ.

ಹನುಮಂತನ ಸ್ಮರಣೆ
ರಾಹು ಕೇತುವಿನ ಅಶುಭ ಪ್ರಭಾವದಿಂದ ಮುಕ್ತಿ ಪಡೆಯಲು ನೀಲಿ ಬಣ್ಣದ ವಸ್ತ್ರದಲ್ಲಿ ಎಳ್ಳನ್ನು ಕಟ್ಟಿ ಹನುಮಂತನಿಗೆ ಅರ್ಪಿಸಬೇಕು. ಅಷ್ಟೇ ಅಲ್ಲದೆ ಬೂಂದಿ ಲಡ್ಡುವಿನಲ್ಲಿ ನಾಲ್ಕು ಲವಂಗವನ್ನು ಹಾಕಿ ಅದನ್ನು ಹನುಮಂತನಿಗೆ ನೈವೇದ್ಯ ಮಾಡಬೇಕು. ಇದರಿಂದ ರಾಹುದೋಷ ಕಡಿಮೆಯಾಗುತ್ತದೆ.

ಇದನ್ನು ಓದಿ: ಪಿತೃಪಕ್ಷದಲ್ಲಿ ಈ ವಸ್ತುಗಳ ದಾನ ಮಾಡಿ, ಪುಣ್ಯ ಕಟ್ಕೊಳ್ಳಿ..! 

ಬೆಳ್ಳಿ ಆನೆ
ಮನೆಯ ಪ್ರಮುಖ ಕೋಣೆಯಲ್ಲಿ ಬೆಳ್ಳಿ ಆನೆಯ ಪ್ರತಿಮೆಯನ್ನು ಇಡಬೇಕು. ಇದರಿಂದ ರಾಹು ಮತ್ತು ಕೇತುವಿನ ಅಶುಭ ಪ್ರಭಾವ ಕಡಿಮೆಯಾಗುತ್ತಾ ಬರುತ್ತದೆ.

ಕಪ್ಪು ಶ್ವಾನಕ್ಕೆ ಆಹಾರ
ರಾಹುವಿನ ಅಶುಭ ಪ್ರಭಾವದಿಂದ ಮುಕ್ತರಾಗಲು ಪ್ರತಿದಿನ ಕಪ್ಪು ಬಣ್ಣದ ಶ್ವಾನಕ್ಕೆ ರೊಟ್ಟಿಯನ್ನು ನೀಡಬೇಕು. ಇದರಿಂದ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.

ರಾಶಿಗಳ ಮೇಲೆ ಪ್ರಭಾವ ಬೇರೆ
ರಾಹುವಿನ ರಾಶಿ ಪರಿವರ್ತನೆಯಿಂದ ಬೇರೆ ಬೇರೆ ರಾಶಿಗಳ ಮೇಲೆ ಪ್ರಭಾವ ಬೇರೆಯಾಗಿರುತ್ತದೆ. ಕ್ರೂರ ಗ್ರಹವಾದ ರಾಹುಗ್ರಹ ಅಶುಭ ಪ್ರಭಾವದಿಂದ ವ್ಯಕ್ತಿಯು ಮಾನಸಿಕ ಮತ್ತು ಶಾರೀರಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ಸೆಪ್ಟೆಂಬರ್‌ನಲ್ಲಿ ಜನಿಸಿದವರು ಹೀಗಿರ್ತಾರೆ..! 

ರಾಹುಗ್ರಹವು ಜಾತಕದಲ್ಲಿ ನೀಚ ಅಥವಾ ಬಲಹೀನ ಸ್ಥಿತಿಯಲ್ಲಿದ್ದರೆ ಅದರಿಂದಾಗುವ  ಕಷ್ಟಗಳನ್ನು ನಿವಾರಿಸಿಕೊಳ್ಳಲು ಕೆಲವು ಸುಲಭ ಉಪಾಯಗಳನ್ನು ಹೇಳಲಾಗಿದ್ದು, ಅವುಗಳು ಹೀಗಿವೆ.

ಗಂಡನ ಮನೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರೆ ಉತ್ತಮ ಫಲ ದೊರೆಯುತ್ತದೆ. ಹೀಗಾದಾಗ ರಾಹುವಿನ ಅಶುಭ ಪ್ರಭಾವವು ತಗ್ಗುತ್ತದೆ.

• ಹಣೆಗೆ ಚಂದನ ಅಥವಾ ಕೇಸರಿಯ ತಿಲಕವನ್ನು ಇಟ್ಟುಕೊಳ್ಳುವುದು.

ತೆಂಗಿನ ಮರಕ್ಕೆ ನೀರೆರೆಯುವುದರಿಂದ ರಾಹುಗ್ರಹದ ಪ್ರಭಾವ ಕಡಿಮೆಯಾಗುತ್ತದೆ.

ಆನೆಗೆ ಆಹಾರ ನೀಡುವುದರಿಂದ ಸಹ ರಾಹುಗ್ರಹದ ಅಶುಭ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.

ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ನೀಡುವುದು. ಶೌಚಾಲಯ, ಸ್ನಾನದ ಕೊಠಡಿಯನ್ನು ಶುಚಿಯಾಗಿಡುವುದರಿಂದ ರಾಹುವಿನ ತೊಂದರೆಯಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು.

ಊಟ ಮಾಡುವ ಸ್ಥಳದಲ್ಲಿಯೇ ಕುಳಿತು ಊಟ ಮಾಡುಬೇಕು. ಮಾಂಸ ಮತ್ತು ಮದ್ಯ ಸೇವನೆಯನ್ನು ಮಾಡಬಾರದು.

ಗುರುವಾರದ ವ್ರತವನ್ನು ಮಾಡಬೇಕು.

ಪ್ರತಿದಿನ ಹನುಮಾನ್ ಚಾಲೀಸ ಪಠಿಸಬೇಕು. 

ಈ ಎಲ್ಲ ಪರಿಹಾರಗಳನ್ನು ಮಾಡಿಕೊಳ್ಳುವುದರ ಜೊತೆಗೆ ಶ್ರದ್ಧೆಯಿಂದ ದೇವರ ಧ್ಯಾನವನ್ನು ಮತ್ತು ರಾಹು ಮಂತ್ರಗಳನ್ನು ಭಕ್ತಿಯಿಂದ ಜಪಿಸವುದರಿಂದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

Follow Us:
Download App:
  • android
  • ios